HOME » NEWS » National-international » DALIT MAN LYNCHED IN TAMIL NADU FOR DEFECATING IN FIELD OWNED BY MAN FROM DOMINANT CASTE LG

ಮೇಲ್ಜಾತಿಯವರ ಜಮೀನಿನಲ್ಲಿ ಮಲವಿಸರ್ಜನೆ ಮಾಡಿದ ದಲಿತನನ್ನು ಕ್ರೂರವಾಗಿ ಕೊಂದ ಸ್ಥಳೀಯರು

ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಶಕ್ತಿವೇಲ್​ ಪ್ರಜ್ಞೆ ತಪ್ಪಿದ್ದು, ಚಿಕಿತ್ಸೆ ನೀಡುವ ಮುನ್ನವೇ ಅಸುನೀಗಿದ್ದಾನೆ ಎಂದು ತಿಳಿದು ಬಂದಿದೆ.

news18-kannada
Updated:February 16, 2020, 5:48 PM IST
ಮೇಲ್ಜಾತಿಯವರ ಜಮೀನಿನಲ್ಲಿ ಮಲವಿಸರ್ಜನೆ ಮಾಡಿದ ದಲಿತನನ್ನು ಕ್ರೂರವಾಗಿ ಕೊಂದ ಸ್ಥಳೀಯರು
ಹಲ್ಲೆಗೊಳಗಾಗಿ ಮೃತಪಟ್ಟ ವ್ಯಕ್ತಿ
  • Share this:
ಚೆನ್ನೈ(ಫೆ.16): ದಲಿತನೊಬ್ಬ ಮೇಲ್ಜಾತಿಯವರ ಜಮೀನಿನಲ್ಲಿ ಮಲವಿಸರ್ಜನೆ ಮಾಡಿದ್ದಕ್ಕೆ, ಆತನನ್ನು ಹಿಡಿದು ಕೈ-ಕಾಲು ಕಟ್ಟಿ ಕ್ರೂರವಾಗಿ ಥಳಿಸಿ ಸಾಯಿಸಿರುವ ಘಟನೆ ತಮಿಳುನಾಡಿನ ವಿಲ್ಲಪುರಂ ಜಿಲ್ಲೆಯಲ್ಲಿ ನಡೆದಿದೆ.

ಫೆಬ್ರವರಿ 12ರಂದು ಈ ಘಟನೆ ನಡೆದಿದ್ದು, ಜನರ ಗುಂಪು ದಲಿತನನ್ನು ಥಳಿಸಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾಗಿ ಮೃತಪಟ್ಟ ವ್ಯಕ್ತಿಯನ್ನು ಶಕ್ತಿವೇಲ್​ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಆತನ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾಳೆ.

15 ಅಡಿ ಆಳಕ್ಕೆ ಸಿಲುಕಿ 6 ಗಂಟೆ ಸಾವಿನ ಮನೆ ಕದ ತಟ್ಟಿ ಬದುಕಿ ಬಂದ ಯುವಕ

ಪ್ರಬಲ ಜಾತಿಗೆ ಸೇರಿದ ವ್ಯಕ್ತಿಯ ಜಮೀನಿನಲ್ಲಿ ದಲಿತ ಮಲವಿಸರ್ಜನೆ ಮಾಡಿದ ಹಿನ್ನೆಲೆ, ಸ್ಥಳೀಯರು ಆತನನ್ನು ಹಿಡಿದು ಕೈ-ಕಾಲು ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ. ಆತ ದಲಿತ ವ್ಯಕ್ತಿ ಎಂದು ತಿಳಿದ ಬಳಿಕ ಇನ್ನೂ ಕ್ರೂರವಾಗಿ ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಶಕ್ತಿವೇಲ್​ ಸಹೋದರಿ ದೂರಿನಲ್ಲಿ ಆರೋಪಿಸಿದ್ದಾಳೆ.

ವಿಷಯ ತಿಳಿದ ಕೂಡಲೇ ಆಕೆ ಸ್ಥಳಕ್ಕೆ ಧಾವಿಸಿ ಪೊಲೀಸರ ಸಹಾಯದಿಂದ ಶಕ್ತಿವೇಲ್​ನನ್ನು ರಕ್ಷಿಸಲು ಮುಂದಾಗಿದ್ದಾಳೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಶಕ್ತಿವೇಲ್​ ಪ್ರಜ್ಞೆ ತಪ್ಪಿದ್ದು, ಚಿಕಿತ್ಸೆ ನೀಡುವ ಮುನ್ನವೇ ಅಸುನೀಗಿದ್ದಾನೆ ಎಂದು ತಿಳಿದು ಬಂದಿದೆ.

ಈ ಘಟನೆ ಸಂಬಂಧ ಎಸ್​ಸಿ/ಎಸ್​ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಕೊಲೆ ಅಪರಾಧ ಸೆಕ್ಷನ್​ ಅಡಿ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಪೊಲೀಸರು ನಿಮ್ಮ ಶತ್ರುಗಳಲ್ಲ; ಬೇಕಾದರೆ ಟೀಕಿಸಿ, ಆದರೆ ಗೌರವಿಸಲು ಮರೆಯದಿರಿ: ಅಮಿತ್ ಶಾ
Youtube Video
First published: February 16, 2020, 5:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories