Dawood Ibrahim: ಭಾರತದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ದಾವುದ್​ ಮೇಲೆ ಒತ್ತಡ ಹಾಕುತ್ತಿರುವ ಪಾಕ್​

ದೆಹಲಿ ಮತ್ತು ಯುಪಿ ಪೊಲೀಸ್ (Delhi and UP Police forces) ಪಡೆಗಳು ಜಂಟಿಯಾಗಿ ಮಾಡಿದ ಆರು ಮಂದಿಯ ಬಂಧನವು ಆಗಸ್ಟ್‌ನಲ್ಲಿ ಪಂಜಾಬ್ ಟಿಫಿನ್ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿರಬಹುದು ಎಂದು ಇಂಟೆಲ್ ಮೂಲಗಳು ತಿಳಿಸಿವೆ.

ಜಾನ್ ಮೊಹಮ್ಮದ್ ಶೇಖ್ (ಎಡ), ಒಸಾಮ (ಮಧ್ಯ) ಮತ್ತು ಮೊಹ್ಮದ್ ಅಮೀರ್ ಜಾವೇದ್ (ಬಲ) ಅವರನ್ನು ದೆಹಲಿ ಪೊಲೀಸರು ಮತ್ತು ಯುಪಿ ಎಟಿಎಸ್ ಜಂಟಿ ತಂಡ ಇವರನ್ನು ಬಂಧಿಸಿದೆ. (ಚಿತ್ರ: ನ್ಯೂಸ್ 18)

ಜಾನ್ ಮೊಹಮ್ಮದ್ ಶೇಖ್ (ಎಡ), ಒಸಾಮ (ಮಧ್ಯ) ಮತ್ತು ಮೊಹ್ಮದ್ ಅಮೀರ್ ಜಾವೇದ್ (ಬಲ) ಅವರನ್ನು ದೆಹಲಿ ಪೊಲೀಸರು ಮತ್ತು ಯುಪಿ ಎಟಿಎಸ್ ಜಂಟಿ ತಂಡ ಇವರನ್ನು ಬಂಧಿಸಿದೆ. (ಚಿತ್ರ: ನ್ಯೂಸ್ 18)

 • Share this:
  ದರೋಡೆಕೋರ, ಅಂಡರ್ವರ್ಲ್ಡ್ ಕುಖ್ಯಾತ ಡಾನ್​  ದಾವೂದ್ ಇಬ್ರಾಹಿಂನಿಂದ (Dawood Ibrahim) ರಚಿಸಲ್ಪಟ್ಟ ಮತ್ತು ನಿಯಂತ್ರಿಸಲ್ಪಡುತ್ತಿರುವ ಈ ಭೂಗತ ಲೋಕ ಮತ್ತೆ ತನ್ನ ಕಾರ್ಯಾಚರಣೆಯನ್ನು ಗುಪ್ತವಾಗಿ ನಡೆಸುತ್ತಿದ್ದು , ಮಂಗಳವಾರ ನಡೆದ ಬಹು-ರಾಜ್ಯ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನಾ ಘಟಕದ ಭಾಗವಾಗಿ ಕೆಲಸ ಮಾಡುತ್ತಿರುವ ಆರು ಜನರ ನೇಮಕಾತಿ (ಈಗಾಗಲೇ ಬಂಧನಕ್ಕೆ ಒಳಗಾಗಿರು) ಹಿಂದೆ ಇದೇ ಅಂಡರ್​ವರ್ಲ್ಡ್ ಕೈವಾಡವಿದೆ​  ಎಂದು ನಂಬಲಾಗಿದೆ .

  ಉನ್ನತ ಇಂಟೆಲ್ ಮೂಲಗಳು CNN-News18 ಗೆ ಈ ಕುರಿತು ಮಾಹಿತಿ ನೀಡಿವೆ.  Pakistan-backed terror module busted ಅಂಡರ್‌ವರ್ಲ್ಡ್ ನಲ್ಲಿ ಡಿ-ಕಂಪನಿ ಎಂದೇ ಹೆಸರಾಗಿರುವ ದಾವುದ್​ ಪಡೆಯು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ನಿಂದ ಒತ್ತಡಕ್ಕೊಳಗಾಗಿದೆ ಎಂದು ಹೇಳಲಾಗಿದೆ.

  ಮೂಲಗಳ ಪ್ರಕಾರ, ದಾವೂದ್ ಇಬ್ರಾಹಿಂ ಸಹೋದರನಾದ ಚೋಟಾ ಶಕೀಲ್ ಮತ್ತು ಅನೀಸ್ ಇಬ್ರಾಹಿಂ (Chota Shakeel and Anees Ibrahim) ಅವರನ್ನು ಐಎಸ್‌ಐ "ಏನಾದರೂ ಮಾಡು" ಎಂದು ಒತ್ತಡ ಹೇರುತ್ತಿದೆ, ಮತ್ತು ಒತ್ತಡದಲ್ಲಿ ಡಿ ಕಂಪೆನಿ ಸಿಲುಕೊಕೊಂಡಿದೆ, ಅನೀಸ್ ಇಬ್ರಾಹಿಂ ಪುರುಷರನ್ನು ಮಾಡ್ಯೂಲ್‌ಗೆ ನೇಮಿಸಿಕೊಳ್ಳಲು ಆರಂಭಿಸಿದ್ದಾನೆ. ಡಿ-ಕಂಪನಿ, ತನ್ನ ಖ್ಯಾತಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ಅನೀಸ್ ಇಬ್ರಾಹಿಂ ಅವರನ್ನು ಮಾಡ್ಯೂಲ್‌ಗೆ ಸದಸ್ಯರನ್ನು ನೇಮಿಸಿಕೊಳ್ಳಲು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

  26/11 ಮುಂಬೈ ದಾಳಿಯಂತಹ ಭಯೋತ್ಪಾದಕ ಘಟನೆಯನ್ನು ಸೃಷ್ಟಿಸುವ ಆಲೋಚನೆ ಇದರ ಹಿಂದೆ ಇದೆ ಎಂದು ಮೂಲಗಳು ತಿಳಿಸಿವೆ, ಇದು ಅತ್ಯಂತ ರಹಸ್ಯ ಕಾರ್ಯಾಚರಣೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


  ಬಂಧಿತರಲ್ಲಿ ಒಬ್ಬರಾದ ಜಾನ್ ಮೊಹಮ್ಮದ್ ಶೇಖ್ (Jaan Mohammad Shaikh), ಅಲಿಯಾಸ್ ಸಮೀರ್ ಕಲಿಯಾ, ಮುಂಬೈನ ಸಿಯಾನ್ ಮೂಲದ ಯುವಕ, ಆತನ ಊರಿನಿಂದ ಆತನನ್ನು ಮೊದಲು ಬಂಧಿಸಲಾಯಿತು. ಮೂಲಗಳು ಹೇಳುವಂತೆ ಇದು ಮೂಲಭೂತವಾದವನ್ನು ಭಾರತೀಯ ಯುವಕರಿಗೆ ತರಬೇತಿ ನೀಡಲು ಪಾಕ್-ಐಎಸ್‌ಐ (Pak-ISI) ಅಳವಡಿಸಿಕೊಂಡ ಹೊಸ ವಿಧಾನವಾಗಿದೆ. ಮತ್ತೊಬ್ಬ ಆರೋಪಿ ಒಸಾಮಾ, ಅಲಿಯಾಸ್ ಸಾಮಿ, ಪಾಕಿಸ್ತಾನದ ತರಬೇತಿಯ ಬಗ್ಗೆ ಮಂಗಳವಾರ ತನಿಖಾ ಸಂಸ್ಥೆಗಳಿಗೆ ಬಹಿರಂಗಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

  ದೆಹಲಿ ಮತ್ತು ಯುಪಿ ಪೊಲೀಸ್ (Delhi and UP Police forces) ಪಡೆಗಳು ಜಂಟಿಯಾಗಿ ಮಾಡಿದ ಆರು ಮಂದಿಯ ಬಂಧನವು ಆಗಸ್ಟ್‌ನಲ್ಲಿ ಪಂಜಾಬ್ ಟಿಫಿನ್ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿರಬಹುದು ಎಂದು ಇಂಟೆಲ್ ಮೂಲಗಳು ತಿಳಿಸಿವೆ. ಅಮೃತಸರದ ಲೋಪೋಕೆ ಉಪವಿಭಾಗದ ದಲೆಕೆ ಹಳ್ಳಿಯ (Daleke village in Lopoke sub-division ) ಚರಂಡಿಯ ಬಳಿ ಐದು ಹ್ಯಾಂಡ್ ಗ್ರೆನೇಡ್‌ಗಳು ಮತ್ತು 100 ಪಿಸ್ತೂಲ್ ಕಾರ್ಟ್ರಿಡ್ಜ್‌ಗಳೊಂದಿಗೆ ಟಿಫಿನ್ ಬಾಂಬ್ ಪತ್ತೆಯೊಂದಿಗೆ ಪ್ರಮುಖ ಭಯೋತ್ಪಾದಕ ಸಂಚುಗಳನ್ನು ಪೊಲೀಸರು ಭೇದಿಸಿದ್ದಾರೆ ಎಂದು ಹೇಳಿಕೊಂಡ ನಂತರ ಪಂಜಾಬ್ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು.

  ಇದನ್ನೂ ಓದಿ: Congress: ಕಾಂಗ್ರೆಸ್​ Vs ಕಾಂಗ್ರೆಸ್​; ಇನ್ನೂ ಪುಟಿದೇಳದ ಕೇಂದ್ರ ನಾಯಕತ್ವ: ದುಸ್ಥಿತಿಯಲ್ಲಿ ಹಳೆಯ ಪಕ್ಷ

  ಇಬ್ಬರು ಭಯೋತ್ಪಾದಕರು ಸೇರಿದಂತೆ ಆರು ಜನರನ್ನು ಉತ್ತರ ಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರದಿಂದ ಬಂಧಿಸಲಾಗಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ಸಂಘಟಿಸುವಲ್ಲಿ ಪಾಕ್-ಐಎಸ್‌ಐ ಮತ್ತು ಅಂಡರ್‌ವರ್ಲ್ಡ್ ನಡುವಿನ ನಂಟನ್ನು ಈ ಬಂಧನಗಳು ಬಹಿರಂಗಪಡಿಸಿವೆ. ಮುಂಬರುವ ಹಬ್ಬದ ಸಮಯದಲ್ಲಿ ಪ್ರಮುಖ ನಗರಗಳಲ್ಲಿ ದೊಡ್ಡ ಜನಸಂದಣಿಯನ್ನು ಗುರಿಯಾಗಿಸಲು ಈ ತಂಡವು ಯೋಜನೆ ರೂಪಿಸುತ್ತಿತ್ತು ಎಂದು ಮೂಲಗಳು ತಿಳಿಸಿವೆ.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.

  Published by:HR Ramesh
  First published: