ಶಾಸಕನ ಮಾತು ಕೇಳಿ ದಲಿತನಿಗೆ ಥಳಿಸಿ, ತಲೆ ಬೋಳಿಸಿದ ಆಂಧ್ರ ಪೊಲೀಸರು!

ಆಂಧ್ರಪ್ರದೇಶದ ಪೊಲೀಸ್ ಠಾಣೆಯಲ್ಲಿ ದಲಿತ ವ್ಯಕ್ತಿಯನ್ನು ಎಳೆದುಕೊಂಡು ಬಂದು, ಥಳಿಸಿ, ತಲೆ ಬೋಳಿಸಲಾಗಿದೆ. ವೈಎಸ್​ಆರ್ ಕಾಂಗ್ರೆಸ್​ ಪಾರ್ಟಿ ಶಾಸಕನ ಮಾತು ಕೇಳಿ ಈ ಕೃತ್ಯ ಎಸಗಿರುವ ಪೊಲೀಸ್ ಇನ್​ಸ್ಪೆಕ್ಟರ್ ಹಾಗೂ ಇಬ್ಬರು ಕಾನ್ಸ್​ಟೇಬಲ್​ಗಳನ್ನು ಅಮಾನತುಗೊಳಿಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

news18-kannada
Updated:July 22, 2020, 3:16 PM IST
ಶಾಸಕನ ಮಾತು ಕೇಳಿ ದಲಿತನಿಗೆ ಥಳಿಸಿ, ತಲೆ ಬೋಳಿಸಿದ ಆಂಧ್ರ ಪೊಲೀಸರು!
ಪೊಲೀಸರಿಂದ ಹಲ್ಲೆಗೊಳಗಾದ ದಲಿತ
  • Share this:
ಹೈದರಾಬಾದ್ (ಜು. 22): ಆಂಧ್ರಪ್ರದೇಶದ ವೈಎಸ್​ಆರ್​ ಕಾಂಗ್ರೆಸ್ ಪಕ್ಷದ ಶಾಸಕನ ಆಜ್ಞೆಯಂತೆ ಪೊಲೀಸರು ದಲಿತ ವ್ಯಕ್ತಿಯನ್ನು ಥಳಿಸಿ, ಆತನ ತಲೆ ಬೋಳಿಸಿರುವ ಅಮಾನವೀಯ ಘಟನೆ ನಡೆದಿದೆ. ಹೈದರಾಬಾದ್​ನಿಂದ 271 ಕಿ.ಮೀ. ದೂರದಲ್ಲಿರುವ ಗೋದಾವರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಗೋದಾವರಿ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ದಲಿತ ವ್ಯಕ್ತಿಯೋರ್ವನನ್ನು ಎಳೆದುಕೊಂಡು ಬಂದು, ಆತನನ್ನು ಥಳಿಸಿ, ತಲೆ ಬೋಳಿಸಲಾಗಿದೆ. ವೈಎಸ್​ಆರ್ ಕಾಂಗ್ರೆಸ್​ ಪಾರ್ಟಿ ಶಾಸಕನ ಮಾತು ಕೇಳಿ ಈ ಕೃತ್ಯ ಎಸಗಿರುವ ಪೊಲೀಸ್ ಇನ್​ಸ್ಪೆಕ್ಟರ್ ಹಾಗೂ ಇಬ್ಬರು ಕಾನ್ಸ್​ಟೇಬಲ್​ಗಳನ್ನು ಅಮಾನತುಗೊಳಿಸಬೇಕೆಂದು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿವೆ. ಈ ಘಟನೆ ಕುರಿತಾಗಿ ತನಿಖೆ ನಡೆಸಿ, ವರದಿ ನೀಡುವಂತೆ ರಾಜ್ಯದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಗೌತಮ್ ಸಾವಂಗ್ ಆದೇಶ ನೀಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?:
ವೇದುಲ್ಲಪಳ್ಳಿ ಎಂಬ ಗ್ರಾಮದ ವರಪ್ರಸಾದ್ ಎಂಬ ದಲಿತ ವ್ಯಕ್ತಿಯ ದೇಹದ ಮೇಲೆ ಸಾಕಷ್ಟು ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವರಪ್ರಸಾದ್ ಮನೆಯ ಪಕ್ಕದಲ್ಲಿ ಒಬ್ಬರು ಸಾವನ್ನಪ್ಪಿದ್ದರು. ರಸ್ತೆಯಲ್ಲೇ ಮೃತದೇಹವನ್ನು ದರ್ಶನಕ್ಕೆ ಇರಿಸಲಾಗಿತ್ತು. ಆ ವೇಳೆ ಆ ರಸ್ತೆಯಲ್ಲಿ ಬರುತ್ತಿದ್ದ ಮರಳು ಲಾರಿಯನ್ನು ಶವವನ್ನು ತೆಗೆಯುವವರೆಗೆ ನಿಲ್ಲುವಂತೆ ವರಪ್ರಸಾದ್ ಸೂಚಿಸಿದ್ದರು. ವರಪ್ರಸಾದ್ ತಡೆದು ನಿಲ್ಲಿಸಿದ್ದ ಮರಳಿನ ಲಾರಿ ವೈಎಸ್​ಆರ್ ಕಾಂಗ್ರೆಸ್ ಪಕ್ಷದ ಶಾಸಕನಿಗೆ ಸೇರಿದ್ದಾಗಿತ್ತು.

ಇದನ್ನೂ ಓದಿ: Crime News: ಪೊಲೀಸ್​ ಠಾಣೆಯಲ್ಲೇ ಬೆಂಕಿ ಹಚ್ಚಿಕೊಂಡು ಧಗಧಗನೆ ಉರಿದ ಕಳ್ಳ; ವಿಡಿಯೋ ವೈರಲ್

ಈ ವಿಷಯ ಗೊತ್ತಿಲ್ಲದ ವರಪ್ರಸಾದ್ ಲಾರಿಯನ್ನು ಅಡ್ಡಹಾಕಿ ನಿಲ್ಲಿಸಿದ್ದರು. ಅದರ ಮಾರನೇ ದಿನ ಗೋದಾವರಿ ಜಿಲ್ಲೆಯ ಸೀತಾನಗರಂ ಪೊಲೀಸ್​ ಠಾಣೆಯ ಪೊಲೀಸ್ ಇನ್​ಸ್ಪೆಕ್ಟರ್ ಹಾಗೂ ಇಬ್ಬರು ಕಾನ್ಸ್​ಟೇಬಲ್ ಬಂದು ವರಪ್ರಸಾದ್​ನನ್ನು ಎಳೆದುಕೊಂಡು ಹೋಗಿದ್ದರು. ಪೊಲೀಸ್ ಸ್ಟೇಷನ್​ನಲ್ಲೇ ವರಪ್ರಸಾದ್​ಗೆ ಬೆಲ್ಟ್​ನಿಂದ ಥಳಿಸಿ, ಕ್ಷೌರಿಕನನ್ನು ಕರೆಸಿ ತಲೆ ಬೋಳಿಸಿದ್ದಾರೆ.
ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ವಿರೋಧ ಪಕ್ಷದ ಚಂದ್ರಬಾಬು ನಾಯ್ಡು ಆಗ್ರಹಿಸಿದ್ದಾರೆ. ಆಧ್ರಪ್ರದೇಶ ಸರ್ಕಾರ ಮಾನವೀಯತೆ ಮರೆತು ವರ್ತಿಸುತ್ತಿದೆ. ತಪ್ಪಿತಸ್ಥರನ್ನು ಅಮಾನತು ಮಾಡಿ ಎಂದು ಅವರು ಒತ್ತಾಯಿಸಿದ್ದಾರೆ.
Published by: Sushma Chakre
First published: July 22, 2020, 3:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading