ಮಾಸ್ಕೋ (ಜೂ.21): ಜಗತ್ತಿನಲ್ಲಿ ನಡೆಯುವ ಕೆಲವೊಂದು ಘಟನೆ ಭಾರೀ ಆಘಾತಕಾರಿಯಾಗಿರುತ್ತವೆ. ಹೀಗೂ ನಡೆಯುತ್ತದೆಯೇ ಎಂದು ಅಚ್ಚರಿ ಪಡುವಂತೆ ಮಾಡುವ ಘಟನೆಗಳು ನಿತ್ಯ ನಡೆಯುತ್ತಲೇ ಇರುತ್ತವೆ. ಆದರೆ ಇದು ಸಾಮಾನ್ಯ. ಪ್ರಾಣಿ ಸಂಕುಲ, ಮನುಷ್ಯರು, ಮಹಿಳೆ, ಮಕ್ಕಳಿಗೆ ಸಂಬಂಧಿಸಿ ಬೆಚ್ಚಿ ಬೀಳಿಸುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ ಮಹಿಳೆಯೊಬ್ಬರನ್ನು (Woman) ಬೆಕ್ಕುಗಳನ್ನು (Cats) ಕಚ್ಚಿ ಕೊಂದು ಹಾಕಿರುವ ಘಟನೆ ವರದಿಯಾಗಿದೆ. ತಾನೇ ಪ್ರೀತಿಯಿಂದ ಸಾಕಿದ ಬೆಕ್ಕುಗಳು ಮಹಿಳೆಯ ಸಾವಿಗೆ ಕಾರಣವಾಗಿದೆ. ರಷ್ಯಾದಲ್ಲಿ (Russia) ಮಹಿಳೆಯೊಬ್ಬರನ್ನು 20 ಬೆಕ್ಕುಗಳು ಕಚ್ಚಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಎರಡು ವಾರಗಳ ನಂತರ ಮಹಿಳೆಯ ಕೆಲವು ದೇಹದ ಭಾಗಗಳು ಮಾತ್ರ ಉಳಿದುಕೊಂಡಿದ್ದ ಮಹಿಳೆಯ ದೇಹವನ್ನು ಪೊಲೀಸರು (Police) ಪತ್ತೆ ಮಾಡಿದರು.
ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಆಕೆಯ ಸಹೋದ್ಯೋಗಿ ಪೊಲೀಸರಿಗೆ ದೂರು ನೀಡಿದ್ದು, ಆಕೆಯ ಮೇಲಧಿಕಾರಿಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಹಸಿದ ಬೆಕ್ಕುಗಳು ಮಾಲೀಕಳನ್ನೇ ತಿಂದಿದ್ದವು
ಇದಾದ ಬಳಿಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆಕೆಯ ಮನೆಯೊಳಗೆ ಹಸಿದ ಬೆಕ್ಕುಗಳಿಂದ ಸುತ್ತುವರಿದ ಮಹಿಳೆಯ ಭಾಗಶಃ ತಿಂದ ದೇಹವನ್ನು ಪೊಲೀಸರು ಕಂಡುಕೊಂಡರು.
ಎರಡು ವಾರಗಳ ಹಿಂದೆಯೇ ಸಾವು
ಮಹಿಳೆಯ ದೇಹದ ಅವಶೇಷಗಳು ಕೊಳೆಯಲು ಪ್ರಾರಂಭಿಸಿದ್ದರಿಂದ ಎರಡು ವಾರಗಳ ಹಿಂದೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ನಂಬಿದ್ದಾರೆ. ಈ ಘಟನೆಯು ರಷ್ಯಾದ ರೋಸ್ಟೋವ್ ಪ್ರದೇಶದ ಬಟಾಯ್ಸ್ಕ್ ಪ್ರದೇಶದಲ್ಲಿದೆ.
ಎರಡು ವಾರಗಳ ಕಾಲ ಮನೆಯಲ್ಲಿ ಹಸಿದಿದ್ದ ಬೆಕ್ಕುಗಳು
ಪ್ರಾಣಿ ರಕ್ಷಣಾ ತಜ್ಞರು, “ಬೆಕ್ಕುಗಳನ್ನು ಎರಡು ವಾರಗಳ ಕಾಲ ಮನೆಯಲ್ಲಿ ಒಂಟಿಯಾಗಿ ಬಿಡಲಾಗಿತ್ತು, ಅವುಗಳಿಗೆ ತಿನ್ನಲು ಏನೂ ಇರಲಿಲ್ಲ. ಬೆಕ್ಕುಗಳು ತುಂಬಾ ಹಸಿದಿದ್ದವು. ಈ ಪರಿಸ್ಥಿತಿಯು ಅರ್ಥವಾಗುವಂತಹದ್ದಾಗಿದೆ. ಬೆಕ್ಕುಗಳು ಬಹಳ ದಿನಗಳ ನಂತರ ಸಿಕ್ಕಿದ್ದನ್ನು ತಿಂದವು.
ಇದನ್ನೂ ಓದಿ: ATMನಲ್ಲಿ ಒಂದು ಬಾರಿ ಕಾರ್ಡ್ ಹಾಕಿದ್ರೆ 5 ಬಾರಿ ಹಣ ಬರುತ್ತಂತೆ! ಕೆಲಸ ಬಿಟ್ಟು ಹಣಕ್ಕಾಗಿ ಕ್ಯೂ ನಿಂತ ಜನರು
ಸಿಕ್ಕಾಪಟ್ಟೆ ವೈರಲ್ ಆಯಿತು ವಿಡಿಯೋ
ಈ ವೀಡಿಯೋ ಅಂತರ್ಜಾಲದಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ವೀಡಿಯೋದಲ್ಲಿ, ನಾಯಿ ಹುಲಿಗಳ ನಡುವೆ ನಿರ್ಭಯವಾಗಿ ತಿರುಗಾಡುತ್ತಿರುವುದನ್ನು ಕಾಣಬಹುದು. ಆಶ್ಚರ್ಯಕರವಾಗಿ, ಹುಲಿಗಳು ನಾಯಿಯ ಹತ್ತಿರಕ್ಕೂ ಸುಳಿದಿಲ್ಲ. ಮೇಲಾಗಿ ನಾಯಿ ಹುಲಿಗಳ ಮಧ್ಯೆ ನಿಂತು ಜೋರಾಗಿ ಬೊಗಳುತ್ತಿದೆ. ಈ ವೀಡಿಯೋವನ್ನು ಟೈಗರ್ ಬಿಗ್ಫ್ಯಾನ್ ಎಂಬ ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಮೇ 26 ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇದು 1.2 ಮಿಲಿಯನ್ ವೀಕ್ಷಣೆಗಳನ್ನು ಮತ್ತು 52,000 ಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ.
ಪೋಸ್ಟ್ ಪ್ರಕಾರ, ಈ ನಾಯಿಯ ತಾಯಿ ಈ ಹುಲಿಗಳು ಮರಿಗಳಾಗಿದ್ದಾಗ ತನ್ನ ಹಾಲನ್ನು ಉಣಬಡಿಸಿದಳು ಮತ್ತು ಅದಕ್ಕಾಗಿಯೇ ಆ ಹುಲಿಗಳು ಆ ನಾಯಿಯ ತಾಯಿಯನ್ನು ತಮ್ಮ ತಾಯಿ ಎಂದು ಭಾವಿಸುತ್ತವೆ. "ನಾಯಿಯ ತಾಯಿಗೆ ಹಲವಾರು ಹುಲಿ ಮಕ್ಕಳನ್ನು ಬೆಳೆಸುವುದು ಸುಲಭವಲ್ಲ" ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: Viral Video: ನಿಜ್ವಾಗ್ಲೂ ಈ ನಾಯಿಯ ಧೈರ್ಯಕ್ಕೆ ಮೆಚ್ಚಲೇಬೇಕು! ಅಷ್ಟಕ್ಕೂ ಏನು ಮಾಡಿದೆ ಅಂತ ನೀವೇ ನೋಡಿ
ವಿಡಿಯೋ ನೋಡಿ ಆಘಾತಕ್ಕೊಳಗಾದ ನೆಟ್ಟಿಗರು
ಹುಲಿಗಳಿಂದ ಸುತ್ತುವರಿಯಲ್ಪಟ್ಟಿದ್ದರೂ, ಗೋಲ್ಡನ್ ರಿಟ್ರೈವರ್ ನಾಯಿ ಸಂಪೂರ್ಣವಾಗಿ ನಿರ್ಭೀತವಾಗಿದೆ ಎಂದು ವೀಡಿಯೋ ತೋರಿಸುತ್ತದೆ. ಅಂತರ್ಜಾಲದಲ್ಲಿ ದೃಶ್ಯಾವಳಿಯನ್ನು ನೋಡಿ ವೀಕ್ಷಕರು ಆಘಾತಕ್ಕೊಳಗಾದರು, ಆದರೆ ಹುಲಿಗಳು ಏಕೆ ಈ ರೀತಿ ವರ್ತಿಸುತ್ತವೆ ಎಂದು ಅವರಲ್ಲಿ ಕೆಲವರು ಮಾತ್ರ ಅರಿತುಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ