• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Crime News: ಚೆಂಡು ಮುಟ್ಟಿದ್ದಕ್ಕೆ ದಲಿತ ಬಾಲಕನಿಗೆ ಜಾತಿನಿಂದನೆ! ಪ್ರಶ್ನಿಸಿದ ಚಿಕ್ಕಪ್ಪನ ಬೆರಳು ಕತ್ತರಿಸಿದ ದುಷ್ಟರು!

Crime News: ಚೆಂಡು ಮುಟ್ಟಿದ್ದಕ್ಕೆ ದಲಿತ ಬಾಲಕನಿಗೆ ಜಾತಿನಿಂದನೆ! ಪ್ರಶ್ನಿಸಿದ ಚಿಕ್ಕಪ್ಪನ ಬೆರಳು ಕತ್ತರಿಸಿದ ದುಷ್ಟರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಲಿತ ಬಾಲಕ ಚೆಂಡನ್ನು ಮುಟ್ಟಿದ ವಿಚಾರವಾಗಿ ಗಲಾಟೆ ನಡೆದು, ಆರೋಪಿಗಳು ದಲಿತ ಬಾಲಕನ ಚಿಕ್ಕಪ್ಪನ ಹೆಬ್ಬೆರಳನ್ನು ಕತ್ತರಿಸಿ ಹಾಕಿದ ಆಘಾತಕಾರಿ ಘಟನೆ ನಡೆದಿದೆ.

  • Share this:

ಅಹ್ಮದಾಬಾದ್​: ಗುಜರಾತ್‌ನ (Gujarat) ಪಟಾನ್ ಜಿಲ್ಲೆಯಲ್ಲಿ ಹೃದಯ ವಿದ್ರಾವಕ (Heart breaking) ಘಟನೆಯೊಂದು ಬೆಳಕಿಗೆ ಬಂದಿದೆ. ಶಾಲೆಯ ಆವರಣದಲ್ಲಿರುವ ಆಟದ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ದಲಿತ ಬಾಲಕನೊಬ್ಬ (Dalit Child) ಚೆಂಡನ್ನು ಮುಟ್ಟಿದ ವಿಚಾರವಾಗಿ ಗಲಾಟೆ ನಡೆದು, ಆರೋಪಿಗಳು ದಲಿತ ಬಾಲಕನ ಚಿಕ್ಕಪ್ಪನ ಹೆಬ್ಬೆರಳನ್ನು ಕತ್ತರಿಸಿ ಹಾಕಿದ ಆಘಾತಕಾರಿ ಘಟನೆ ನಡೆದಿದೆ. ಪ್ರಸ್ತುತ ಪ್ರಕರಣದಲ್ಲಿ ಪೊಲೀಸರು (Police) ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಪಟಾನ್ ಜಿಲ್ಲೆಯ ಕಾಕೋಶಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ.


ಜಾತಿನಿಂದನೆ ಆರೋಪ


ಎಫ್‌ಐಆರ್‌ನ ಪ್ರಕಾರ, ಆರೋಪಿಗಳು ಕೋಪದ ಭರದಲ್ಲಿ ಗ್ರಾಮದ ಶಾಲೆಯ ಆಟದ ಮೈದಾನದಲ್ಲಿ ಚೆಂಡನ್ನು ಮುಟ್ಟಿದ ಬಾಲಕನಿಗೆ ಬೆದರಿಕೆ ಹಾಕಿ ಅವಮಾನಿಸದ್ದಾರೆ. ಜಾತಿನಿಂದನೆ ಮಾಡಿದ ವಿಷಯ ಕೇಳಿ ಬಾಲಕನ ಚಿಕ್ಕಪ್ಪ ಧೀರಜ್ ಪರ್ಮಾರ್ ವಿರೋಧಿಸಿ ಪ್ರಶ್ನೆ ಮಾಡಿದ್ದಕ್ಕೆ ಜಗಳ ಮತ್ತಷ್ಟು ದೊಡ್ಡದಾಗಿದೆ. ತರ ದೀರಜ್​ ಪೊಲೀಸರಿಗೆ ದೂರು ನೀಡಿದ್ದಾರೆ.


ಇದಾದ ನಂತರ ಏಳು ಆರೋಪಿಗಳು ಸಂಜೆಯ ವೇಳೆಗೆ ಹರಿತವಾದ ಆಯುಧಗಳಿಂದ ಬಂದು ದೂರುದಾರ ಧೀರಜ್ ಹಾಗೂ ಆತನ ಸಹೋದರ ಕೀರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ಕೀರ್ತಿಯ ಹೆಬ್ಬೆರಳನ್ನು ಕತ್ತರಿಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.


ಎಸ್​ಎಸ್​ಟಿ ಕಾಯ್ದೆಯಡಿ ಪ್ರಕರಣ


ಐಪಿಸಿ ಸೆಕ್ಷನ್ 326 (ಅಪಾಯಕಾರಿ ಆಯುಧಗಳಿಂದ ಸ್ವಯಂಪ್ರೇರಣೆಯಿಂದ ತೀವ್ರವಾದ ಗಾಯವನ್ನು ಉಂಟುಮಾಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದರು.


ಪ್ರತಿಭಟನೆ ಎಚ್ಚರಿಕೆ


ದಲಿತ ವ್ಯಕ್ತಿಯ ಬೆರಳನ್ನು ಕತ್ತರಿಸಿದ ಘಟನೆ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಹಲವು ದಲಿತ ಸಂಘಟನೆಗಳು ಘಟನೆಯನ್ನು ಖಂಡಿಸಿದೆ. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕು, ಇಲ್ಲವಾದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿವೆ.

First published: