• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Dawood Ibrahim: ಪಾಕಿಸ್ತಾನದ ಕರಾಚಿಯಲ್ಲೇ ಇದ್ದಾನೆ ದಾವೂದ್ ಇಬ್ರಾಹಿಂ! ಸಹೋದರರಿಗೆ ತಿಂಗಳಿಗೆ 10 ಲಕ್ಷ ಕಳುಹಿಸುತ್ತಾನಂತೆ!

Dawood Ibrahim: ಪಾಕಿಸ್ತಾನದ ಕರಾಚಿಯಲ್ಲೇ ಇದ್ದಾನೆ ದಾವೂದ್ ಇಬ್ರಾಹಿಂ! ಸಹೋದರರಿಗೆ ತಿಂಗಳಿಗೆ 10 ಲಕ್ಷ ಕಳುಹಿಸುತ್ತಾನಂತೆ!

ದಾವೂದ್ ಇಬ್ರಾಹಿಂ

ದಾವೂದ್ ಇಬ್ರಾಹಿಂ

ಭಾರತದ ಮೋಸ್ಟ್ ವಾಟೆಂಡ್ ಉಗ್ರ ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ನೆಲೆಸಿದ್ದಾನೆ ಎಂದು ಸಾಕ್ಷ್ಯಗಳು ತಿಳಿಸಿವೆ. ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪರಾರಿಯಾಗಿರುವ ದರೋಡೆಕೋರ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿ ನಗರದಲ್ಲಿ ನೆಲೆಸಿದ್ದಾನೆ ಎಂದು ಇಡಿ ಎದುರು ಸಾಕ್ಷಿದಾರರು ಹೇಳಿಕೆ ನೀಡಿದ್ದಾರೆ.

ಮುಂದೆ ಓದಿ ...
  • Share this:

ಭಾರತದ ಮೋಸ್ಟ್ ವಾಟೆಂಡ್ ಉಗ್ರ ದಾವೂದ್ ಇಬ್ರಾಹಿಂ (Dawood Ibrahim) ಕರಾಚಿಯಲ್ಲಿ ನೆಲೆಸಿದ್ದಾರೆ ಎಂದು ಸಾಕ್ಷ್ಯಗಳು ತಿಳಿಸಿವೆ. ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ (Nawab Malik) ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪರಾರಿಯಾಗಿರುವ ಉಗ್ರಗಾಮಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿ (Karachi, Pakistan) ನಗರದಲ್ಲಿ ನೆಲೆಸಿದ್ದಾನೆ ಎಂದು ಇಡಿ ಎದುರು ಸಾಕ್ಷಿದಾರರು ಹೇಳಿಕೆ ನೀಡಿದ್ದಾರೆ. ಜೊತೆಗೆ ದಾವೂದ್ ತನ್ನ ಸಹೋದರರಿಗೆ (Sisters) ಪ್ರತಿ ತಿಂಗಳು 10 ಲಕ್ಷ ರೂ ಕಳುಹಿಸುತ್ತಾನೆ ಎಂದು ಸಹ ಹೇಳಿದ್ದಾರೆ. ಇಬ್ಬರು ಸಾಕ್ಷಿಗಳ ಹೇಳಿಕೆಗಳು ದಾವೂದ್ ಇಬ್ರಾಹಿಂ ಆಸ್ತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಲಿಕ್ ವಿರುದ್ಧ ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ ಚಾರ್ಜ್ ಶೀಟ್​ನ ಭಾಗವಾಗಿದೆ.


ಈ ಬಗ್ಗೆ ಇಬ್ರಾಹಿಂ ಸಹೋದರ ಕಸ್ಕರ್ ಹೇಳಿದ್ದು ಹೀಗೆ
“ಕಸ್ಕರ್, ದಾವೂದ್ ಅವನ ಕಡೆಯ ಜನರಿಂದ ನಮಗೆ ಹಣ ಕಳುಹಿಸುತ್ತಿದ್ದ ಎಂದು ಹೇಳಿದ್ದ. ದಾವೂದ್ ಕಸ್ಕರ್ ಗೆ ತಾನು ಕಳುಹಿಸುತ್ತಿದ್ದ ನಗದು ಹಣವನ್ನು ತೋರಿಸಿ ದಾವೂದ್‌ ಭಾಯ್‌ನಿಂದ ಹಣವನ್ನು ಪಡೆದಿರುವ ಬಗ್ಗೆ ಹೇಳಿದ್ದ ” ಎಂದು ಖಾಲೀದ್ ಉಸ್ಮಾನ್ ಶೇಖ್ ಇಡಿಗೆ ತಿಳಿಸಿದ್ದಾರೆ. ಕಸ್ಕರ್‌ನ ಬಾಲ್ಯದ ಗೆಳೆಯನಾಗಿದ್ದ ಖಾಲಿದ್‌ನ ಸಹೋದರ ಸಲೀಮ್ ಪಟೇಲ್ ಯಾವುದೋ ಗಲಾಟೆಯಲ್ಲಿ ಸಾವನ್ನಪ್ಪಿದ್ದ.ಆತ ದಾವೂದ್‌ನ ಸಹೋದರಿ ಹಸೀನಾ ಪರ್ಕರ್ ಗೂ ಪರಿಚಿತನಾಗಿದ್ದಲ್ಲದೇ ಆಕೆಯ ಚಾಲಕ ಮತ್ತು ಅಂಗರಕ್ಷಕನಾಗಿದ್ದ.


ಖಾಲಿದ್ ಇಡಿಗೆ ಹೇಳಿದ್ದೇನು?
ಖಾಲಿದ್ ಇಡಿಗೆ ಹೇಳಿರುವ ಪ್ರಕಾರ ಹಸೀನಾ ದಾವೂದ್ ಹೆಸರು ಬಳಸಿ ಹಣ ವಸೂಲಿ ಮಾಡುತ್ತಿದ್ದಳು, ಆಸ್ತಿಗಳ ಮೇಲೂ ಅತಿಕ್ರಮಣ ಮಾಡುತ್ತಿದ್ದಳು ಎಂದಿದ್ದಾನೆ. ಸಲೀಮ್ ಪಟೇಲ್ ಜೊತೆಗೆ ಹಸೀನಾ ಅಕ್ರಮವಾಗಿ ಮುಂಬೈನ ಕುರ್ಲಾ ಪ್ರದೇಶದಲ್ಲಿರುವ ಗೋವಾಲ ಕಾಂಪೌಂಡ್ ಆಕ್ರಮಿಸಿಕೊಂಡ ನಂತರ ಮಲ್ಲಿಕ್ ಕುಟುಂಬಕ್ಕೆ ಮಾರಾಟ ಮಾಡಿದ್ದಾರೆ ಎಂದು ಇಡಿ ಆರೋಪಿಸಿದೆ.


ಹಲವಾರು ಸಾಕ್ಷಿಗಳು ದಾವೂದ್ ಕರಾಚಿಯಲ್ಲಿ ನೆಲೆಸಿರುವ ಬಗ್ಗೆ ಹೇಳಿವೆ
ಕಸ್ಕರ್ ಮತ್ತು ಹಸೀನಾ ಅವರ ಮಗ ಅಲಿಶಾ (29) ಸೇರಿದಂತೆ ಹಲವಾರು ಸಾಕ್ಷಿಗಳು ದಾವೂದ್ ಕರಾಚಿಯಲ್ಲಿ ನೆಲೆಸಿರುವ ಬಗ್ಗೆ ಹೇಳಿವೆ. “ಅವರ ಹೆಂಡತಿಯ ಹೆಸರು ಮೆಹಜಬೀನ್. ಅವರಿಗೆ ಐವರು ಮಕ್ಕಳಿದ್ದಾರೆ. ಒಬ್ಬ ಮಗನ ಹೆಸರು ಮೊಯಿನ್. ಅವರ ಎಲ್ಲಾ ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. ಅವನ ಮಗನಿಗೂ ಮದುವೆಯಾಗಿದೆ” ಎಂದು ಪ್ರಕರಣದಲ್ಲಿ ಬಂಧಿಸಲ್ಪಟ್ಟ ಕಸ್ಕರ್ ಹೇಳಿದ್ದಾರೆ. ಮತ್ತೊಬ್ಬ ಸಹೋದರ ಮತ್ತು 1993ರ ಮುಂಬೈ ಸರಣಿ ಸ್ಫೋಟದ ಆರೋಪಿ ಅನೀಸ್ ಕೂಡ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎಂದು ಕಸ್ಕರ್ ಮತ್ತಷ್ಟು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ:  Captain Abhilasha Barak: ಸೇನಾ ವಾಯುಪಡೆಯಲ್ಲಿ ಮೊದಲ ಮಹಿಳಾ ಫೈಟರ್ ಪೈಲಟ್! ಇವರೇ ನೋಡಿ ಅಭಿಲಾಷ


ದರೋಡೆಕೋರನ ಸಹೋದರಿ ಹಸೀನಾ ಪರ್ಕರ್ ಅವರ ಮಗ ಅಲಿಶಾ ಪಾರ್ಕರ್, ದಾವೂದ್ ಇಬ್ರಾಹಿಂ ತನ್ನ “ಮಾಮು” (ತಾಯಿಯ ಚಿಕ್ಕಪ್ಪ) ಮತ್ತು 1986 ರ ಸುಮಾರಿಗೆ ದಂಬರ್ವಾಲಾ ಕಟ್ಟಡದ (ಮುಂಬೈ) 4ನೇ ಮಹಡಿಯಲ್ಲಿ ವಾಸಿಸುತ್ತಿದ್ದರು ಎಂದು ಹೇಳಿದರು.


ಹಬ್ಬದ ದಿನದಂದು ಕುಟುಂಬದವರೊಂದಿಗೆ ಸಂಪರ್ಕ!
“ಈದ್, ದೀಪಾವಳಿ ಮತ್ತು ಇತರ ಹಬ್ಬದ ದಿನಗಳಲ್ಲಿ, ಶ್ರೀಮತಿ ಮೆಹಜಬೀನ್ ದಾವೂದ್ ಇಬ್ರಾಹಿಂ ಅವರು ನನ್ನ ಚಿಕ್ಕಮ್ಮ ಮತ್ತು ನನ್ನ ತಾಯಿಯ ಚಿಕ್ಕಪ್ಪ, ನನ್ನ ಹೆಂಡತಿ ಆಯೇಷಾ ಮತ್ತು ನನ್ನ ಸಹೋದರಿಯರೊಂದಿಗೆ ಸಂಪರ್ಕದಲ್ಲಿರುತ್ತಾರೆ” ಎಂದು ಅಲಿಶಾ ಪರ್ಕರ್ ಇಡಿಗೆ ಹೇಳಿದ್ದಾರೆ.


ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಮತ್ತು ಜಾಗತಿಕ ಭಯೋತ್ಪಾದಕ
1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ. 1993ರಲ್ಲಿ ಮುಂಬೈನ 12ಕ್ಕೂ ಅಧಿಕ ಕಡೆಗಳಲ್ಲಿ ಸಂಭವಿಸಿದ ಸ್ಫೋಟದಲ್ಲಿ 257ಕ್ಕೂ ಅಧಿಕ ಮಂದಿ ಮೃತಪಟ್ಟು 1400 ಮಂದಿ ಗಾಯಗೊಂಡಿದ್ದರು. ಈ ಪ್ರಕರಣದ ಎಫ್ಐಆರ್ನಲ್ಲಿ ದಾವೂದ್ ಇಬ್ರಾಹಿಂ, ಹಾಜಿ ಅನೀಸ್ ಅಲಿಯಾಸ್ ಅನೀಸ್ ಇಬ್ರಾಹಿಂ ಶೇಖ್, ಶಕೀಲ್ ಶೇಖ್ ಅಲಿಯಾಸ್ ಛೋಟಾ ಶಕೀಲ್, ಜಾವೇದ್ ಪಟೇಲ್ ಅಲಿಯಾಸ್ ಜಾವೇದ್ ಚಿಕ್ನಾ, ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಜಾಕ್ ಮೆಮನ್ ಅಲಿಯಾಸ್ ಟೈಗರ್ ಮೆಮನ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.


ಇದನ್ನೂ ಓದಿ: Texas School Firing: ಎಲಿಮೆಂಟರಿ ಸ್ಕೂಲ್​ನ 19 ಮಕ್ಕಳ ಶೂಟ್ ಮಾಡಿ ಕೊಂದ 18 ವರ್ಷದ ಯುವಕ!


ಎನ್‌ಸಿಪಿಯ ಹಿರಿಯ ನಾಯಕ ಮಲಿಕ್ (62) ಅವರನ್ನು ಈ ವರ್ಷ ಫೆಬ್ರವರಿ 23ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಬಂಧಿಸಿದ್ದು, ಪ್ರಸ್ತುತ ಜೈಲಿನಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಮತ್ತು ಜಾಗತಿಕ ಭಯೋತ್ಪಾದಕ ಇಬ್ರಾಹಿಂ ಮತ್ತು ಅವರ ಸಹಾಯಕರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇತ್ತೀಚೆಗೆ ದಾಖಲಿಸಿದ ಎಫ್‌ಐಆರ್ ಅನ್ನು ಆಧರಿಸಿ ಇಡಿ ಪ್ರಕರಣವನ್ನು ಆಧರಿಸಿದೆ.

top videos
    First published: