ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಎರಡನೇಯ ಮದುವೆಯಾಗಿದ್ದಾನೆ. ಪಾಕಿಸ್ತಾನದ (Pakistan) ಕರಾಚಿ (Karachi) ಮೂಲದ ಮಹಿಳೆಯೊಂದಿಗೆ (Women) ಇಬ್ರಾಹಿಂ ವಿವಾಹವಾಗಿದ್ದಾನೆ (Marrigae) ಎಂದು ಸೋದರಳಿಯ ಅಲಿಶಾ ಪಾರ್ಕರ್ (Alishah Parkar) ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾನೆ. ದಾವೂದ್ ಇಬ್ರಾಹಿಂಗೆ ಒಟ್ಟು ನಾಲ್ಕು ಮಂದಿ ಸಹೋದರರು ಮತ್ತು ನಾಲ್ಕು ಮಂದಿ ಸಹೋದರಿಯರಿದ್ದಾರೆ. ಇದೀಗ ದಾವೂದ್ ಮರು ಮದುವೆಯಾಗಿದ್ದಾನೆ. ಎನ್ಐಎ ಅಧಿಕಾರಿಗಳು ಇತ್ತೀಚೆಗಷ್ಟೇ ಮುಂಬೈ ಸೇರಿದಂತೆ ಹಲವೆಡೆ ದಾಳಿ ನಡೆಸಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಭಯೋತ್ಪಾದಕ ಜಾಲವನ್ನು ಬಹಿರಂಗಪಡಿಸುವ ಮೂಲಕ ಹಲವರನ್ನು ಬಂಧಿಸಿತ್ತು. ಎನ್ಐಎ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದೆ.
ಮಾವ 2ನೇ ಮದುವೆ ಗುಟ್ಟು ರಟ್ಟು ಮಾಡಿದ ಸೋದರಳಿಯ
ಈ ನಡುವೆ ದಾವೂದ್ ಇಬ್ರಾಹಿಂ ಸೋದರಿ ಹಸೀನಾ ಪಾರ್ಕರ್ ಪುತ್ರ ಹಾಗೂ ದಾವೂದ್ ಸೋದರಳಿಯ ಅಲಿಶಾ ಪಾರ್ಕರ್, ದಾವೊದ್ ವಿಚ್ಛೇದನದ ಬಗ್ಗೆ ಸುಳ್ಳು ಹೇಳಿದ್ದಾರೆ ಮತ್ತು ಎರಡನೇ ಮದುವೆಯಾಗಿದ್ದಾರೆ ಎಂದು ತಿಳಿಸಿದ್ದಾನೆ. ಇಷ್ಟೇ ಅಲ್ಲದೇ ದಾವೊದ್ ಕರಾಚಿಯಲ್ಲಿ ವಾಸವಾಗಿದ್ದಾರೆ ಎಂಬ ಸತ್ಯವನ್ನು ಕೂಡ ಬಾಯ್ಬಿಟ್ಟಿದ್ದಾನೆ. ಆದರೆ ದಾವೊದ್ ಎರಡನೇ ಪತ್ನಿ ಎಲ್ಲಿ ವಾಸಿಸುತ್ತಿದ್ದಾರೆ, ಯಾವಾಗ ಮದುವೆಯಾಯಿತು ಎಂಬುವುದನ್ನು ಮಾತ್ರ ಬಹಿರಂಗ ಪಡಿಸಿಲ್ಲ.
ಮೊದಲ ಪತ್ನಿಗೆ ವಿಚ್ಛೇದನ ನೀಡದೇ ದಾವೂದ್ 2ನೇ ಮದುವೆ
ಮೊದಲ ಪತ್ನಿಗೆ ವಿಚ್ಛೇದನ ನೀಡಿರುವುದಾಗಿ ದಾವೂದ್ ಎಲ್ಲರ ಬಳಿ ಹೇಳಿಕೊಂಡಿದ್ದಾನೆ. ಆದರೆ ಅದು ಸತ್ಯವಲ್ಲ. ಮೊದಲ ಪತ್ನಿಗೆ ಆತ ವಿಚ್ಛೇದನ ನೀಡದೆಯೇ ಎರಡನೇ ಮದುವೆಯಾಗಿದ್ದಾನೆ. ಜೊತೆಗೆ ದಾವೊದ್ ವಿಳಾಸ ಕೂಡ ಬದಲಾಗಿದೆ.
ಕೆಲವು ತಿಂಗಳ ಹಿಂದಷ್ಟೇ, 2022ರ ಜುಲೈನಲ್ಲಿ ದುಬೈನಲ್ಲಿ ದಾವೂದ್ನ ಮೊದಲ ಪತ್ನಿ ಮೈಜಾಬಿನ್ಳನ್ನು ತಾನು ಭೇಟಿ ಮಾಡಿದ್ದೆ. ದಾವೂದ್ನ ಪತ್ನಿ ಹಬ್ಬದ ದಿನಗಳಲ್ಲಿ ನನ್ನ ಹೆಂಡತಿಗೆ ಕರೆ ಮಾಡುತ್ತಾಳೆ. ವಾಟ್ಸಾಪ್ ಕರೆಗಳ ಮೂಲಕ ಅವಳೊಂದಿಗೆ ಮಾತನಾಡುತ್ತಾಳೆ ಎಂದು ತಿಳಿಸಿದ್ದಾನೆ.
ದಾವೂದ್ ಸಹೋದರಿ ಹಸೀನಾ ಪಾರ್ಕರ್ಳ ಮಗ ಹೇಳಿಕೆ
ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ ಆರೋಪದಲ್ಲಿ ದಾವೂದ್ ಇಬ್ರಾಹಿಂ ಮತ್ತು ಆತನ ಆಪ್ತ ಸಹಚರರ ವಿರುದ್ಧ ಎನ್ಐಎ ಪ್ರಕರಣ ದಾಖಲಿಸಿಕೊಂಡಿತ್ತು. ದೇಶದಲ್ಲಿನ ಖ್ಯಾತ ಉದ್ಯಮಿಗಳ ಮೇಲೆ ದಾಳಿ ನಡೆಸುವ ಸಲುವಾಗಿ ದಾವೂದ್ ಇಬ್ರಾಹಿಂ ತಂಡವೊಂದನ್ನು ಕಟ್ಟುತ್ತಿದ್ದಾನೆ ಎಂಬ ಮಾಹಿತಿ ಎನ್ಐಎಗೆ ಬಂದಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಅವರು ಹಿಂಸಾಚಾರ ನಡೆಸುವ ಸಾಧ್ಯತೆ ಇದೆ. ಈ ಪ್ರಕರಣದ ತನಿಖೆ ವೇಳೆ, ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕರ್ಳ ಮಗ ಅಲಿಶಾಹ್ ಪಾರ್ಕರ್ ನೀಡಿದ ಹೇಳಿಕೆಗಳನ್ನು ಎನ್ಐಎ ದಾಖಲಿಸಿದೆ.
ಇದನ್ನೂ ಓದಿ: Pakistan: ಮತ್ತೆ ಕಳಚಿತು ಪಾಕ್ ಮುಖವಾಡ: ಕರಾಚಿಯಲ್ಲೇ ನೆಲೆಸಿದ್ದಾನೆ ದಾವೂದ್ ಇಬ್ರಾಹಿಂ
1993 ರಲ್ಲಿ ಮುಂಬೈ ಬಾಂಬ್ ಸ್ಫೋಟ ನಂತ್ರ ಪಾಕ್ನಲ್ಲಿರೋ ದಾವೂದ್
ದಾವೂದ್ ಇಬ್ರಾಹಿಂ ಭಾರತದಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದು, 1993 ರಲ್ಲಿ ಮುಂಬೈನಲ್ಲಿ ನಡೆದ ಬಾಂಬ್ ಸ್ಫೋಟದ ನಂತರ ಅವನು ಪಾಕಿಸ್ತಾನದ ಕರಾಚಿಯ ಅಬ್ದುಲ್ಲಾ ಘಾಜಿ ಬಾಬಾ ದರ್ಗಾದ ಹಿಂಬದಿಯಲ್ಲಿರುವ ರಹೀಮ್ ಫಾಕಿ ಸಮೀಪದ ರಕ್ಷಣಾ ಪಡೆಯ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ ಎಂಬ ಮಾಹಿತಿ ಇದೆ. ಆದರೆ, ದಾವೂದ್ ಇಲ್ಲಿದ್ದಾನೆ ಎಂಬುದನ್ನು ಪಾಕಿಸ್ತಾನ ಸದಾ ನಿರಾಕರಿಸುತ್ತಲೇ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ