ಪಂಚಭೂತಗಳಲ್ಲಿ ಲೀನರಾದ ಅಜಾತಶತ್ರು: ಕವಿ ಮನಸ್ಸಿನ ರಾಜಕಾರಣಿಗೆ ಗಣ್ಯಾತಿಗಣ್ಯರ ಅಂತಿಮ ನಮನ

Precilla Olivia Dias
Updated:August 17, 2018, 10:21 PM IST
ಪಂಚಭೂತಗಳಲ್ಲಿ ಲೀನರಾದ ಅಜಾತಶತ್ರು: ಕವಿ ಮನಸ್ಸಿನ ರಾಜಕಾರಣಿಗೆ ಗಣ್ಯಾತಿಗಣ್ಯರ ಅಂತಿಮ ನಮನ
  • Share this:
ನ್ಯೂಸ್​ 18 ಕನ್ನಡ

ನವದೆಹಲಿ(ಆ.17): ಅಜಾತಶತ್ರು ಅಟಲ್​ ಬಿಹಾರಿ ವಾಜಪೇಯಿ ಇನ್ನು ನೆನಪು ಮಾತ್ರ. ದೆಹಲಿಯ ವಿಜಯ್​ ಘಾಟ್​ನ ಸ್ಮೃತಿ ಸ್ಥಳದಲ್ಲಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ದತ್ತು ಪುತ್ರಿ ನಮಿತಾ ತಂದೆ ಚಿತೆಗೆ ಕರ್ಪೂರ ಸ್ಪರ್ಶ ಮಾಡುವ ಮೂಲಕ ವಿಧಿ ವಿಧಾನ ಪೂರೈಸಿದರು.

ಇದಕ್ಕೂ ಮೊದಲು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಿಂದ ವಿಜಯ್​ ಘಾಟ್​ ತನಕ ಅಂತಿಮ ಯಾತ್ರೆ ನಡೆಸಲಾಯಿತು. ಸಾವಿರಾರು ಜನರು ಕವಿ ಹೃದಯಿ ಮುತ್ಸದ್ಧಿಗೆ ಅಂತಿಮ ನಮನ ಸಲ್ಲಿಸಿದ್ರು. ಪಾರ್ಥಿವ ಶರೀರ ಹೊತ್ತು ಸಾಗಿದ ವಾಹನದ ಜೊತೆ ಸ್ವತಃ ಪ್ರಧಾನಿ ನರೇಂದ್ರ ಮೋದಿ 6 ಕಿಲೋ ಮೀಟರ್​ ಹೆಜ್ಜೆ ಹಾಕಿದ್ದಾರೆ.ರಾಷ್ಟ್ರೀಯ ಸ್ಮೃತಿಸ್ಥಳದಲ್ಲಿ ಸೇನಾಪಡೆಗಳು ಅಂತಿಮ ಗೌರವ ನೀಡಿವೆ. ಸೇನಾ ದಂಡನಾಯಕರಾದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​, ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಸೇರಿದಂತೆ ದೇಶದ ಗಣ್ಯಾತಿಗಣ್ಯರು ಅಂತಿಮ ವಿಧಿವಿಧಾನದಲ್ಲಿ ಭಾಗಿಯಾಗಿದ್ದರು.

ಅಟಲ್​ ಬಿಹಾರಿ ವಾಜಪೇಯಿ ಅವರ ಅಂತ್ಯಸಂಸ್ಕಾರದಲ್ಲಿ ಸಾರ್ಕ್​ ರಾಷ್ಟ್ರಗಳ ಮುಖ್ಯಸ್ಥರು ಭಾಗಿಯಾಗಿ ಪುಷ್ಪನಮನ ಸಲ್ಲಿಸಿದ್ರು.. ಕೊನೆಯಲ್ಲಿ ಸೇನಾಪಡೆಗಳು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅಂತಿಮ ಗೌರವ ಸಮರ್ಪಣೆ ಆಯಿತು. ಇದಕ್ಕೂ ಮೊದಲು ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ದತ್ತು ಪುತ್ರಿ ನಮಿತಾ ಅವರ ಮಗಳು ನಿಹಾರಿಕಾ ಸ್ವೀಕಾರಿಸಿದರು.

ಬ್ರಾಹ್ಮಣ ಸಂಪ್ರದಾಯಂತೆ ನಡೆದ ವಿಧಿವಿಧಾನದಲ್ಲಿ ಅಟಲ್​ ಬಿಹಾರಿ ವಾಜಪೇಯಿ ಅವರ ಕುಟುಂವಬ್ಥರು ಸೇರಿದಂತೆ ಸಾವಿರಾರು ಜನ ಭಾಗಿಯಾಗಿದ್ದರು, ಆತ್ಮೀಯ ಮಿತ್ರನನ್ನು ಕಳುಹಿಸಿ ಕೊಟ್ಟ ಬಿಜೆಪಿ ಭೀಷ್ಮ ಲಾಲ್​ ಕೃಷ್ಣ ಅಡ್ವಾಣಿ, ಮಮ್ಮಲ ಮರುಗಿದರು.
First published:August 17, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading