Viral News: ಮಾತು ಬರಲ್ಲ, ಕಿವಿ ಕೇಳ್ಸಲ್ಲ: ಈ ಕಳ್ಳನನ್ನು ನೋಡಿದ್ರೆ ಅಯ್ಯೋ.. ಪಾಪ ಅನ್ಸುತ್ತೆ!

Viral News :ಕಳ್ಳನೊಬ್ಬ ಎಟಿಎಂಗೆ ಪ್ರವೇಶಿಸಿದ್ದಾನೆ. ಹರಿತವಾದ ಆಯುಧದಿಂದ ಶಟರ್ ಮುಚ್ಚಿ ಎಟಿಎಂ ಒಡೆದಿದ್ದಾನೆ. ಎಟಿಎಂ ಒಡೆಯಲು ಯತ್ನಿಸಿದಾಗ ಅಲಾರಾಂ ಸ್ವಯಂಚಾಲಿತವಾಗಿ ಆಕ್ಟಿವೇಟ್ ಆಗಿದೆ. ಮಧ್ಯರಾತ್ರಿ ಅಲಾರಾಂ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಎಚ್ಚೆತ್ತುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಕಳ್ಳನಿಗೆ ಕಿವುಡಾಗಿರುವುದರಿಂದ ಅಲಾರಾಂ ಕೇಳದ ಕಾರಣ ಎಟಿಎಂನಿಂದ ಹಣ ಸಂಗ್ರಹಿಸುವಲ್ಲಿ ನಿರತನಾಗಿದ್ದ.

ಎಟಿಎಂನಲ್ಲಿ ಹಣ ಕದಿಯಲು ಯತ್ನಿಸಿದ ಕಳ್ಳ

ಎಟಿಎಂನಲ್ಲಿ ಹಣ ಕದಿಯಲು ಯತ್ನಿಸಿದ ಕಳ್ಳ

  • Share this:
ಪ್ರತಿದಿನ ನೀವು ಟಿವಿ(TV)ಯಲ್ಲಿ, ರೇಡಿಯೋ(Radio)ದಲ್ಲಿ ಕಳ್ಳ(Thieves)ರ ಬಗ್ಗೆ ಕೇಳುತ್ತಿರುತ್ತಿರ. ನೀರು ಕೇಳುವ ಸೋಗಿನಲ್ಲಿ ಮನೆ ದರೋಡೆ. ವಿಳಾಸ ಕೇಳುವ ನೆಪದಲ್ಲಿ ಸರ ಕದ್ದು ಎಸ್ಕೇಪ್​. ಈ ರೀತಿಯ ಸುದ್ದಿ(News)ಗಳನ್ನು ನೀವು ಕೇಳಿದ್ದೀರ. ಈಗ ನಾವು ಹೇಳುತ್ತಿರುವ ಕಳ್ಳನ ಬಗ್ಗೆ ನಿಮಗೆ ತಿಳಿದರೆ ಅಯ್ಯೋ ಪಾಪ ಅನ್ಸುತ್ತೆ. ಆದರೆ ಈತ ಮಾಡಲು ಹೋಗಿದ್ದ ಕೆಲಸ ಇದೆಯಲ್ಲ ಅದನ್ನೂ ಕೇಳಿದರೆ ಸರಿಯಾಗಿಯೇ ಆಗಿದೆ ಅಂತೀರಾ. ಸಾಮಾನ್ಯವಾಗಿ ಎಟಿಎಂ(ATM) ಹಣ ಕದಿಯಲು 3 ರಿಂದ ನಾಲ್ಕು ಜನರ ಕಳ್ಳರ ಗ್ಯಾಂಗ್​ ಮಾಸ್ಟರ್​ ಪ್ಲಾನ್(Master Plan)​ ಮಾಡಿ ಕಳ್ಳತನ ಮಾಡುತ್ತೆ ಅಲ್ವಾ?.ಆದರೆ ಇಲ್ಲೊಬ್ಬ ಕಳ್ಳ ಪಂಟರ್​​ ತರ ಒಬ್ಬನೇ ಕಳ್ಳತನ ಮಾಡಲು ಬಂದಿದ್ದ. ಆಮೇಲೆನಾಯ್ತು ಅಂತ ಕೇಳಿದರೆ ಬಿದ್ದು.. ಬಿದ್ದು ನಗ್ತೀರಾ. ಜೊತೆಗೆ ನಿಮಗೆ ಬೇಜಾರು ಕೂಡ ಆಗುತ್ತೆ. ಪಾಪ ಈ ಕಳ್ಳ ಯಾಕೆ ಇಂಥ ಕೆಲಸ ಮಾಡಲು ಹೋದ ಎಂದು ನಿಮಗೆ ಅನ್ನಿಸುತ್ತೆ. ತೆಲಂಗಾಣ(Telangana)ದ ನಿಜಾಮಾಬಾದ್​(Nizamabad)ನಲ್ಲಿ ಈ ವಿಚಿತ್ರ ಘಟನೆ ನಡೆದಿರುವುದು. ಎಟಿಂಎಂ ದರೋಡೆಗೆ ಯತ್ನಿಸುತ್ತಿದ್ದ ಕಿವುಡ ಮತ್ತು ಮೂಗ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. 

ತಡರಾತ್ರಿ ATMನಲ್ಲಿ ಹಣ ಕದಿಯಲು ಬಂದಿದ್ದ ಕಳ್ಳ!

ಶನಿವಾರ ಮಧ್ಯರಾತ್ರಿ  ಕಳ್ಳನೊಬ್ಬ ಎಟಿಎಂಗೆ ಪ್ರವೇಶಿಸಿದ್ದಾನೆ. ಹರಿತವಾದ ಆಯುಧದಿಂದ ಶಟರ್ ಮುಚ್ಚಿ ಎಟಿಎಂ ಒಡೆದಿದ್ದಾನೆ. ಎಟಿಎಂ ಒಡೆಯಲು ಯತ್ನಿಸಿದಾಗ ಅಲಾರಾಂ ಸ್ವಯಂಚಾಲಿತವಾಗಿ ಆಕ್ಟಿವೇಟ್ ಆಗಿದೆ. ಮಧ್ಯರಾತ್ರಿ ಅಲಾರಾಂ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಎಚ್ಚೆತ್ತುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಕಳ್ಳನಿಗೆ ಕಿವುಡಾಗಿರುವುದರಿಂದ ಅಲಾರಾಂ ಕೇಳದ ಕಾರಣ ಎಟಿಎಂನಿಂದ ಹಣ ಸಂಗ್ರಹಿಸುವಲ್ಲಿ ನಿರತನಾಗಿದ್ದ. ಅವನು ತನ್ನ ಕಾರ್ಯವನ್ನು ಪೂರ್ಣಗೊಳಿಸುವ ಹೊತ್ತಿಗೆ ಸ್ಥಳೀಯ ಪೊಲೀಸರು ಎಟಿಎಂಗೆ ಆಗಮಿಸಿ ಕಳ್ಳನನ್ನು ಹಿಡಿದರು. ಕಳ್ಳನನ್ನು ಡೆಲೋಡ್ ಸುನೀಲ್ ಎಂದು ಗುರುತಿಸಲಾಗಿದ್ದು, ನಿಜಾಮಾಬಾದ್ ಪುರಸಭೆಯಲ್ಲಿ ಹೊರಗುತ್ತಿಗೆ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಅಬ್ಬಬ್ಬಾ.. ಅದೆಂಥಾ ಗಟ್ಟಿಗಿತ್ತಿ.. ಹೆರಿಗೆ ನೋವಿನಲ್ಲೂ ಸೈಕಲ್ ತುಳಿದೇ ಆಸ್ಪತ್ರೆ ಸೇರಿದ ಮಹಾತಾಯಿ!

ಪೊಲೀಸರನ್ನು ಕಂಡು ಬೆಚ್ಚಿಬಿದ್ದ ಕಳ್ಳ!

ಎಲ್ಲ ನೆಟ್ಟಗಿದ್ದ ಕಳ್ಳರೇ ಎಟಿಎಂ ಕದಿಯಲು ಹಿಂದೇಟು ಹಾಕುತ್ತಾರೆ. ಆದರೆ ಈ ಕಳ್ಳ ಮಾತ್ರ ಎಟಿಎಂನಲ್ಲಿ ಹಣ ಕದಿಯಲು ಮುಂದಾಗಿದ್ದಾನೆ. ಏನು ಆಗುತ್ತಿದೆ ಎಂದು ಆತನ ಅರಿವಿಗೆ ಬಂದಿಲ್ಲ. ತನ್ನ ಪಾಡಿಗೆ ಹಣ ಕದ್ದು ತುಂಬಿಸುಕೊಳ್ಳುವಲ್ಲಿ ನಿರತವಾಗಿದ್ದಾನೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಅವರು ಬಂದು ಎಟಿಎಂ ಅನ್ನು ಸುತ್ತುವರೆದಿದ್ದಾರೆ. ಕಿವುಡ ಆಗಿದ್ದ ಕಾರಣ ಆತನಿಗೆ ಏನು ತಿಳಿದಿಲ್ಲ. ಇನ್ನೂ ಎಟಿಎಂ ಬಾಗಿಲು ತೆರೆದು ಪೊಲೀಸರು ಒಳಗೆ ಹೋಗಿದ್ದಾರೆ. ಪೊಲೀಸರನ್ನು ಕಂಡು ಕಳ್ಳ ಬೆಚ್ಚಿಬಿದ್ದಿದ್ದಾನೆ. ಆತ ಮಾತನಾಡದಿದ್ದಾಗ ಪೊಲೀಸರಿಗೆ ಕಳ್ಳನ ಬಗ್ಗೆ ಮಾಹಿತಿ ಸಿಕ್ಕಿದೆ.

ಇದನ್ನು ಓದಿ : ಮ್ಯಾಟ್ರಿ`ಮನಿ’ ನೋಡಿ ಆಕೆ ಮೀಟ್​ ಮಾಡಿದ್ಳು: ಈತ ಕಾರ್​​ನಲ್ಲೇ ಮ್ಯಾಟರ್​ ಮುಗಿಸಿ ಎಸ್ಕೇಪ್​!

ಕಳ್ಳನ ವಿಡಿಯೋ ಎಲ್ಲೆಡೆ ಸಖತ್​ ವೈರಲ್​!

ಇನ್ನೂ ಈ ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ನೆಟ್ಟಿಗರು ಫುಲ್​ ಕ್ಯೂರಿಯಾಸಿಟಿಯಿಂದ ವಿಡಿಯೋ ನೋಡುತ್ತಿದ್ದಾರೆ. ಪಾಪ ಆ ಕಳ್ಳನಿಗೆ ಅದೇನು ಹಣದ ಅವಶ್ಯಕತೆ ಇತ್ತೋ ಏನೋ ಅಂತ ಕಮೆಂಟ್​ ಮಾಡುತ್ತಿದ್ದಾರೆ. ಮತ್ತೊಂದು ವರ್ಗ ಎಷ್ಟೇ ಬುದ್ಧಿ ಇದ್ಧರೇನು, ಸ್ವಲ್ಪ ಜ್ಞಾನ ಇರಬೇಕು ಇಲ್ಲದಿದ್ದರೆ ಈ ರೀತಿಯ ಘಟನೆಗಳು ನಡೆಯುತ್ತವೆ. ಆದರೂ ಈ ರೀತಿಯ ಕಳ್ಳನನ್ನು ಎಂದಿಗೂ ನಾವು ನೋಡಿಲ್ಲ ಅಂತ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.
Published by:Vasudeva M
First published: