Shocking News: ಶವ ಕೊಳೆತು ವಾಸನೆ ಬಂತು! ಆಗಲೇ ಬಹಿರಂಗವಾಯ್ತು ಯುವತಿಯ ಸಾವು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಆ ಮನೆಯ 3ನೇ ಮಹಡಿಯಿಂದ ಬರುತ್ತಿದ್ದ ಕೆಟ್ಟ ವಾಸನೆ ಇಂದ ಅಲ್ಲಿ ದೇಹ ಇರುವ ವಿಷಯ ತಿಳಿದು ಬಂದಿದೆ. ಇದನ್ನು ಶನಿವಾರ ರಾತ್ರಿ ಪೊಲೀಸರು ಪತ್ತೆಹಚ್ಚಿದ್ದಾರೆ.

  • Share this:

ನೋಯ್ಡಾ : ಚೀಲದಲ್ಲಿ ತುಂಬಿರುವ 21 ವರ್ಷದ ಯುವತಿಯ (Women) ಕೊಳೆತ ಶವ (Dead Body) ಉತ್ತರ ಪ್ರದೇಶದ ಸೆಕ್ಟರ್ ಗಾಮ 1 ಗ್ರೇಟರ್ ನೋಯ್ಡಾದ (Noida) ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ. ಆ ಮನೆಯ 3ನೇ ಮಹಡಿಯಿಂದ ಬರುತ್ತಿದ್ದ ಕೆಟ್ಟ ವಾಸನೆಯಿಂದ ಅಲ್ಲಿ ದೇಹ ಇರುವ ವಿಷಯ ತಿಳಿದು ಬಂದಿದೆ. ಇದನ್ನು ಶನಿವಾರ ರಾತ್ರಿ ಪೊಲೀಸರು (Police) ಪತ್ತೆಹಚ್ಚಿದ್ದಾರೆ. ಸಾವನ್ನಪ್ಪಿರುವ ಅವನಿ ಅಲಿಯಾಸ್ ಪೂಜ ಭಾರತಿ (Pooja Bharathi) ಎಂಬ ಬಿಹಾರ (Bihar) ಮೂಲದ ಯುವತಿ ಎಂದು ತಿಳಿದು ಬಂದಿದೆ. ಈಕೆ  ಮನೆ ಒಂದನ್ನು ಹತ್ತು ತಿಂಗಳ ಹಿಂದೆ ಬಾಡಿಗೆ ತೆಗೆದುಕೊಂಡಿದ್ದಳು ಎಂದು ಹೇಳಿದ್ದಾರೆ.


ಸರ್ಕಾರಿ ನೌಕರಿ ಪಡೆಯಲು ಪರೀಕ್ಷಾ ಸಿದ್ದತೆಯನ್ನು ಆಕೆ ನಡೆಸುತ್ತಿದ್ದಳು. ಅವಳು ತಾನಿರುವ ಬಾಡಿಗೆ ಮನೆಯ 3ನೇ ಮಹಡಿಯಲ್ಲಿ ವಾಸಿಸುತ್ತಿದ್ದಳು. ಆ ಮನೆಯ ಓನರ್ ಗ್ರೌಂಡ್  ಫ್ಲೋರ್​ನಲ್ಲಿ ವಾಸವಿದ್ದರು ಎಂದು ಪೊಲೀಸರು ಹೇಳಿದ್ದಾರೆ.


ಮನೆಯ ಓನರ್​ನಿಂದ ಪೊಲೀಸರಿಗೆ ದೂರು 
ಶನಿವಾರ ರಾತ್ರಿ ಸುಮಾರು 10 ಗಂಟೆ ಸಮಯಕ್ಕೆ ನಮಗೆ ಕರೆ ಮಾಡಿ ಆ ಮನೆಯ ಓನರ್ ತಮ್ಮ ಮನೆಯ ಮೂರನೆ ಮಹಡಿಯಿಂದ ಕೆಟ್ಟದಾದ ವಾಸನೆ ಬರುತ್ತಿರುವ ಬಗ್ಗೆ ತಿಳಿಸಿದರು ಎಂದು ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಅವರು ತಿಳಿಸಿದರು.


ಗೋಣಿಚೀಲದಲ್ಲಿ ಮಹಿಳೆಯ ಶವ ಪತ್ತೆ  
“ಫ್ಲ್ಯಾಟ್ ಬಾಗಿಲು ಬಹಳ ದಿನಗಳಿಂದ ಮುಚ್ಚಲಾಗಿತ್ತು. ಯಾರು ಸಹ ಆ ಕಡೆ ಗಮನ ಹರಿಸಿರಲಿಲ್ಲ. ಅದನ್ನು ನಮ್ಮ  ಪೊಲೀಸ್ ತಂಡ ಹೋಗಿ ಒಡೆದು ನೋಡಿದಾಗ ಆ 2 ಬಿಎಚ್ ಕೆ ಮನೆ ಕೆಟ್ಟ ವಾಸನೆ ಇಂದ ಕೂಡಿತ್ತು. ಅಲ್ಲಿನ ಡ್ರಾಯಿಂಗ್ ರೂಮ್ ಒಂದರಲ್ಲಿ ಕಟ್ಟಿರುವ ಗೋಣೀಚೀಲವಿತ್ತು. ಅದನ್ನು ನಮ್ಮ ತಂಡ ತೆರೆದು ನೋಡಿದಾಗ ದೇಹ ಕೊಳೆತ ಸ್ಥಿತಿಯಲ್ಲಿತ್ತು. ಅದನ್ನು ನಾವು ಪೋಸ್ಟ್ ಮಾರ್ಟಂಗೆ ಎಂದು ಕಳಿಸಿದ್ದೇವೆ. ಆಟೋಸ್ಪೈ ರಿಪೋರ್ಟ್ ಬಂದ ನಂತರ ಅವಳ ಸಾವು ಹೇಗಾಗಿದೆ ಎಂದು ತಿಳಿಯುತ್ತದೆ. ಆಗ ನಾವು ಸಂಪೂರ್ಣ ವಿವರಣೆಯನ್ನು ನೀಡುತ್ತೇವೆ ಎಂದು ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಹೇಳಿದ್ದಾರೆ.


ಇದನ್ನೂ ಓದಿ: Adoption Agencies: ಸರ್ಕಾರಿ ದತ್ತು ಸಂಸ್ಥೆಗಳಲ್ಲಿ 800ಕ್ಕೂ ಹೆಚ್ಚು ಅನಾಥ ಮಕ್ಕಳು ಸಾವು!


ಯಾರಿದು ರಂಜನ್ ಆಶಿಶ್ ?
“ಪ್ರಥಮ ಹಂತದ ತನಿಖೆಯ ವರದಿಯ ಪ್ರಕಾರ ಆ ಯುವತಿ ಆಶಿಶ್ ರಂಜನ್ ಎಂಬ ವ್ಯಕ್ತಿಯ ಜೊತೆ ವಾಸಿಸುತ್ತಿದ್ದಳು. ಆಕೆ ಅವನನ್ನು ತನ್ನ ಸಂಬಂಧಿ (ಕಸಿನ್) ಎಂದು ಮನೆಯ ಓನರ್ ಗೆ ಪರಿಚಯಿಸಿದ್ದಳು. ಆಶಿಶ್ ರಂಜನ್ ಗ್ರೇಟರ್ ನೋಯ್ಡದ ಖಾಸಗಿ ಕಾಲೇಜ್ ಒಂದರಲ್ಲಿ ಬಿ ಟೆಕ್ ಓದುತ್ತಿರುವ ವಿದ್ಯಾರ್ಥಿ. ಅವರಿಬ್ಬರು ರಿಲೇಶನ್ ಶಿಪ್ ನಲ್ಲಿ ಇದ್ದಿರಬಹುದು. ನಾವು ಸದ್ಯಕ್ಕೆ ಅವರ ಮನೆಯವರ ಜೊತೆ ಮಾತಾಡಿ ಇನ್ನಷ್ಟು ಮಾಹಿತಿ ಕಲೆಹಾಕುತಿದ್ದೇವೆ. ಆ ಘಟನೆ ನಡೆದಾಗಿನಿಂದ ರಂಜನ್ ಕಣ್ಮರೆಯಾಗಿದ್ದಾನೆ.” ಎಂದು ಅನಿಲ್ ಕುಮಾರ್ ಹೇಳಿದ್ದಾರೆ.


ಸದ್ಯಕ್ಕೆ ಆಶಿಶ್ ರಂಜನ್ ವಿರುದ್ಧ IPC ಸೆಕ್ಷನ್ 302ರ ಅಡಿಯಲ್ಲಿ (ಪನಿಷ್ಮೆಂಟ್ ಫ಼ಾರ್ ಮರ್ಡರ್) ಬೀಟ-2 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ಮತ್ತಷ್ಟು ವಿವರಗಳಿಗಾಗಿ ಅಕ್ಕ-ಪಕ್ಕದಲ್ಲಿರುವ ಸ್ಥಳಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.


ಇದನ್ನೂ ಓದಿ:  Price Hike Protest: ಬೆಲೆ ಏರಿಕೆ ಕುರಿತು ಬೀದಿ ನಾಟಕ ಮಾಡಿದ್ದೆ ತಪ್ಪಾಯ್ತಾ? ಖಡಕ್ ಪ್ರಶ್ನೆ ಕೇಳಿದ ಅಸ್ಸಾಂ ಸಿಎಂ


ಇವರಿಬ್ಬರು ಹತ್ತು ತಿಂಗಳ ಹಿಂದೆ ಮನೆಯನ್ನು ಬಾಡಿಗೆಗೆ ಪಡೆದಿರುತ್ತಾರೆ, ಅಲ್ಲಿಗೆ ಜಾಸ್ತಿ ಯಾರು ಬಂದು-ಹೋಗುತ್ತಿರಲಿಲ್ಲ ಇವರಿಬ್ಬರೆ ವಾಸಿಸುತ್ತಿದ್ದರು ಎನ್ನಲಾಗಿದೆ, ಈ ಯುವತಿ 3-4 ದಿನಗಳ ಹಿಂದೆ ಸಾವನ್ನಪ್ಪಿರಬಹುದು. ಈ ಜೋಡಿಗಳು ತಮ್ಮ ಸಂಬಂಧದ ಕುರಿತು ಯಾವಾಗಲೂ ಕಿತ್ತಾಡುತ್ತಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಆಶಿಶ್ ರಂಜನ್ ಆಕೆಯನ್ನು ಕೊಲೆ ಮಾಡಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

Published by:Ashwini Prabhu
First published: