ನಿಗೂಢವಾಗೇ ಉಳಿದ ಪಂಕಜಾ ಮುಂಡೆ ಭವಿಷ್ಯದ ಪ್ರಯಾಣ ಪೋಸ್ಟ್; ಟ್ವಿಟರ್ ಸ್ವವಿವರ ಸ್ಥಳದಲ್ಲಿ ಬಿಜೆಪಿ ಹೆಸರು ತೆಗೆದ ಮಾಜಿ ಶಾಸಕಿ

ಮುಂದೆ ಏನು? ಯಾವ ದಾರಿ ಆಯ್ಕೆ ಮಾಡಿಕೊಳ್ಳಲಾಗಿದೆ? ನಾವು ಜನರಿಗೆ ಏನನ್ನು ನೀಡುತ್ತೇವೆ? ನಮ್ಮ ಶಕ್ತಿ ಏನು? ಜನರ ನಿರೀಕ್ಷೆಗಳೇನು? ಈ ಎಲ್ಲ ಆಯಾಮಗಳಲ್ಲೂ ನಾನು ಯೋಚಿಸಿ ಡಿಸೆಂಬರ್ 12ರ ಒಳಗೆ ಜನರ ಮುಂದೆ ಬರುತ್ತೇನೆ ಎಂದು ಪಂಕಜಾ ಮುಂಡೆ ಹೇಳಿದ್ದಾರೆ.

HR Ramesh | news18-kannada
Updated:December 2, 2019, 4:14 PM IST
ನಿಗೂಢವಾಗೇ ಉಳಿದ ಪಂಕಜಾ ಮುಂಡೆ ಭವಿಷ್ಯದ ಪ್ರಯಾಣ ಪೋಸ್ಟ್; ಟ್ವಿಟರ್ ಸ್ವವಿವರ ಸ್ಥಳದಲ್ಲಿ ಬಿಜೆಪಿ ಹೆಸರು ತೆಗೆದ ಮಾಜಿ ಶಾಸಕಿ
ಪಂಕಜಾ ಮುಂಡೆ
  • Share this:
ಮುಂಬೈ: ಬಿಜೆಪಿ ನಾಯಕಿ ಹಾಗೂ ದಿವಂಗತ ಗೋಪಿನಾಥ್ ಮುಂಡೆ ಅವರ ಮಗಳು ಪಂಕಜಾ ಮುಂಡೆ ಅವರು ಮಹಾರಾಷ್ಟ್ರದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಮ್ಮ ಫೇಸ್​ಬುಕ್​ ಖಾತೆಯಲ್ಲಿ 'ಭವಿಷ್ಯದ ಪ್ರಯಾಣ' ಎಂಬ ಪೋಸ್ಟ್ ಮಾಡುವ ಜೊತೆಗೆ ಟ್ವಿಟರ್ ಸ್ವವಿವರ ಸ್ಥಳದಲ್ಲಿ ಬಿಜೆಪಿ ಹೆಸರನ್ನು ಅಳಿಸಿಹಾಕಿದ್ದಾರೆ. ಅಷ್ಟೇ ಅಲ್ಲದೇ, ವಾಟ್ಸಾಪ್​ ಡಿಪಿಯಲ್ಲಿದ್ದ ಪ್ರಧಾನಿ ಮೋದಿ ಅವರ ಜೊತೆಗೆ ಇದ್ದ ಫೋಟೋವನ್ನು ತೆಗೆದಿದ್ದಾರೆ. 

ಭಾನುವಾರ ಪಂಕಜಾ ಮುಂಡೆ ಅವರು ತಮ್ಮ ಫೇಸ್​ಬುಕ್​ನಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿದ್ದೇನೆ. ಇಲ್ಲಿ ಯೋಚಿಸಬೇಕಾದ ಅವಶ್ಯಕತೆ ಇದೆ. ಮತ್ತು ಆ ದಾರಿಯಲ್ಲಿ ಮುಂದುವರೆಯುವ ನಿರ್ಧಾರ ಮಾಡಿದ್ದೇನೆ. ನಾನು ಈ ಬಗ್ಗೆ ಮಾತನಾಡಲು ನನಗೆ ಎಂಟರಿಂದ ಹತ್ತು ದಿನ ಸಮಯ ಬೇಕು. ಬದಲಾದ ಪ್ರಸ್ತುತ ರಾಜಕೀಯದ ವಿರುದ್ಧ ನಾವು ನಮ್ಮ ಭವಿಷ್ಯದ ಪ್ರಯಾಣವನ್ನು ನಿರ್ಧಾರ ಮಾಡಿಕೊಳ್ಳಬೇಕಿದೆ ಎಂದು ಮರಾಠಿಯಲ್ಲಿ ಬರೆದುಕೊಂಡಿದ್ದರು.

ಮುಂದೆ ಏನು? ಯಾವ ದಾರಿ ಆಯ್ಕೆ ಮಾಡಿಕೊಳ್ಳಲಾಗಿದೆ? ನಾವು ಜನರಿಗೆ ಏನನ್ನು ನೀಡುತ್ತೇವೆ? ನಮ್ಮ ಶಕ್ತಿ ಏನು? ಜನರ ನಿರೀಕ್ಷೆಗಳೇನು? ಈ ಎಲ್ಲ ಆಯಾಮಗಳಲ್ಲೂ ನಾನು ಯೋಚಿಸಿ ಡಿಸೆಂಬರ್ 12ರ ಒಳಗೆ ಜನರ ಮುಂದೆ ಬರುತ್ತೇನೆ ಎಂದು ಪಂಕಜಾ ಮುಂಡೆ ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಗೆ ಅಕ್ಟೋಬರ್ 21ರಂದು ನಡೆದ ಚುನಾವಣೆಯಲ್ಲಿ ಪಂಕಜಾ ಮುಂಡೆ ಸ್ಪರ್ಧಿಸಿದ್ದ ಪಾರ್ಲಿ ಕ್ಷೇತ್ರದಲ್ಲಿ ಎನ್​ಸಿಪಿ ಎದುರಾಳಿ ಧನಂಜಯ್ ಮುಂಡೆ ಎದುರು ಪರಾಭವಗೊಂಡರು.

ಪಂಕಜಾ ಮುಂಡೆ ನಡೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಬಿಜೆಪಿ ವಕ್ತಾರ ಶಿರೀಶ್ ಬೋರ್ಲಾಕರ್, ಪಂಜಕಾ ಅವರು ತಮ್ಮ ಕೆಲಸವನ್ನು ಮುಂದುವರೆಸುವ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಸದೃಢ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಪಂಕಜಾ ಮುಂಡೆ ಅವರ ಫೇಸ್​ಬುಕ್ ಪೋಸ್ಟ್​ ಓದಿದ್ದೇನೆ. ಸದ್ಯದಲ್ಲಿ ಪಂಕಜಾ ಅವರು ಬಿಜೆಪಿ ಪಕ್ಷದೊಂದಿಗೆ ಖುಷಿಯಾಗಿ ಇಲ್ಲ ಎಂದು ಆ ಪೋಸ್ಟ್​ ಹೇಳುತ್ತಿದೆ. ಅವರು ಪಕ್ಷದ ಕೋರ್ ಕಮಿಟಿ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಪಂಕಜಾ ಅವರು ರಾಜ್ಯದಲ್ಲಿ ಬಿಜೆಪಿ ಎಂಬ ಕಟ್ಟಡಕ್ಕೆ ಅಡಿಪಾಯ ಹಾಕುವಲ್ಲಿ ಅವಿಸ್ಮರಣೀಯ ಕೊಡುಗೆ ನೀಡಿರುವ ಗೋಪಿನಾಥ್ ಮುಂಡೆ ಅವರ ಮಗಳು ಎಂದು ಬೋರ್ಲಾಕರ್ ಹೇಳಿದ್ದಾರೆ.

ಇದನ್ನು ಓದಿ: ಮಹಾರಾಷ್ಟ್ರ ಸ್ಪೀಕರ್ ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ; ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವಿರೋಧ ಆಯ್ಕೆಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಫಲಿತಾಂಶ ಅ.24ರಂದು ಪ್ರಕಟಗೊಂಡ ಬಳಿಕ ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಜೊತೆಗೆ ಸರ್ಕಾರ ರಚನೆಗೆ ಕಸರತ್ತು ನಡೆಸಿತ್ತು. ಈ ನಡುವೆ ಬಿಜೆಪಿ ರಾತ್ರೋರಾತ್ರಿ ಎನ್​ಸಿಪಿಯ ಅಜಿತ್ ಪವಾರ್ ಬೆಂಬಲ ಪಡೆದು, ಸರ್ಕಾರ ರಚನೆ ಮಾಡಿದರು. ಇದನ್ನು ಪ್ರಶ್ನೆ ಮಾಡಿ ಮೂರು ಪಕ್ಷಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಆ ಬಳಿಕ ಬಹುಮತ ಸಾಬೀತಿಗೆ ನ್ಯಾಯಾಲಯ ನಿರ್ದೇಶನವನ್ನೂ ನೀಡಿತ್ತು. ಆದರೆ, ಬಹುಮತಕ್ಕೆ ಬೇಕಾದ ಅಗತ್ಯ ಸಂಖ್ಯಾಬಲ ಇಲ್ಲದ ಕಾರಣ ಬಿಜೆಪಿಯ ದೇವೇಂದ್ರ ಫಡ್ನವೀಸ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಬಳಿಕ ಶಿವಸೇನೆ, ಎನ್​ಸಿಪಿ, ಸರ್ಕಾರ ಮೈತ್ರಿ ಸರ್ಕಾರ ರಚನೆಯಾಯಿತು.
First published: December 2, 2019, 3:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading