HOME » NEWS » National-international » DEADLINE TO FILE IT RETURNS FOR FY 2019 20 EXTENDED TILL NOVEMBER 30TH SNVS

Income Tax - ಐಟಿ ರಿಟರ್ನ್ ಸಲ್ಲಿಕೆಗೆ ಗಡುವು ನವೆಂಬರ್ 30ರವರೆಗೆ ವಿಸ್ತರಣೆ

ನಾವಿರುವ ಸಂಕಷ್ಟದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ತೆರಿಗೆ ಪಾವತಿದಾರರು ಸರಿಯಾಗಿ ಯೋಜಿಸಲು ಸಹಾಯವಾಗುವ ಆಶಯದೊಂದಿಗೆ ಈ ನಿರ್ಧಾರ ಕೈಗೊಂಡಿದ್ಧೇವೆ ಎಂದು ಐಟಿ ಇಲಾಖೆ ತನ್ನ ಟ್ವೀಟ್​ನಲ್ಲಿ ತಿಳಿಸಿದೆ.

news18-kannada
Updated:July 4, 2020, 3:42 PM IST
Income Tax - ಐಟಿ ರಿಟರ್ನ್ ಸಲ್ಲಿಕೆಗೆ ಗಡುವು ನವೆಂಬರ್ 30ರವರೆಗೆ ವಿಸ್ತರಣೆ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ: ಕೊರೋನಾ ಸಂಕಷ್ಟ ಕಾಲದಲ್ಲಿ ಜನರಿಗೆ ಉಳಿತಾಯಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿವಿಧ ಪ್ರಯತ್ನಗಳನ್ನ ಮಾಡುತ್ತಿದೆ. ಅದರಂತೆ, ಆದಾಯ ತೆರಿಗೆ ಪಾವತಿಯ ಗಡುವನ್ನು ಮತ್ತೆ ವಿಸ್ತರಿಸಿದೆ. 2019-20ನೇ ಹಣಕಾಸು ವರ್ಷದ ಐಟಿ ರಿಟರ್ನ್ ಫೈಲ್ ಮಾಡಲು ನವೆಂಬರ್ 30ರವರೆಗೆ ಸಮಯಾವಕಾಶ ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಘೋಷಿಸಿದೆ.

ನಾವಿರುವ ಸಂಕಷ್ಟದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ತೆರಿಗೆ ಪಾವತಿದಾರರು ಸರಿಯಾಗಿ ಯೋಜಿಸಲು ಸಹಾಯವಾಗುವ ಆಶಯದೊಂದಿಗೆ ಈ ನಿರ್ಧಾರ ಕೈಗೊಂಡಿದ್ಧೇವೆ ಎಂದು ಐಟಿ ಇಲಾಖೆ ತನ್ನ ಟ್ವೀಟ್​ನಲ್ಲಿ ತಿಳಿಸಿದೆ.

ಎರಡು ದಿನಗಳ ಹಿಂದಷ್ಟೇ ಇದಕ್ಕೆ ಪೂರಕವಾದ ಕ್ರಮಗಳನ್ನ ಐಟಿ ಇಲಾಖೆ ಕೈಗೊಂಡಿತ್ತು. ತೆರಿಗೆ ಉಳಿತಾಯದ ಹೂಡಿಕೆಗಳಿಗೆ ಇದ್ದ ಗಡುವನ್ನು ಜುಲೈ 31ರವರೆಗೆ ವಿಸ್ತರಿಸಿತ್ತು. ಇದರಿಂದ ಹೂಡಿಕೆದಾರರ ತಮ್ಮ ಹಣವನ್ನ ಈ ಯೋಜನೆಗಳಿಗೆ ಹಾಕಿ ಆ ಮೂಲಕ ತೆರಿಗೆ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಹೂಡಿಕೆಗಳನ್ನ ಐಟಿ ರಿಟರ್ನ್ ಸಲ್ಲಿಕೆ ವೇಳೆ ನಮೂದಿಸಿ ತೆರಿಗೆ ಹಣ ಕ್ಲೈಮ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ, ಉಳಿತಾಯ ಯೋಜನೆಗೆ ಹೂಡಿಕೆ ಮಾಡುವ ಗಡುವು ಹಾಗೂ ಐಟಿ ರಿಟರ್ನ್ ಫೈಲ್ ಮಾಡುವ ಗಡುವು ಎರಡೂ ಪೂರಕವಾಗಿರುವಂತೆ ಐಟಿ ಇಲಾಖೆ ಎಚ್ಚರ ವಹಿಸಿದೆ.

ಇದನ್ನೂ ಓದಿ: ಪಿಪಿಎಫ್ ಸೇರಿ ಹಲವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿಲ್ಲ ಬದಲಾವಣೆ

ಜೀವ ವಿಮೆ, ಪಿಪಿಎಫ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್, ಇಎಲ್​ಎಸ್​ಎಸ್ ಇತ್ಯಾದಿ ಸರ್ಕಾರದ ಉಳಿತಾಯ ಯೋಜನೆಗಳಲ್ಲಿ ಜನರು ತಮ್ಮ ಹಣವನ್ನ ತೊಡಗಿಸಿಕೊಳ್ಳಲು ಸಾಧ್ಯ. ಹೆಚ್ಚು ಆದಾಯ ಕೊಡದಿದ್ದರೂ ಕಡಿಮೆ ರಿಸ್ಕ್ ಹೊಂದಿರುವ ಈ ಉಳಿತಾಯ ಯೋಜನೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಈ ತಿಂಗಳ ಅಂತ್ಯದವರೆಗೂ ಇದರಲ್ಲಿ ಹಣ ತೊಡಗಿಸಿಕೊಳ್ಳಲು ಜನರಿಗೆ ಅವಕಾಶ ನೀಡಲಾಗಿದೆ.ಇದೇ ವೇಳೆ, ಟಿಡಿಎಸ್ ಅಥವಾ ಟಿಸಿಎಸ್ ಸರ್ಟಿಫಿಕೇಟ್​​ಗಳನ್ನ ಸಲ್ಲಿಸುವ ದಿನಾಂಕವನ್ನೂ ಜುಲೈ 31ಕ್ಕೆ ವಿಸ್ತರಿಸಿ ಐಟಿ ಇಲಾಖೆ ಕ್ರಮ ಕೈಗೊಂಡಿದೆ. ಟ್ಯಾಕ್ ಆಡಿಟ್ ವರದಿಯನ್ನು ಸಲ್ಲಿಸುವ ಡೆಡ್ ಲೈನ್ ಅಕ್ಟೋಬರ್ 31ಕ್ಕೆ ವಿಸ್ತರಣೆಯಾಗಿದೆ.
Published by: Vijayasarthy SN
First published: July 4, 2020, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories