ರಷ್ಯಾದ ಸೈಬೀರಿಯಾದಲ್ಲಿ ಅಣೆಕಟ್ಟು ಕುಸಿತ: 13 ಚಿನ್ನದ ಗಣಿ ಕಾರ್ಮಿಕರು ಸಾವು

ಪೊಲೀಸರ ರಕ್ಷಣಾ ಕಾರ್ಯಾಚರಣೆ ವೇಳೆ 13 ಚಿನ್ನದ ಗಣಿ ಕಾರ್ಮಿಕರ ಮೃತದೇಹ ಪತ್ತೆಯಾಗಿದೆ. ಜತೆಗೆ ಇನ್ನು ಹದಿನಾಲ್ಕು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದೀಗ ತೀವ್ರ ಗಾಯಾಗಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗುತ್ತಿದೆ.

news18-kannada
Updated:October 19, 2019, 10:20 PM IST
ರಷ್ಯಾದ ಸೈಬೀರಿಯಾದಲ್ಲಿ ಅಣೆಕಟ್ಟು ಕುಸಿತ: 13 ಚಿನ್ನದ ಗಣಿ ಕಾರ್ಮಿಕರು ಸಾವು
ಅಣೆಕಟ್ಟು ಕುಸಿದ ಪ್ರದೇಶ
  • Share this:
ನವದೆಹಲಿ(ಅ.19): ರಷ್ಯಾದ ಸೈಬೀರಿಯಾದಲ್ಲಿ ಅಣೆಕಟ್ಟು ಕುಸಿದ ಪರಿಣಾಮ 13 ಚಿನ್ನದ ಗಣಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇಲ್ಲಿನ ಕ್ರಸ್ನೊಯರ್ಸ್‌ಕ್ ಎಂಬ ನಗರದಲ್ಲಿರುವ ಚಿನ್ನದ ಗಣಿಯೊಂದರ ಪಕ್ಕದ ಅಣೆಕಟ್ಟು ಶನಿವಾರ ಮುಂಜಾನೆ ಕುಸಿದಿದೆ. ಈ ವೇಳೆ ಅಲ್ಲಿಯೇ ಇದ್ದ 13 ಮಂದಿ ಮೃತಪಟ್ಟಿದ್ದಾರೆ ಎಂದು ರಷ್ಯಾದ ತುರ್ತು ನಿರ್ವಹಣೆಗಳ ಸಚಿವಾಲಯ ತಿಳಿಸಿದೆ.

ಅಣೆಕಟ್ಟು ಕುಸಿದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರಷ್ಯಾ ಪೊಲೀಸರು ದೌಡಾಯಿಸಿದ್ದಾರೆ. ಅಲ್ಲದೇ ಕುಸಿದ ಅಣೆಕಟ್ಟು ನೀರು ಹರಿದು ಸಂಕಷ್ಟಕ್ಕೆ ಸಿಲುಕಿದ್ದ ಚಿನ್ನದ ಗಣಿ ಕಾರ್ಮಿಕರನ್ನು ಕಾಪಾಡಲು ಮುಂದಾಗಿದ್ದಾರೆ.

ಪೊಲೀಸರ ರಕ್ಷಣಾ ಕಾರ್ಯಾಚರಣೆ ವೇಳೆ 13 ಚಿನ್ನದ ಗಣಿ ಕಾರ್ಮಿಕರ ಮೃತದೇಹ ಪತ್ತೆಯಾಗಿದೆ. ಜತೆಗೆ ಇನ್ನು ಹದಿನಾಲ್ಕು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದೀಗ ತೀವ್ರ ಗಾಯಾಗಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ರಾಜೀವ್​​ ಗಾಂಧಿಗೆ ಭಾರತ ರತ್ನ ಕೊಟ್ಟ ಕಾಂಗ್ರೆಸ್​ಗೆ ಸಾವರ್ಕರ್​​ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ: ಸಂಸದ ಪ್ರಹ್ಲಾದ್​ ಜೋಶಿ

ಏನಿದು ಪ್ರಕರಣ?: ಇಲ್ಲಿನ ಸೈಬಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು ಕುಸಿದಿದೆ. ಇದರ ಪರಿಣಾಮ ಅಣೆಕಟ್ಟು ನೀರು, ಅಲ್ಲಿಯೇ ಕಾರ್ಮಿಕರು ವಾಸಿಸುತ್ತಿದ್ದ ಪ್ರದೇಶಕ್ಕೆ ನುಗ್ಗಿದೆ. ಹಲವು ಕಾರ್ಮಿಕರ ಮನೆಗಳಿಗೆ ನುಗ್ಗಿದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹತ್ತಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
-----------
First published:October 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading