Rahul Gandhi: ಹೋಗಿ BJP ಬ್ಯಾಡ್ಜ್ ಹಾಕ್ಕೋ! ಪತ್ರಕರ್ತನನ್ನು ಅವಮಾನಿಸಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿ

ರಾಹುಲ್ ಗಾಂಧಿ

2019ರ ಮಾನನಷ್ಟ ಕೇಸ್​ನಲ್ಲಿ ರಾಹುಲ್ ಗಾಂಧಿ ಅವರ ವಿಚಾರಣೆ ನಂತರ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಈಗ ರಾಹುಲ್ ಗಾಂಧಿ ಅವರು ತಮ್ಮ ಎಮ್​ಪಿ ಸ್ಥಾನವನ್ನು ಕಳೆದುಕೊಂಡಿದ್ದಾರೆ.

  • News18 Kannada
  • 4-MIN READ
  • Last Updated :
  • Delhi, India
  • Share this:

ದೆಹಲಿ(ಮಾ.26): ಸಂಸತ್ತಿನಿಂದ ಅನರ್ಹಗೊಂಡ (Disqualification) ಒಂದು ದಿನದ ನಂತರ ಕಾಂಗ್ರೆಸ್ ಮುಖಂಡ (Congress Leader) ರಾಹುಲ್ ಗಾಂಧಿ (Rahul Gandhi) ಅವರು ಸಾರ್ವಜನಿಕ ಪ್ರದೇಶದಲ್ಲಿ  (Public Place) ಪತ್ರಕರ್ತನ (Journalist) ಮೇಲೆ ಗರಂ ಆದ ಘಟನೆ ನಡೆಯಿತು. ಪ್ರಧಾನಿ ಮೋದಿ (PM Modi) ಅವರನ್ನು ಅವಮಾನಿಸಿದ ವಿಚಾರವಾಗಿ ರಾಹುಲ್ ಗಾಂಧಿ ವಿಚಾರಣೆ ನಡೆದು ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಬಗ್ಗೆ ಪತ್ರಕರ್ತ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ ಸಿಟ್ಟಾಗಿದ್ದಾರೆ. ಮೋದಿ ಸರ್​ನೇಮ್ ವಿಚಾರವಾಗಿ ಪ್ರಧಾನಿಯನ್ನು (Prime Minister) ಅವಮಾನಿಸಿದ ರಾಹುಲ್ ಗಾಂಧಿ ಅವರಲ್ಲಿ ಪತ್ರಕರ್ತ ಕೇಸ್​ ಬಗ್ಗೆ ಪ್ರಶ್ನಿಸಿದ್ದಾರೆ. ಪತ್ರಕರ್ತನಂತೆ ಪೋಸ್ ಕೊಡಬೇಡಿ, ನಿಮಗೆ ಈಗ ಯಾಕೆ ಮಾತು ಬರ್ತಿಲ್ಲ ಎಂದು ರಾಹುಲ್ ಗಾಂಧಿ ಸಿಟ್ಟಿನಲ್ಲಿಯೇ (Angry) ಪ್ರತಿಕ್ರಿಯಿಸಿದ್ದಾರೆ.


ರಾಹುಲ್ ಗಾಂಧಿ ಅವರನ್ನು ನಿಜಕ್ಕೂ ಕೆರಳಿಸಿದ್ದು ಏನು? ಈ ಹಿಂದೆ ನೀವು ಇಡೀ ಒಬಿಸಿ ಸಮುದಾಯವನ್ನು ಅವಮಾನಿಸಿದ್ದೀರಿ ಎಂದು ಪತ್ರಕರ್ತ ಕೇಳಿದ್ದಾರೆ. ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಶಿಕ್ಷೆ, ಸಂಸತ್ತಿನಿಂದ ಅನರ್ಹತೆಗೊಳಿಸಿದ್ದು ಈ ಎಲ್ಲ ಬೆಳವಣಿಗೆಯನ್ನು ಹೈಲೈಟ್ ಮಾಡಲು ಬಿಜೆಪಿ ದೇಶಾದ್ಯಂತ ಮಾಧ್ಯಮ ಸಂವಾದಗಳನ್ನು ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.


ರಾಹುಲ್ ಗಾಂಧಿ ಹೇಳಿದ್ದೇನು?


ನೋಡಿ, ನಿಮ್ಮ ಮೊದಲ ಪ್ರಯತ್ನ ಇಲ್ಲಿಂದ(ಪತ್ರಕರ್ತನ ಎಡ ಕಡೆ ತೋರಿಸಿದ್ದರು), ಎರಡನೇ ಪ್ರಯತ್ನ ಇಲ್ಲಿಂದ(ಪತ್ರಕರ್ತನ ಮಧ್ಯಕ್ಕೆ ತೋರಿಸಿ), ಮೂರನೇ ಪ್ರಯತ್ನ ಇಲ್ಲಿಂದ(ಪತ್ರಕರ್ತನ ಬಲಭಾಗ) ಪಾಯಿಂಟ್ ಮಾಡಿ ರಾಹುಲ್ ಗಾಂಧಿ ಹೇಳಿದ್ದಾರೆ. ನೀವು ಇಷ್ಟು ನೇರವಾಗಿ ಬಿಜೆಪಿಗಾಗಿ ಯಾಕೆ ಕೆಲಸ ಮಾಡುತ್ತಿದ್ದೀರಿ? ಕನಿಷ್ಠ ಅದುನ್ನು ಗೊತ್ತಾಗದಂತೆ ಮಾಡಿ.


ನಿಮ್ಮ ಎದೆಯಲ್ಲಿ ಬಿಜೆಪಿಯ ಒಂದು ಬ್ಯಾಡ್ಜ್ ಕೂಡಾ ಹಾಕಿಕೊಳ್ಳಿ. ಆಮೇಲೆ ನಾನು ಅವರಿಗೆ ಹೇಗೆ ಉತ್ತರಿಸುತ್ತೇನೋ, ಅದೇ ರೀತಿ ನಿಮಗೂ ಉತ್ತರಿಸುತ್ತೇನೆ, ಸುಮ್ಮನೆ ಪತ್ರಕರ್ತ ಎಂದು ಪೋಸ್ ಕೊಡಬೇಡಿ ಎಂದಿದ್ದಾರೆ ರಾಹುಲ್ ಗಾಂಧಿ.


ಮುಂದಿನ ಭಾಷಣದಲ್ಲಿ ರಾಹುಲ್ ಗಾಂಧಿ ಯಾವ ಸತ್ಯ ರಿವೀಲ್ ಮಾಡುತ್ತಾರೋ ಎಂದು ಹೆದರಿ ಅವರನ್ನು ಮೋದಿ ಅನರ್ಹಗೊಳಿಸಿದ್ದಾರೆ ಎಂದು ಹೇಳಿದ್ದಾರೆ. ಅವರು ಈ ಪ್ರಕರಣದಲ್ಲಿ ಯಾಕೆ ಕ್ಷಮೆ ಕೇಳಿಲ್ಲ ಎನ್ನುವುದನ್ನೂ ರಿವೀಲ್ ಮಾಡಿದ್ದಾರೆ.


ಇದನ್ನೂ ಓದಿ: Disqualification: ಅನರ್ಹಗೊಂಡವರು ರಾಹುಲ್ ಗಾಂಧಿ ಒಬ್ಬರೇ ಅಲ್ಲ, ಲಿಸ್ಟ್‌ನಲ್ಲಿದ್ದಾರೆ ಘಟಾನುಘಟಿಗಳು!


ಮುಂದಿನ ಭಾಷಣದಲ್ಲಿ ನಾನೇನು ಹೇಳುತ್ತೇನೆಂದು ಹೆದರಿ ಮೋದಿ ನನ್ನನ್ನು ಅನರ್ಹಗೊಳಿಸಿದ್ದಾರೆ. ನಾನು ಮೋದಿ ಕಣ್ಣಲ್ಲಿ ಭಯ ನೋಡಿದ್ದೇನೆ. ಹಾಗಾಗಿ ಅವರು ನನ್ನನ್ನು ಪಾರ್ಲಿಮೆಂಟ್​ನಲ್ಲಿ ಮಾತನಾಡಲು ಬಿಡುವುದಿಲ್ಲ ಎಂದಿದ್ದಾರೆ.


i am 52 but Still dont have a own house says rahul gandhi in raipur
ರಾಹುಲ್ ಗಾಂಧಿ


ಸಂಸದ ಸ್ಥಾನದಿಂದ ಅನರ್ಹಗೊಳಿಸುವುದರಿಂದ ಅಥವಾ ಜೈಲಿಗೆ ಕಳುಹಿಸುವುದರಿಂದ ನನ್ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಬಿಜೆಪಿ ವಿರುದ್ಧದ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.




ಆದರೆ ರಾಹುಲ್ ಗಾಂಧಿ ಅವರು ಎಲ್ಲಿಯೂ ಕಾಂಗ್ರೆಸ್​ನ ಮುಂದಿನ ನಡೆ ಏನು? ಕಾನೂನಾತ್ಮಕವಾಗಿ ಏನು ಮಾಡುತ್ತಾರೆ ಎನ್ನುವುದನ್ನು ತಿಳಿಸಿಲ್ಲ. ರಾಹುಲ್ ಗಾಂಧಿ ಅವರಿಗೆ 2019ರ ಮಾನನಷ್ಟ ಕೇಸ್​ನಲ್ಲಿ ಸೂರತ್ ನ್ಯಾಯಾಲಯ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ಕೊಟ್ಟಿದೆ.


ಎಲ್ಲಾ ಕಳ್ಳರಿಗೆ ಮೋದಿ ಸರ್​ ನೇಮ್​ ಹೇಗಿರಲು ಸಾಧ್ಯ?


ರಾಹುಲ್ ಗಾಂಧಿಯವರು 2019ರ ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಕರ್ನಾಟಕದ ಕೋಲಾರದಲ್ಲಿ ನಡೆದ ರ‍್ಯಾಲಿಯಲ್ಲಿ ಎಲ್ಲಾ ಕಳ್ಳರು ಮೋದಿ ಹೆಸರಿನ ಸಾಮಾನ್ಯ ಉಪನಾಮವನ್ನು ಹೇಗೆ ಹೊಂದಿರಲು ಸಾಧ್ಯ? ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಬಿಜೆಪಿ ಶಾಸಕ ಮತ್ತು ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು.


ಪೂರ್ಣೇಶ್ ಮೋದಿ ಭೂಪೇಂದ್ರ ಪಟೇಲ್ ಸರ್ಕಾರದ ಮೊದಲ ಅಧಿಕಾರಾವಧಿಯಲ್ಲಿ ಸಚಿವರಾಗಿದ್ದರು ಮತ್ತು ಸೂರತ್ ಪಶ್ಚಿಮ ವಿಧಾನಸಭೆಯ ಶಾಸಕರಾಗಿದ್ದರು.

First published: