ಅನ್ಯ ಕೋಮಿನ ಯುವತಿ ವರಿಸಿದ್ದಕ್ಕೆ ದಲಿತ ಯುವಕನಿಗೆ ಎಂಜಲು ನೆಕ್ಕಿಸಿದ ಗ್ರಾಮಸ್ಥರು: ಉತ್ತರಪ್ರದೇಶದಲ್ಲಿ ಅಮಾನುಷ ಕೃತ್ಯ


Updated:June 30, 2018, 7:15 PM IST
ಅನ್ಯ ಕೋಮಿನ ಯುವತಿ ವರಿಸಿದ್ದಕ್ಕೆ ದಲಿತ ಯುವಕನಿಗೆ ಎಂಜಲು ನೆಕ್ಕಿಸಿದ ಗ್ರಾಮಸ್ಥರು: ಉತ್ತರಪ್ರದೇಶದಲ್ಲಿ ಅಮಾನುಷ ಕೃತ್ಯ

Updated: June 30, 2018, 7:15 PM IST
ನ್ಯೂಸ್​-18 ಕನ್ನಡ

ಲಖನೌ(ಜೂನ್​.30):  ಅನ್ಯ ಕೋಮಿನ ಯುವತಿಯನ್ನ ಪ್ರೀತಿಸಿ ಮದುವೆ ಆಗಿದ್ದಕ್ಕೆ ದಲಿತ ಸಮುದಾಯಕ್ಕೆ ಸೇರಿದ ಯುವಕನೋರ್ವನಿಗೆ ಎಂಜಲು ನೆಕ್ಕಿಸಿರುವ ಅಮಾನುಷ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಹಬೀಬ್​ಪುರ ಎಂಬ ಹಿಂದುಳಿದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರ ಈ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

21 ವರ್ಷದ ದಲಿತ ಯುವಕ ಅನ್ಯ ಕೋಮಿಗೆ ಸೇರಿದ 18 ವರ್ಷದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದಾನೆ.  ಹೀಗಾಗಿ, ಅಂತರ್ಧಮೀಯ ವಿವಾಹವನ್ನು ವಿರೋಧಿಸಿದ ಗ್ರಾಮಸ್ಥರ ಗುಂಪೊಂದು ಈ ಕೃತ್ಯ ಎಸಗಿದೆ ಎಂದು 40 ವರ್ಷದ ವ್ಯಕ್ತಿಯೊಬ್ಬರು ಕುಜ್ರಾ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರಂಭದಲ್ಲಿ ಯುವತಿ ಕುಟುಂಬಸ್ಥರು ಮದುವೆಯನ್ನು ವಿರೋಧಿಸಿದ್ದರು ಎನ್ನಲಾಗಿದೆ. ಬಳಿಕ ಇಬ್ಬರ ಮದುವೆ ವಿರುದ್ಧ ಅನ್ಯ ಸಮುದಾಯದವರು ಕೂಡ ದೂರು ನೀಡಿದ್ದರು. ಈ ದೂರನ್ನು ಕೋರ್ಟ್​ ತಿರಸ್ಕರಿಸಿದ್ದು ಅಂತರ್ಧಮೀಯ ವಿವಾಹಕ್ಕೆ ಅವಕಾಶ ಮಾಡಿಕೊಟ್ಟಿದೆ.

ಬಳಿಕ ಹುಡುಗಿ ಕುಂಟುಬದವರು ಪಂಚಾಯಿತಿ ನಡೆಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ. 100 ಜನ ಗ್ರಾಮಸ್ಥರ ಸಮ್ಮುಖದಲ್ಲಿ ಪಂಚಾಯತ್​ ಸಭೆ ನಡೆದಿದ್ದು, ಇದರಲ್ಲಿ ನವ ದಂಪತಿಯೂ  ಭಾಗವಹಿಸಿದ್ದರು. ಈ ವೇಳೆ ಇಂತಹ ನಾಗರಿಕ ಸಮಾಜ ತಲೆತಗ್ಗಿಸುವಂಥಾ ಕೃತ್ಯವನ್ನು ಎಸಗಲಾಗಿದೆ.


ಪಂಚಾಯತ್​ ಸಭೆಯಲ್ಲಿ ಮೇಲ್ಜಾತಿಗೆ ಸೇರಿದ ನೂರು ಜನರ ಗುಂಪೊಂದು ತನ್ನ ಎಂಜಲನ್ನು ನೆಕ್ಕುವಂತೆ ಯುವಕನನ್ನು ಬಲವಂತವಾಗಿ ಕೃತ್ಯಕ್ಕೆ ದೂಡಿದ್ದಾರೆ ಎಂದು ಹಿಂದೂ ಪತ್ರಿಕೆ ವರದಿ ಮಾಡಿದೆ. ಅಲ್ಲದೇ ಯುವಕನ ಮನೆಯ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸುವುದಾಗಿ ಬೆದರಿಕೆಯನ್ನು ಹಾಕಲಾಗಿದೆ ಎನ್ನುತ್ತಿವೆ ಮೂಲಗಳು.

Loading...


ಈ ಸಂಬಂಧ ‘ಟೈಮ್ಸ್​ ಆಫ್​ ಇಂಡಿಯಾ’ಗೆ ಪ್ರತಿಕ್ರಿಯಿಸುವ ಯುವಕನ ತಂದೆ, ನಾವು ಭಯದ ವಾತಾವರಣದಲ್ಲಿ ಬದುಕುತ್ತಿದ್ಧೇವೆ. ನನ್ನ ಮಗ ಮತ್ತು ಸೊಸೆ ಇಬ್ಬರು ಕಾಣೆಯಾಗಿದ್ದಾರೆ. ಅವರು ಊರಿಗೆ ಬಾರದಂತೆ ಬೆದರಿಕೆ ಹಾಕಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನು ಪೊಲೀಸರು ಕೂಡ ನಮ್ಮ ದೂರನ್ನು ಸ್ವೀಕರಿಸಿಲ್ಲ. ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ನಮ್ಮ ಸುದ್ದಿ ಪ್ರಸಾರವಾದ ಮೇಲೆ ದೂರನ್ನು ಸ್ವೀಕರಿಸಿದ್ಧಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್​ ಅಧಿಕಾರಿಯೊಬ್ಬರು ನಾವು 5 ಜನರ ವಿರುದ್ಧ ದೂರು ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ದಲಿತ ಯುವಕನ ಮೇಲೆ ದೌರ್ಜನ್ಯ ನಡೆಸಿದ್ದಕ್ಕೆ ಸೆಕ್ಷನ್ 147, 323, 506 ಮತ್ತು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಅಫ್​ಐಆರ್​ ದಾಖಲಿಸಿದ್ದೇವೆ. ನರೇಶ್​ ಸೋಲಂಕಿ, ಕುಲ್ದೀಪ್​, ವಿಷ್ಣು, ಬಿಲ್ಲು ಮತ್ತು ಭುರಾ ಮತ್ತು ಊರಿನ ಎಲ್ಲಾ ಗ್ರಾಮಸ್ಥರ ವಿರುದ್ಧ ದೂರು ದಾಖಲಿಕೊಂಡಿದ್ಧೇವೆ. ಪ್ರಮುಖವಾಗಿ ಮೂವರು ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದೆ ಎಂದರು. ಆದರೆ, ಇದುವರಗೆ ಯಾರನ್ನೂ ಬಂಧಿಸಿಲ್ಲ ಎನ್ನುತ್ತಿವೆ ಮೂಲಗಳು.
First published:June 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...