ಸರ್ಕಾರಿ ಆಸ್ಪತ್ರೆಯಲ್ಲಿಟ್ಟದ್ದ ಶವದ ಮೂಗೇ ನಾಪತ್ತೆ; ಕಾರಣ ತಿಳಿದು ದಂಗಾದ ಮೃತನ ಸ್ನೇಹಿತರು

ಶೈತ್ಯಾಗಾರದಲ್ಲಿದ್ದ ಸಣ್ಣ ರಂಧ್ರದ ಮೂಲಕ ಇಲಿಗಳು ಬಂದು ಶವದ ಭಾಗಗಳನ್ನ ತಿನ್ನುತ್ತಿದ್ದವೆನ್ನಲಾಗಿದೆ.

G Hareeshkumar | news18india
Updated:December 13, 2018, 11:45 PM IST
ಸರ್ಕಾರಿ ಆಸ್ಪತ್ರೆಯಲ್ಲಿಟ್ಟದ್ದ ಶವದ ಮೂಗೇ ನಾಪತ್ತೆ; ಕಾರಣ ತಿಳಿದು ದಂಗಾದ ಮೃತನ ಸ್ನೇಹಿತರು
ಸಾಂದರ್ಭಿಕ ಚಿತ್ರ
G Hareeshkumar | news18india
Updated: December 13, 2018, 11:45 PM IST
ಚೈನೈ (ಡಿ.13) : ಆಸ್ಪತ್ರೆ ಶವಗಾರದಲ್ಲಿ ಇಟ್ಟಿದ ಮೃತ ದೇಹವೊಂದರ ಮೂಗನ್ನು ಇಲಿಯೊಂದು ತಿಂದಿರುವ ಘಟನೆ ಚೆನ್ನೈನ ಚಿದಂಬರಂ ನಗರದ ಕಾಮರಾಜ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಇಲ್ಲಿನ ಚಿದಂಬರಂ ನಗರದ ಸಮೀಪದ ತಂಡೇಶ್ವರ ನಲ್ಲೂರು ಗ್ರಾಮದ 22 ವರ್ಷದ ವೈಥೀಶ್ವರನ್ ಎಂಬ ಯುವಕನ ಮೃತದೇಹವನ್ನು ಪೋಸ್ಟ್ ಮಾರ್ಟಂ ನಂತರ ರಾತ್ರಿ ಶವಾಗಾರದಲ್ಲಿ ಇಡಲಾಗಿತ್ತು. ಬೆಳಗ್ಗೆ ಆತನ ಸ್ನೇಹಿತರು ಆತನ ಕಳೇಬರದಲ್ಲಿ ಮೂಗು ನಾಪತ್ತೆಯಾಗಿರುವುದನ್ನು ಕಂಡು ದಂಗಾಗಿದ್ದರು.

ಈ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳನ್ನು ವಿಚಾರಿಸಿದಾಗ ಮೊದಲು ನಿರಾಕರಿಸಿದರೂ ನಂತರ ಆಸ್ಪತ್ರೆಯ  ವೈದ್ಯಾಧಿಕಾರಿ ಡಾ.ತಮಿಳರಸನ್ ಪ್ರತಿಕ್ರಿಯಿಸಿ, ಮೃತದೇಹ ಇರಿಸಲಾಗಿದ್ದ ಶೈತ್ಯಾಗಾರದಲ್ಲಿ ಒಂದು ಸಣ್ಣ ತೂತು ಇದ್ದುದರಿಂದ ಅದರೊಳಗೆ ಇಲಿ ಪ್ರವೇಶಿಸಿರಬಹುದು. ಮುಂದೆ ಇಂತಹ ಘಟನೆಗಳು ನಡೆಯದಂತೆ ಅದನ್ನು ದುರಸ್ತಿಗೊಳಿಸಲಾಗುವುದು  ಎಂದರು.

ನವೆಂಬರ್ ತಿಂಗಳಲ್ಲಿ ಕೊಯಂಬತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಆಸ್ಪತ್ರೆಯ ನೆಲದಲ್ಲಿ ಮಲಗಿದ್ದ ಮಹಿಳೆಯೊಬ್ಬಳ ಕಾಲಿನ ಗಾಯವನ್ನು ಬೆಕ್ಕೊಂದು ನೆಕ್ಕುತ್ತಿರುವ ಚಿತ್ರ ಅಂತರ್ಜಾಲದಲ್ಲಿ ಹರಿದಾಡಿತ್ತು.
First published:December 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ