• Home
  • »
  • News
  • »
  • national-international
  • »
  • Murder: ತಾಯಿಯನ್ನೇ ಕೊಂದು ಬಿಟ್ಟಳು ಈ ಮಗಳು! ಈಕೆಯ ಕಥೆ ಓದಿದ್ರೆ ಇವಳ ಮೇಲೆ ನಿಮಗೆ ಕನಿಕರ ಬರುತ್ತೆ!

Murder: ತಾಯಿಯನ್ನೇ ಕೊಂದು ಬಿಟ್ಟಳು ಈ ಮಗಳು! ಈಕೆಯ ಕಥೆ ಓದಿದ್ರೆ ಇವಳ ಮೇಲೆ ನಿಮಗೆ ಕನಿಕರ ಬರುತ್ತೆ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಮಧ್ಯರಾತ್ರಿಯ ವೇಳೆಗೆ, ಈ ಬಾಲಕಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಮನೆಯಲ್ಲಿ ತನ್ನ ತಾಯಿಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ಕರೆ ಮಾಡಿದ್ದಾಳೆ. ಕೂಡಲೇ  ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯ ಶವದ ಪಕ್ಕದಲ್ಲಿ ಕುಳಿತಿದ್ದು ಕಂಡು ಬಂದಿದೆ.

ಮುಂದೆ ಓದಿ ...
  • Share this:

ತಮಿಳುನಾಡು: ಕೆಟ್ಟ ಮಕ್ಕಳು (Children) ಇರಬಹುದು, ಆದರೆ ಕೆಟ್ಟ ತಾಯಿ  (Mother) ಇರಲಿಕ್ಕಿಲ್ಲ ಅಂತಾರೆ. ಆದರೆ ಈ ಘಟನೆಯಲ್ಲಿ (Incident) ಎರಡೂ ನಡೆದಿದೆ. ಇಲ್ಲಿ ಕೆಟ್ಟ ತಾಯಿಯೂ ಇದ್ದಾಳೆ, ಹಾಗೆಯೇ ಕೆಟ್ಟ ಮಗಳೂ ಇದ್ದಾಳೆ. ಇಲ್ಲಿ ಮಗಳೇ ತಾಯಿಯನ್ನು ಕೊಂದು ಬಿಟ್ಟಿದ್ದಾಳೆ. ಕೇಳಿದರೆ ತಾಯಿ ಮಾಡಿದ ಕೆಲಸಕ್ಕೆ ಇದೇ ಶಿಕ್ಷೆ ಅಂತಾಳೆ. ತಮಿಳುನಾಡಿ(Tamil nadu)ನಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಈ ಘಟನೆ ಬಗ್ಗೆ ತಿಳಿದು ಇಡೀ ತಮಿಳುನಾಡಿನ ಜನರೇ ಬೆಚ್ಚಿ ಬಿದ್ದಿದ್ದಾರೆ. ಅಷ್ಟಕ್ಕೂ ತಾಯಿ ಮಾಡಿದ ಕೆಟ್ಟ ಕೆಲಸ ಏನು? ತಾಯಿಯನ್ನೇ ಈ ಮಗಳು ಕೊಂದಿದ್ದೇಕೆ? ಕೊನೆಗೆ ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ? ಈ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ…


ಈ ಭೀಕರ ಘಟನೆ ನಡೆದಿರುವುದು ಎಲ್ಲಿ?


ತಮಿಳುನಾಡಿನ ತೂತುಕುಡಿಯಲ್ಲಿ ಇಂಥದ್ದೊಂದು ಭೀಕರ ಘಟನೆ ನಡೆದಿದೆ. 17 ವರ್ಷದ ಬಾಲಕಿಯೊಬ್ಬಳು ತನ್ನ ತಾಯಿಯನ್ನು ತನ್ನ ಇಬ್ಬರು ಸ್ನೇಹಿತರ ಸಹಾಯದಿಂದ ಶನಿವಾರ ರಾತ್ರಿ ಭೀಕರವಾಗಿ ಕೊಲೆ ಮಾಡಿದ್ದಾಳೆ.


ತಂದೆಯೊಂದಿಗೆ ವಾಸಿಸುತ್ತಿದ್ದ ಬಾಲಕಿ


ಈ 17 ವರ್ಷ ವಯಸ್ಸಿನ ಆರೋಪಿ ಬಾಲಕಿ ತನ್ನ ತಂದೆಯೊಂದಿಗೆ ವಾಸಿಸುತ್ತಾ ಇದ್ದಳು. ಈಕೆಯ ತಂದೆ ತಾಯಿ ಡಿವೋರ್ಸ್ ಪಡೆದು, ಬೇರೆ ಬೇರೆಯಾಗಿ ವಾಸಿಸುತ್ತಾ ಇದ್ದರು. ಹುಡುಗಿ ನಾಲ್ಕು ಮಕ್ಕಳಲ್ಲಿ ಹಿರಿಯಳು. ಆಕೆಗೆ 14 ಮತ್ತು 13 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ಮತ್ತು ನಾಲ್ಕು ವರ್ಷದ ಸಹೋದರ ಇದ್ದಾರೆ. ಅವರೆಲ್ಲರೂ ಸುಮಾರು ಒಂದು ವರ್ಷದ ಹಿಂದೆ ಪೋಷಕರು ಬೇರ್ಪಟ್ಟ ನಂತರ ಅವರ ತಂದೆಯೊಂದಿಗೆ ವಾಸಿಸುತ್ತಿದ್ದಾರೆ.


ಇದನ್ನೂ ಓದಿ:


ಡಿಪ್ಲೋಮಾ ಫೇಲ್ ಆಗಿ ವಿದ್ಯಾಭ್ಯಾಸ ಬಿಟ್ಟಿದ್ದ ಬಾಲಕಿ


ಈ ಬಾಲಕಿ ಡಿಪ್ಲೋಮಾ ಓದುತ್ತಿದ್ದಳು. ಬಳಿಕ ಅದನ್ನು ಕಂಪ್ಲೀಟ್ ಮಾಡಲು ಆಗದೇ ಅರ್ಧಕ್ಕೆ ಬಿಟ್ಟಿದ್ದಳು ಎನ್ನಲಾಗಿದೆ. ಈಕೆಯ ಉಳಿದ ಸಹೋದರ ಹಾಗೂ ಸಹೋದರಿಯರು ಶಾಲೆಗೆ ಹೋಗುತ್ತಿದ್ದರು.


ಮಧ್ಯರಾತ್ರಿ ಮನೆಯಲ್ಲಿಯೇ ತಾಯಿಯ ಕೊಲೆ


ಮಧ್ಯರಾತ್ರಿಯ ವೇಳೆಗೆ, ಈ ಬಾಲಕಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಮನೆಯಲ್ಲಿ ತನ್ನ ತಾಯಿಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ಕರೆ ಮಾಡಿದ್ದಾಳೆ. ಕೂಡಲೇ  ಸ್ಥಳಕ್ಕಾಗಮಿಸಿದ ತೂತುಕುಡಿ ದಕ್ಷಿಣ ಪೊಲೀಸರಿಗೆ ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯ ಶವದ ಪಕ್ಕದಲ್ಲಿ ಕುಳಿತಿದ್ದು ಕಂಡು ಬಂದಿದೆ.


ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ತಾಯಿಯ ಕೊಲೆ


ಮೊದಲು ಯಾರೋ ಕೊಲೆ ಮಾಡಿದ್ದಾರೆ ಅಂತ ಹೇಳಿದ ಬಾಲಕಿ, ಪೊಲೀಸರು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಹೇಳಿದ್ದಾಳೆ. ಬಾಲಕಿ ಮತ್ತು ಆಕೆಯ ಇಬ್ಬರು ಸಹಚರರು ಆರೋಗ್ಯ ಕಾರ್ಯಕರ್ತೆಯಾಗಿರುವ ಆಕೆಯ ತಾಯಿಯ ಮುಖ ಮತ್ತು ದೇಹದ ಮೇಲೆ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ವೇಶ್ಯಾವಾಟಿಕೆಗೆ ತಳ್ಳಲು ಪ್ರಯತ್ನ ಮಾಡಿದ ತಾಯಿ


ಹೌದು, ಇಂಥದ್ದೊಂದು ಆಘಾತರಕಾರಿ ವಿಚಾರವನ್ನು ಈ ಬಾಲಕಿ ಪೊಲೀಸರ ಮುಂದೆ ಹೇಳಿದ್ದಾಳೆ. ಆಕೆಯ ತಾಯಿಯೇ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿದ್ದಳಂತೆ. ಇದೇ ವಿಚಾರಕ್ಕೆ ತಾಯಿ ಹಾಗೂ ಮಗಳ ನಡುವೆ ಗಲಾಟೆ ನಡೆದಿದೆ ಅಂತ ಹೇಳಲಾಗಿದೆ.


ಇದನ್ನೂ ಓದಿ:


ಈ ಕೇಸ್‌ನಲ್ಲಿ ಬಾಲಕಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಬಾಲಗೃಹಕ್ಕೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಇಬ್ಬರು ಯುವಕರ ಪತ್ತೆಗೆ ಮುಂದಾಗಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Published by:Annappa Achari
First published: