Budget 2019 - ಕೈಗೆಟಕುವ ಬೆಲೆಗೆ ಮನೆ ಖರೀದಿ: ಕೇಂದ್ರ ಸರಕಾರದಿಂದ 1 ಲಕ್ಷ ಕೋಟಿ ಅನುದಾನ ಬಿಡುಗಡೆ

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 3.56 ಲಕ್ಷ ಕೋಟಿ ವೆಚ್ಚವಾಗುವ ಅಂದಾಜಿದ್ದು, ಕೇಂದ್ರ ಸರಕಾರ 1 ಲಕ್ಷ ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ.

Vijayasarthy SN | news18
Updated:January 30, 2019, 6:38 PM IST
Budget 2019 - ಕೈಗೆಟಕುವ ಬೆಲೆಗೆ ಮನೆ ಖರೀದಿ: ಕೇಂದ್ರ ಸರಕಾರದಿಂದ 1 ಲಕ್ಷ ಕೋಟಿ ಅನುದಾನ ಬಿಡುಗಡೆ
ನರೇಂದ್ರ ಮೋದಿ
Vijayasarthy SN | news18
Updated: January 30, 2019, 6:38 PM IST
ನವದೆಹಲಿ(ಜ. 30): ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಸರ್ವರಿಗೂ ಸೂರು ಕಲ್ಪಸುವುದೂ ಒಂದು. 2022ರೊಳಗೆ ಪ್ರತಿಯೊಬ್ಬರಿಗೂ ಮನೆ ಕಲ್ಪಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನಾದಂಥ ಅನೇಕ ಕ್ರಮಗಳನ್ನ ಕೈಗೊಂಡಿದೆ. ಅದರಲ್ಲಿ ಕಡಿಮೆ ಬೆಲೆಗೆ ವಸತಿ ಕಲ್ಪಿಸುವ ಯೋಜನೆಯೂ ಒಂದು. ಈ ಯೋಜನೆಯಡಿ ಪಡೆಯಲಾಗುವ ಸಾಲದ ಮೇಲಿನ ಬಡ್ಡಿಯಲ್ಲಿ ಕೆಲ ಭಾಗವನ್ನು ಸರಕಾರವೇ ಭರಿಸಲಿದೆ. ಅಂದರೆ, ಬಡ್ಡಿ ಮೇಲೆ ಸಬ್ಸಿಡಿ ನೀಡುತ್ತದೆ.

ಮಧ್ಯಮ ಆದಾಯದ ರೇಖೆಯಲ್ಲಿರುವ ವರ್ಗಗಳಿಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಕೊಡುವ ಈ ಯೋಜನೆಯನ್ನು ಕೇಂದ್ರ ಸರಕಾರವು 2016ರ ಡಿಸೆಂಬರ್ 31ರಂದು ಘೋಷಿಸಿತು. 6ರಿಂದ 18 ಲಕ್ಷ ರೂ ವಾರ್ಷಿಕ ಆದಾಯ ಇರುವ ನಗರ ಪ್ರದೇಶದ ವಸತಿ ಖರೀದಿದಾರರಿಗೆ ಈ ಯೋಜನೆ ಅನ್ವಯವಾಗುತ್ತದೆ. ಎರಡು ಬಾರಿ ಈ ಸ್ಕೀಮ್​ನ ಅವಧಿ ವಿಸ್ತರಿಸಿದ ಸರಕಾರ ಈಗ 2020ರ ಮಾರ್ಚ್​ವರೆಗೂ ಮತ್ತೊಮ್ಮೆ ವಿಸ್ತರಣೆ ಮಾಡಿದೆ.

ಈ ಯೋಜನೆಯಡಿಯಲ್ಲಿ ವಾರ್ಷಿಕ ಆದಾಯದ ಮೇಲೆ ಎರಡು ಗುಂಪಾಗಿ ವರ್ಗೀಕರಣ ಮಾಡಿದೆ. 6-12 ಲಕ್ಷ ವಾರ್ಷಿಕ ಆದಾಯ ಇರುವ ವ್ಯಕ್ತಿಗಳನ್ನು ಮೊದಲ ಗುಂಪಿನವರೆಂದು ಪರಿಗಣಿಸಲಾಗುತ್ತದೆ. ಇವರಿಗೆ 9 ಲಕ್ಷ ರೂಪಾಯಿವರೆಗೆ ವಿವಿಧ ಬ್ಯಾಂಕುಗಳಲ್ಲಿ ಸಾಲದ ವ್ಯವಸ್ಥೆ ಇರುತ್ತದೆ. ಈ ಸಾಲದ ಮೇಲಿನ ಬಡ್ಡಿಯಲ್ಲಿ ಶೇ. 4ರಷ್ಟು ಮೊತ್ತವನ್ನು ಕೇಂದ್ರವೇ ಭರಿಸಲಿದೆ. ಹಾಗೆಯೇ, ಎರಡನೇ ಗುಂಪಿನಲ್ಲಿರುವ ವ್ಯಕ್ತಿಗಳು ವಾರ್ಷಿಕ 12-18 ಲಕ್ಷ ಆದಾಯ ಇರುವವರಾಗಿದ್ದು ಇವರಿಗೆ 12 ಲಕ್ಷದವರೆಗೆ ಸಾಲದ ವ್ಯವಸ್ಥೆ ಇರಲಿದೆ. ಇವರಿಗೆ ಶೇ. 3ರಷ್ಟು ಬಡ್ಡಿ ಮನ್ನಾ ಭಾಗ್ಯ ಸಿಗಲಿದೆ. ಒಟ್ಟಾರೆಯಾಗಿ ಈ ಯೋಜನೆಯಡಿ ಪಡೆಯುವ ಗೃಹ ಸಾಲಗಳಲ್ಲಿ ಒಬ್ಬ ವ್ಯಕ್ತಿಯು 2.67 ಲಕ್ಷ ರೂಪಾಯಿಯವರೆಗೂ ಲಾಭ ಪಡೆಯುವ ಅವಕಾಶವಿದೆ.

ಈ ಯೋಜನೆಯಲ್ಲಿ ಈವರೆಗೂ 93 ಸಾವಿರ ಫಲಾನುಭವಿಗಳಿದ್ದು ಕೇಂದ್ರದಿಂದ 1,960 ಕೋಟಿ ಬಡ್ಡಿ ರಿಯಾಯಿತಿಯ ಲಾಭ ಪಡೆದಿದ್ದಾರೆ. ಈಗ ಅವಧಿ ವಿಸ್ತರಣೆಯಾಗಿರುವುದರಿಂದ ಈ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ.

ಇನ್ನು, ಪ್ರಧಾನ ಮಂತ್ರಿ ಆವಾಸ್ ಯೋಜನೆ(ಪಿಎಂಎವೈ)ಗೆ 3.56 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ನಿರೀಕ್ಷೆ ಇದೆ. ಇದಕ್ಕೆ ಹಣಕಾಸು ಹೊಂದಿಸುವ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲಿದೆ. ಕೇಂದ್ರ ಸರಕಾರ ಈಗಾಗಲೇ ಈ ಯೋಜನೆಗೆ 1 ಲಕ್ಷ ರೂ ಅನುದಾನ ಘೋಷಿಸಿದೆ. ಈಗಾಗಲೇ ವಿವಿಧ ರಾಜ್ಯಗಳಿಗೆ 33,455 ಕೋಟಿ ರೂ ಅನುದಾನವನ್ನೂ ಬಿಡುಗಡೆ ಮಾಡಿದೆ.
First published:January 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ