Uddhav Thackeray: ನಮ್ಮ ಸರ್ಕಾರ ಉರುಳಿಸುವ ಧೈರ್ಯವಿದೆಯೇ? ಬಿಜೆಪಿಗೆ ಉದ್ಧವ್ ಠಾಕ್ರೆ ಸವಾಲು

ಬಿಜೆಪಿ ಪಕ್ಷದೊಂದಿಗೆ ಸಂಬಂಧವನ್ನು ಮುರಿದುಕೊಂಡಿರುವ ಕಾರಣ ಮಹಾರಾಷ್ಟ್ರ ಮತ್ತು ಅಲ್ಲಿನ ಶಿವ ಸೇನೆ ಪಕ್ಷವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು.

ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ

ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ

  • Share this:

ಕಳೆದ ತಿಂಗಳು ಕಂದಾಯ ಗುಪ್ತಚರ ನಿರ್ದೇಶನಾಲಯವು (DRI) ಗುಜರಾತ್‍(Gujarat)ನ ಕಚ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿ ಎರಡು ಕಂಟೇನರ್‍ಗಳಿಂದ ರೂ 15,000 ಕೋಟಿ ಮೌಲ್ಯದ 2,988.21 ಕೆಜಿ ಹೆರಾಯಿನ್(Heroin) ಅನ್ನು ವಶಪಡಿಸಿಕೊಂಡಿದೆ ಮತ್ತು ಈ ಸಂಬಂಧ ದಂಪತಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣವನ್ನು ನಿದರ್ಶನವಾಗಿ ಇರಿಸಿಕೊಂಡ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ(Maharashtra Chief Minister Uddhav Thackeray) ಅವರು ದಸರಾ ಹಬ್ಬದ ನಿಮಿತ್ತ ಕೈಗೊಂಡ ರ್ಯಾಲಿಯಲ್ಲಿ(Dussehra rally speech) ಬಿಜೆಪಿಗೆ(BJP) ಸವಾಲು ಎಸೆದಿದ್ದಾರೆ. ನಮ್ಮ ಸರ್ಕಾರವನ್ನು ಉರುಳಿಸುವ ಧೈರ್ಯ ಇದೆಯಾ? ಎಂದು ಕೇಳಿದ್ದಾರೆ.


ಡ್ರಗ್ಸ್ ದಂಧೆ ಮಹಾರಾಷ್ಟ್ರದಲ್ಲಿ ಮಾತ್ರ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಮುಂದ್ರಾ ಬಂದರಿನಲ್ಲಿ ಕೋಟ್ಯಾಂತರ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದೀರಿ. ನಿಮ್ಮ ಎನ್‍ಸಿಬಿ ಏಜೆನ್ಸಿ ಚಿಟಿಕೆಯಷ್ಟು ಗಾಂಜಾವನ್ನು ವಶಪಡಿಸಿಕೊಂಡರೆ, ನಮ್ಮ ಪೊಲೀಸರು 150 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನೀವು ಸೆಲೆಬ್ರೆಟಿಗಳನ್ನು ಸೆರೆಹಿಡಿಯಲು ಅವರ ಭಾವಚಿತ್ರಗಳನ್ನು ಕ್ಲಿಕ್ಕಿಸುವಲ್ಲಿಯೇ ಬ್ಯುಸಿಯಾಗಿದ್ದೀರಿ ಎಂದು ವ್ಯಂಗ್ಯವಾಡಿದರು.


ವಿದೇಶದಲ್ಲಿ ಕೆಲವು ವ್ಯಕ್ತಿಗಳು ಅಂತರಾಷ್ಟ್ರೀಯ ಡ್ರಗ್ ನೆಟ್‍ವರ್ಕ್‍ನ ಭಾಗವಾಗಿರುವಂತೆ ಮತ್ತು ಔಷಧಗಳ ಅಕ್ರಮ ಸಂಗ್ರಹಣೆಗಾಗಿ ಸಂಪರ್ಕ ಸಾಧಿಸಿರುವಂತೆ ತೋರುತ್ತಿದ್ದಾರೆ ಎಂದು ಹೇಳಿದರು.


ಬಿಜೆಪಿ ವಿರುದ್ಧ ವಾಗ್ದಾಳಿ

ಬಿಜೆಪಿ ಪಕ್ಷದೊಂದಿಗೆ ಸಂಬಂಧವನ್ನು ಮುರಿದುಕೊಂಡಿರುವ ಕಾರಣ ಮಹಾರಾಷ್ಟ್ರ ಮತ್ತು ಅಲ್ಲಿನ ಶಿವ ಸೇನೆ ಪಕ್ಷವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು.


ಇಡಿಯನ್ನು ಸ್ವಾರ್ಥಕ್ಕೆ ಬಳಸಬೇಡಿ

ನಾವು ಯಾವಾಗ ಬಿಜೆಪಿ ಪಕ್ಷವನ್ನು ಅನುಸರಿಸುತ್ತೇವೆಯೋ ಅಲ್ಲಿಯವರೆಗೆ ನಾವು ಒಳ್ಳೆಯವರಾಗಿರುತ್ತೇವೆ. ಜಾರಿ ನಿರ್ದೇಶನಾಲಯವನ್ನು ನಿಮ್ಮ ಸ್ವಾರ್ಥಕ್ಕೆ ಬಳಸಬೇಡಿ, ನೇರವಾಗಿ ನಮ್ಮನ್ನು ಎದುರಿಸಿ, ನಮ್ಮ ಪಕ್ಷವನ್ನು ಎಷ್ಟೇ ಉರುಳಿಸಲು ಪ್ರಯತ್ನಿಸಿದರೂ ಅದರ ನಡುವೆಯೇ ಮುಂದಿನ ತಿಂಗಳಿಗೆ ನಮ್ಮ ಸರ್ಕಾರ ಎರಡು ವರ್ಷ ಪೂರೈಸುತ್ತಿದೆ. ಬಿಜೆಪಿಯನ್ನು ಉರುಳಿಸಲು ನನಗೆ ಧೈರ್ಯವಿದೆ ಎಂದು ಹೇಳಿದರು.


ಬಿಜೆಪಿ ಮಹಾರಾಷ್ಟ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ

ಬಿಜೆಪಿಯು ಮಹಾರಾಷ್ಟ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, "ಅವರು ಮುಂಬೈ ಪೊಲೀಸ್ ಮಾಫಿಯಾ ಎಂದು ಕರೆಯುತ್ತಾರೆ, ನೀವು ಯುಪಿ ಪೊಲೀಸ್ ಅನ್ನು ಏನು ಕರೆಯುತ್ತೀರಿ?" ಎಂದು ಪ್ರಶ್ನಿಸಿದರು.


ಅಧಿಕಾರಕ್ಕಾಗಿ ಹೋರಾಟ ಒಳ್ಳೆಯದಲ್ಲ

ಎಲ್ಲಾ ಭಾರತೀಯರ ಪೂರ್ವಜರು ಒಂದೇ ಎಂದು ಆರ್​​ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಠಾಕ್ರೆ ಅವರು, "ವಿರೋಧ ಪಕ್ಷಗಳ ಪೂರ್ವಜರು ಮತ್ತು ರೈತರು ಅನ್ಯ ಗ್ರಹದಿಂದ ಬಂದಿದ್ದಾರೆಯೇ? ಅಧಿಕಾರಕ್ಕಾಗಿ ಹೋರಾಟ ಒಳ್ಳೆಯದಲ್ಲ. ಅಧಿಕಾರದ ಚಟವು ಮಾದಕ ವ್ಯಸನದಂತೆ. ಮಾದಕ ವ್ಯಸನದಲ್ಲಿ, ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ನಾಶಮಾಡುತ್ತೀರಿ. ಆದರೆ ಅಧಿಕಾರದ ಹಸಿವು ಇತರೆ ಕುಟುಂಬಗಳನ್ನು ನಾಶಪಡಿಸುತ್ತದೆ "ಎಂದು ಅವರು ಹೇಳಿದರು.


ಶಿವಸೇನೆ ಕಾರ್ಯಕರ್ತರು ಮತ್ತು ಮಹಾರಾಷ್ಟ್ರದ ಜನರು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವನ್ನು ಉದಾಹರಣೆಯಾಗಿ ತೆಗೆದುಕೊಂಡು ಅದರ ನಿಲುವನ್ನು ಅನುಕರಿಸಬೇಕು, ಏಕೆಂದರೆ ಅದು ಬಿಜೆಪಿಗೆ ವಿರುದ್ಧವಾಗಿ ಎದ್ದು ನಿಲ್ಲುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

Published by:Latha CG
First published: