ಉತ್ತರಪ್ರದೇಶದಲ್ಲಿ ದಲಿತನ ಸಜೀವ ದಹನ; ಕ್ರಿಕೆಟ್​ನಲ್ಲಿ ಭಾರತ ಗೆದ್ದ ಸಂಭ್ರಮವನ್ನು ಆಚರಿಸಿದ್ದಕ್ಕೆ ಬೆಂಕಿ ಹಚ್ಚಿ ಕೊಂದ ಅನ್ಯ ಕೋಮಿನವರು

ಗಲಾಟೆ ಒಂದು ಹಂತಕ್ಕೆ ತಣ್ಣಗಾಗಿ ಎಲ್ಲರೂ ಅವರವರ ಮನೆಗೆ ತೆರಳಿದ್ದಾರೆ. ದಲಿತ ಹುಡುಗ ವಿನಯ್ ಪ್ರಕಾಶ್ ಸಹ ತನ್ನ ಮನೆಗೆ ತೆರಳಿ ಮಲಗಿದ್ದಾನೆ. ಆದರೆ, ಬೆಳಗ್ಗೆ ಎದ್ದು ನೋಡಿದರೆ ಊರಿನ ಹೊರಗಿರುವ ಆತನ ಇಡೀ ಗುಡಿಸಲು ಬೆಂಕಿಗೆ ಆಹುತಿಯಾಗಿದೆ. ಅಲ್ಲದೆ ಆತ ಗುರುತು ಹಚ್ಚಲೂ ಸಹ ಅಸಾಧ್ಯವಾದ ರೀತಿಯಲ್ಲಿ ಸುಟ್ಟು ಕರಕಲಾಗಿದ್ದಾನೆ.

MAshok Kumar | news18
Updated:June 17, 2019, 4:04 PM IST
ಉತ್ತರಪ್ರದೇಶದಲ್ಲಿ ದಲಿತನ ಸಜೀವ ದಹನ; ಕ್ರಿಕೆಟ್​ನಲ್ಲಿ ಭಾರತ ಗೆದ್ದ ಸಂಭ್ರಮವನ್ನು ಆಚರಿಸಿದ್ದಕ್ಕೆ ಬೆಂಕಿ ಹಚ್ಚಿ ಕೊಂದ ಅನ್ಯ ಕೋಮಿನವರು
ಸಾಂದರ್ಭಿಕ ಚಿತ್ರ.
  • News18
  • Last Updated: June 17, 2019, 4:04 PM IST
  • Share this:
ಉತ್ತರಪ್ರದೇಶ (ಜೂನ್.17); ಮನೆಯಲ್ಲಿ ಮಲಗಿದ್ದ ದಲಿತ ವ್ಯಕ್ತಿಯನ್ನು ಜೀವ ಸಹಿತ ಬೆಂಕಿ ಹಚ್ಚಿ ಸುಟ್ಟು ಕೊಂದಿರುವ ಘಟನೆ ಉತ್ತರಪ್ರದೇಶದ ಪ್ರತಾಪ್​ಘರ್​ ಜಿಲ್ಲೆಯ  ರಾಮ್​ಪುರ ಎಂಬ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ವಿನಯ್ ಪ್ರಕಾಶ್ ಎಂದು ಗುರುತಿಸಲಾಗಿದೆ.

ರಾಮ್​ಪುರ ಗ್ರಾಮದ ದಲಿತ ಜಾತಿಗೆ ಸೇರಿದ ವಿನಯ್ ಪ್ರಕಾಶ್ ಭಾನುವಾರ ರಾತ್ರಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಗ್ರಾಮದವರ ಜೊತೆ ಕುಳಿತು ವೀಕ್ಷಿಸಿದ್ದಾರೆ. ಭಾರತ ಪಂದ್ಯದಲ್ಲಿ ಗೆಲ್ಲುತ್ತಿದ್ದಂತೆ ಆತ ಕುಣಿದು ಕುಪ್ಪಳಿಸುತ್ತಾ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಮತ್ತೊಂದು ಪಂಗಡದವರ ಜೊತೆ ಸಣ್ಣ ವಿವಾದ ಹುಟ್ಟಿ ಮಾತಿಗೆ ಮಾತು ಬೆಳೆದಿದೆ.

ಇದನ್ನೂ ಓದಿ : ಟೆಂಪೋ ಚಾಲಕನನ್ನು ನಡುರಸ್ತೆಯಲ್ಲೇ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸರು; ಮೂವರು ಸಿಬ್ಬಂದಿ ಅಮಾನತು

ಕೊನೆಗೆ ಈ ಗಲಾಟೆ ಒಂದು ಹಂತಕ್ಕೆ ತಣ್ಣಗಾಗಿ ಎಲ್ಲರೂ ಅವರವರ ಮನೆಗೆ ತೆರಳಿದ್ದಾರೆ. ದಲಿತ ಹುಡುಗ ವಿನಯ್ ಪ್ರಕಾಶ್ ಸಹ ತನ್ನ ಮನೆಗೆ ತೆರಳಿ ಮಲಗಿದ್ದಾನೆ. ಆದರೆ, ಬೆಳಗ್ಗೆ ಎದ್ದು ನೋಡಿದರೆ ಊರಿನ ಹೊರಗಿರುವ ಆತನ ಇಡೀ ಗುಡಿಸಲು ಬೆಂಕಿಗೆ ಆಹುತಿಯಾಗಿದೆ. ಅಲ್ಲದೆ ಆತ ಗುರುತು ಹಚ್ಚಲೂ ಸಹ ಅಸಾಧ್ಯವಾದ ರೀತಿಯಲ್ಲಿ ಸುಟ್ಟು ಕರಕಲಾಗಿದ್ದಾನೆ.

ಹಿಂದಿನ ರಾತ್ರಿ ಭಾರತ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಬಳಿಕ ನಡೆದ ವಾಗ್ವಾದವೇ ಈ ಕೊಲೆಗೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಯ ನಂತರ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಇಡೀ ಗ್ರಾಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.

ಇದನ್ನೂ ಓದಿ : India vs Pakistan: ಭಾರತಕ್ಕೆ ಪಾಕ್ ವಿರುದ್ಧ ಸೋಲೇ ಇಲ್ಲ; ಹೈವೋಲ್ಟೇಜ್ ಪಂದ್ಯದಲ್ಲಿ ದಾಖಲೆಗಳ ಸರಮಾಲೆ!

ಉತ್ತರಪ್ರದೇಶ ಎಸ್​ಸಿ - ಎಸ್ಟಿ ಆಯೋಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ಪ್ರಕರಣವನ್ನು ಸ್ವತಃ ಪ್ರತಾಪ್​ಘರ್​ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ಎಸ್ಸಿ - ಎಸ್ಟಿ ಆಯೋಗಕ್ಕೆ ಸಂಪೂರ್ಣ ವರದಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
First published:June 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ