ಭೋಪಾಲ್: ಜಲಚರಗಳಲ್ಲಿ ವಿಚಿತ್ರವಾದ ಸಂಗತಿಗಳು ಅವಾಗವಾಗ ಕಂಡುಬರುತ್ತವೆ. ಅದರಲ್ಲೂ ನಮ್ಮ ದೇಶದಲ್ಲಿ ಜಲಚರಗಳು ಮಾನವರಿಗೆ ಹಾನಿ ಮಾಡುವುದು ಅಪರೂಪ. ಆದರೆ ಮನುಷ್ಯರ ಮೇಲೂ ದಾಳಿ ಮಾಡುವಂತಹ ಮೀನೊಂದು (Fish) ಇದೀಗ ಮಧ್ಯಪ್ರದೇಶದ (Madhya Pradesh) ರಾಜಧಾನಿ ಭೋಪಾಲ್‌ನ (Bhopal) ದೊಡ್ಡ ಕೊಳದಲ್ಲಿ ಪತ್ತೆಯಾಗಿದೆ. ಇಂತಹ ಮೀನುಗಳು ಹೆಚ್ಚಾಗಿ ಅಮೆರಿಕಾದಲ್ಲಿ (America) ಕಂಡು ಬರುತ್ತವೆ, ಆದರೆ ಇದೀಗ ಭಾರತದಲ್ಲಿ (India) ಕಂಡುಬಂದಿರುವುದು ಅಚ್ಚರಿಯನ್ನುಂಟು ಮಾಡಿದೆ. ಈ ಮೀನಿನ ತಲೆ ಭಾಗ ಮೊಸಳೆಯಂತಿದ್ದರೆ, ಶರೀರ ಹಾವಿನ ಮಾದರಿಯಲ್ಲಿದೆ. ಇದನ್ನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 19 ರ ಬುಧವಾರ, ಕೊಳಕ್ಕೆ ಹೋಗಿದ್ದ ವ್ಯಕ್ತಿಯೊಬ್ಬರಿಗೆ ಈ ವಿಚಿತ್ರ ಮೀನು ಕಂಡಿದ್ದು, ಅವರು ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಮೀನುಗಾರಿಕಾ ಅಧಿಕಾರಿಗಳನ್ನು ಸಂಪರ್ಕಿಸಿ ಭೋಪಾಲ್ ಕೊಳದಲ್ಲಿ ಪತ್ತೆಯಾದ ಮೀನಿನ ಹೆಸರು ಅಲಿಗೇಟರ್ ಗಾರ್ ಫಿಶ್ ಎಂದು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: Fish: ಮೀನು ತಿಂದು ಮಹಿಳೆ ಸಾವು, ಕೋಮಾಕ್ಕೆ ಜಾರಿದ ಗಂಡ! ಫಿಶ್ ಪ್ರಿಯರೇ ಎಚ್ಚರ
ಕೊಳದ ಪರಿಸರ ವ್ಯವಸ್ಥೆ ನಾಶಪಡಿಸುವ ಮೀನು
ಈ ಮೊಸಳೆ ಮತ್ತು ಮೀನಿನ ಆಕಾರವನ್ನು ಹೋಲುವ ಈ ರೀತಿಯ ಮೀನುಗಳು ಅಮೆರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಮೀನು ಭೋಪಾಲ್ ದೊಡ್ಡ ಕೊಳಕ್ಕೆ ಹೇಗೆ ಬಂತು ಎಂದು ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದಾರೆ. ಈ ಮೀನು ದೊಡ್ಡ ಕೊಳದ ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತದೆ ಎಂದು ತಜ್ಞರು ಭೀತಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಈ ಮೀನು ಮನುಷ್ಯರ ಮೇಲೆ ದಾಳಿ ಮಾಡಲು ಹಿಂಜರಿಯುವುದಿಲ್ಲ ಎನ್ನಲಾಗಿದೆ.
ಅರಣ್ಯ ಇಲಾಖೆ ತಂಡ ನಾನಾ ರೀತಿಯಲ್ಲಿ ಈ ಮೀನಿನ ಮಾಹಿತಿ ಸಂಗ್ರಹಿಸುತ್ತಿದೆ. ಈ ಮೀನು ಹಿಡಿದಿರುವುದಾಗಿ ಹೇಳಿಕೊಂಡವರ ಪರವಾನಿಗೆಯನ್ನು ಜಿಲ್ಲಾಡಳಿತ ಪರಿಶೀಲಿಸುತ್ತಿದೆ. ಈ ಮೀನಿನ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಾನವರ ಮೇಲೆ ದಾಳಿ ಮಾಡಬಲ್ಲ ಅಲಿಗೇಟರ್
ಈ ಅಲಿಗೇಟರ್ ಗಾರ್ ಫಿಶ್ ಮನುಷ್ಯರಿಗೆ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ದೊಡ್ಡ ಹೊಂಡದಲ್ಲಿ ಸಿಗುವ ಮೀನಿನ ಉದ್ದ ಸುಮಾರು ಒಂದೂವರೆ ಅಡಿ ಇರುತ್ತದೆ. ಆದರೆ ಹೊಸದಾಗಿ ಪತ್ತೆಯಾದ ಅಲಿಗೇಟರ್ ಗಾರ್ ಫಿಶ್ 12 ಅಡಿ ಉದ್ದವಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಇಂತಹ ಮೀನು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಂಸಾಹಾರಿ ಗುಣಲಕ್ಷಣಗಳನ್ನು ಹೊಂದಿರುವ ಈ ಅಲಿಗೇಟರ್ ಗಾರ್ ಫಿಶ್ ಹೆಚ್ಚಾಗಿ ಉತ್ತರ ಅಮೆರಿಕಾದಲ್ಲಿ ಕಂಡುಬರುತ್ತದೆ. ಭೋಪಾಲ್ ದೊಡ್ಡ ಕೊಳದೊಳಗೆ ಹೇಗೆ ಬಂದಿತು? ಇದೊಂದೇ ಇದೆಯೇ ಅಥವಾ ಇನ್ನೂ ಹೆಚ್ಚು ಮೀನುಗಳಿವಿಯೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಹುಡುಕಾಟ ಆರಂಭಿಸಿದ್ದಾರೆ.
ಇತರ ಮೀನುಗಳನ್ನು ಕೊಲ್ಲುವ ಅಲಿಗೇಟರ್
ಭೋಪಾಲ್ ದೊಡ್ಡ ಕೊಳದಲ್ಲಿ ಒಂದಕ್ಕಿಂತ ಹೆಚ್ಚು ಮೀನುಗಳು ಇದ್ದರೆ, ಅದು ಕೊಳದ ಪರಿಸರ ವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಅರಣ್ಯ ಇಲಾಖೆ ಭಾವಿಸುತ್ತದೆ. ಅಷ್ಟೇ ಅಲ್ಲ, ಈ ಅಲಿಗೇಟರ್ ತನ್ನ ಗರಗಸದ ಹಲ್ಲುಗಳಿಂದ ನೀರಿನಲ್ಲಿ ಇತರ ಜಾತಿಯ ಮೀನುಗಳನ್ನು ಕೊಲ್ಲುತ್ತದೆ. ಈ ಅಲಿಗೇಟರ್ ಗಾರ್ ಮೀನಿನ ವಯಸ್ಸು 18 ರಿಂದ 20 ವರ್ಷಗಳು ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: Fish: ಈ ಮೀನುಗಳ ಬೆಲೆ 25 ಲಕ್ಷದಿಂದ 1 ಕೋಟಿ ರೂಪಾಯಿ! ಜನಸಾಮ್ಯಾನರ ಹೊಟ್ಟೆ ಸೇರಲ್ಲ ಬಿಡಿ ಈ ಫಿಶ್!
ಮೀನುಗಾರರಿಗೂ ಅಚ್ಚರಿ ಮೂಡಿಸಿದ ಮೀನು
ಈ ಮೀನು ಬಲೆಗೆ ಸಿಕ್ಕಿಬಿದ್ದಿದ್ದಕ್ಕೆ ಯುವಕ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾನೆ. ಈ ಮೀನಿನ ವಿಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಾಸ್ತವವಾಗಿ, ಭೋಪಾಲ್‌ನ ದೊಡ್ಡ ಕೊಳದಲ್ಲಿ ಅನೇಕ ಸಣ್ಣ ಮತ್ತು ದೊಡ್ಡ ಜಾತಿಯ ಮೀನುಗಳಿವೆ. ಸಾಮಾನ್ಯವಾಗಿ ವಿವಿಧ ರಾಜ್ಯಗಳ ಮೀನು ತಳಿಗಳನ್ನು ದೊಡ್ಡ ಕೊಳದಲ್ಲಿ ಹಾಕಲಾಗುತ್ತದೆ. ಆ ಮರಿಗಳಿಂದ ಈ ಮೀನು ಭೋಪಾಲ್‌ನ ದೊಡ್ಡ ಕೊಳವನ್ನು ತಲುಪಿರಬಹುದೇ ಎಂಬ ಭಯವಿದೆ. ಈ ಹಿಂದೆಯೂ ಈ ರೀತಿಯ ಮೀನುಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಈ ಮೀನು ಹಿಡಿದಿರುವುದಾಗಿ ಹೇಳಿಕೊಂಡಿರುವ ಯುವಕನ ಪರವಾನಗಿಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ