Supreme Court: ತಂದೆಯನ್ನು ನೋಡಿಕೊಳ್ಳಲು ನಿರಾಕರಿಸಿದ ಮಗಳಿಗೆ ತಂದೆಯ ಹಣದಲ್ಲಿಯೂ ಪಾಲಿಲ್ಲ! ಕೋರ್ಟ್ ಹೇಳಿದ್ದಿಷ್ಟು

ಮಗಳಾದವಳು ತನ್ನ ತಂದೆಯೊಂದಿಗೆ ಯಾವುದೇ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸದಿದ್ದರೆ, ಅವಳು ತನ್ನ ಶಿಕ್ಷಣಕ್ಕೆ ಮತ್ತು ಮದುವೆಗಾಗಿ ತನ್ನ ತಂದೆಯಿಂದ ಹಣ ಪಡೆಯಲು ಸಹ ಅರ್ಹಳಲ್ಲವಂತೆ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಮಕ್ಕಳು (Children) ತಮ್ಮ ತಂದೆ ಮತ್ತು ತಾಯಿಯ ಜೊತೆ ಯಾವುದೇ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸದೆ ಇದ್ದರೂ ಅವರು ಮಾಡಿಟ್ಟಂತಹ ಆಸ್ತಿ ಮತ್ತು ದುಡ್ಡು ಬೇಕು ಎನ್ನುವುದನ್ನು ನಾವು ನೋಡಿರುತ್ತೇವೆ. ಆದರೆ ಇತ್ತೀಚೆಗೆ ಒಂದು ಕೋರ್ಟ್ ಕೇಸ್ ನಲ್ಲಿ ಒಂದು ಮಹತ್ವದ ತೀರ್ಪೊಂದನ್ನು (Verdict) ನೀಡಿದ್ದಾರೆ ನೋಡಿ. ಒಂದು ವೇಳೆ ಮಗಳಾದವಳು ತನ್ನ ತಂದೆಯೊಂದಿಗೆ ಯಾವುದೇ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸದಿದ್ದರೆ, ಅವಳು ತನ್ನ ಶಿಕ್ಷಣಕ್ಕೆ (education) ಮತ್ತು ಮದುವೆಗಾಗಿ (Marriage) ತನ್ನ ತಂದೆಯಿಂದ ಹಣ ಪಡೆಯಲು ಸಹ ಅರ್ಹಳಲ್ಲವಂತೆ ಎಂದು ಸುಪ್ರೀಂಕೋರ್ಟ್ (Supreme Court)‌ ಬುಧವಾರ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ. ಸುಂದ್ರೇಶ್ ಅವರ ಪೀಠವು, ನಿರ್ದಿಷ್ಟ ಪ್ರಕರಣದಲ್ಲಿ, ಮಗಳಿಗೆ 20 ವರ್ಷ ವಯಸ್ಸಾಗಿದ್ದು ಮತ್ತು ತನ್ನ ಜೀವನವನ್ನು ತನ್ನ ಇಚ್ಚೆಯಂತೆ ನಡೆಸಿಕೊಂಡು ಹೋಗಲು ಸ್ವತಂತ್ರಳಾಗಿದ್ದಾಳೆ. ಆದರೆ ತಂದೆಯೊಂದಿಗೆ ಯಾವುದೇ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸದ ಕಾರಣ, ಶಿಕ್ಷಣಕ್ಕಾಗಿ ಅವರಿಂದ ಹಣವನ್ನು ಪಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.

ತಂದೆಯ ಹಣ ಪಡೆಯಲು ಅರ್ಹಳಲ್ಲ

"ಶಿಕ್ಷಣ ಮತ್ತು ಮದುವೆಗಾಗಿ ಮಗಳ ವೆಚ್ಚಗಳಿಗೆ ಸಂಬಂಧಿಸಿದಂತೆ, ಅವಳು ಮೇಲ್ಮನವಿದಾರನೊಂದಿಗೆ ಯಾವುದೇ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುವುದಿಲ್ಲ ಮತ್ತು ಸುಮಾರು 20 ವರ್ಷ ವಯಸ್ಸಿನವಳು ಎಂದು ತೋರುತ್ತದೆ. ಅವಳು ತನ್ನದೇ ಆದ ಮಾರ್ಗವನ್ನು ಆಯ್ಕೆ ಮಾಡಲು ಅರ್ಹಳಾಗಿದ್ದಾಳೆ. ಆದರೆ ನಂತರ ಶಿಕ್ಷಣಕ್ಕೆ ಬೇಕಾಗುವ ವೆಚ್ಚವನ್ನು ಮೇಲ್ಮನವಿದಾರರಿಂದ ಕೇಳಲು ಸಾಧ್ಯವಿಲ್ಲ. ಹೀಗಾಗಿ, ಮಗಳು ತಂದೆಯ ಯಾವುದೇ ಹಣವನ್ನು ಪಡೆಯಲು ಅರ್ಹಳಲ್ಲ ಎಂದು ನಾವು ಭಾವಿಸುತ್ತೇವೆ, "ಎಂದು ಬೆಂಚ್ ನ ವರದಿಯ ಪ್ರಕಾರ ನ್ಯಾಯಾಲಯ ಹೇಳಿದೆ.

ತಾಯಿ ಬೆಂಬಲಿಸಿದರೆ ಮಾತ್ರ ಹಣ

ಆದಾಗ್ಯೂ, ತಾಯಿಗೆ ಶಾಶ್ವತ ಜೀವನಾಂಶವಾಗಿ ಪಾವತಿಸಬೇಕಾದ ಮೊತ್ತವನ್ನು ನಿರ್ಧರಿಸುವಾಗ, ತಾಯಿಯು ಮಗಳನ್ನು ಬೆಂಬಲಿಸಲು ಬಯಸಿದರೆ, ಹಣ ಲಭ್ಯವಾಗುವಂತೆ ನೋಡಿಕೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಹೈಕೋರ್ಟ್​ನಲ್ಲಿ ತಿರಸ್ಕರಿಸಿದ ನಂತರ ಸುಪ್ರೀಂಗೆ ಮೇಲ್ಮನವಿ

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಲ್ಲಿ ತಿರಸ್ಕರಿಸಿದ ನಂತರ ಪತಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ವಿಚ್ಛೇದನ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು. ಪತಿ ಪ್ರಾರಂಭದಲ್ಲಿ ತನ್ನ ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಮನವಿ ಸಲ್ಲಿಸಿದ್ದರು, ಅದನ್ನು ವಜಾಗೊಳಿಸಲಾಯಿತು.

ವಿವಾಹ ವಿಚ್ಛೇದನೆ ಅರ್ಜಿ

ಇದರ ನಂತರ ಅವರು ಜಿಲ್ಲಾ ನ್ಯಾಯಾಧೀಶರ ಮುಂದೆ ವಿವಾಹ ವಿಚ್ಛೇದನ ಕೋರಿ ಮನವಿ ಸಲ್ಲಿಸಿದರು. ಆದರೆ ಇದನ್ನು ಪತ್ನಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಹೈಕೋರ್ಟ್ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು. ಹೀಗಾಗಿ ಪತಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು.

ಇದನ್ನೂ ಓದಿ: BPCL Facility: ಸ್ಮಾರ್ಟ್‌ಫೋನ್, ಇಂಟರ್ನೆಟ್ ಇಲ್ಲದವರಿಗೆ ಧ್ವನಿ ಆಧಾರಿತ ಡಿಜಿಟಲ್ ಪಾವತಿ ಸೌಲಭ್ಯ ಒದಗಿಸಿದ BPCL

ವಿಚ್ಛೇದನ ಅರ್ಜಿ ಇನ್ನೂ ಬಾಕಿ ಇರುವಾಗ ಸುಪ್ರೀಂಕೋರ್ಟ್‌ ಮಧ್ಯಸ್ಥಿಕೆ ಕೇಂದ್ರದಲ್ಲಿ ಸಾಮರಸ್ಯದ ಪ್ರಯತ್ನಗಳನ್ನು ಮಾಡಲಾಯಿತು. ಮಗಳು ಮತ್ತು ತಂದೆಯ ಸಂಬಂಧವನ್ನು ಸಹ ಸಾಮರಸ್ಯದ ಪ್ರಕ್ರಿಯೆಗಳಿಗೆ ಒಳಪಡಿಸಲಾಯಿತು. ಮಗಳು ಹುಟ್ಟಿದಾಗಿನಿಂದ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಈಗ ತನ್ನ 20ನೇ ವಯಸ್ಸಿನಲ್ಲಿ ಅವಳು ತನ್ನ ತಂದೆಯನ್ನು ನೋಡಿಕೊಳ್ಳುವುದಕ್ಕೆ ನಿರಾಕರಿಸಿದಳು.

ಮೇಲ್ಮನವಿದಾರನ ಪರವಾಗಿ ಹಾಜರಾದ ಹಿರಿಯ ವಕೀಲ ನಿಧೇಶ್ ಗುಪ್ತಾ ಪ್ರಕಾರ, “ತಂದೆ ಮತ್ತು ಮಗಳ ನಡುವಿನ ಸಂಬಂಧವು ಅಹಿತಕರವಾಗಿದೆ ಎಂದು ತಿಳಿದು ಬಂದಿದೆ” ಎಂದು ಹೇಳಿದ್ದಾರೆ.

ಭಾರತದ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸುವ ಮೂಲಕ ಇವರ ಮದುವೆಯನ್ನು ಮತ್ತೆ ಜೋಡಿಸಲಾಗದ ವಿಘಟನೆ ಎಂದು ಹೇಳಿ ಇದನ್ನು ಅನೂರ್ಜಿತಗೊಳಿಸಿತು.

ಇದನ್ನೂ ಓದಿ: War Crimes Law: ಯುದ್ಧಕ್ಕೆ ಕಾರಣವಾಗಿರುವ Russia ಅಧ್ಯಕ್ಷ ಪುಟಿನ್ ಅವರನ್ನು ಬಂಧಿಸಬಹುದೇ?

ಮಗಳ ವೆಚ್ಚಗಳ ವಿಷಯದಲ್ಲಿ, ನ್ಯಾಯಾಲಯವು ಅವಳ ಶಿಕ್ಷಣಕ್ಕಾಗಿ ಯಾವುದೇ ಹಣಕ್ಕೆ ಅರ್ಹಳಲ್ಲ ಎಂದು ತೀರ್ಪು ನೀಡಿದೆ ಎಂದು ವರದಿ ಹೇಳಿದೆ. ಇದರ ಪರಿಣಾಮವಾಗಿ, ಸರ್ವೋಚ್ಚ ನ್ಯಾಯಾಲಯವು ಪ್ರತಿವಾದಿಯ ಶಾಶ್ವತ ಜೀವನಾಂಶವನ್ನು ನಿಗದಿಪಡಿಸಿತು, ಪ್ರಸ್ತುತ ಮಧ್ಯಂತರ ನಿರ್ವಹಣೆಯಾಗಿ ತಿಂಗಳಿಗೆ 8,000 ರೂಪಾಯಿ ಪಾವತಿಸಲಾಗುತ್ತಿದೆ. ಎಲ್ಲಾ ರೀತಿಯ ಕ್ಲೇಮುಗಳ ಪೂರ್ಣ ಮತ್ತು ಅಂತಿಮ ಇತ್ಯರ್ಥದಲ್ಲಿ 10 ಲಕ್ಷ ಹಣವನ್ನು ಪತಿ ನೀಡಬೇಕಾಗಬಹುದು.
Published by:Divya D
First published: