ಸ್ನೇಹಿತೆಯೊಂದಿಗೆ ಅಪ್ಪನ ಅನೈತಿಕ ಸಂಬಂಧ ಕಂಡು ಹಿಡಿದ ಮಗಳು: TikTokನಲ್ಲಿ ವಿಡಿಯೋ ವೈರಲ್​

Extramarital Affair News: ಗಂಡನ ಜೊತೆಗೆ ಸಂಬಂಧ ಹೊಂದಿದ್ದ ಯುವತಿ ಮಗಳ ಆತ್ಮೀಯ ಗೆಳತಿ ಎಂದು ತಿಳಿದು ಆಕೆಯ ಕೋಪ ಇನ್ನಷ್ಟು ಜಾಸ್ತಿಯಾಗಿತ್ತು. ಹುಡುಗಿಯ ಮುಖಕ್ಕೆ ಉಗಿದು, ನೀನೇ ಇರು ಈ ರೀತಿ ಜೊಲ್ಲುಬಾಕನ ಜೊತೆ ಎಂದು ರೆಸ್ಟೊರೆಂಟ್​ನಿಂದ ಹೊರ ನಡೆದಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Crime News: ಟಿಕ್​ಟಾಕ್​ನಲ್ಲಿ ಒಂದು ಹುಡುಗಿ ಮಾಡಿದ ವಿಡಿಯೋ ಭಾರೀ ವೈರಲ್​ ಆಗಿದೆ. ಅದಕ್ಕೆ ಕಾರಣವಿಷ್ಟೇ, ಆಕೆಯ ತಂದೆ ಆಕೆಯ ಪ್ರಾಣ ಸ್ನೇಹಿತೆಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಅದನ್ನು ಹುಡುಗಿ ಹೇಗೆ ಕಂಡು ಹಿಡಿದಳು ಎಂಬುದನ್ನು ವಿಡಿಯೋದಲ್ಲಿ ಹೇಳಿದ್ದಾಳೆ. ಇದೀಗ ಈ ವಿಡಿಯೋ ಭಾರೀ ಮಟ್ಟದಲ್ಲಿ ವೀಕ್ಷಣೆ ಪಡೆದಿದೆ. ಇಂಟರ್​ನೆಟ್​ನಲ್ಲಿ ಸೆನ್ಸೇಷನ್​ ಹುಟ್ಟುಹಾಕಿದ ಹುಡುಗಿಯ ಹೆಸರು ಡಯಾನ. ಇಂಗ್ಲೆಂಡ್​ನ ಹದಿಹರೆಯದ ಹುಡುಗಿ ತನ್ನ ಅಪ್ಪನ ಅನೈತಿಕ ಸಂಬಂಧವನ್ನು ಕಂಡುಹಿಡಿದು, ಅಮ್ಮನ ಮುಂದೆ ವಿಚಾರ ಇಟ್ಟಿದ್ದಳು. ಇದರಿಂದ ಸಿಟ್ಟಿಗೆದ್ದ ಅಮ್ಮ, ರೆಸ್ಟಾರೆಂಟ್​ನಲ್ಲಿ ಹುಡುಗಿಯ ಜೊತೆಗಿದ್ದ ಗಂಡನನ್ನು ರೆಡ್​ ಹ್ಯಾಂಡಾಗಿ ಹಿಡಿದು ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ.

  ಗಂಡನ ಜೊತೆಗೆ ಸಂಬಂಧ ಹೊಂದಿದ್ದ ಯುವತಿ ಮಗಳ ಆತ್ಮೀಯ ಗೆಳತಿ ಎಂದು ತಿಳಿದು ಆಕೆಯ ಕೋಪ ಇನ್ನಷ್ಟು ಜಾಸ್ತಿಯಾಗಿತ್ತು. ಹುಡುಗಿಯ ಮುಖಕ್ಕೆ ಉಗಿದು, ನೀನೇ ಇರು ಈ ರೀತಿ ಜೊಲ್ಲುಬಾಕನ ಜೊತೆ ಎಂದು ರೆಸ್ಟೊರೆಂಟ್​ನಿಂದ ಹೊರ ನಡೆದಿದ್ದಾರೆ. ಇದಾದ ನಂತರ ಇಬ್ಬರಿಗೂ ವಿಚ್ಛೇದನ ಕೂಡ ಆಗಿದೆ.

  ವಿಚ್ಛೇದನ ಆದ ನಂತರ ಸತತ ಮೂರು ವರ್ಷಗಳ ಕಾಲ ನಾನು ನನ್ನ ಅಪ್ಪನೊಡನೆ ಮಾತನಾಡಿರಲಿಲ್ಲ. ಆದರೆ ಈಗ ಆಗಾಗ ಮತುಕತೆ ಆಗುತ್ತಿರುತ್ತದೆ. ನಮ್ಮ ನಡುವೆ ಈಗ ಮುಂಚಿನಷ್ಟು ಸಿಟ್ಟಿಲ್ಲ ಎಂದೂ ಡಯಾನ ಬರೆದುಕೊಂಡಿದ್ದಾಳೆ. ಇದಕ್ಕೆ ಕಮೆಂಟ್​ ಮಾಡಿದ ಕೆಲವರು, ನಿಮ್ಮ ತಂದೆಯಿಂದ ನೀವೇನೋ ದೂರ ಬಂದಿರಿ, ಆದರೆ ನಿಮ್ಮ ಶಾಪಿಂಗ್​ ಹಣವನ್ನು ನಿಮ್ಮ ಬೆಸ್ಟ್​ ಫ್ರೆಂಡ್​ ಬಳಿ ತೆಗೆದುಕೊಳ್ಳಿ. ಏಕೆಂದರೆ ಆಕೆಯಿಂದಲೇ ನಿಮ್ಮ ತಂದೆ ದೂರಾಗಿದ್ದು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಯಾನ, ನಾನು ನನ್ನ ತಂದೆಯನ್ನು ಕ್ಷಮಿಸಿದ್ದೇನೆ, ಆದರೆ ನನ್ನ ಸ್ನೇಹಿತೆಯನ್ನು ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದಿದ್ದಾಳೆ.

  ಮುಂದುವರೆದ ಡಯಾನ, ನನ್ನ ತಂದೆ ನನ್ನ ತಾಯಿಗೆ ಮೋಸ ಮಾಡುತ್ತಿದ್ದಾರೆ ಎಂಬ ಅರಿವು ನನಗಿತ್ತು, ಆದರೆ ಯಾರ ಜೊತೆ ಎಂಬುದು ಗೊತ್ತಿರಲಿಲ್ಲ. ನನ್ನ ಗೆಳತಿಯ ಜೊತೆಗೇ ಎಂದು ಗೊತ್ತಾದಾಗ ನನಗಾದ ಅನುಭವ ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾಳೆ. ಅಂದ ಹಾಗೆ ಡಯಾನ ಗೆಳತಿ, ಡಯಾನಳಿಗಿಂತ ಮೂರು ವರ್ಷ ದೊಡ್ಡವಳು.

  ಇವೆಲ್ಲ ಆದ ನಂತರ ಡಯಾನ ತಾಯಿ ಮತ್ತೆ ಮದುವೆಯಾಗಿದ್ದಾರೆ. ಬೇರೆ ವ್ಯಕ್ತಿಯ ಜೊತೆ ಮದುವೆಯಾದ ನಂತರ ನನ್ನಮ್ಮ ತುಂಬಾ ಖುಷಿಯಾಗಿದ್ದಾಳೆ. ಈಗ ನಿಜಕ್ಕೂ ನಾನು ಅಪ್ಪನ ಅನೈತಿಕ ಸಂಬಂಧ ಹುಡುಕಿ ಕೊಟ್ಟಿದ್ದು ಸರಿಯಾದ ನಿರ್ಧಾರ ಅನಿಸುತ್ತಿದೆ. ನಮ್ಮಮ್ಮ ತುಂಬಾ ಸೌಂದರ್ಯವತಿ, ಈಗ ಆಕೆಯ ಮುಖದ ನಗುವಿಗೆ ಮತ್ತಷ್ಟು ಸೌಂದರ್ಯ ತುಂಬಿದೆ ಎಂದು ಡಯಾನ ಹೇಳಿಕೊಂಡಿದ್ದಾಳೆ.

  ಇದನ್ನೂ ಓದಿ: ಲಿವಿಂಗ್​ ರಿಲೇಷನ್​ಶಿಪ್​ನಲ್ಲಿ ಅಕ್ರಮ ಸಂಬಂಧದ ಘಾಟು: ಪ್ರೇಯಸಿಯ ಖಾಸಗಿ ಭಾಗಕ್ಕೆ ಖಾರದ ಪುಡಿ ಹಚ್ಚಿ ಕೊಲೆ

  ಈ ರೀತಿಯ ಅಕ್ರಮ ಸಂಬಂಧದ ಪ್ರಕರಣಗಳು ಪದೇ ಪದೇ ಆಚೆಗೆ ಬರುತ್ತಿರುತ್ತವೆ. ಭಾರತದಂತ ದೇಶದಲ್ಲಿ ಈ ವಿಚಾರಗಳು ಅಪರಾಧ ಕೃತ್ಯಗಳಿಂದ ಅಂತ್ಯ ಕಂಡರೆ ಪಾಶ್ಚಿಮಾತ್ಯ ದೇಶಗಳಲ್ಲಿ, ಜನ ಇಂಥ ಘಟನೆಗಳಾದಾಗ ತಮ್ಮ ತಮ್ಮ ದಾರಿ ನೋಡಿಕೊಂಡು ಹೋಗುತ್ತಾರೆ. ಇದಕ್ಕೆಲ್ಲಾ ಹೆಚ್ಚಿನ ಮಹತ್ವ ಕೊಡದೇ ಇನ್ನೊಂದು ಮದುವೆಯಗುವುದೋ ಅಥವಾ ಒಂಟಿಯಾಗಿಯೇ ಇರುವುದೋ ಮಾಡುತ್ತಾರೆ. ಆದರೆ ಭಾರತದಲ್ಲಿ ಹೆಂಡತಿ ಅಥವಾ ಗಂಡ ಮೋಸ ಮಾಡಿದರೆ ಕೊಲೆಗಳನ್ನೇ ಮಾಡಿರುವ ಪ್ರಕರಣಗಳು ಕಂಡು ಬರುತ್ತವೆ.

  ಗುಜರಾತಿನಲ್ಲೂ ನಡೆದಿತ್ತು ಇಂಥದ್ದೇ ಘಟನೆ:

  ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಎಚ್ಚರವಹಿಸಿ ಬೇರೆ ಊರಿನಲ್ಲಿ ತುಂಬಾ ತುರ್ತಾದ ಮೀಟಿಂಗ್​ ಇದೆ ಎಂದು ಸುಳ್ಳು ಹೇಳಿ ಹೊರಟಿದ್ದ ತಂದೆ ಮಗಳ ಕೈಗೆ ಸಿಕ್ಕಿಕೊಂಡಿದ್ದ. ತಂದೆಯ ಗೂಗಲ್​ ಲೊಕೇಷನ್​ ನೋಡಿ ಮಗಳು, ಅಮ್ಮನ ಸಮೇತ ಹೋಟೆಲ್​ಗೆ ಭೇಟಿ ನೀಡಿ ಬೇರೆ ಹುಡುಗಿಯೊಂದಿಗಿದ್ದ (Extra Marital Affair) ಅಪ್ಪನನ್ನು ರೆಡ್​ ಹ್ಯಾಂಡಾಗಿ ಹಿಡಿದಿದ್ದಾಳೆ. ಈ ಘಟನೆ ಗುಜರಾತಿನ ವಾಲ್ಸಾಡ್​ ಹೋಟೆಲ್​ನಲ್ಲಿ ನಡೆದಿದೆ.

  ಇದನ್ನೂ ಓದಿ: ಹೋಟೆಲ್​ ರೂಮಿನಲ್ಲಿ ಹುಡುಗಿಯ ಜೊತೆ ಸಂಭೋಗ ಮಾಡುತ್ತಿದ್ದ ಗಂಡನನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದ ಹೆಂಡತಿ

  ಉದ್ಯಮಿ ತನ್ನ ಪ್ರೇಯಸಿಯ ಜೊತೆ ಹೋಟೆಲ್​ ಬುಕ್​ ಮಾಡಿ ಮನೆಯಲ್ಲಿ ಮೀಟಿಂಗ್​ ಎಂದು ಕತೆ ಹೇಳಿ ಬಂದಿದ್ದಾನೆ. ಆದರೆ ಅದೃಷ್ಟ ಸರಿಯಿಲ್ಲದ ಕಾರಣ, ಅನ್ಯ ಯುವತಿಯ ಜೊತೆ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗಿರುವಾಗಲೇ, ರೆಡ್​ ಹ್ಯಾಂಡ್​ ಆಗಿ ಸಿಕ್ಕಿಹಾಕಿಕೊಂಡಿದ್ದಾನೆ. ಇದಕ್ಕೆಲ್ಲಾ ನೇರ ಕಾರಣ ಆತನ ಮೊಬೈಲ್​ ಫೋನ್​. ಸಾಮಾನ್ಯ ಮಕ್ಕಳು ತಂದೆಯ ಫೊನ್​ ಬಳಕೆ ಮಾಡುವುದು, ತಂದೆ ಮಕ್ಕಳ ಫೋನ್​ ಬಳಕೆ ಮಾಡುವುದು ಸಹಜ. ಅದರಂತೆ ತನ್ನ ಮಗಳ ಫೋನ್​ ಒಮ್ಮೆ ಬಳಕೆ ಮಾಡಿದ್ದೇ ಈ ದುರಂತಕ್ಕೆ ಕಾರಣ.
  Published by:Sharath Sharma Kalagaru
  First published: