• Home
 • »
 • News
 • »
 • national-international
 • »
 • ಪ್ರವಾದಿಗೆ ಅವಹೇಳನ: ಫ್ರಾನ್ಸ್ ವಿರುದ್ಧ ಕ್ರಮ ಕೈಗೊಳ್ಳಿ - ಇಸ್ಲಾಮೀ ರಾಷ್ಟ್ರಗಳಿಗೆ ದಾರುಲ್ ಉಲೂಮ್ ಕರೆ

ಪ್ರವಾದಿಗೆ ಅವಹೇಳನ: ಫ್ರಾನ್ಸ್ ವಿರುದ್ಧ ಕ್ರಮ ಕೈಗೊಳ್ಳಿ - ಇಸ್ಲಾಮೀ ರಾಷ್ಟ್ರಗಳಿಗೆ ದಾರುಲ್ ಉಲೂಮ್ ಕರೆ

ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್

ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್

ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ಅವಹೇಳನ ಮಾಡಿದ ಹಾಗೂ ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿರುವ ಫ್ರಾನ್ಸ್ ದೇಶದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾರತದ ಇಸ್ಲಾಮೀ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ಕರೆ ನೀಡಿದೆ.

 • News18
 • Last Updated :
 • Share this:

  ನವದೆಹಲಿ(ಅ. 30): ಫ್ರಾನ್ಸ್ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆ ಜಗತ್ತಿನ ಅನೇಕರ ಗಮನ ಸೆಳೆಯುತ್ತಿದೆ. ಇಸ್ಲಾಮ್ ಧರ್ಮ ಸಂಸ್ಥಾಪಕ ಹಾಗೂ ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಚಾರ್ಲಿ ಹೆಬ್ಡೋದಲ್ಲಿ ಪ್ರಕಟವಾದ ವ್ಯಂಗ್ಯ ಚಿತ್ರಗಳು ಹಾಗೂ ಅದಕ್ಕೆ ಪ್ರತಿಯಾಗಿ ನಡೆದ ಅಮಾನುಷ ಹಿಂಸಾಚಾರ ಘಟನೆಗಳು ಬಹಳಷ್ಟು ಮಂದಿಯನ್ನು ಬೆಚ್ಚಿಬೀಳಿಸಿದೆ. ಫ್ರಾನ್ಸ್ ದೇಶ ಇಸ್ಲಾಮ್ ಮೂಲಭೂತವಾದವನ್ನು ತೊಡೆದುಹಾಕಲು ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಇದರ ಬೆನ್ನಲ್ಲೇ ಮುಸ್ಲಿಮ್ ಸಮುದಾಯದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಅನೇಕ ಇಸ್ಲಾಮಿಕ್ ಧಾರ್ಮಿಕ ಮುಖಂಡರು ಫ್ರಾನ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೂಗಿಗೆ ಭಾರತದ ಅತ್ಯುಚ್ಚ ಇಸ್ಲಾಮಿಕ್ ವಿಶ್ವವಿದ್ಯಾಲಯ ದಾರುಲ್ ಉಲೂಮ್ ದೇವಬಂದ್ ಕೂಡ ಧ್ವನಿಗೂಡಿಸಿದೆ. ಪ್ರವಾದಿ ಮೊಹಮ್ಮದ್ ಅವರನ್ನು ಅವಹೇಳನ ಮಾಡಿದ್ದಕ್ಕಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಮಾನುಯೆಲ್ ಮಾಕ್ರೋನ್ ಅವರನ್ನು ದಾರುಲ್ ಉಲೂಂ ಬಲವಾಗಿ ಖಂಡಿಸಿದ್ದು, ಪ್ರಾನ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಇಸ್ಲಾಮ್ ರಾಷ್ಟ್ರಗಳ ಒಕ್ಕೂಟವಾದ ಓಐಸಿಗೆ ಕರೆ ನೀಡಿದೆ.


  “ಈ ವಿಚಾರದಲ್ಲಿ ಇಸ್ಲಾಮ್ ದೇಶಗಳಿಗೆ ಫ್ರಾನ್ಸ್ ವಿರುದ್ಧ ಬಲವಾದ ಕಾರ್ಯತಂತ್ರ ರೂಪಿಸುವ ಹೊಣೆಗಾರಿಕೆ ಇದೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲೂ ಇದರ ಬಗ್ಗೆ ಧ್ವನಿ ಎತ್ತಬೇಕು. ಇಸ್ಲಾಮಿಕ್ ಸಹಕಾರ ಸಂಘಟನೆ (ಓಐಸಿ), ಅರಬ್ ಲೀಗ್ ಹಾಗೂ ಇತರ ಮುಸ್ಲಿಮ್ ರಾಷ್ಟ್ರಗಳು ಫ್ರಾನ್ಸ್ ಸರ್ಕಾರದ ವಿರುದ್ಧ ಧ್ವನಿ ಎತ್ತಿ, ರಾಜತಾಂತ್ರಿಕ ಮತ್ತು ವಾಣಿಜ್ಯ ಮಟ್ಟಗಳಲ್ಲಿ ಪ್ರತಿಭಟನೆ ನಡೆಸಬೇಕು” ಎಂದು ದಾರುಲ್ ಉಲೂಮ್ ದೇವಬಂದ್​ನ ಮೌಲಾನ ಅಬ್ದುಲ್ ಖಾಸಿಂ ನೊಮಾನಿ ಹೇಳಿದ್ದಾರೆ.


  ಇದನ್ನೂ ಓದಿ: ಅಮೆರಿಕಾ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಮದ್ದೂರು ಯುವಕ ಡಾ. ವಿವೇಕ್ ಹೆಚ್ ಮೂರ್ತಿ


  ಹಾಗೆಯೇ, ನೊಮಾನಿ ಅವರು ಮುಸ್ಲಿಮ್ ಸಮುದಾಯದವರ ಪರವಾಗಿ ಧ್ವನಿ ಎತ್ತುವಂತೆ ಭಾರತ ಸರ್ಕಾರಕ್ಕೂ ಕರೆ ನೀಡಿದ್ಧಾರೆ. “ವಿವಿಧತೆಯಲ್ಲಿ ಏಕತೆಗೆ ಭಾರತ ಒಳ್ಳೆಯ ಉದಾಹರಣೆ. ಇಲ್ಲಿ ಧಾರ್ಮಿಕ ಮುಖಂಡರಿಗೆ ಗೌರವಿಸುವ ಪರಂಪರೆ ಇದೆ… ಭಾರತದ ಕೋಟ್ಯಂತರ ಮುಸ್ಲಿಮರ ಭಾವನೆಗಳನ್ನ ಪರಿಗಣಿಸಿ, ಈ ಭಾವನೆಗಳಿಗೆ ಧಕ್ಕೆ ತರುತ್ತಿರುವವರ ವಿರುದ್ಧ ಕಠಿಣ ಕಾನೂನು ರೂಪಿಸಲು ಒತ್ತಾಯಿಸಬೇಕು” ಎಂದು ಮೌಲಾನ ತಿಳಿಸಿದ್ದಾರೆ.


  ಚಾರ್ಲಿ ಹೆಬ್ಡೋ ಪತ್ರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಫ್ರಾನ್ಸ್ ಅಧ್ಯಕ್ಷರ ವಿರುದ್ಧ ಕೆಲ ಮುಸ್ಲಿಮ್ ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಆಲಿಗಡ್ ಮುಸ್ಲಿಮ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಬಾಂಗ್ಲಾದೇಶ, ಮಲೇಷ್ಯಾದಲ್ಲೂ ಪ್ರತಿಭಟನೆಗಳಾಗಿವೆ. ಮಲೇಷ್ಯಾದ ಮಾಜಿ ಪ್ರಧಾನಿ ಮಹತಿರ್ ಮೊಹಮ್ಮದ್ ಅವರು ಐತಿಹಾಸಿಕವಾಗಿ ದೌರ್ಜನ್ಯಕ್ಕೊಳಗಾಗಿರುವ ಮುಸ್ಲಿಮರಿಗೆ ಪ್ರಾನ್ಸ್ ನಾಗರಿಕರನ್ನು ಕೊಲ್ಲುವ ಹಕ್ಕು ಇದೆ. ಆದರೆ, ತಾನು ಆ ತಪ್ಪು ಮಾಡುವುದಿಲ್ಲ ಎಂದು ಹೇಳುವ ಮೂಲಕ ದೊಡ್ಡ ವಿವಾದ ಸೃಷ್ಟಿ ಮಾಡಿದ್ದಾರೆ.


  ಇದನ್ನೂ ಓದಿ: ಫ್ರಾನ್ಸ್​ನ ಚರ್ಚ್​ನಲ್ಲಿ ಮಹಿಳೆಯ ತಲೆ ಕತ್ತರಿಸಿ ಬರ್ಬರ ಹತ್ಯೆ; ಒಟ್ಟು 3 ಜನ ಸಾವು, ಹಲವರಿಗೆ ಗಾಯ

  Published by:Vijayasarthy SN
  First published: