• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಜಮ್ಮು ಕಾಶ್ಮೀರದಲ್ಲಿ ಡಿಸಿಸಿ ಚುನಾವಣೆ; ಬಿಗಿ ಭದ್ರತೆಯಲ್ಲಿ ನಡೆಯುತ್ತಿದೆ ಮೊದಲ ಹಂತದ ಮತದಾನ

ಜಮ್ಮು ಕಾಶ್ಮೀರದಲ್ಲಿ ಡಿಸಿಸಿ ಚುನಾವಣೆ; ಬಿಗಿ ಭದ್ರತೆಯಲ್ಲಿ ನಡೆಯುತ್ತಿದೆ ಮೊದಲ ಹಂತದ ಮತದಾನ

ಜಮ್ಮು-ಕಾಶ್ಮೀರದ ಮತಗಟ್ಟೆ ಎದುರು ನಿಂತಿರುವ ಮತದಾರರು.

ಜಮ್ಮು-ಕಾಶ್ಮೀರದ ಮತಗಟ್ಟೆ ಎದುರು ನಿಂತಿರುವ ಮತದಾರರು.

ಭಲೆಸ್ಸಾ ಮತ್ತು ಚಂಗಾ ಡಿಡಿಸಿ ಕ್ಷೇತ್ರಗಳಲ್ಲಿ ಮತದಾನ ಪ್ರಾರಂಭವಾಯಿತು. ಬೆಳಿಗ್ಗೆ 7 ರಿಂದ ಜನರು ಬರುತ್ತಿದ್ದಾರೆ. ನಾವು ಉತ್ಸಾಹದಿಂದ ಭಾಗವಹಿಸುತ್ತಿದ್ದೇವೆ ಎಂದು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲಾ ಅಭಿವೃದ್ಧಿ ಆಯುಕ್ತರು ಸುದ್ದಿ ಸಂಸ್ಥೆ ಎನ್‌ಐಗೆ  ಮಾಹಿತಿ ನೀಡಿದ್ದಾರೆ.

ಮುಂದೆ ಓದಿ ...
  • Share this:

    ಜಮ್ಮು ಕಾಶ್ಮೀರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ ನಂತರ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಬಿಗಿ ಭದ್ರತೆಯ ನಡುವೆ ಮಹತ್ವದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಮೊದಲ ಹಂತದ ಚುನಾವಣೆ ನಡೆದಿದೆ. ಜಮ್ಮುವಿನ 18 ಮತ್ತು ಕಾಶ್ಮೀರದ 25 ಸ್ಥಾನಗಳು ಸೇರಿದಂತೆ ಮೊದಲ ಹಂತದಲ್ಲಿ ಡಿಡಿಸಿಯ ಒಟ್ಟು 43 ಕ್ಷೇತ್ರಗಳಿಗಾಗಿ ಇಂದು ಮತದಾನ ನಡೆಯುತ್ತಿದೆ. ಕಳೆದ ವರ್ಷ ಆಗಸ್ಟ್​ನಲ್ಲಿ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಪಡಿಸಿದ ಬಳಿಕ ಇಲ್ಲಿ ನಡೆಯುತ್ತಿರೋ ಮೊದಲ ಸ್ಥಳೀಯ ಸಂಸ್ಥೆ ಚುನಾವಣೆ ಇದಾಗಿದೆ. ಮೊದಲ ಹಂತದಲ್ಲಿ 1,475 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿಡಿಸಿ, ‍ಪಂಚಾಯತ್‌ ಉಪಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯು 8 ಹಂತಗಳಲ್ಲಿ ನಡೆಯಲಿವೆ.


    ಮತದಾನ ಸುಗಮವಾಗಿ ನಡೆಯಲು ವಿಸ್ತಾರವಾದ ವ್ಯವಸ್ಥೆ ಮಾಡಲಾಗಿದೆ ಮತ್ತು ಕೊರೊನಾ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶನಿವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮತದಾನ ಮಧ್ಯಾಹ್ನ 2 ಗಂಟೆಗೆ ಕೊನೆಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



    "ಭಲೆಸ್ಸಾ ಮತ್ತು ಚಂಗಾ ಡಿಡಿಸಿ ಕ್ಷೇತ್ರಗಳಲ್ಲಿ ಮತದಾನ ಪ್ರಾರಂಭವಾಯಿತು. ಬೆಳಿಗ್ಗೆ 7 ರಿಂದ ಜನರು ಬರುತ್ತಿದ್ದಾರೆ. ನಾವು ಉತ್ಸಾಹದಿಂದ ಭಾಗವಹಿಸುತ್ತಿದ್ದೇವೆ" ಎಂದು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲಾ ಅಭಿವೃದ್ಧಿ ಆಯುಕ್ತರು ಸುದ್ದಿ ಸಂಸ್ಥೆ ಎನ್‌ಐಗೆ  ಮಾಹಿತಿ ನೀಡಿದ್ದಾರೆ.


    ಇದನ್ನೂ ಓದಿ : ಮ್ಯಾಟ್ರಿಮೋನಿಯಲ್ಲಿ ಪರಿಚಯ, ಮದುವೆ ಹೆಸರಲ್ಲಿ ಮಹಿಳೆಯರಿಂದ ಲಕ್ಷ ಲಕ್ಷ ವಂಚನೆ; ಆರೋಪಿ ಬಂಧನ


    ಪೀಪಲ್ಸ್​ ಅಲಯನ್ಸ್​ ಫಾರ್​ ಗುಪ್ಕರ್​ ಡಿಕ್ಲರೇಷನ್(ಪಿಎಜಿಡಿ), ಬಿಜೆಪಿ ಹಾಗೂ ಮಾಜಿ ಹಣಕಾಸು ಸಚಿವ ಅಲ್ತಾಫ್​ ಬುಖಾರಿ ಅವರ ಅಪ್ನೀ ಪಾರ್ಟಿಯ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಎನ್ನಲಾಗಿದೆ. ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಕೂಡ ಕಣದಲ್ಲಿದೆ.


    ಡಿಡಿಸಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಪಿಡಿಪಿ ಯುವ ವಿಭಾಗದ ಅಧ್ಯಕ್ಷ ಮತ್ತು ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿಯವರ ಆಪ್ತ ಸಹಾಯಕ ವಹೀದ್‌ ಪರ್ರಾ ಅವರನ್ನು ಭಯೋತ್ಪಾದಕ ಪ್ರಕರಣಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಬಂಧಿಸಿದೆ.

    Published by:MAshok Kumar
    First published: