ಟ್ರಂಪ್​ ಸುದ್ದಿಗೋಷ್ಠಿ ಬೆನ್ನಲ್ಲೇ ಬಾಗ್ದಾದ್​ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಬಳಿ ಕ್ಷಿಪಣಿ ದಾಳಿ

ಇರಾಕ್​ ರಾಜಧಾನಿ ಬಾಗ್ದಾದ್​ ಸಮೀಪ ರಾಕೆಟ್​ ದಾಳಿ ನಡೆದಿದೆ. ಈ ವೇಳೆ ದೊಡ್ಡ ಪ್ರಮಾಣದಲ್ಲಿ ಶಬ್ದ ಕೇಳಿ ಬಂದಿದೆ. ಕೆಲ ದಿನಗಳ ಹಿಂದೆ ಇದೇ ಭಾಗದಲ್ಲಿ ಕ್ಷಿಪಣಿ ದಾಳಿ ನಡೆದಿತ್ತು.

Rajesh Duggumane | news18-kannada
Updated:January 9, 2020, 8:20 AM IST
ಟ್ರಂಪ್​ ಸುದ್ದಿಗೋಷ್ಠಿ ಬೆನ್ನಲ್ಲೇ ಬಾಗ್ದಾದ್​ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಬಳಿ ಕ್ಷಿಪಣಿ ದಾಳಿ
ಸಾಂದರ್ಭಿಕ ಚಿತ್ರ
  • Share this:
ಬಾಗ್ದಾದ್ (ಜ.9): ಇರಾನ್ ರಕ್ಷಣಾ ಮುಖ್ಯಸ್ಥ ಖಾಸಿಂ ಸೊಲೈಮನಿಯನ್ನು ಅಮೆರಿಕ ಹತ್ಯೆ ಮಾಡಿತ್ತು. ಇದಾದ ನಂತರ ಎರಡೂ ದೇಶಗಳ ನಡುವಣ ಸಂಬಂಧ ಮತ್ತಷ್ಟು ಹಳಸಿದೆ. ಬುಧವಾರ ಬೆಳಗ್ಗೆ 12 ಮಿಸೈಲ್​ಗಳನ್ನು ಹಾರಿಸುವ ಮೂಲಕ ಅಮೆರಿಕವನ್ನು ಇರಾನ್​ ಕೆಣಕಿತ್ತು. ಈಗ ಡೊನಾಲ್ಡ್​ ಟ್ರಂಪ್​ ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆ ಇರಾಕ್​ ರಾಜಧಾನಿಯಲ್ಲಿರುವ ಅಮೆರಿಕ ರಾಯಭಾರಿ ಸಮೀಪ ಕ್ಷಿಪಣಿ ದಾಳಿ ನಡೆದಿದೆ.

ಬುಧವಾರ ಬೆಳಗ್ಗೆ ಇರಾನ್ ಸೇನೆ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಕನಿಷ್ಠ 80 ಜನ ಅಮೆರಿಕದ ಸೈನಿಕರು ಮೃತಪಟ್ಟಿದ್ದಾರೆ ಎಂದು ಇರಾನ್​ ಹೇಳಿತ್ತು. ಸಂಜೆ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್​ ದಾಳಿಯಲ್ಲಿ ಅಮೆರಿಕ ಅಥವಾ ಇರಾಕ್​ ದೇಶದ ಯಾವೊಬ್ಬ ಯೋಧರೂ ಮೃತಪಟ್ಟಿಲ್ಲ. ನಾವು ಯುದ್ಧವನ್ನೂ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಇದಾದ ಬೆನ್ನಲ್ಲೇ ಇರಾಕ್​ ರಾಜಧಾನಿ ಬಾಗ್ದಾದ್​ ಸಮೀಪದ ಗ್ರೀನ್​ ಜೋನ್​ ಮೇಲೆ ರಾಕೆಟ್​ ದಾಳಿ ನಡೆದಿದೆ. ಈ ವೇಳೆ ದೊಡ್ಡ ಪ್ರಮಾಣದಲ್ಲಿ ಶಬ್ದ ಕೇಳಿ ಬಂದಿದೆ. ಈ ದಾಳಿಯ ಹಿಂದೆ ಸ್ಥಳೀಯ ಬಂಡುಕೋರರ ಕೈವಾಡವಿದೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಇದೇ ಭಾಗದಲ್ಲಿ ಕ್ಷಿಪಣಿ ದಾಳಿ ನಡೆದಿತ್ತು.

ಕಳೆದ ಶುಕ್ರವಾರ ಬಾಗ್ದಾದ್​​ ವಿಮಾನ ನಿಲ್ದಾಣದಲ್ಲಿ ಅಮೆರಿಕ ರಾಕೆಟ್​ ದಾಳಿ ನಡೆಸಿತ್ತು. ಈ ವೇಳೆ ಖಾಸಿಂ ಸೊಲೈಮನಿ ಮೃತಪಟ್ಟಿದ್ದ. ಈತನನ್ನು ಅಮೆರಿಕ ತನ್ನ ಬದ್ಧ ವೈರಿ ಎಂದೇ ಪರಿಗಣಿಸಿತ್ತು. ಈತ ಇರಾನ್​ ಸಶಸ್ತ್ರ ಹೋರಾಟ ನಿಯಂತ್ರಿಸುತ್ತಿದ್ದ. ಸೊಲೈಮನಿ ಇರಾನ್​ ಗುಪ್ತಚರ ಇಲಾಖೆಯ ಮುಖ್ಯಸ್ಥ ಕೂಡ ಹೌದು. ಹೀಗಾಗಿ ಈತನನ್ನು ಹತ್ಯೆ ಮಾಡಲಾಗಿತ್ತು.
First published:January 9, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ