ನಿಸರ್ಗಾವಾಂತರ; ಪ್ರವಾಹ, ಭೂ ಕುಸಿತ, ಬೆಳೆ ನಾಶ, ಮರಗಳನ್ನು ಧರೆಗುರುಳಿಸಲಿದೆ ಚಂಡಮಾರುತ

ಚಂಡಮಾರುತವು ಮಧ್ಯಾಹ್ನ 1 ರಿಂದ 4 ಗಂಟೆಯ ನಡುವೆ ಭೂಕುಸಿತವನ್ನು ಉಂಟುಮಾಡಬಹುದು. ಏಕೆಂದರೆ ಇದು ಈಗ ಅಲಿಬಾಗ್‌ನಿಂದ 95 ಕಿ.ಮೀ ಮತ್ತು ಮುಂಬೈನಿಂದ 150 ಕಿ.ಮೀ ದೂರದಲ್ಲಿದೆ. 

news18-kannada
Updated:June 3, 2020, 2:25 PM IST
ನಿಸರ್ಗಾವಾಂತರ; ಪ್ರವಾಹ, ಭೂ ಕುಸಿತ, ಬೆಳೆ ನಾಶ, ಮರಗಳನ್ನು ಧರೆಗುರುಳಿಸಲಿದೆ ಚಂಡಮಾರುತ
ಮುಂಬೈ ಕರಾವಳಿ ತೀರದ ದೃಶ್ಯ.
  • Share this:
ಮುಂಬೈ: ನಿಸರ್ಗ ಚಂಡಮಾರುತ ಮಹಾರಾಷ್ಟ್ರ ಮತ್ತು ಗುಜರಾತ್​ಗೆ ಅಪ್ಪಳಿಸಿದ್ದು, ರಾಜ್ಯಾದ್ಯಂತ ಕರಾವಳಿ ತೀರದ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಜೋರಾಗಿ ನಡೆದಿದೆ. ಈ ಮೂಲಕ ಸಂಭವಿಸಬಹುದಾದ ಭೂ ಕುಸಿತದಿಂದ ಉಂಟಾಗಬಹುದಾದ ಪ್ರಾಣ ಹಾಗೂ ಆಸ್ತಿ ಹಾನಿ ತಡೆಗೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಕಳೆದ ಒಂದು ಗಂಟೆಯಲ್ಲಿ ಚಂಡಮಾರುತದ ಕಣ್ಣಿನ ವ್ಯಾಸವು ಕಡಿಮೆಯಾಗಿದೆ. ಇದು ಅದರ ತೀವ್ರತೆಯನ್ನು ಸೂಚಿಸುತ್ತದೆ. ಗಾಳಿ ವೇಗವು ಗಂಟೆಗೆ 85-95 ಕಿ.ಮೀ ನಿಂದ 90-100 ಕಿ.ಮೀ. ಹೆಚ್ಚಾಗಿದೆ. ಅದು 110 ಕಿ.ಮೀ. ವೇಗವನ್ನು ಪಡೆದುಕೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಈ ಸಂಬಂಧ ಮಾತನಾಡಿದ ಭಾರತೀಯ ಹವಾಮಾನ ಇಲಾಖೆ ಮುಂಬೈ ನಿರ್ದೇಶಕ ಕೆ.ಎಸ್.ಹೊಸಲ್ಕಿರ್, ಚಂಡಮಾರುತವು ಮಧ್ಯಾಹ್ನ 1 ರಿಂದ 4 ಗಂಟೆಯ ನಡುವೆ ಭೂಕುಸಿತವನ್ನು ಉಂಟುಮಾಡಬಹುದು. ಏಕೆಂದರೆ ಇದು ಈಗ ಅಲಿಬಾಗ್‌ನಿಂದ 95 ಕಿ.ಮೀ ಮತ್ತು ಮುಂಬೈನಿಂದ 150 ಕಿ.ಮೀ ದೂರದಲ್ಲಿದೆ. ಮುಂಬೈ (ಮಹಾರಾಷ್ಟ್ರ) ಮತ್ತು ಗೋವಾದಲ್ಲಿ ಡಾಪ್ಲರ್ ವೆದರ್ ರಾಡಾರ್ (ಡಿಆರ್‌ಎಡಬ್ಲ್ಯೂ) ನಿರಂತರವಾಗಿ ಚಂಡಮಾರುತವನ್ನು ಟ್ರ್ಯಾಕ್ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಚಂಡಮಾರುತ ತೀವ್ರತೆಗೆ ಭೂ ಕುಸಿತ, ಪ್ರವಾಹ, ಬೆಳನಾಶ ಹಾಗೂ ಸಾವಿರಾರು ಮರಗಳು ಧರಶಾಯಿಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: Cyclone Nisarga LIVE Updates: ಮಹಾರಾಷ್ಟ್ರಕ್ಕೆ ಬಂದಪ್ಪಳಿಸಿದ ನಿಸರ್ಗ ಚಂಡಮಾರುತ
First published: June 3, 2020, 1:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading