• Home
 • »
 • News
 • »
 • national-international
 • »
 • ಭಾರತದ ವ್ಯವಸ್ಥೆ ಅಪಾಯದ ಹಂತ ಮುಟ್ಟಿದೆ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ

ಭಾರತದ ವ್ಯವಸ್ಥೆ ಅಪಾಯದ ಹಂತ ಮುಟ್ಟಿದೆ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ

ಮಾಜಿ ಉಪರಾಷ್ಟ್ರಪತಿ ಹಮೀದ್​ ಅನ್ಸಾರಿ

ಮಾಜಿ ಉಪರಾಷ್ಟ್ರಪತಿ ಹಮೀದ್​ ಅನ್ಸಾರಿ

"ನಾವು ಕಷ್ಟದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ನಾನು ಅದರ ವಿವರಗಳನ್ನು ನೀಡಬೇಕಾಗಿಲ್ಲ, ಆದರೆ ಭಾರತದ ಸಾಂವಿಧಾನಿಕ ಸಂಸ್ಥೆಗಳು ದೊಡ್ಡ ಅಪಾಯವನ್ನು ಎದುರಿಸುತ್ತಿವೆ ಎಂಬುದು ಸತ್ಯ ”ಎಂದು ಅನ್ಸಾರಿ ಹೇಳಿದ್ದಾರೆ

 • Share this:

  ನವದೆಹಲಿ: ಸಂವಿಧಾನದ ಮುನ್ನುಡಿಯನ್ನು ಯಾವ ಆಧಾರದ ಮೇಲೆ ರಚಿಸಲಾಗಿದೆ ಅದೇ ಈಗ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಅನ್ಸಾರಿ ಹೇಳಿದ್ದಾರೆ.


  ಭಾರತದಲ್ಲಿ "ಅತ್ಯಂತ ಅಪಾಯಕಾರಿ" ಕೆಲಸಗಳು ನಡೆಯುತ್ತಿವೆ ಎಂದು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿದ್ದಾರೆ. ಮಂಗಳವಾರ ಮಾತನಾಡಿದ ಅವರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ "ದೊಡ್ಡ ಅಪಾಯದಲ್ಲಿದೆ" ಮತ್ತು ಸಂವಿಧಾನದ ಮುನ್ನುಡಿಯನ್ನು ಸಿದ್ಧಪಡಿಸಿದ ತತ್ವಗಳನ್ನು ಕಡೆಗಣಿಸಲಾಗಿದೆ ಎಂದು ಹೇಳಿದರು.


  ಜನರು "ಕಷ್ಟವನ್ನು ಅನುಭವಿಸುತ್ತಿದ್ದಾರೆ ಮತ್ತು ಇದು ಬದಲಾಗುವುದು ಮುಖ್ಯವಾಗಿದೆ ಏಕೆಂದರೆ ಇದು ಹೀಗೆಯೇ ಮುಂದುವರಿದರೆ, ಮುಂದೆ ಬಹಳ ತೊಂದರೆಯನ್ನು ಅನುಭವಿಸಬೇಕಾಗುತ್ತದೆ" ಎಂದು ಅನ್ಸಾರಿ ಹೇಳಿದರು.


  ಸಂವಿಧಾನದ ಮುನ್ನುಡಿಯನ್ನು ಯಾವ ಆಧಾರದ ಮೇಲೆ ರಚಿಸಲಾಗಿದೆ ಆ ತತ್ವಗಳನ್ನು ಗಾಳಿಗೆ ತೂರಲಾಗಿದೆ ಎಂದು ಅವರು ಹೇಳಿದರು.


  "ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದ ವಿವಿದಾರ್ಥಗಳಿವೆ, ಆದ್ದರಿಂದ ಹೆಚ್ಚಿನ ನಾಗರಿಕರು ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಇದು ಬಹಳ ಅಪಾಯಕಾರಿ. ಈ ದೇಶದ ನಾಗರಿಕರಾದ ನಮಗೆ ಇದು ತೊಂದರೆಯಾಗುತ್ತದೆ" ಎಂದು ಅವರು ಹೇಳಿದರು.


  ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತಿಬ್ಬರಿಗೆ ಕೊರೋನಾ ವೈರಸ್ ಪತ್ತೆ; ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆ


  ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಮತ್ತು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಸಮ್ಮುಖದಲ್ಲಿ ಭಲ್ಚಂದ್ರ ಮುಂಗೇಕರ್ ಅವರ "ಮೈ ಎನ್ ಕೌಂಟರ್ ಇನ್ ಪಾರ್ಲಿಮೆಂಟ್" ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಈ ಮಾತುಗಳನ್ನಾಡಿದ್ದಾರೆ.


  ಇದನ್ನೂ ಓದಿ: ಸ್ಯಾನಿಟೈಸರ್​, ಥರ್ಮಲ್​ ಸ್ಕ್ರೀನಿಂಗ್​ ಬೇಡ; ಕೊರೋನಾ ಭೀತಿ ನಡುವೆಯೂ ಶಾಸ್ತ್ರಕ್ಕೆ ಪ್ರಾಮುಖ್ಯತೆ ನೀಡಿದ ರೇವಣ್ಣ


  ದೇಶದ ಪರಿಸ್ಥಿತಿಯನ್ನು ವಿದೇಶದಲ್ಲಿರುವ ತನ್ನ ಸ್ನೇಹಿತರು ಹೆಚ್ಚಿನ ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ ಆದರೆ ದೇಶದ "ಶತ್ರುಗಳಿಗೆ ಸಂತೋಷವಾಗಿದೆ" ಎಂದು ಅನ್ಸಾರಿ ವ್ಯಂಗ್ಯವಾಡಿದ್ದಾರೆ.


  ಆದರೆ ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ ಡಾ. ಮುಂಗೇಕರ್ ಅವರ ಮಾತುಗಳು ನಮಗೆ ಎಚ್ಚರಿಕೆಯ ಕರೆ ಗಂಟೆ ಮತ್ತು ನಮ್ಮನ್ನು ದಾರಿ ತಪ್ಪಿಸಲಾಗುತತ್ತಿದೆ ಎಂದು ಅರಿಯಳು ಸರಿಯಾದ ಸಮಯ ಎಂದು ನಾನು ಪರಿಗಣಿಸುತ್ತೇನೆ. ಅಲ್ಲದೆ ಈ ರೀತಿಯ ಕೆಲಸಗಳು ಮುಂದುವರಿದರೆ ಜನರಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚು ಎಂದು ಅವರು ಹೇಳಿದ್ದಾರೆ.


  ಇದನ್ನೂ ಓದಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆ; 1,200 ಜನರಿಗೆ ಗೃಹಬಂಧನ


  ಮಾಜಿ ಉಪರಾಷ್ಟ್ರಪತಿ ಅಮಿಡ್ ಅನ್ಸಾರಿಯವರ ಮಾತುಗಳನ್ನು ಕೇಳಿದರೆ ಸಿಎಎ ಮತ್ತು ಎನ್ ಆರ್ ಸಿ ಕಾಯ್ದೆಯ ಬಗ್ಗೆ ಮಾತನಾಡಿರಬಹುದು ಎಂದೆನಿಸುತ್ತದೆ.


  ಅಲ್ಲದೆ ಕೆಲ ತಿಂಗಳ ಹಿಂದೆ ಭಾರತದ ಗುಪ್ತ ಮಾಹಿತಿಗಳನ್ನು ವಿದೇಶಗಳಿಗೆ ನೀಡುತ್ತಿದ್ದರು ಎಂಬ ಆರೋಪವನ್ನು ಸಹ ಇವರು ಎದುರಿಸಿದ್ದರು.


  (ವರದಿ: ಸಂಧ್ಯಾ ಎಂ)

  Published by:Sharath Sharma Kalagaru
  First published: