HOME » NEWS » National-international » DC DISTRIBUTED THE FOOD BACKWORD PEOPLE BY WALK IN KERALA AS LOCKDOWN CREATES FOOD CRISIS MAK

ಆಹಾರಕ್ಕೂ ತತ್ವಾರ ತಂದ ಲಾಕ್‌ಡೌನ್; ತಲೆ ಮೇಲೆ ದಿನಸಿ ಹೊತ್ತು 3 ಕಿಮೀ ನಡೆದೆ ಬುಡಕಟ್ಟು ಜನರಿಗೆ ತಲುಪಿಸಿದ ಜಿಲ್ಲಾಧಿಕಾರಿ

ಹಲವು ಅಧಿಕಾರಿಗಳು ಸೇವಾ ಮನೋಭಾವನೆಯಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಕೇರಳದ ಜಿಲ್ಲಾಧಿಕಾರಿ ಪಿ.ಬಿ. ನೂಹ್ ತಲೆ ಮೇಲೆ ದಿನಸಿ ಹೊತ್ತು ದಟ್ಟ ಕಾಡಿನಲ್ಲಿ 3 ಕಿಮೀ ನಡೆದು ಸಂಕಷ್ಟದಲ್ಲಿರುವವ ಸುಮಾರು 37 ಬುಡಕಟ್ಟು ಸಮಾಜದ ಕುಟುಂಬಗಳಿಗೆ ದಿನಸಿ ತಲುಪಿಸುವ ಮೂಲಕ ದೇಶದಾದ್ಯಂತ ವ್ಯಾಪಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

MAshok Kumar | news18-kannada
Updated:March 31, 2020, 6:57 PM IST
ಆಹಾರಕ್ಕೂ ತತ್ವಾರ ತಂದ ಲಾಕ್‌ಡೌನ್; ತಲೆ ಮೇಲೆ ದಿನಸಿ ಹೊತ್ತು 3 ಕಿಮೀ ನಡೆದೆ ಬುಡಕಟ್ಟು ಜನರಿಗೆ ತಲುಪಿಸಿದ ಜಿಲ್ಲಾಧಿಕಾರಿ
ಬುಡಕಟ್ಟು ಜನರಿಗೆ ಆಹಾರ ತಲುಪಿಸಿದ ಕೇರಳ ಜಿಲ್ಲಾಧಿಕಾರಿ.
  • Share this:
ತಿರುವನಂತಪುರ (ಮಾರ್ಚ್ 31); ಕೊರೋನಾ ಸೋಂಕು ನಿವಾರಣೆಗಾಗಿ ರಾಷ್ಟ್ರದಾದ್ಯಂತ ಕೇಂದ್ರ ಸರ್ಕಾರ 21 ದಿನಗಳ ಲಾಕ್ಡೌನ್ ಘೋಷಿಸಿದೆ. ಪರಿಣಾಮ ದಿನಗೂಲಿ ಕಾರ್ಮಿಕರು, ಬಡವರು ಮತ್ತು ಕಾಡಿನೊಳಗೆ ವಾಸಿಸುತ್ತಿರುವ ಬುಡಕಟ್ಟು ಸಮಾಜ ತೀವ್ರ ತೊಂದರೆಗೆ ಸಿಲುಕಿವೆ. ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹಾ ಸಂದಿಗ್ಧ ಸಂದರ್ಭದಲ್ಲಿ ಇಂತವರ ಸೇವೆ ಮಾಡುವುದು ತುರ್ತು ಅಗತ್ಯದ ಕ್ರಮ.

ಆದರೆ, ಹಲವು ಅಧಿಕಾರಿಗಳು ಇಂತಹ ಸೇವಾ ಮನೋಭಾವನೆಯಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಕೇರಳದ ಜಿಲ್ಲಾಧಿಕಾರಿ ಪಿ.ಬಿ. ನೂಹ್ ತಲೆ ಮೇಲೆ ದಿನಸಿ ಹೊತ್ತು ದಟ್ಟ ಕಾಡಿನಲ್ಲಿ 3 ಕಿಮೀ ನಡೆದು ಸಂಕಷ್ಟದಲ್ಲಿರುವವ ಸುಮಾರು 37 ಬುಡಕಟ್ಟು ಸಮಾಜದ ಕುಟುಂಬಗಳಿಗೆ ದಿನಸಿ ತಲುಪಿಸುವ ಮೂಲಕ ದೇಶದಾದ್ಯಂತ ವ್ಯಾಪಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೇರಳ ರಾಜ್ಯದಲ್ಲೂ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ಪತ್ತನಂತಿಟ್ಟ ಜಿಲ್ಲೆಯ ಪೆರಿಯಾರ್ ವನ್ಯಜೀವಿಧಾಮದಂಚಿನಲ್ಲಿರುವ ಬುಡುಕಟ್ಟು ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಒಂದು ವಾರದಿಂದ ಆಹಾರ ಸಾಮಗ್ರಿ ಇಲ್ಲದೇ ಪರದಾಡುತ್ತಿದ್ದ ಈ ಬುಡಕಟ್ಟು ಜನಕ್ಕೆ ಕೊನ್ನಿ ಕ್ಷೇತ್ರದ ಶಾಸಕ ಕೆ.ಯು. ಜಾನಿಶ್ ಹಾಗೂ ಪತ್ತನಂತಿಟ್ಟ ಜಿಲ್ಲಾಧಿಕಾರಿ ಪಿ.ಬಿ. ನೂಹ್ ಅವರು ಮೂರು ಕಿಲೋ ಮೀಟರ್ ಕಾಡಿನಲ್ಲಿ ನಡೆದುಕೊಂಡೇ ಹೋಗಿ ಆಹಾರ ಸಾಮಗ್ರಿಗಳನ್ನು ತಲುಪಿಸಿ ಬಂದಿದ್ದಾರೆ.

ಕೇರಳದಲ್ಲೂ ಸುಮಾರು 20ಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಈವರೆಗೆ ಇಬ್ಬರು ಮೃತಪಟ್ಟಿದ್ದಾರೆ. ಕೊರೋನಾ ಸೋಂಕನ್ನು ಹೋಗಲಾಡಿಸಲು ಕೇರಳ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು, ಒಂದು ತಿಂಗಳ ಹಿಂದೆಯೇ ಕೇರಳ ಸರ್ಕಾರ ಕೊರೋನಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು.

ಇದನ್ನೂ ಓದಿ : ಲಾಕ್‌ಡೌನ್ ಹಿನ್ನೆಲೆ; ಮದ್ಯ ನಿಷೇಧಕ್ಕೆ ಮತ್ತೊಂದು ಬಲಿ; ರಾಜ್ಯದಲ್ಲಿ 6ಕ್ಕೇರಿದ ಪಾನ ಪ್ರಿಯರ ಆತ್ಮಹತ್ಯೆ ಸಂಖ್ಯೆ

First published: March 31, 2020, 6:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories