ಆಂಧ್ರಪ್ರದೇಶ: ದುಡ್ಡೇ (Money) ದೊಡ್ಡಪ್ಪ ಅಂತಾರೆ. ದುಡ್ಡಿದ್ದೆ ಜಗತ್ತು (World) ಅಂತಾರೆ. ಈಗೇನಿದ್ರೂ ದುಡ್ಡಿನ ದುನಿಯಾ ಅಂತಾರೆ. ದುಡ್ಡು ಒಂದಿದ್ರೆ ಯಾರನ್ನು ಹೇಗೆ ಬೇಕಾದ್ರೂ ಆಟ ಆಡಿಸಬಹುದು. ಏನ್ ಬೇಕಾದ್ರೂ ಮಾಡ್ಕೋಬಹುದು ಅಂತಾರೆ. ಇದ್ದಾಗಲೂ ದುಡ್ಡು, ಸತ್ತಾಗಲೂ (Death) ದುಡ್ಡು. ಬದುಕು ಸಂಪೂರ್ಣವಾಗಿ ದುಡ್ಡಿನ ಸುತ್ತವೇ ಗಿರಕಿ ಹೊಡೆಯುವ ಕಾಲವಿದು. ದುಡ್ಡು ಯಾರಿಗೆ ತಾನೇ ಬೇಡ ಹೇಳಿ? ಎಲ್ಲರೂ ದುಡ್ಡು ಮಾಡ್ಬೇಕು ಅನ್ನೋರೆ. ಆದ್ರೆ ಅದಕ್ಕೋಸ್ಕರ ಹೆತ್ತ ತಂದೆ ತಾಯಿಯನ್ನೂ (Father And Mother), ಕೊನೆ ಗಳಿಗೆಯಲ್ಲಿ ಅವರ ಅಂತ್ಯಸಂಸ್ಕಾರ (Last Rites) ಮಾಡೋಕು ದುಡ್ಡು ಕೇಳುವ ದುರುಳ ಮಕ್ಕಳು ಈ ಭೂಮಿಯ ಮೇಲಿದ್ದಾರೆ. ಅದಕ್ಕೆ ಈ ಘಟನೆಯೇ ಜ್ವಲಂತ ಸಾಕ್ಷಿಯಾಗಿದೆ.
ತಂದೆಯ ಅಂತ್ಯಸಂಸ್ಕಾರ ಮಾಡಲು ಹಣ ಕೇಳಿದ ಮಗ
ಇತ್ತೀಚಿನ ದಿನಗಳಲ್ಲಿ ತಂದೆ ತಾಯಿಗಳನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳದೇ ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ವೃದ್ಧ ತಂದೆ ತಾಯಿಯರನ್ನು ಹೀನಾಯವಾಗಿ ಕಂಡು, ಅವರಿಂದ ಆಸ್ತಿ, ಹಣ ಕಿತ್ತುಕೊಂಡು ಕೊನೆಗೆ ಒಂದು ತುತ್ತು ಅನ್ನ ಹಾಕದೇ ಹೊರಗೆ ದೂಡುವವರೇ ಹೆಚ್ಚಿದ್ದಾರೆ.
ಆದರೆ ಎಂಥ ಕೆಟ್ಟವರೇ ಆದ್ರೂ ಸತ್ತ ತಂದೆಯ ಅಂತ್ಯಸಂಸ್ಕಾರಕ್ಕಾದ್ರೂ ಬಂದೇ ಬರ್ತಾರೆ. ಆದ್ರೆ ಇಲ್ಲೊಬ್ಬ ಪಾಪಿ ಮಗ ತನ್ನ ತಂದೆಯ ಅಂತ್ಯಸಂಸ್ಕಾರಕ್ಕೂ ಹಣದ ಬೇಡಿಕೆಯಿಟ್ಟಿದ್ದಾನೆ. ಆಂಧ್ರಪ್ರದೇಶದ ಅನಿಗಂಡ್ಲಪಾಡು ಹಳ್ಳಿಯ 80 ವರ್ಷದ ಗಿಂಜುಪಲ್ಲಿ ಕೊಟಾಯ್ ವಯೋಸಹಜ ಕಾಯಿಲೆಯಿಂದ ತೀರಿ ಹೋಗಿದ್ರು.
ಹೀಗಾಗಿ ಮಗನಿಗೆ ಕರೆ ಮಾಡಿ ಅಂತ್ಯಸಂಸ್ಕಾರ ನಡೆಸಿ ಕೊಡುವಂತೆ ಕೇಳಲಾಗಿತ್ತು. ಆದರೆ ಕೊಟಾಯ್ ಮಗ ತನಗೆ ಬರಬೇಕಿದ್ದ ಹಣ ಕೊಟ್ಟರೆ ಮಾತ್ರ ತಾನು ತಂದೆಯ ಅಂತ್ಯಸಂಸ್ಕಾರ ನೆರವೇರಿಸುವುದಾಗಿ ಹೇಳಿದ್ದ. ಹೀಗಾಗಿ ಕೊನೆಗೆ ಕೊಟಾಯ್ ಅವರ ಮಗಳು ಅಂತ್ಯಕ್ರಿಯೆ ನೆರವೇರಿಸಿದ್ದಾಳೆ.
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಮಗಳು
ಸಹೋದರ ತಂದೆಯ ಅಂತ್ಯಕ್ರಿಯೆ ನೆರವೇರಿಸಲು ನಿರಾಕರಿಸಿದ ಹಿನ್ನೆಲೆ ಮಗಳೇ ಮುಂದೆ ನಿಂತು ತಂದೆಯ ಅಂತ್ಯಕ್ರಿಯೆ ವಿಧಿ ವಿಧಾನಗಳನ್ನು ಮಾಡಿ ಮುಗಿಸಿದ್ದಾಳೆ.
ಆಸ್ತಿ ಹಣದ ವ್ಯಾಜ್ಯ, ತಂದೆಯ ಅಂತ್ಯಸಂಸ್ಕಾರ ಮಾಡದ ಮಗ
ಈ ಹಿಂದೆ ಗಿಂಜುಪಲ್ಲಿ ಕೊಟಾಯ್ ತಮ್ಮ ಆಸ್ತಿ ಮಾರಿದ್ದರು. ಆಗ ಒಂದು ಕೋಟಿ ರೂಪಾಯಿ ಬಂದಿತ್ತು. ಇದರಲ್ಲಿ 70 ಲಕ್ಷ ಮಗನಿಗೆ ಕೊಟ್ಟು, 30 ಲಕ್ಷ ತಮ್ಮ ಹತ್ತಿರ ಇಟ್ಟುಕೊಂಡಿದ್ರು. ಆದರೆ ಮಗ ಅದೂ ಮೂವತ್ತು ಲಕ್ಷ ರೂಪಾಯಿ ಕೊಡುವಂತೆ ಪಟ್ಟು ಹಿಡಿದಿದ್ದ. ಆದರೆ ಕೊಟಾಯ್ ಮಗನಿಗೆ ಉಳಿದ 30 ಲಕ್ಷ ಕೊಡಲಿಲ್ಲ.
ಆಗ ಮಗ ತಂದೆ ತಾಯಿಗೆ ಸಾಕಷ್ಟು ಚಿತ್ರಹಿಂಸೆ ನೀಡಿದ್ದಾನೆ. ದೈಹಿಕವಾಗಿ ಹಲ್ಲೆ ಮಾಡಿದ್ದಾನೆ. ದಿನವೂ ಹೆತ್ತವರ ಮೇಲೆ ದೌರ್ಜನ್ಯ ಮಾಡಿ, ಕೊಲೆ ಬೆದರಿಕೆಯೊಡ್ಡಿದ್ದಾನೆ. ಇದರಿಂದ ತೀವ್ರವಾಗಿ ನೊಂದಿದ್ದ ಕೊಟಾಯ್ ದಂಪತಿ ಮಗಳು ವಿಜಯಲಕ್ಷ್ಮಿ ಮನೆಗೆ ಹೋಗಿದ್ದರು.
ಪತ್ನಿ ಜೊತೆ ಕೊಟಾಯ್ ಮಗಳು ವಿಜಯಲಕ್ಷ್ಮೀ ವಾಸವಿದ್ದ ಗುಮ್ಮದಿದುರ್ರು ಹಳ್ಳಿಯ ಮನೆಗೆ ಹೋಗಿ ಉಳಿದುಕೊಂಡಿದ್ರು. ಆದರೆ ವಯೋಸಹಜ ಕಾಯಿಲೆಯಿಂದ ಕೊಟಾಯ್ ನಿಧನರಾಗಿದ್ದಾರೆ. ಈ ಬಗ್ಗೆ ಮಗಳು ವಿಜಯಲಕ್ಷ್ಮೀ ತಂದೆಯ ಅಂತ್ಯಸಂಸ್ಕಾರ ನಡೆಸಿ ಕೊಡುವಂತೆ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಾಳೆ.
ಇದನ್ನೂ ಓದಿ: ಕಾಲು ಮುರಿದುಕೊಂಡು ನರಳುತ್ತಿರುವ ಆನೆ ನೆರವಿಗೆ ಬಂದ ಸೇನೆ, ಮೋತಿಯನ್ನು ನಿಲ್ಲಿಸಲು ಹರಸಾಹಸ
ಆದರೆ ಕೊಟಾಯ್ ಮಗ ತನಗೆ ಉಳಿದ 30 ಲಕ್ಷ ರೂ ಕೊಟ್ಟರೆ ಮಾತ್ರ ತಾನು ತಂದೆಯ ಅಂತ್ಯಸಂಸ್ಕಾರ ಮಾಡುವುದಾಗಿ ಹೇಳಿದ್ದಾನೆ. ಇದಕ್ಕೆ ಮುಂದೆ ಪರಿಹಾರ ಕಾಣದೇ ಕೊನೆಗೆ ಮಗಳು ವಿಜಯಲಕ್ಷ್ಮೀಯೇ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ