ಮದುವೆಯಾದ ಮೂರನೇ ದಿನದಲ್ಲೇ ಗೊತ್ತಾಯ್ತು ಹೆಂಡತಿಯ ಅಸಲಿಯತ್ತು..!

ಕೆಲ ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಸುರೇಂದ್ರ ಮದುವೆಯ ಖರ್ಚು ವೆಚ್ಚವನ್ನೂ ನೋಡಿಕೊಂಡಿದ್ದರು. ಆದರೆ ಮದುವೆಯಾದ ಮೂರೇ ದಿನದಲ್ಲಿ ಪತ್ನಿಯ ಅಸಲಿ ಮುಖ ಗೊತ್ತಾಗಿದೆ.

zahir | news18
Updated:June 27, 2019, 3:21 PM IST
ಮದುವೆಯಾದ ಮೂರನೇ ದಿನದಲ್ಲೇ ಗೊತ್ತಾಯ್ತು ಹೆಂಡತಿಯ ಅಸಲಿಯತ್ತು..!
@businesstoday.in
  • News18
  • Last Updated: June 27, 2019, 3:21 PM IST
  • Share this:
ಮದುವೆ ಸಂಭ್ರಮವನ್ನು ಮತ್ತಷ್ಟು ಹೆಚ್ಚಾಗಿಸಿಕೊಳ್ಳಲು ಸೂಕ್ತ ವೆಡ್ಡಿಂಗ್‌ ಪ್ಲ್ಯಾನಿಂಗ್‌ ಇರಬೇಕು. ಆದರೆ ಮದುವೆಯ ಮೂಲಕವೇ ಮೋಸ ಮಾಡಲು ಭರ್ಜರಿ ಪ್ಲ್ಯಾನ್ ರೂಪಿಸಿದರೇ?..ಹೌದು ಇಂತಹದೊಂದು ಅಪರೂಪದ ಘಟನೆ ಹರಿಯಾಣದಲ್ಲಿ ನಡೆದಿದೆ.

ದಾಂಪತ್ಯ ಜೀವನದ ಮೂಲಕ ಹೊಸ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಪತಿಯನ್ನು ಪತ್ನಿಯೇ ಯಾಮಾರಿಸಿದ ಘಟನೆ ಹರಿಯಾಣದ ಜಿಂದ್​ನಲ್ಲಿ ನಡೆದಿದೆ. ಹೊಸ ಬಾಳಿನ ನಿರೀಕ್ಷೆಯಲ್ಲಿದ್ದ  ಸುರೇಂದ್ರ ಎಂಬವರು ಹೆಂಡತಿಯಿಂದ ವಂಚನೆಗೊಳಗಾದವರು.

ಕೆಲ ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಸುರೇಂದ್ರ ಮದುವೆಯ ಖರ್ಚು ವೆಚ್ಚವನ್ನೂ ನೋಡಿಕೊಂಡಿದ್ದರು. ಆದರೆ ಮದುವೆಯಾದ ಮೂರೇ ದಿನದಲ್ಲಿ ಪತ್ನಿಯ ಅಸಲಿ ಮುಖ ಗೊತ್ತಾಗಿದೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೂರನೇ ದಿನವೇ  ಪತಿ  ನೀಡಿದ 70 ಸಾವಿರ ರೂ.ನೊಂದಿಗೆ ಪತ್ನಿ ಪರಾರಿಯಾಗಿದ್ದಾಳೆ.

ಸುರೇಂದ್ರ ಅವರು ಮಧ್ಯವರ್ತಿಗಳ ಮೂಲಕ ಯುವತಿಯನ್ನು ನೋಡಿದ್ದರು. ಇದರಿಂದಾಗಿ ಮಹಿಳೆಯ ಕುಟುಂಬಸ್ಥರ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿರಲಿಲ್ಲ. ಮದುವೆಯಾಗಲು ದೇವಾಲಯದಲ್ಲಿ ಹರಕೆ ಹೊತ್ತಿರುವುದಾಗಿ ಪತ್ನಿ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ನವದಂಪತಿ ದೇವಸ್ಥಾನಕ್ಕೆ ತೆರಳಲು ರೈಲ್ವೇ ನಿಲ್ಧಾಣಕ್ಕೆ ಆಗಮಿಸಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡ ಮಹಿಳೆಯು ಮದುವೆಗೆ ಹಾಕಿದ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಸುರೇಂದ್ರ ತಿಳಿಸಿದ್ದಾರೆ.

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಸುರೇಂದ್ರ, ತನ್ನ ಪತ್ನಿಯ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು  ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

First published: June 27, 2019, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading