EXCLUSIVE: ಎಕ್ಸ್​ರೇ ಹೇಳುತ್ತಿದೆ ಭಯಾನಕ ಕತೆ; ಛಾಯಾಗ್ರಾಹಕ ದಾನಿಶ್​ ಸಿದ್ದಿಕಿ ಮೇಲೆ ಎಸ್​ಯುವಿ ಹತ್ತಿಸಿದ್ದ ಉಗ್ರರು

ದಾನಿಶ್​ ಸಾಯಿಸಿದ ಛಾಯಾಚಿತ್ರಗಳು ಎಲ್ಲಡೆ ಹರಿದಾಡಿ  ಭಾರತೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿ ಸಾಕಷ್ಟು ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು. ತಾಲಿಬಾನ್ ಉಗ್ರರಿಗೆ ಆಗ ನಾವು ಕೊಂದಿರುವುದು ಹಿರಿಯ ರಾಯಿಟರ್ಸ್ ಪತ್ರಕರ್ತನನ್ನು ಎಂದು ಅರಿವಾಗಿದೆ. ನಂತರ, ಹತಾಶೆಯಲ್ಲಿ, ಭಾರವಾದ ಎಸ್​ಯುವಿ ತೆಗೆದುಕೊಂಡು ಆತನ ತಲೆ ಮತ್ತು ಎದೆಯ ಮೇಲೆ ಹತ್ತಿಸಿದ್ದಾರೆ.

ಫೋಟೋ ಜರ್ನಲಿಸ್ಟ್ ದಾನಿಶ್​ ಸಿದ್ದಿಕಿ

ಫೋಟೋ ಜರ್ನಲಿಸ್ಟ್ ದಾನಿಶ್​ ಸಿದ್ದಿಕಿ

 • Share this:
  ಸುದ್ದಿ ಸಂಸ್ಥೆ ರಾಯಿಟರ್ಸ್‌ನ ಮುಖ್ಯ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದ ಭಾರತೀಯ ಪತ್ರಕರ್ತ ಡ್ಯಾನಿಶ್ ಸಿದ್ದಿಕಿ ಅವರ ಕ್ರೂರ ಹತ್ಯೆಯಾಗಿ ಎರಡು ವಾರಗಳ ಕಳೆದಿದ್ದು, ಸಿಎನ್ಎನ್-ನ್ಯೂಸ್ 18 ಮೊದಲ ಬಾರಿಗೆ ವಿವರವಾದ ವೈದ್ಯಕೀಯ ವರದಿಯನ್ನು ಛಾಯಾಚಿತ್ರಗಳು ಮತ್ತು ಅವರ ಸಾವಿನ ಎಕ್ಸ್-ರೇಗೆ ಮೂಲಕ ವರದಿ ಮಾಡಿದೆ.  ದಾನಿಶ್​​ ಸಿದ್ದಿಕಿಯನ್ನು ಕ್ರೂರವಾಗಿ ಹಿಂಸಿಸಿ ಸಾಯಿಸಲಾಗಿದೆ ಎಂದು ವರದಿ ಹೇಳಿದೆ.

  ಸಿದ್ದಿಕಿಯನ್ನು ಬರ್ಬರವಾಗಿ ಕೊಂದ ನಂತರವೂ, ದೇಹವನ್ನು ನಿರ್ದಯವಾಗಿ ಎಳೆದಾಡಲಾಯಿತು ಹಾಗೂ ಆದರೆ ಭಾರೀ ವಾಹನವನ್ನು ಮೃತ ದೇಹದ ಮೇಲೆ ಹತ್ತಿಸಿ ವಿರೂಪಗೊಳಿಸಲಾಯಿತು. ಕೊಲೆ ನಡೆದ ದಿನದ ಘಟನೆಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಭಯಾನಕ ವಿವರಗಳನ್ನು ಸಿಎನ್ಎನ್-ನ್ಯೂಸ್ 18 ನ Contributing Editor ಆದಿತ್ಯ ರಾಜ್ ಕೌಲ್ ಅವರು, ಅಫ್ಘಾನ್ ಮತ್ತು ಭಾರತೀಯ ರಾಷ್ಟ್ರೀಯ ಭದ್ರತಾ ಸಂಸ್ಥೆ, ಹಾಗೂ ಅನೇಕ ಮೂಲಗಳಿಂದ ವಿವರ ಕಲೆಹಾಕಿ ಇಲ್ಲಿ ಹಂಚಿಕೊಳ್ಳಲಾಗಿದೆ.


  "12 ಗುಂಡುಗಳು ಡ್ಯಾನಿಶ್ ದೇಹವನ್ನು ಹೊಕ್ಕಿರುವುದಾಗಿ ಹೇಳಲಾಗಿದೆ. ದೇಹದಲ್ಲಿ ಆಗಿರುವ ಗಾಯದ ಗುರುತುಗಳ್ನು ನೋಡಿದಾಗ ಇದು ಕಂಡು ಬಂದಿತು, ಅಲ್ಲದೇ ದೇಹದೊಳಗೆ ಹಲವಾರು ಗುಂಡುಗಳು ಕಂಡುಬಂದವು. ಮುಂಡ ಮತ್ತು ದೇಹದ ಹಿಂಭಾಗದಿಂದ ಗುಂಡು ಹೊಡೆಯಲಾಗಿದೆ, ”ಎಂದು ಅಫಘಾನ್ ಗುಪ್ತಚರ ಮೂಲಗಳು CNN-News18 ಗೆ ತಿಳಿಸಿವೆ.

  "ದೇಹದ ಮೇಲೆ ಎಳೆದಾಡಿದ ಗುರುತುಗಳು ಸಹ ಕಂಡುಬಂದಿವೆ. ತಾಲಿಬಾನ್ ಭಯೋತ್ಪಾದಕರು ಸಿದ್ದಿಕಿಯನ್ನು ಹತ್ಯೆ ಮಾಡಿದ ನಂತರ ಶವವನ್ನು ಎಳೆದಾಡಿದ್ದಾರೆ ಎಂದು ಊಹಿಸಲಾಗಿದೆ. ಹತ್ಯೆಯ ನಂತರ ಭಾರೀ ವಾಹನದಿಂದ ಡ್ಯಾನಿಶ್‌ನ ತಲೆ ಮತ್ತು ಎದೆಯ ಭಾಗವನ್ನು ಹಲವು ಬಾರಿ ನಜ್ಜುಗುಜ್ಜು ಮಾಡಲಾಗಿದೆ. ಮುಖ ಮತ್ತು ಎದೆಯ ಮೇಲೆ ಟೈರ್ ಗುರುತುಗಳು ಹೆಚ್ಚಾಗಿ ಗೋಚರಿಸುತ್ತವೆ. ಹಮ್ವೀ ಅಥವಾ  ಭಾರವಾದ ಎಸ್‌ಯುವಿಯನ್ನು ಬಳಸಿ ದೇಹವನ್ನು ವಿರೂಪಗೊಳಿಸಲಾಗಿದೆ ಎಂದು ಅಫಘಾನ್ ಗುಪ್ತಚರ ಮೂಲಗಳು ತಿಳಿಸಿವೆ.

  ಎಕ್ಸ್-ರೇ ಮೂಲಕ ಭಯಾನಕ ಚಿತ್ರಣ ಬಯಲಿಗೆ 

  ಸಿಎನ್ಎನ್-ನ್ಯೂಸ್ 18 ಅಫಘಾನ್ ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ಭಾರತೀಯ ರಾಷ್ಟ್ರೀಯ ಭದ್ರತಾ ಮೂಲಗಳೊಂದಿಗೆ ಮಾತನಾಡಿದಾಗ, ತಿಳಿದು ಬಂದ ವಿಚಾರ ಏನೆಂದರೇ ಉಗ್ರರು ಡ್ಯಾನಿಶ್ ಸಿದ್ದಿಕಿ ಹತ್ಯೆ ಮತ್ತು ಚಿತ್ರಹಿಂಸೆ ನೀಡಿಯೇ ಸಾಯಿಸಿದ್ದಾರೆ. ಅಲ್ಲದೇ ಎಕ್ಸ್​ರೇಯನ್ನು ಗಮನಿಸಿದರೆ ಸಾಕಷ್ಟು ಮೂಳೆಗಳು ಪುಡಿಯಾಗಿರುವುದು ಕಂಡು ಬರುತ್ತದೆ ಎಂದು ಹೇಳಲಾಗಿದೆ.

  ದಾನಿಶ್​ ಸಿದ್ದಿಕಿ ಅವರ ಎಕ್ಸ್​ರೇ


  ಸಿದ್ದಿಕಿ ಅಫ್ಘಾನ್ ರಾಷ್ಟ್ರೀಯ ಸೇನಾ ತಂಡದೊಂದಿಗೆ ಸ್ಪಿನ್ ಬೋಲ್ಡಾಕ್ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಪಾಕಿಸ್ತಾನದೊಂದಿಗೆ ಹಂಚಿಕೊಂಡಿರುವ  ಗಡಿ ದಾಟುವಿಕೆಯನ್ನು ನಿಯಂತ್ರಿಸಲು ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ನಡುವಿನ ಹೋರಾಟವನ್ನು ಇದೇ ವೇಳೆ ಸಿದ್ದಿಕಿ ಸೆರೆ ಹಿಡಿಯಲು ಜಾಗಕ್ಕೆ ತೆರಳಿದ್ದರು. ಗಡಿ ಪ್ರದೇಶ ಇನ್ನೇನು ಹತ್ತಿರದಲ್ಲೇ ಇದೆ ಎನ್ನುವಾಗ ದಾಳಿ ನಡೆಸಿದ್ದ ತಾಲಿಬಾನ್​ ಉಗ್ರರು ಮಿಲಿಟರಿ ಪಡೆಯನ್ನು ವಿಭಜಿಸಿತು, ಕಮಾಂಡರ್ ಮತ್ತು ಕೆಲವು ಇತರ ವ್ಯಕ್ತಿಗಳು ಸಿದ್ದಿಕಿಯಿಂದ ಬೇರ್ಪಟ್ಟರು, ತದ ನಂತರ ಅವರು ಇತರ ಮೂರು ಅಫ್ಘಾನ್ ಪಡೆಗಳೊಂದಿಗೆ ಉಳಿದುಕೊಂಡರು.

  ಈ ದಾಳಿಯ ಸಮಯದಲ್ಲಿ, ಗುಂಡುಗಳು ಸಿದ್ದಿಕಿ ಅವರಿಗೆ ತಗುಲಿದವು, ಇದರಿಂದ ಗಾಯಗೊಂಡ ಅವರು ಮತ್ತು ಅವರ ತಂಡವು ಸ್ಥಳೀಯ ಮಸೀದಿಗೆ ಹೊಕ್ಕರು, ಅಲ್ಲಿ ಅವರು ಪ್ರಥಮ ಚಿಕಿತ್ಸೆ ಪಡೆದರು. ಆದರೆ ಒಬ್ಬ ಪತ್ರಕರ್ತ ಮಸೀದಿಯಲ್ಲಿದ್ದನೆಂಬ ಸುದ್ದಿ ಹರಡುತ್ತಿದ್ದಂತೆ, ತಾಲಿಬಾನ್ ದಾಳಿ ಅಲ್ಲಿಗೂ ಮಾಡಿತು.

  ತಾಲಿಬಾನ್‌ ರೆಡ್​ ಯುನಿಟ್​ ಮಸೀದಿಯಲ್ಲಿ ಅಡಗಿದ್ದ ಸೇನಾ ಘಟಕವನ್ನು ಬೆನ್ನಟ್ಟಿತು ಮತ್ತು ಅಫಘಾನ್ ಸೇನಾ ಸಿಬ್ಬಂದಿಯನ್ನು ಕೊಲ್ಲಲು ಆರಂಭಿಸಿತು. ತಾನು ಛಾಯಾಗ್ರಾಹಕನಾಗಿ ಕೆಲಸ ಮಾಡುವ ಅಂತಾರಾಷ್ಟ್ರೀಯ ಪತ್ರಕರ್ತ ಎಂದು ದಾನಿಶ್​ ಇದೆ ವೇಳೆ ಕಿರುಚಿದ್ದಾರೆ. ನಂತರ ಆತ ತನ್ನ ಗುರುತಿನ ಚೀಟಿಯನ್ನು ತೋರಿಸಿದ್ದಾರೆ, ತಾನು ಅಫ್ಘಾನಿಸ್ತಾನದಲ್ಲಿ ಒಬ್ಬ ಭಾರತೀಯ ಪತ್ರಕರ್ತ ಎಂದು ಹೇಳಿಕೊಂಡ ನಂತರ. ತಾಲಿಬಾನ್ ಆತನ ಗುರುತಿನ ಚೀಟಿಗಳನ್ನು ಫೋಟೋಗಳನ್ನು ಮುಂದಿನ ಸೂಚನೆ ಬರುವ ತನಕ ಹೆಚ್ಚಿನ  ಮಾಹಿತಿಗೆ ಕ್ವೆಟ್ಟಾದಲ್ಲಿರುವ ಪ್ರಧಾನ ಕಚೇರಿಗೆ ಕಳುಹಿಸಿದ್ದಾರೆ.

  ತಾಲಿಬಾನ್ ಉಗ್ರರು ದಾನಿಶ್​ ಮಾಡಿರುವ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳನ್ನು ಪರಿಶೀಲಿಸಿದ್ದಾರೆ ಮತ್ತು ಅವರ ಟ್ವಿಟರ್ ಅನ್ನು ಸ್ಕ್ಯಾನ್ ಮಾಡಿದೆ. ತಾಲಿಬಾನ್ ವಿರುದ್ಧ ಹೆಚ್ಚು ವರದಿ ಮಾಡಿದ್ದಾರೆ ಎಂದು ತಾಲಿಬಾನ್​ ಮುಖ್ಯ ಕಚೇರಿಯಿಂದ ವರದಿ ಬಂದಿದೆ, ಅವನನ್ನು ಸಾಯಿಸಿ ಎಂದು ಹೇಳಿದ ನಂತರ ದಾನಿಶ್​ ತೊಟ್ಟಿದ್ದ ಬುಲೆಟ್​ ಪ್ರೂಫ್​ ಜಾಕೆಟ್​ ಬಿಚ್ಚಿಸಿ ಮಸೀದಿಯಿಂದ ಹೊರಗೆ ಎಳೆದುಕೊಂಡು ಬಂದಿದ್ದಾರೆ ಹಾಗೂ 12 ಗುಂಡು ಹಾರಿಸಿ ಹತ್ಯೆ ಮಾಡಿ, ಆ ಫೋಟೋವನ್ನು ಎಲ್ಲೆಡೆ ಹಂಚಿದ್ದಾರೆ.

  ದಾನಿಶ್​ ಸಾಯಿಸಿದ ಛಾಯಾಚಿತ್ರಗಳು ಎಲ್ಲಡೆ ಹರಿದಾಡಿ  ಭಾರತೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿ ಸಾಕಷ್ಟು ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು. ತಾಲಿಬಾನ್ ಉಗ್ರರಿಗೆ ಆಗ ನಾವು ಕೊಂದಿರುವುದು ಹಿರಿಯ ರಾಯಿಟರ್ಸ್ ಪತ್ರಕರ್ತನನ್ನು ಎಂದು ಅರಿವಾಗಿದೆ. ನಂತರ, ಹತಾಶೆಯಲ್ಲಿ, ಭಾರವಾದ ಎಸ್​ಯುವಿ ತೆಗೆದುಕೊಂಡು ಆತನ ತಲೆ ಮತ್ತು ಎದೆಯ ಮೇಲೆ ಹತ್ತಿಸಿದ್ದಾರೆ.


  ಇದನ್ನೂ ಓದಿ: ಪೊಲೀಸರ ವಶದಲ್ಲಿದ್ದಆಫ್ರಿಕನ್​ ಪ್ರಜೆ ಸಾವು; ಜೆಸಿ ನಗರ ಠಾಣೆ ಎದುರು ಘರ್ಷಣೆ, ವಿದೇಶಿಗರ ಬಂಧನ

  ಅಫಘಾನ್ ಗುಪ್ತಚರ ಸಂಸ್ಥೆಗಳು ಈ ವಿವರಗಳ ಬಗ್ಗೆ ತಮ್ಮ ಭಾರತೀಯ ಅಧಿಕಾರಿಗಳಿಗೆ ವಿವರವಾಗಿ ಮಾಹಿತಿ ನೀಡಿವೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: