ಮಗು ಒಂದು ವರ್ಷದಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿತ್ತು. ಒಂದು ದಿನ ಮಗುವಿನ ಆರೋಗ್ಯದಲ್ಲಿ ಏರುಪೇರು ಹೆಚ್ಚಾಯಿತು. ಹೀಗಾಗಿ ಅಸ್ಸಾಂನ ದಿಬ್ರುಗಢದ ಟೀ ಗಾರ್ಡನ್ ಅಸ್ಪತ್ರೆಗೆ ಸೇರಿಸಲಾಯಿತು.
ಸತ್ತು ಹೋದವರು ಮತ್ತೆ ಎದ್ದು ಬಂದ ಉದಾಹರಣೆಗಳು ತೀರಾ ಕಡಿಮೆ. ಆದರೆ ಇಲ್ಲೊಂದು ಮಗು ಸತ್ತ ಮೇಲೆ ಮತ್ತೆ ಎದ್ದು ಬಂದಿದೆ. ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡುವ ಸಮಯದಲ್ಲಿ ಮಗು ಎದ್ದು ಹಾಲು ಕುಡಿದಿದೆ. ಆದರೆ ದಿಢೀರನೆ ಎದ್ದು ಎಲ್ಲರನ್ನು ಅಚ್ಚರಿಯನ್ನಾಗಿಸಿದ ಮಗು ಕೆಲ ಹೊತ್ತಿನ ಬಳಿಕೆ ನಿಧಾನವಾಗಿದೆ.ಈ ವಿಚಿತ್ರ ಘಟನೆ ನಡೆದಿರುವುದು ಅಸ್ಸಾಂನಲ್ಲಿ. ಮಗು ಒಂದು ವರ್ಷದಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿತ್ತು. ಒಂದು ದಿನ ಮಗುವಿನ ಆರೋಗ್ಯದಲ್ಲಿ ಏರುಪೇರು ಹೆಚ್ಚಾಯಿತು. ಹೀಗಾಗಿ ಅಸ್ಸಾಂನ ದಿಬ್ರುಗಢದ ಟೀ ಗಾರ್ಡನ್ ಅಸ್ಪತ್ರೆಗೆ ಸೇರಿಸಲಾಯಿತು. ಆದರೆ ಭಾನುವಾರದಂದು ಮಗು ಆಸ್ಪತ್ರೆಯಲ್ಲಿ ಸಾವನ್ನಪಿದೆ ಎಂದು ಕಾಂಪೌಂಡರ್ ಪೋಷಕರ ಬಳಿ ಹೇಳಿದ್ದಾನೆ.
ನಂತರ ಮಗುವಿನ ಶವವನ್ನು ಪೋಷಕರು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಇನ್ನೇನು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಆರಂಭಿಸುವ ಸಮಯದಲ್ಲಿ ಮಗು ಉಸಿರಾಡಲು ಪ್ರಾರಂಭಿಸಿದೆ. ಎಚ್ಚರಗೊಂಡು ಮಗು ತಾಯಿಯ ಎದೆಹಾಲು ಕುಡಿದಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ನಂತರ ಮಗುವನ್ನು ಅಸ್ಸಾಂ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಮಗು ಸತ್ತಿದೆ ಎಂದು ಹೇಳಿದ್ದ ಕಾಂಪೌಂಡರ್ ಮೇಲೆ ಕುಟುಂಬಸ್ಥರು ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಿದ್ದಾರೆ. ಇನ್ನು ಕಾಂಪೌಂಡರ್ಗೆ ಸಾವಿನ ವರದಿ ಕೊಡುವ ಅಧಿಕಾರವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ