ಪ್ರಜಾಪ್ರಭುತ್ವದ ಕರಾಳ ದಿನ; 370ವಿಧಿ ರದ್ದು ಪ್ರಸ್ತಾವನೆಗೆ ಮೆಹಬೂಬು ಮುಫ್ತಿ ಕಿಡಿ

ಮೆಹಬೂಬು ಮುಫ್ತಿ

ಮೆಹಬೂಬು ಮುಫ್ತಿ

ಗೃಹಬಂಧನದಲ್ಲಿರು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮಹಬೂಬ್​ ಮುಫ್ತಿ ಕೂಡ ಕೇಂದ್ರದ ಈ ಪ್ರಸ್ತಾವಕ್ಕೆ ಖಂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ನಿರ್ಣಯದ ಪರ  ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ

  • Share this:

ಜಮ್ಮು ಕಾಶ್ಮೀರಕ್ಕಿರುವ ವಿಶೇಷ ಸ್ಥಾನಮಾನದ ವಿಧಿ 370 ಅನ್ನು ರದ್ದುಗೊಳಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ರಾಜ್ಯಸಭೆಯಲ್ಲಿ ಪ್ರಸ್ತಾಪ ಮುಂದಿಟ್ಟಿದ್ದಾರೆ, ಇದು ಲಡಾಖ್​ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತವಾಗಿ ವಿಭಾಗಿಸುವ ಪ್ರಸ್ತಾವನೆಯನ್ನು ಕೂಡ ಒಳಗೊಂಡಿದೆ.

ಈ ಪ್ರಸ್ತಾವನೆಯನ್ನು ರಾಜ್ಯಸಭೆಯಲ್ಲಿ ಅಮಿತ್​ ಶಾ ಮಂಡಿಸುತ್ತಿದ್ದಂತೆ ವಿಪಕ್ಷಗಳು ಭಾರೀ ಖಂಡನೆ ವ್ಯಕ್ತಪಡಿಸಿ, ಸದನದಲ್ಲಿ ಕೋಲಾಹಲ ವಾತಾವರಣ ನಿರ್ಮಾಣವಾಯಿತು. ಅಮಿತ್​ ಶಾ ಪ್ರಸ್ತಾವನೆ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿಯೂ ವಿರೋಧಗಳು ವ್ಯಕ್ತವಾಗಿದೆ.

ಇನ್ನು ಗೃಹಬಂಧನದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮಹಬೂಬ್​ ಮುಫ್ತಿ ಕೂಡ ಕೇಂದ್ರದ ಈ ಪ್ರಸ್ತಾವಕ್ಕೆ ಖಂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ನಿರ್ಣಯದ ಪರ  ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ



ಜಮ್ಮು ಕಾಶ್ಮೀರಕ್ಕೆ ನೀಡಿದ ಭರವಸೆ ಈಡೇರಿಸುವಲ್ಲಿ ಭಾರತ ಸೋತಿದೆ.  ಭಾರತ ಪ್ರಜಾಪ್ರಭುತ್ವಕ್ಕೆ ಇಂದು ಕರಾಳ ದಿನ. 1947ರಲ್ಲಿ ಭಾರತದೊಂದಿಗೆ ಇರಲು ನಿರ್ಧರಿಸಿದ್ದು, ಈಗ ಜಮ್ಮು ಕಾಶ್ಮೀರಿಗರಿಗೆ ತಿರುಗೇಟು ನೀಡಿದೆ. 370ನೇ ವಿಧಿಯನ್ನು ಕಿತ್ತುಹಾಕುವ ನಿರ್ಧಾರ ಕಾನೂನು ಬಾಹಿರ ಮತ್ತು ಅಸಂವಿಧಾನಿಕ. ಇದರಿಂದ ಜಮ್ಮು ಕಾಶ್ಮೀರ ಭಾರತದ  ಆಕ್ರಮಣಕಾರಿ ಶಕ್ತಿಯಾಗಲಿದೆ.


ಈ ಕುರಿತು ಸರಣಿ ಟ್ವೀಟ್​ ಮಾಡಿರುವ ಅರುಣ್​ ಜೇಟ್ಲಿ ಹಿಂಬಾಗಿಲ ಮೂಲಕ ಅಸ್ತಿತ್ವಕ್ಕೆ ಬಂದಿದ್ದ 370ನೇ ವಿಧಿ ರದ್ದುಗೊಳಿಸುವ ಮೂಲಕ ನಡೆದಿದ್ದ ದೊಡ್ಡ ಪ್ರಮಾದವನ್ನು ನರೇಂದ್ರ ಮೋದಿ ಹಾಗೂ ಅಮಿತ್​ ಶಾ ಸರಿಪಡಿಸಿದ್ದಾರೆ ಎಂದಿದ್ದಾರೆ.



 

ಜಮ್ಮು ಕಾಶ್ಮೀರದ ಮಾಜಿ ಡಿಜಿಪಿ, ಶೇಷ್​ ಪೌಲ್​, ಗಟ್ಟಿ, ಐತಿಹಾಸಿಕ ಮತ್ತು ಅತ್ಯವಶ್ಯಕವಾಗಿದ್ದ ಬದಲಾವಣೆ ಗೌರವನ್ವಿತ ಕೇಂದ್ರ ಸಚಿವ ಅಮಿತ್​ ಶಾ ತೆಗೆದುಕೊಂಡಿದ್ದಾರೆ. ಇದು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್​ ಅಭಿವೃದ್ಧಿ ಹಾಗೂ ಹೂಡಿಕೆ ಸಾಧ್ಯವಾಗಲಿದೆ. ಈ ನಿರ್ಣಯವನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.

ಇದನ್ನು ಓದಿ: ಕಾಶ್ಮೀರಕ್ಕೆ ವಿಧಿ 35ಎ ಏಕೆ ಮುಖ್ಯ? ಇಲ್ಲಿದೆ ಮಾಹಿತಿ

ಕೇಂದ್ರದ ನಿರ್ಣಯವನ್ನು ಸ್ವಾಗತಿಸಿ ಸರಣಿ ಟ್ವೀಟ್​ ಮಾಡಿರುವ ಲೇಖಕ ಚೇತನ್​ ಭಗತ್​​, ವಿಧಿ 370 ಎಂದು ಕಾಶ್ಮೀರಿಗರಿಗೆ ಸ್ವಾತಂತ್ರವನ್ನು ನೀಡಿರಲಿಲ್ಲ. ಸ್ವಾರ್ಥ ನಾಯಕರಿಂದ ಉಗ್ರ ಸಮಾಜ ನಿರ್ಮಾಣವಾಗಿತ್ತು ಮತ್ತು ಕಾಶ್ಮೀರ ಯುವಕರ ಅವಕಾಶ ಕಸಿಯುವ ಪ್ರಯತ್ನ ವಾಗಿದೆ. ಇದಕ್ಕೆಲ್ಲಾ ಈಗ ಮುಕ್ತಿ ಪಡೆಯುವ ಸಮಯ ಎಂದು ಟ್ವೀಟ್​ ಮಾಡಿದ್ದಾರೆ.

First published: