Dalit Boy Death: ದಲಿತ ಬಾಲಕನ ಸಾವಿಂದ ಕಂಗೆಟ್ಟ ಕಾಂಗ್ರೆಸ್; ಏನಿದು ಪ್ರಕರಣ?

 ಜಲೋರ್‌ನಲ್ಲಿ ಕುಡಿಯುವ ನೀರಿನ ಮಡಕೆಯನ್ನು ಮುಟ್ಟಿದ್ದಕ್ಕಾಗಿ ಶಾಲಾ ಶಿಕ್ಷಕರಿಂದ ಥಳಿಸಲ್ಪಟ್ಟ ಒಂಬತ್ತು ವರ್ಷದ ದಲಿತ ಬಾಲಕನ ಸಾವಿನ ಎರಡು ದಿನಗಳ ನಂತರ ಬರನ್-ಅಟ್ರು ಶಾಸಕ ಸೋಮವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ರಾಜಸ್ಥಾನ: ದಲಿತ ಸಮುದಾಯದ ಮೇಲಿನ ದೌರ್ಜನ್ಯ ಮತ್ತು ಪಕ್ಷದ ಬೆಂಬಲಿಗ ಶಾಸಕ ಪನಾ ಚಂದ್ ಮೇಘವಾಲ್ ವಿರುದ್ಧದ ದೌರ್ಜನ್ಯಕ್ಕೆ ಬೇಸರ ವ್ಯಕ್ತಪಡಿಸಿ ರಾಜಸ್ಥಾನದ ಬರಾನ್ ಮುನ್ಸಿಪಲ್ ಕೌನ್ಸಿಲ್‌ನ 12 ಕಾಂಗ್ರೆಸ್ ಕೌನ್ಸಿಲರ್‌ಗಳು (Rajasthan Congress Councillors) ಮಂಗಳವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ. ಜಲೋರ್‌ನಲ್ಲಿ ಕುಡಿಯುವ ನೀರಿನ ಮಡಕೆಯನ್ನು ಮುಟ್ಟಿದ್ದಕ್ಕಾಗಿ ಶಾಲಾ ಶಿಕ್ಷಕರಿಂದ ಥಳಿಸಲ್ಪಟ್ಟ ಒಂಬತ್ತು ವರ್ಷದ ದಲಿತ ಬಾಲಕನ ಸಾವಿನ ಎರಡು ದಿನಗಳ ನಂತರ ಬರನ್-ಅಟ್ರು ಶಾಸಕ ಸೋಮವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ (Ashok Gehlot) ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ. 

    ಕಾಂಗ್ರೆಸ್ ನಾಯಕ ಮತ್ತು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮಂಗಳವಾರ ಬಾಲಕನ ಮನೆಗೆ ಆಗಮಿಸಿ ದಲಿತ ಸಮುದಾಯದ ವಿಶ್ವಾಸವನ್ನು ಗೆಲ್ಲಲು ಬಲವಾದ ಸಂದೇಶವನ್ನು ನೀಡಬೇಕಾಗಿದೆ ಎಂದು ಕಾಂಗ್ರೆಸ್ ಕೌನ್ಸಿಲರ್‌ಗಳು ಆಗ್ರಹ ವ್ಯಕ್ತಪಡಿಸಿದ್ದಾರೆ.

    ವಿವಿಧ ನಾಯಕರಿಂದ ಬಾಲಕನ ಮನೆಗೆ ಭೇಟಿ
    ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮಮತಾ ಭೂಪೇಶ್, PWD ಸಚಿವ ಭಜನ್ ಲಾಲ್ ಜಾತವ್ ಮತ್ತು ವಿಪತ್ತು ನಿರ್ವಹಣೆ ಮತ್ತು ಪರಿಹಾರ ಸಚಿವ ಗೋವಿಂದ್ ರಾಮ್ ಮೇಘವಾಲ್ ಅವರೊಂದಿಗೆ ಬಾಲಕನ ಮನೆಗೆ ಭೇಟಿ ನೀಡಿದ್ದಾರೆ.

    ಏನಿದು ಪ್ರಕರಣ?
    ಇತ್ತೀಚೆಗಷ್ಟೇ ರಾಜ್ಯದ ಜಲೋರ್ ಪ್ರದೇಶದಲ್ಲಿ ನೀರಿನ ಮಡಕೆಯನ್ನು ಮುಟ್ಟಿದ್ದಕ್ಕಾಗಿ ತನ್ನ ಶಿಕ್ಷಕರಿಂದ ಥಳಿಸಲ್ಪಟ್ಟ ದಲಿತ ಬಾಲಕ ಮೃತಪಟ್ಟಿದ್ದ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಬೆಂಕಿಯ ಕೆನ್ನಾಲಿಗೆಗೆ ಒಳಪಡಿಸಿದೆ. ಪ್ರತಿಪಕ್ಷಗಳಿಂದ ಮಾತ್ರವಲ್ಲದೆ ಅವರ ಸ್ವಂತ ಪಕ್ಷದಿಂದಲೂ ಆಕ್ರೋಶ ವ್ಯಕ್ತವಾಗಿದೆ.

    ಇದನ್ನೂ ಓದಿ: Coming Soon: ಪ್ರಧಾನಿ ಕಚೇರಿಗೆ ನೇರ ಸುರಂಗ ಮಾರ್ಗ! ಏನಿದು ಹೊಸ ಯೋಜನೆ?

    ರಾಜಸ್ಥಾನದ ಜಲೋರ್ ಜಿಲ್ಲೆಯ ಸುರಾನಾ ಗ್ರಾಮದ ಖಾಸಗಿ ಶಾಲೆಯ ವಿದ್ಯಾರ್ಥಿಯೊಬ್ಬ ಜುಲೈ 20 ರಂದು ಕುಡಿಯುವ ನೀರಿನ ಮಡಕೆಯನ್ನು ಮುಟ್ಟಿದ್ದಕ್ಕಾಗಿ  ಶಿಕ್ಷಕನೋರ್ವ ಬಾಲಕನನ್ನು ಥಳಿಸಿದ್ದ. ಗಾಯಗೊಂಡಿದ್ದ ಬಾಲಕ ಆಗಸ್ಟ್ 13 ರಂದು ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

    ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್​ಗೆ ತಲೆಬಿಸಿ ಶುರು
    ರಾಜ್ಯದ ಕಾಂಗ್ರೆಸ್ ಸಹೋದ್ಯೋಗಿಗಳಿಂದ ಹಿಡಿದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್), ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಮತ್ತು ಕೋಪಗೊಂಡ ಪ್ರತಿಪಕ್ಷಗಳು, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಪ್ರಸ್ತುತ ಎಲ್ಲಾ ದಿಕ್ಕುಗಳಿಂದಲೂ ತೀಕ್ಷ್ಣ ಪ್ರತಿಕ್ರಿಯೆಗಳನ್ನು ಎದುರಿಸುತ್ತಿದ್ದಾರೆ.

    ಇದನ್ನೂ ಓದಿ: 18 Foetuses Found: ತ್ಯಾಜ್ಯ ಎಸೆಯುವ ಮೈದಾನದಲ್ಲಿ 18 ಭ್ರೂಣ ಪತ್ತೆ!

    2020 ರಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯವೆದ್ದಿದ್ದ ಮಾಜಿ ಉಪಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ಮಂಗಳವಾರ ದಲಿತ ಬಾಲಕನ ಹತ್ಯೆಯಂತಹ ಘಟನೆಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದು ಸೂಚಿಸಿದ್ದಾರೆ.  ಲಾಠಿ ಚಾರ್ಜ್ ಮಾಡಿದ ಸ್ಥಳೀಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕರೆ ನೀಡಿದ್ದಾರೆ.

    ವ್ಯವಸ್ಥೆ ಬದಲಾಯಿಸಿ ಎಂದ ಸಚಿನ್ ಪೈಲಟ್
    ಮಂಗಳವಾರ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಮುಸುಕು ಟೀಕೆ ಮಾಡಿದ ಸಚಿನ್ ಪೈಲಟ್, ನಾವು ದಲಿತರೊಂದಿಗೆ ನಿಲ್ಲುತ್ತೇವೆ ಎಂಬ ವಿಶ್ವಾಸವನ್ನು ನಾವು ದಲಿತರಲ್ಲಿ ತುಂಬಬೇಕು. ಬೇರೆ ಆಯ್ಕೆ ಇಲ್ಲ. ವ್ಯವಸ್ಥೆಯನ್ನು ಬದಲಾಯಿಸಲು ಸರ್ಕಾರ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
    Published by:guruganesh bhat
    First published: