news18-kannada Updated:December 17, 2020, 4:20 PM IST
ಸುಭೇಂದು ಅಧಿಕಾರಿ
ಕೋಲ್ಕತ್ತಾ(ಡಿಸೆಂಬರ್ 17): ಸಚಿವ ಸ್ಥಾನಕ್ಕೆ ಮತ್ತು ಶಾಸಕ ಸ್ಥಾನಕ್ಕೆರಾಜೀನಾಮೆ ನೀಡಿದ್ದ ಟಿಎಂಸಿ ಪಕ್ಷದ ಹಿರಿಯ ನಾಯಕ ಸುಭೇಂದು ಅಧಿಕಾರಿ ಅವರು ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಇಂದು ಗುರುವಾರ ತಿಳಿಸಿದ್ದಾರೆ. ಟಿಎಂಸಿ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು ತಮ್ಮ ರಾಜೀನಾಮೆ ನಿರ್ಧಾರವನ್ನು ತಿಳಿಸಿದ್ದಾರೆ. ಪೂರ್ಬ ಮೇದಿನಿಪುರ್ ಜಿಲ್ಲೆಯ ನಂದೀಗ್ರಾಮ್ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸುವೇಂದು ಅವರು ನಿನ್ನೆ ಬುಧವಾರ ರಾಜೀನಾಮೆ ನೀಡಿದ್ದರು. ಶಾಸಕ ಸ್ಥಾನಕ್ಕೆ ತಮ್ಮ ರಾಜೀನಾಮೆಯನ್ನ ಕೂಡಲೇ ಅಂಗೀಕರಿಸಿ ಎಂದು ಅವರು ಸ್ಪೀಕರ್ ಅವರಿಗ ಪತ್ರ ಬರೆದು ಕೋರಿಕೊಂಡಿದ್ದರು.ಈ ವಾರದ ಕೊನೆಯಲ್ಲಿ ಅವರು ಬಿಜೆಪಿ ಸೇರುವ ನಿರೀಕ್ಷೆಯಿದೆ. ಈ ವಾರದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳಕ್ಕೆ ಆಗಮಿಸಲಿದ್ದು, ಅವರ ಸಮ್ಮುಖದಲ್ಲಿ ಸುಬೇಂದು ಅಧಿಕಾರಿ ಅವರು ಬಿಜೆಪಿ ಸೇರುವ ನಿರೀಕ್ಷೆ ಇದೆ.
ಇದಕ್ಕೆ ಮುನ್ನ ಅವರು ಇನ್ನೆರಡು ದಿನದಲ್ಲಿ ದೆಹಲಿಗೆ ಹೋಗಿ ಅಮಿತ್ ಶಾ ಸೇರಿದಂತೆ ಪಕ್ಷದ ವರಿಷ್ಠರನ್ನ ಭೇಟಿ ಮಾಡುವ ಸಾಧ್ಯತೆ ಇದೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ಅವರಿಗೆ ಕೇಂದ್ರ ಗೃಹ ಸಚಿವಾಲಯವು ಭದ್ರತೆ ಒದಗಿಸಲಿದೆ.
ಈ ಬಗ್ಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್, ಸುಭೇಂದು ಅಧಿಕಾರಿಯ ನಿರ್ಧಾರವನ್ನು ಶ್ಲಾಘಿಸಿದರು. ಬಿಜೆಪಿ ಪಕ್ಷವು ಅವರನ್ನು ಮುಕ್ತವಾಗಿ ಸ್ವಾಗತಿಸುತ್ತದೆ. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಲೇ, ಟಿಎಂಸಿಯನ್ನು ತೊರೆದು ಅವರು ಬಿಜೆಪಿಗೆ ಸೇರ್ಪಡೆಗೊಂಡರೆ ಸಂತೋಷವಾಗುತ್ತದೆ ಎಂದು ನಾನು ಹೇಳಿದ್ದೆ. ಇಂದು ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಮತ್ತು ಅವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ರಾಯ್ ನಿನ್ನೆ ಪ್ರತಿಕ್ರಿಯಿಸಿದ್ದರು.
ಸಾರಿಗೆ ಮತ್ತು ನೀರಾವರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸುವೇಂದು ಅಧಿಕಾರಿ ಬಹಳಷ್ಟು ಭಿನ್ನಾಭಿಪ್ರಾಯಗಳನ್ನ ಹೊಂದಿದ್ದರು. ರಾಜ್ಯ ಸಚಿವ ಸಂಪುಟ ಸಭೆಗಳಲ್ಲೂ ಅವರು ಭಾಗವಹಿಸುತ್ತಿರಲಿಲ್ಲ.
ಇದನ್ನೂ ಓದಿ :
ಕಮಲ್ ನಾಥ್ ಸರ್ಕಾರವನ್ನು ಪದಚ್ಯುತಗೊಳಿಸುವಲ್ಲಿ ಮೋದಿ ಪ್ರಮುಖ ಪಾತ್ರ ವಹಿಸಿದ್ದರು; ಬಿಜೆಪಿ ನಾಯಕನ ಹೇಳಿಕೆ
ಅತ್ತ, ತೃಣಮೂಲ ಕಾಂಗ್ರೆಸ್ ಪಕ್ಷದ ಕಡೆಯಿಂದ ಸುವೇಂದು ಅವರನ್ನ ಉಳಿಸಿಕೊಳ್ಳುವ ಯಾವ ಪ್ರಯತ್ನಗಳೂ ನಡೆಯುವಂತೆ ಕಾಣುತ್ತಿಲ್ಲ. ಅವರು ಹೋದರೆ ಹೋಗಲಿ, ನಾವು ಇರಿ ಎಂದು ಹೇಳಬಾರದೆಂದು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ.
ಆದರೆ, ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಸುವೇಂದು ಏನಾದರೂ ಹೇಳಬೇಕಿದ್ದರೆ ಹೇಳಲಿ, ನಾವು ಕೇಳುತ್ತೇವೆ ಎಂದು ಪಕ್ಷ ತಿಳಿಸಿದೆ
Published by:
G Hareeshkumar
First published:
December 17, 2020, 4:19 PM IST