ಜೆಎನ್​ಯು ವಿದ್ಯಾರ್ಥಿಗಳ ಪ್ರತಿಭಟನೆ; ಸಾರ್ವಜನಿಕ ಆಸ್ತಿ ಹಾನಿಗೊಳಿಸಿದ್ದಕ್ಕೆ ಎಫ್​ಐಆರ್​ ದಾಖಲು, ಲಾಠಿ ಚಾರ್ಜ್​

ಈಗಾಗಲೇ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದಿರುವ ಆಡಳಿತ ಮಂಡಳಿ ಶುಲ್ಕ ಹೆಚ್ಚಳದಲ್ಲಿ ಶೇ. 50ರಷ್ಟು ಕಡಿಮೆಗೊಳಿಸಿದೆ. ಜೊತೆಗೆ, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ ಹೆಚ್ಚುವರಿ ಸಹಾಯ ಮಾಡುವುದಾಗಿ ಭರವಸೆ ನೀಡಿದೆ. ಆದರೆ, ಜೆಎನ್​​ಯು ವಿದ್ಯಾರ್ಥಿಗಳು ಮಾತ್ರ ಶುಲ್ಕ ಹೆಚ್ಚಳದಲ್ಲಿ ಸಂಪೂರ್ಣ ಕಡಿಮೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

HR Ramesh | news18-kannada
Updated:November 19, 2019, 5:50 PM IST
ಜೆಎನ್​ಯು ವಿದ್ಯಾರ್ಥಿಗಳ ಪ್ರತಿಭಟನೆ; ಸಾರ್ವಜನಿಕ ಆಸ್ತಿ ಹಾನಿಗೊಳಿಸಿದ್ದಕ್ಕೆ ಎಫ್​ಐಆರ್​ ದಾಖಲು, ಲಾಠಿ ಚಾರ್ಜ್​
ಜೆಎನ್​ಯು ವಿದ್ಯಾರ್ಥಿಗಳ ಪ್ರತಿಭಟನೆ
  • Share this:
ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.

ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಒಂದು ಕಿಸಾನ್​ಗರ್ ಪೊಲೀಸ್​ ಠಾಣೆಯಲ್ಲಿ ಒಂದು ಪ್ರಕರಣ ಮತ್ತು ಲೋಧಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ದೆಹಲಿ (ದಕ್ಷಿಣ) ಉಪಪೊಲೀಸ್ ಆಯುಕ್ತ ಅತುಲ್ ಕುಮಾರ್ ಥಾಕೂರ್ ಮಾತನಾಡಿ, ವಿದ್ಯಾರ್ಥಿಗಳು ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಸೇವೆಗೆ ಅಡ್ಡಿಪಡಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಲಾಗಿದೆ ಎಂದು ಹೇಳಿದರು.

ನಿನ್ನೆ ಶುಲ್ಕ ಹೆಚ್ಚಳ ಸಂಪೂರ್ಣ ವಾಪಸ್ಸು ಪಡೆಯುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಸಂಸತ್ತಿನತ್ತ ಮೆರವಣಿಗೆ ಹೊರಟಿದ್ದರು. ಮೆರವಣಿಗೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಘೋಷಣೆಗಳು ಮೊಳಗಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ದಾರಿ ಮಧ್ಯೆಯೇ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ತಡೆದು ಬಂಧಿಸಿದ್ದರು. ವಿದ್ಯಾರ್ಥಿಗಳು ಸಂಸತ್​​ಗೆ ಪ್ರವೇಶಿಸದಂತೆ ತಡೆಯಲು, ದೆಹಲಿ ಪೊಲೀಸರು ಹರಸಾಹಸ ಪಟ್ಟಿದ್ದರು. ಸಂಸತ್​​ ಸುತ್ತಮುತ್ತಲಿನ ಮೆಟ್ರೋ ನಿಲ್ದಾಣಗಳನ್ನು ಬಂದ್​​​​​​ ಮಾಡಿದ್ದರು. ಅಲ್ಲದೇ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು​​ ಲಾಠಿ ಪ್ರಹಾರ ನಡೆಸಿದರು.

ಪೊಲೀಸ್​​ ಲಾಠಿ ಪ್ರಹಾರದಿಂದ ಹಲವು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದರು. ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರ ಲಾಠಿ ಪ್ರಹಾರವನ್ನು ಕಾಂಗ್ರೆಸ್​​ ಸೇರಿದಂತೆ ಕೇಂದ್ರ ವಿರೋಧ ಪಕ್ಷಗಳು ಖಂಡಿಸಿವೆ. ಪೊಲೀಸರು ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿದ್ದಾರೆ. ಆದರೂ ಅವರು ಸಂಯಮದಿಂದ ಹೋರಾಟ ಮಾಡುತ್ತಿದ್ಧಾರೆ ಎಂದು ಎಡಪಂಥೀಯ ನಾಯಕ ಸೀತಾರಂ ಯೆಚೂರಿ ಟೀಕಿಸಿದ್ದಾರೆ. ಕಾಂಗ್ರೆಸ್​​ ಜತೆಗೆ ಬಿಎಸ್​​ಪಿ ಮತ್ತು ಎಸ್​​ಪಿ ಹಾಗೂ ಆರ್​​ಜೆಡಿ ಸೇರಿದಂತೆ ಟಿಎಂಸಿ ಪಕ್ಷಗಳು ಜೆಎನ್​ಯು ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದೆ. ಸಂಸತ್​​ ಒಳಗೂ ಮತ್ತು ಹೊರಗೂ ವಿಪಕ್ಷಗಳು ಜೆಎನ್​​ಯು ಪರ ದನಿ ಎತ್ತುತ್ತಿವೆ.

ಇದನ್ನು ಓದಿ: ತಾರಕಕ್ಕೇರಿದ ಜೆಎನ್​​ಯು ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ಪೊಲೀಸ್​ ಲಾಠಿ ಪ್ರಹಾರ: ಕೇಂದ್ರದ ವಿರುದ್ಧ ವಿಪಕ್ಷಗಳ ಕಿಡಿ

ಕಳೆದ ಮೂರು ವಾರಗಳಿಂದ ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದಿರುವ ಆಡಳಿತ ಮಂಡಳಿ ಶುಲ್ಕ ಹೆಚ್ಚಳದಲ್ಲಿ ಶೇ. 50ರಷ್ಟು ಕಡಿಮೆಗೊಳಿಸಿದೆ. ಜೊತೆಗೆ, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ ಹೆಚ್ಚುವರಿ ಸಹಾಯ ಮಾಡುವುದಾಗಿ ಭರವಸೆ ನೀಡಿದೆ. ಆದರೆ, ಜೆಎನ್​​ಯು ವಿದ್ಯಾರ್ಥಿಗಳು ಮಾತ್ರ ಶುಲ್ಕ ಹೆಚ್ಚಳದಲ್ಲಿ ಸಂಪೂರ್ಣ ಕಡಿಮೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಅದಕ್ಕಾಗಿಯೇ ವಿದ್ಯಾರ್ಥಿಗಳು ಸಂಸತ್​​​ ಚಳಿಗಾಲ ಅಧಿವೇಶನ ಆರಂಭವಾದ ಮೊದಲ ದಿನವೇ ಕೇಂದ್ರದ ವಿರುದ್ಧ ರಸ್ತೆಗಳಿದು ಪ್ರತಿಭಟಿಸುತ್ತಿದ್ಧಾರೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಆಡಳಿತ ಮಂಡಳಿ ಶುಲ್ಕ ವೆಚ್ಚಳ ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

First published: November 19, 2019, 5:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading