Big Breaking: ಭಾರತದಲ್ಲಿ ರಕ್ತದೋಕುಳಿ ಹರಿಸಲು ಭೂಗತ ಪಾತಕಿ ಸಂಚು, ದಾವೂದ್‌ಗೆ 'ಇವರೇ' ಟಾರ್ಗೆಟ್!

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತವನ್ನು ಟಾರ್ಗೆಟ್ ಮಾಡಿದ್ದಾನಂತೆ. ಅದರಲ್ಲೂ ಭಾರತದ ಪ್ರಮುಖ ರಾಜಕಾರಣಿಗಳು, ಖ್ಯಾತ ಉದ್ಯಮಿಗಳು, ಗಣ್ಯ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿದ್ದಾನಂತೆ. ಹಾಗಾದ್ರೆ ಅವನ ಹಿಟ್‌ ಲಿಸ್ಟ್‌ನಲ್ಲಿ ಯಾರಿದ್ದಾರೆ?

ದಾವೂದ್ ಇಬ್ರಾಹಿಂ ಸಂಗ್ರಹ ಚಿತ್ರ

ದಾವೂದ್ ಇಬ್ರಾಹಿಂ ಸಂಗ್ರಹ ಚಿತ್ರ

  • Share this:
ನವದೆಹಲಿ: ಇದು ನಿಜಕ್ಕೂ ಬ್ರೇಕಿಂಗ್ ನ್ಯೂಸ್ (Breaking News). ಪಾಕಿಸ್ತಾನದಲ್ಲಿ (Pakistan) ಅಡಗಿ ಕುಳಿತು ಭಾರತದ (India) ವಿರುದ್ಧ ಕತ್ತಿ ಮಸೆಯುತ್ತಿರುವ ಮೋಸ್ಟ್ ವಾಟೆಂಡ್ (Most Wanted) ಕ್ರಿಮಿನಲ್ (Criminal) , ಭೂಗತ ಪಾತಕಿಯೊಬ್ಬ ಭಾರತವನ್ನು ಟಾರ್ಗೆಟ್ (Target) ಮಾಡಿದ್ದಾನಂತೆ. ಅದರಲ್ಲೂ ಭಾರತದ ಪ್ರಮುಖ ರಾಜಕಾರಣಿಗಳು (Politicians), ಖ್ಯಾತ ಉದ್ಯಮಿಗಳು (Industrialist), ಗಣ್ಯ ವ್ಯಕ್ತಿಗಳನ್ನು (VIP) ಟಾರ್ಗೆಟ್ ಮಾಡಿದ್ದಾನಂತೆ. ಭಾರತದಲ್ಲಿ ಹಲವು ಕಡೆ ವಿಧ್ವಂಸಕ ಕೃತ್ಯ ನಡೆಸಲು ಸಂಚು (Plan) ರೂಪಾಸಿದ್ದಾನಂತೆ. ಆತ ಬೇರೆ ಯಾರೂ ಅಲ್ಲ, ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim). ಪರಾರಿಯಾಗಿರುವ ಪಾತಕಿ ದಾವೂದ್ ಇಬ್ರಾಹಿಂ ಭಾರತವನ್ನು ಗುರಿಯಾಗಿಸಲು ವಿಶೇಷ ಘಟಕವನ್ನು (Special Cells) ರಚಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸ್ಫೋಟಕ ಮಾಹಿತಿ ನೀಡಿದೆ. ರಾಜಕೀಯ ನಾಯಕರು ಮತ್ತು ಪ್ರಸಿದ್ಧ ಉದ್ಯಮಿಗಳ ಹೆಸರುಗಳು ಹಿಟ್ ಲಿಸ್ಟ್‌ನಲ್ಲಿ (Hit List) ಇವೆ ಅನ್ನೋ ಮಾಹಿತಿ ಲಭ್ಯವಾಗಿವೆ.

ಭಾರತದ ಮೇಲೆ ದಾಳಿಗೆ ದಾವೂದ್ ಸಂಚು

ದಾವೂದ್ ಇಬ್ರಾಹಿಂ ತನ್ನ ವಿಶೇಷ ಘಟಕದೊಂದಿಗೆ ಭಾರತದ ವಿವಿಧ ಭಾಗಗಳಲ್ಲಿ ಹಿಂಸಾಚಾರವನ್ನು ಹೆಚ್ಚಿಸಿ, ವಿಧ್ವಂಸಕ ಕೃತ್ಯ ನಡೆಸುವ ಪ್ಲಾನ್ ಮಾಡಿದ್ದಾನೆ. ಸ್ಫೋಟಕಗಳು ಮತ್ತು ಮಾರಕಾಸ್ತ್ರಗಳನ್ನು ಬಳಸಿ ದೇಶದ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದ ಎಂದು ಎಫ್‌ಐಆರ್ ಬಹಿರಂಗಪಡಿಸಿದೆ. ಇದಲ್ಲದೆ, ದಾವೂದ್ ಇಬ್ರಾಹಿಂ ದೆಹಲಿ ಮತ್ತು ಮುಂಬೈ ಮೇಲೆ ದಾಳಿ ನಡೆಸುವ ಬಗ್ಗೆ ಯೋಜನೆ ರೂಪಿಸಿದ್ದಾನೆ ಎನ್ನಲಾಗಿದೆ.

ಭಾರತದಲ್ಲಿ ಅರಾಜಕತೆ ಸೃಷ್ಟಿಯಲು ಪ್ಲಾನ್

ಎನ್ಐಎ ಪ್ರಕಾರ, ದಾವೂದ್ ಇಬ್ರಾಹಿಂ ಭಾರತದಲ್ಲಿ ಅರಾಜಕತೆ  ಸೃಷ್ಟಿಸಿ, ಭಾರತದ ಆಢಳಿತ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಲು ಪ್ಲಾನ್ ಮಾಡಿದ್ದಾನೆ. ಈಗಾಗಲೇ ಈ ಸಂಬಂಧ ಈ ಪಾತಕಿ ವ್ಯಾಪಕವಾದ ಜಾಲವನ್ನು ಹೊಂದಿದ್ದಾನೆ.

ಯೋಜಿತ ದಾಳಿಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ಹಣಕಾಸಿನ ನೆರವು ನೀಡಲು ಈ ಜಾಲವು ಹವಾಲಾ ಚಾನೆಲ್‌ಗಳ ಮೂಲಕ ಹಣ ವರ್ಗಾವಣೆಯಲ್ಲಿ ತೊಡಗಿದೆ ಎಂದು ಎನ್‌ಐಎ ಹೇಳಿದೆ.

ಆತ ದೇಶ ವಿರೋಧಿ ಚಟುವಟಿಕೆಗಳನ್ನು ಉತ್ತೇಜಿಸುವಲ್ಲಿ ತೊಡಗಿಸಿಕೊಂಡಿದ್ದಾನೆ. ಜೊತೆಗೆ ವಿವಿಧ ಧಾರ್ಮಿಕ ಗುಂಪುಗಳ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: NIA: ರಹಸ್ಯ ಮಾಹಿತಿ ಕೊಡುತ್ತಿದ್ದ ಮಾಜಿ ಅಧಿಕಾರಿ ಅರೆಸ್ಟ್, ಆತ ಮಾಡಿದ ದ್ರೋಹ ಏನ್ ಗೊತ್ತಾ?

ಸಾಮಾಜಿಕ ಜಾಲತಾಣಗಳಿಂದಲೇ ಸಂಪರ್ಕ

ದಾವೂದ್ ತನ್ನ ನೆಟ್‌ವರ್ಕ್‌ನೊಂದಿಗೆ ಸಂವಹನ ನಡೆಸಲು ವಿವಿಧ ಸಾಮಾಜಿಕ ಮಾಧ್ಯಮಗಳ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಿದ್ದಾನೆ. ಇದರ ಮೂಲಕವೇ ತನ್ನ ಅನುಯಾಯಿಗಳನ್ನು ಸಂಪರ್ಕಿಸುವ ದಾವೂದ್ ಇಬ್ರಾಹಿಂ,  ಭಾರತದ ವಿವಿಧ ಭಾಗಗಳಲ್ಲಿ ಉದ್ದೇಶಪೂರ್ವಕವಾಗಿ ಗಲಭೆಯಂತಹ ಪರಿಸ್ಥಿತಿಯನ್ನು ಸೃಷ್ಟಿಸಲು ಅವರಿಗೆ ಆರ್ಥಿಕವಾಗಿ ಮತ್ತು ವ್ಯವಸ್ಥಾಪನಾತ್ಮಕವಾಗಿ ಸಹಾಯ ಮಾಡುತ್ತಿದ್ದಾನಂತೆ.

ದಾವೂದ್ ವಿರುದ್ಧ ಈಗಾಗಲೇ ಪ್ರಕರಣ ದಾಖಲು

ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪಾಕಿಸ್ತಾನದಲ್ಲಿ ದಾವೂದ್ ತಲೆಮರೆಸಿಕೊಂಡಿದ್ದಾನೆ. ಆತನಿಗೆ ಪಾಕಿಸ್ತಾನ ಸರ್ಕಾರವೇ ಆಶ್ರಯ ನೀಡಿದೆ ಎನ್ನುವ ಮಾಹಿತಿಯೂ ಇದೆ.

ಇದನ್ನೂ ಓದಿ: Drink & Drive: ಎಣ್ಣೆ ಏಟಲ್ಲಿ ಗಾಡಿ ಓಡಿಸಿ, ಪೊಲೀಸರ ಕೆನ್ನೆಗೇ ಏಟು ಕೊಡೋದಾ? ಈ ನಟಿ ಕೈಗೆ ಬಿತ್ತು ಕೋಳ!

ದಾವೂದ್ ಆಪ್ತರ ವಿರುದ್ಧವೂ ಪ್ರಕರಣ ದಾಖಲು

ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಹಣಕಾಸು ನೆರವು ನೀಡುತ್ತಿರುವ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ವಿರುದ್ಧ ಇಡಿ ಇತ್ತೀಚೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್, ಆತನ ಸಹಾಯಕರು ಮತ್ತು ಗ್ಯಾಂಗ್ ಸದಸ್ಯರನ್ನು ಇಡಿ ವಿಚಾರಣೆ ನಡೆಸಲಿದೆ. ಕಳೆದ ಶುಕ್ರವಾರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಕ್ಬಾಲ್ ಕಸ್ಕರ್‌ನನ್ನು ಬಂಧಿಸಿದ್ದು, ಫೆಬ್ರವರಿ 24 ರವರೆಗೆ ಇಡಿ ಕಸ್ಟಡಿಗೆ  ನೀಡಲಾಗಿದೆ.
Published by:Annappa Achari
First published: