ಚೀನಾದಲ್ಲಿ ಭಯಾನಕ ಕೊರೊನಾ ವೈರಸ್: ಬಲಿಯಾದವರ ಸಂಖ್ಯೆ 41ಕ್ಕೆ ಏರಿಕೆ
ಹುಬೈ ಆರೋಗ್ಯ ಸಂಸ್ಥೆಯು ಹೊಸದಾಗಿ 180 ಪ್ರಕರಣಗಳನ್ನು ವರದಿ ಮಾಡಿದೆ. ಅವುಗಳಲ್ಲಿ 77 ಪ್ರಕರಣಗಳು ವುಹಾನ್ ನಗರದಲ್ಲಿ ಪತ್ತೆಯಾಗಿವೆ. ಹುಬೈ ನಗರವೊಂದರಲ್ಲೇ 729 ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ.
news18-kannada Updated:January 25, 2020, 8:24 AM IST

ಚೀನಾ-ಕೊರೊನಾ ವೈರಸ್
- News18 Kannada
- Last Updated: January 25, 2020, 8:24 AM IST
ವುಹಾನ್(ಜ.25): ಚೀನಾದಲ್ಲಿ ಹರಡಿರುವ ಕೊರೊನಾ ವೈರಸ್ಗೆ ಬಲಿಯಾಗುವರ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಲೇ ಇದೆ. ಈಗ ಸಾವಿನ ಸಂಖ್ಯೆ 41ಕ್ಕೆ ಏರಿದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಸೋಂಕಿಗೆ ಒಳಗಾಗಿರುವವರ ಸಂಖ್ಯೆ 1300ರ ದಾಟಿದೆ ಎಂದು ಅಲ್ಲಿನ ಅಧಿಕೃತ ಮೂಲಗಳು ತಿಳಿಸಿವೆ.
ಚೀನಾದ ವುಹಾನ್ ನಗರದಲ್ಲಿ ಈಗ 15 ಮಂದಿ ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ. ಒಟ್ಟು 1.1 ಕೋಟಿ ಜನಸಂಖ್ಯೆ ಇರುವ ಈ ನಗರದಲ್ಲಿ ಮೊದಲು ಮಾರಾಣಾಂತಿಕ ಉಸಿರಾಟದ ಕೊರಾನಾ ವೈರಸ್ ಹರಡಿತು ಎಂದು ಹುಬೈ ಆರೋಗ್ಯ ಆಯೋಗ ತಿಳಿಸಿದೆ. ಈಗ 444 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ವೈರಸ್ ಶಂಕಿತ ಸಂಖ್ಯೆ 1,287 ಕ್ಕೆ ಏರಿದೆ ಎಂದು ಚೀನಾದ ಆರೋಗ್ಯ ಸಂಸ್ಥೆ ಹೇಳಿದೆ. ಈ ರೋಗ 30 ಪ್ರಾಂತ್ಯಗಳು, ಸ್ವಾಯತ್ತ ಪ್ರದೇಶಗಳು ಮತ್ತು ನಗರಪಾಲಿಕೆಗಳಲ್ಲಿ ಹರಡಿದೆ ಎಂದು ತಿಳಿದು ಬಂದಿದೆ.
ಮಾರಣಾಂತಿಕ ಕೊರೊನಾ ವೈರಸ್; ಚೀನಾದಲ್ಲಿ 25ಕ್ಕೆ ಏರಿದ ಸಾವಿನ ಸಂಖ್ಯೆ
ವುಹಾನ್ ಮತ್ತು ಹುಬೈನ 13 ನಗರಗಳಲ್ಲಿ ಈ ಮಾರಣಾಂತಿಕ ಸೋಂಕು ಹೆಚ್ಚಾಗಿ ಹರಡಿದೆ. ಬಳಿಕ ಇತರೆ ದೇಶಗಳಿಗೂ ಹರಡಿದೆ ಎನ್ನಲಾಗಿದೆ. ಚೀನಾದಲ್ಲಿ ಸಾವಿನ ಸಂಖ್ಯೆ ಇನ್ನೂ ಅಧಿಕವಾಗುವ ಸಾಧ್ಯತೆಗಳಿವೆ.
ಹುಬೈ ಆರೋಗ್ಯ ಸಂಸ್ಥೆಯು ಹೊಸದಾಗಿ 180 ಪ್ರಕರಣಗಳನ್ನು ವರದಿ ಮಾಡಿದೆ. ಅವುಗಳಲ್ಲಿ 77 ಪ್ರಕರಣಗಳು ವುಹಾನ್ ನಗರದಲ್ಲಿ ಪತ್ತೆಯಾಗಿವೆ. ಹುಬೈ ನಗರವೊಂದರಲ್ಲೇ 729 ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ.
ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಪರಿಸ್ಥಿತಿಯನ್ನು 'ಜಾಗತಿಕ ಆರೋಗ್ಯ ತುರ್ತುಸ್ಥಿತಿ' ಎಂದು ಘೋಷಣೆ ಮಾಡುವ ನಿರ್ಧಾರದಿಂದ ಹಿಂದೆ ಸರಿದ ಕೆಲವೇ ಗಂಟೆಗಳಲ್ಲಿ ಕರೊನಾ ವೈರಸ್ಗೆ ಮೃತಪಟ್ಟರ ಸಂಖ್ಯೆ ಚೀನಾದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ.ಗಣರಾಜ್ಯೋತ್ಸವಕ್ಕೆ ಭರದ ಸಿದ್ಧತೆ; ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬಿಗಿ ಭದ್ರತೆ, ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಚೀನಾದ ವುಹಾನ್ ನಗರದಲ್ಲಿ ಈಗ 15 ಮಂದಿ ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ. ಒಟ್ಟು 1.1 ಕೋಟಿ ಜನಸಂಖ್ಯೆ ಇರುವ ಈ ನಗರದಲ್ಲಿ ಮೊದಲು ಮಾರಾಣಾಂತಿಕ ಉಸಿರಾಟದ ಕೊರಾನಾ ವೈರಸ್ ಹರಡಿತು ಎಂದು ಹುಬೈ ಆರೋಗ್ಯ ಆಯೋಗ ತಿಳಿಸಿದೆ.