• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Dalai Lama: 8 ವರ್ಷದ ಬಾಲಕನನ್ನು ಬೌದ್ಧ ಧರ್ಮದ ಮುಂದಿನ ಆಧ್ಯಾತ್ಮಿಕ ನಾಯಕನನ್ನಾಗಿ ಘೋಷಿಸಿದ ದಲೈ ಲಾಮಾ!

Dalai Lama: 8 ವರ್ಷದ ಬಾಲಕನನ್ನು ಬೌದ್ಧ ಧರ್ಮದ ಮುಂದಿನ ಆಧ್ಯಾತ್ಮಿಕ ನಾಯಕನನ್ನಾಗಿ ಘೋಷಿಸಿದ ದಲೈ ಲಾಮಾ!

Dalai Lama

Dalai Lama

ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಪ್ರಮುಖ ಆಧ್ಯಾತ್ಮಿಕ ನಾಯಕ ಎಂದು ಘೋಷಣೆಯಾದ ಈ ಎಂಟು ವರ್ಷದ ಬಾಲಕ 2015 ರಲ್ಲಿ ಯುಎಸ್‌ನಲ್ಲಿ ಜನಿಸಿದ್ದು, ತಂದೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಮಂಗೋಲಿಯನ್ ಸಂಸತ್ತಿನ ಮಾಜಿ ಸದಸ್ಯನ ಮೊಮ್ಮಗ ಈತ ಎಂದು ವರದಿಯಾಗಿದೆ.

ಮುಂದೆ ಓದಿ ...
  • Trending Desk
  • 2-MIN READ
  • Last Updated :
  • New Delhi, India
  • Share this:

ಬೌದ್ಧ ಧರ್ಮದ ಧರ್ಮಗುರು ದಲೈಲಾಮಾ (Dalai Lama) ಅವರು ಮಂಗೋಲಿಯಾದಲ್ಲಿ ಜನಿಸಿ, ಅಮೆರಿಕಾದಲ್ಲಿ ಬೆಳೆದ 8 ವರ್ಷದ ಬಾಲಕನನ್ನು ಟಿಬೆಟಿಯನ್ ಬೌದ್ಧ ಧರ್ಮದ (Buddhist) ಮೂರನೇ ಅತ್ಯಂತ ಹಿರಿಯ ಲಾಮಾ ಅಥವಾ ಆಧ್ಯಾತ್ಮಿಕ ನಾಯಕ ಎಂದು ಘೋಷಿಸಿದ್ದಾರೆ. ಸದ್ಯ ಈ ಘೋಷಣೆ ಹಲವರಲ್ಲಿ ಅಚ್ಚರಿ ಉಂಟು ಮಾಡಿದ್ದು, ಚೀನಾ ಸರ್ಕಾರದ ಕೆಂಗಣ್ಣಿಗೂ ಗುರಿಯಾಗುವ ಸಾಧ್ಯತೆಗಳಿವೆ.


ಬಾಲಕನಿಗೆ ʻಬೌದ್ಧ ಧರ್ಮದ 3ನೇ ಅತ್ಯುನ್ನತ ನಾಯಕʼ ಪಟ್ಟ
ಅಮೇರಿಕಾದ ಮಂಗೋಲಿಯನ್ ಬಾಲಕ ಹತ್ತನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಅವರನ್ನು ಟಿಬೆಟ್ ಧರ್ಮಗುರು 14ನೇ ದಲೈ ಲಾಮಾ ಘೋಷಣೆ ಮಾಡಿದ್ದಾರೆ.


ಇದನ್ನೂ ಓದಿ: Dalai Lama: ಭಾರತವೇ ನನ್ನ ಶಾಶ್ವತ ಮನೆ, ಚೀನಾಕ್ಕೆ ಮರಳುವುದಿಲ್ಲ! ಬೌದ್ಧ ಧರ್ಮಗುರು ದಲೈಲಾಮಾ ಸ್ಪಷ್ಟನುಡಿ


ಬಾಲಕನ ಜೊತೆ ಧಾರ್ಮಿಕ ಕಾರ್ಯಕ್ರಮದಲ್ಲಿ ದಲೈ ಲಾಮಾ ಭಾಗಿ!
ಅಲ್ಲದೇ ದಲೈ ಲಾಮ ಲಾಮಾ ಎಂಟು ವರ್ಷದ ಬಾಲಕನೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲೂ ತೊಡಗಿಕೊಂಡಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಮಂಗೋಲಿಯಾದ ಅತಿದೊಡ್ಡ ಗಂದನ್‌ಟೆಗ್‌ಚಿನ್ಲೆನ್ ಮಠದಲ್ಲಿ ನಡೆದ ಸಮಾರಂಭದಲ್ಲಿ ಹತ್ತನೇ ಖಲ್ಕಾ ಆಗಿ  ಆಯ್ಕೆ ಮಾಡಲಾಗಿದೆ. ಮಾರ್ಚ್ 8 ರಂದು ನಡೆದ ಸಮಾರಂಭದಲ್ಲಿ ಬಾಲಕನ ಜೊತೆ ಕಾರ್ಯಕ್ರಮದಲ್ಲಿ ದಲೈ ಲಾಮ ಭಾಗವಹಿಸಿದ್ದು, ಫೋಟೋಗಳು ವೈರಲ್‌ ಆಗಿವೆ ಎಂದು ಕೆಲ ಮಾಧ್ಯಮಗಳ ವರದಿಗಳು ತಿಳಿಸಿವೆ. ಈ ಸಮಾರಂಭದಲ್ಲಿ ಮಠದ ಅಬಾಟ್ ಮತ್ತು ಮಂಗೋಲಿಯಾದ ಉನ್ನತ ಲಾಮಾಗಳು ಭಾಗವಹಿಸಿದ್ದರು ಎನ್ನಲಾಗಿದೆ.


ಕಾರ್ಯಕ್ರಮದಲ್ಲಿ 600 ಅನುಯಾಯಿಗಳು
ಈ ಸಮಯದಲ್ಲಿ ಸುಮಾರು 600 ಅನುಯಾಯಿಗಳು ಭಾಗವಹಿಸಿದ್ದು, ತಮ್ಮ ಹೊಸ ಆಧ್ಯಾತ್ಮಿಕ ನಾಯಕನನ್ನು ಸ್ವಾಗತಿಸಿವೆ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಫೋಟೋಗಳು ಬಾಲಕ ಕೆಂಪು ಬಟ್ಟೆಗಳನ್ನು ಧರಿಸಿದ್ದಾಗಿ ಮತ್ತು 87 ವರ್ಷದ ದಲೈ ಲಾಮಾ ಈ ವೇಳೆ ಉಪಸ್ಥಿತರಿರುವುದನ್ನು ತೋರಿಸಿದೆ. ದಲೈ ಲಾಮಾ ಅವರು ಈ ಮಗುವನ್ನು 10ನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಅವರ ಪುನರ್ಜನ್ಮ ಎಂದು ಬಣ್ಣಿಸಿದ್ದಾರೆ.


ಬೌದ್ಧಧರ್ಮದಲ್ಲಿ ಧಾರ್ಮಿಕ ಮುಖಂಡರ ಪುನರ್ಜನ್ಮಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದೇ ವೇಳೆ ಮಾತನಾಡಿದ ದಲೈ ಲಾಮಾ "ನಾವು ಇಂದು ಅಮೆರಿಕದ ಮಂಗೋಲಿಯನ್ ಮಗುವನ್ನು ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಪ್ರಮುಖ ಆಧ್ಯಾತ್ಮಿಕ ನಾಯಕ ಎಂದು ಘೋಷಣೆ ಮಾಡುತ್ತಿದ್ದೇವೆ. ಇದು 10 ನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಅವರ ಪುನರ್ಜನ್ಮ" ಎಂದು ದಲೈ ಲಾಮ ಅನುಯಾಯಿಗಳನ್ನು ಉದ್ದೇಶಿಸಿ ಹೇಳಿದ್ದಾರೆ.


ಇದನ್ನೂ ಓದಿ: Kalaburagi: ಕರುನಾಡಿನಲ್ಲಿ 70 ಎಕರೆಯ ಬೌದ್ಧ ವಿಹಾರ! 2 ಸಾವಿರ ಭಕ್ತರಿಂದ ಒಂದೇ ಸಲಕ್ಕೆ ಪ್ರಾರ್ಥನೆ!


ಬಾಲಕನ ಹಿನ್ನೆಲೆ
ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಪ್ರಮುಖ ಆಧ್ಯಾತ್ಮಿಕ ನಾಯಕ ಎಂದು ಘೋಷಣೆಯಾದ ಈ ಎಂಟು ವರ್ಷದ ಬಾಲಕ 2015 ರಲ್ಲಿ ಯುಎಸ್‌ನಲ್ಲಿ ಜನಿಸಿದ್ದು, ತಂದೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಮಂಗೋಲಿಯನ್ ಸಂಸತ್ತಿನ ಮಾಜಿ ಸದಸ್ಯನ ಮೊಮ್ಮಗ ಈತ ಎಂದು ವರದಿಯಾಗಿದೆ. ಅಲ್ಲದೇ ಈ ಬಾಲಕನಿಗೆ ಅಮೆರಿಕಾದಲ್ಲಿ ಇಬ್ಬರು ಅವಳಿ ಸಹೋದರರು ಕೂಡ ಇದ್ದಾರೆ ಎನ್ನಲಾಗಿದೆ.


ಚೀನಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಾ ದಲೈ ಲಾಮಾ ಅವರ ನಡೆ?
ಇತ್ತ ಈ ಕ್ರಮವು ಹಲವರಲ್ಲಿ ಅಚ್ಚರಿ ಉಂಟು ಮಾಡಿದರೆ, ಅತ್ತ ಎಂಟು ವರ್ಷದ ಮಗುವನ್ನು ಟಿಬೆಟಿಯನ್ ಬೌದ್ಧಧರ್ಮದಲ್ಲಿ ಮೂರನೇ ಅತ್ಯುನ್ನತ ಲಾಮಾ ಎಂದು ಘೋಷಿಸಿರುವ ಕ್ರಮವು ಚೀನಾವನ್ನು ಕೆರಳಿಸುವ ಸಾಧ್ಯತೆ ಕೂಡ ಇದೆ. ಏಕೆಂದರೆ ತನ್ನದೇ ಆದ ಸರ್ಕಾರದಿಂದ ಆಯ್ಕೆಯಾದ ಬೌದ್ಧ ನಾಯಕರನ್ನು ಮಾತ್ರ ಚೀನಾ ಸರ್ಕಾರ ಇಲ್ಲಿ ಒಪ್ಪಿಕೊಳ್ಳುವುದರಿಂದ ಹೊರಗಿನವರಿಗೆ ಮಣೆ ಹಾಕಿದ ಪದ್ಧತಿಯನ್ನು ವಿರೋಧಿಸಬಹುದು. ಹೀಗಾಗಿ ಈ ಪಟ್ಟಾಭಿಷೇಕ ಚೀನಾದಾದ್ಯಂತ ಉತ್ಸಾಹ ಮತ್ತು ಆತಂಕ ಎರಡಕ್ಕೂ ಕಾರಣವಾಗಿದೆ.


1995 ರಲ್ಲಿ, ದಲೈ ಲಾಮಾ ಅವರು 11 ನೇ ಪಂಚೆಮ್ ಲಾಮಾ ಎಂದು ಹೆಸರಿಸಿದಾಗ, ಚೀನಾದ ಅಧಿಕಾರಿಗಳು ಪಂಚೆಮ್ ನನ್ನು ಮತ್ತು ಅವರ ಕುಟುಂಬವನ್ನು ಅಪಹರಿಸಿದ ನಂತರ ಆ ಕುಟುಂಬ ಕಣ್ಮರೆಯಾಗಿತ್ತು. ಇದೀಗ ಅಮೇರಿಕನ್ ಮಂಗೋಲಿಯನ್ ಬಾಲಕನನ್ನು ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಪ್ರಮುಖ ಆಧ್ಯಾತ್ಮಿಕ ನಾಯಕನಾಗಿ ಘೋಷಣೆ ಮಾಡಲಾಗಿದೆ. ಇದು ಚೀನಾದಲ್ಲಿ ಇನ್ನೆಷ್ಟು ಸಂಘರ್ಷಗಳಿಗೆ ಕಾರಣವಾಗುತ್ತದೆಯೋ ಕಾದು ನೋಡಬೇಕು.

top videos
    First published: