ಪಾಕ್ ಆಶ್ರಯದಲ್ಲೇ ಇದ್ದಾನೆ ದಾವೂದ್; ಪೊಲೀಸರಿಗೆ ಭೂಗತ ಪಾತಕಿಯ ವಿಳಾಸವನ್ನೂ ನೀಡಿದ ಸಹಚರ

ಛೋಟಾ ಶಕೀಲ್​, ಅನೀಸ್​ ಸೇರಿ ಅನೇಕರು ದಾವೂದ್​ನ ಸಹಚರರು. ಇವರಿಗೂ ಐಎಸ್​ಐ ಭದ್ರತೆ ಒದಗಿಸಿದೆಯಂತೆ. ಈ ಮೂಲಕ ಪಾಕಿಸ್ತಾನವೇ ದಾವೂದ್​ ಹಾಗೂ ಆತನ ಸಹಚಚರರ ರಕ್ಷಣೆಗೆ ನಿಂತಿದೆ ಎನ್ನುವ ವಿಚಾರವನ್ನು ಜಗದ್​ಜಾಹೀರಾಗಿದೆ.

news18-kannada
Updated:January 16, 2020, 8:59 AM IST
ಪಾಕ್ ಆಶ್ರಯದಲ್ಲೇ ಇದ್ದಾನೆ ದಾವೂದ್; ಪೊಲೀಸರಿಗೆ ಭೂಗತ ಪಾತಕಿಯ ವಿಳಾಸವನ್ನೂ ನೀಡಿದ ಸಹಚರ
ದಾವೂದ್
  • Share this:
ನವದೆಹಲಿ (ಜ.16): “ದಾವೂದ್​ ಇಬ್ರಾಹಿಂ ನಮ್ಮ ದೇಶದಲ್ಲಿ ಇಲ್ಲವೇ ಇಲ್ಲ. ಆತ ಎಲ್ಲಿದ್ದಾನೆ ಎನ್ನುವ ವಿಚಾರವೂ ನಮಗೆ ಗೊತ್ತೇ ಇಲ್ಲ”- ಇದು ದಾವೂದ್​ ಬಗ್ಗೆ ಪಾಕಿಸ್ತಾನದ ಬಳಿ ಪ್ರಶ್ನಿಸಿದಾಗ ಬರುವ ಕಂಠಪಾಠದ ಉತ್ತರ. ಆದರೆ, ಈ ಭೂಗತ ಪಾತಕಿ ಪಾಕ್​ನಲ್ಲೇ ಇದ್ದಾನೆ ಎನ್ನುವ ವಿಚಾರವನ್ನು ಆತನ ಸಹಚರನೇ ಒಪ್ಪಿಕೊಂಡಿದ್ದಾನೆ.

ಹೌದು, ಬಂಧಿತ ದಾವೂದ್ ಸಹಚರ ಇಜಾಜ್​ ಲಕಡಾವಾಲಾ ಪೊಲೀಸರಿಗೆ ಈ ಮಾಹಿತಿ ಕೊಟ್ಟಿದ್ದಾನೆ. “ದಾವೂದ್​ ಕರಾಚಿಯ ರಕ್ಷಣಾ ವಸತಿ ಪ್ರದೇಶದಲ್ಲಿದ್ದಾನೆ. 6ಎ, ಖಯಾಬನ್​ ತಾಂಜಿಮ್​ 5ನೇ ಘಟ್ಟ, ಢಿಪೆನ್ಸ್​ ಹೌಸಿಂಗ್​ ಏರಿಯಾ. ಇದು ದಾವೂದ್​ ವಿಳಾಸ. ಆದರೆ, ಇಲ್ಲಿಗೆ ತಲುಪುವುದು ತುಂಬಾನೇ ಕಷ್ಟ. ಆತನಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್​ಐ ಭದ್ರತೆ ಒದಗಿಸಿದೆ. ಪಾಕ್​ ಪ್ರಧಾನಿ ಹಾಗೂ ಸೇನಾ ಮುಖ್ಯಸ್ಥರಿಗೂ ಈ ವಿಚಾರದ ಬಗ್ಗೆ ಗೊತ್ತಿದೆ,” ಎಂದು ಆತ ಹೇಳಿಕೊಂಡಿದ್ದಾನೆ.

ಛೋಟಾ ಶಕೀಲ್​, ಅನೀಸ್​ ಸೇರಿ ಅನೇಕರು ದಾವೂದ್​ನ ಸಹಚರರು. ಇವರಿಗೂ ಐಎಸ್​ಐ ಭದ್ರತೆ ಒದಗಿಸಿದೆಯಂತೆ. ಈ ಮೂಲಕ ಪಾಕಿಸ್ತಾನವೇ ದಾವೂದ್​ ಹಾಗೂ ಆತನ ಸಹಚಚರರ ರಕ್ಷಣೆಗೆ ನಿಂತಿದೆ ಎನ್ನುವ ವಿಚಾರವನ್ನು ಜಗದ್​ಜಾಹೀರಾಗಿದೆ. ಲಕಡಾವಾಲಾ ಭಾರತಕ್ಕೆ ಆಗಮಿಸುವ ಬಗ್ಗೆ ಆತನ ಮಗಳು ಸೋನಿಯಾ ಮಾಹಿತಿ ನೀಡಿದ್ದಳು. ಇದನ್ನು ಆಧರಿಸಿ ಮುಂಬೈ ಪೊಲೀಸರು ಲಕಡಾವಾಲಾನನ್ನು ಪಟನಾದಲ್ಲಿ ಬಂಧಿಸಿದ್ದರು.
Published by: Rajesh Duggumane
First published: January 16, 2020, 8:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading