ಮೇಲ್ಜಾತಿ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ ದಲಿತ ಯುವಕನ ಹತ್ಯೆ

ಈ ಸಂಬಂಧ ಮಂದಾಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಹಮದಾಬಾದ್​ ಜಿಲ್ಲಾ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

news18
Updated:July 9, 2019, 5:54 PM IST
ಮೇಲ್ಜಾತಿ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ ದಲಿತ ಯುವಕನ ಹತ್ಯೆ
ಸಾಂದರ್ಭಿಕ ಚಿತ್ರ
  • News18
  • Last Updated: July 9, 2019, 5:54 PM IST
  • Share this:
ಅಹಮದಾಬಾದ್​,(ಜು.09): ಆರು ತಿಂಗಳ ಹಿಂದೆ ಮೇಲ್ಜಾತಿ ಯುವತಿಯನ್ನು ಪ್ರೀತಿಸಿ  ಮದುವೆಯಾಗಿದ್ದ ದಲಿತ ಯುವಕನನ್ನು ಹುಡುಗಿಯ ಮನೆಯವರು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಹಮದಾಬಾದ್​ನ ವಾರ್ಮೋರ್ ಎಂಬ​​ ಹಳ್ಳಿಯಲ್ಲಿ ನಡೆದಿದೆ.

ಹರೇಶ್​ ಸೋಲಾಂಕಿ (35) ಕೊಲೆಯಾದ ವ್ಯಕ್ತಿ. ಈತ ಕಚ್​ ನಗರದ ಗಂಧಿದಮ್​ ಪ್ರದೇಶದ ನಿವಾಸಿ. ಹರೇಶ್ ಆರು ತಿಂಗಳ ಹಿಂದೆ ​ ಊರ್ಮಿಳಾಬೇನ್​ ಜಾಲಾ ಎಂಬ ಮೇಲ್ಜಾತಿ ಹುಡುಗುಯನ್ನು ಪ್ರೀತಿಸಿ ಮದುವೆಯಾಗಿದ್ದ. ಇವರ ಪ್ರೀತಿಗೆ ಹುಡುಗಿ ಮನೆಯವರ ವಿರೋಧ ಇತ್ತು. ಆದರೂ ಸಹ ವಿರೋಧದ ನಡುವೆಯೇ ಇಬ್ಬರೂ ಸಹ ಮದುವೆಯಾಗಿ ಜೀವನ ನಡೆಸುತ್ತಿದ್ದರು.

ಈ ವೇಳೆ ಊರ್ಮಿಳಾ ಗರ್ಭವತಿಯಾಗಿರುವ ವಿಷಯ ತಿಳಿದು ಸೋಲಾಂಕಿ ಖುಷಿಯಾಗಿದ್ದ.  ಈ ವೇಳೆ ತನ್ನ ಪತ್ನಿಯನ್ನು ತವರು ಮನೆಗೆ ಕಳುಹಿಸಲು ಮುಂದಾಗಿದ್ದ. ಊರ್ಮಿಳಾ ಕೂಡ ತನ್ನ ಪೋಷಕರನ್ನು ಕಾಣುವ ತವಕದಲ್ಲಿದ್ದಳು.  ಹೀಗಾಗಿ ಎರಡು ತಿಂಗಳು ತವರು ಮನೆಗೆ ಕಳುಹಿಸಿದ್ದ. ಆತನ ಮಾವ ಕೂಡ 2 ತಿಂಗಳ ಬಳಿಕ ವಾಪಸ್​ ಕಳುಹಿಸುವುದಾಗಿ ಹೇಳಿದ್ದರು.

ಆದರೆ ಕೆಲವು ದಿನಗಳ ಬಳಿಕ ಸೋಲಾಂಕಿ ತನ್ನ ಹೆಂಡತಿಯನ್ನು ನೋಡಲು ಸಾಧ್ಯವಾಗಲೇ ಇಲ್ಲ. ಸಂಪರ್ಕಿಸಲು ಸಾಧ್ಯವಾಗಿಲ್ಲ. ಚಿಂತೆಗೀಡಾದ ಸೋಲಾಂಕಿ ಮಹಿಳೆಯರ ಸಹಾಯವಾಣಿ 181 ಕ್ಕೆ ಕರೆ ಮಾಡಿ, ತನ್ನ ಹೆಂಡತಿ ಹಾಗೂ ಇನ್ನೂ ಜನ್ಮ ತಾಳದ ಮಗುವಿನ ಆರೋಗ್ಯ ವಿಚಾರಿಸಿಕೊಳ್ಳಲು ಮುಂದಾಗಿದ್ದ.

ಬಳಿಕ ಸೋಲಾಂಕಿ ಮಹಿಳಾ ಸಹಾಯವಾಣಿ ಸಿಬ್ಬಂದಿ ಸಹಾಯದಿಂದ ಆತನ ಮಾವನ ಊರಿಗೆ ಬಂದಿದ್ದ. ಆತನ ಪತ್ನಿ ಮನೆಯವರು ಈ ಹಿಂದೆ ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಮನೆಗೆ ಬಂದ ಸೋಲಾಂಕಿಯನ್ನು ಕಂಡು ಇನ್ನೂ ಕೋಪ ನೆತ್ತಿಗೇರಿತ್ತು. ತಮ್ಮ ಗರ್ಭಿಣಿ ಮಗಳನ್ನು ಸೋಲಾಂಕಿ ಜೊತೆ ಕಳುಹಿಸಲು ಅವರಿಗೆ ಇಷ್ಟವಿರಲಿಲ್ಲ. ಸೋಲಾಂಕಿ ಎಷ್ಟೇ ಬೇಡಿಕೊಂಡರೂ ಅವರ ಮನಸು ಕರಗಲಿಲ್ಲ.

ಇಬ್ಬರ ನಡುವೆ ವಾದ-ವಿವಾದ ನಡೆದು, ಕೊನೆಗೆ  ಇನ್ನೊಂದು ತಿಂಗಳಲ್ಲಿ ಮಗಳನ್ನು ಕಳುಹಿಸುವುದಾಗಿ ಊರ್ಮಿಳಾ ತಂದೆ ಹೇಳಿದರು. ಬಳಿಕ ಸೋಲಾಂಕಿ ಮಹಿಳಾ ಸಹಾಯವಾಣಿ ಸಿಬ್ಬಂದಿ ಜೊತೆ ಜೀಪ್​ ಹತ್ತಿ ಹೊರಟಿದ್ದ. ಆಗ ಜೀಪ್​ನ ಹಿಂಭಾಗದಲ್ಲಿ ಕುಳಿತಿದ್ದ ಸೋಲಾಂಕಿ ಮೇಲೆ ಊರ್ಮಿಳಾ ಮನೆಯವರು ಹಲ್ಲೆ ಮಾಡಲು ಮುಂದಾದರು. ಕತ್ತಿ ಹಾಗೂ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿ ಆತನನ್ನು ಕೊಲೆ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮಂದಾಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಹಮದಾಬಾದ್​ ಜಿಲ್ಲಾ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
First published:July 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ