Good News: ಮಗಳಿಗಾಗಿ ರೋಬೋ ತಯಾರಿಸಿದ ದಿನಗೂಲಿ ಕಾರ್ಮಿಕ!

ರೋಬೋ

ರೋಬೋ

ಆನ್‌ಲೈನ್‌ನಲ್ಲಿ ಸಾಫ್ಟ್‌ವೇರ್‌ನ ಮೂಲಭೂತ ವಿಷಯಗಳ ಬಗ್ಗೆ ಮಾಹಿತಿಯನ್ನು ಹುಡುಕಿ ತಿಳಿದುಕೊಂಡು ರೋಬೋವನ್ನು ತಯಾರಿಸಿದ್ದಾರೆ ಇವರು!

  • Share this:

ಪಣಜಿ: ತಮ್ಮ ವಿಶೇಷಚೇತನ ಮಗಳಿಗೆ ಊಟ ಹಾಕಲು ಸಾಧ್ಯವಾಗುತ್ತಿಲ್ಲ ಎಂಬ ನೋವಿನಿಂದ ಗೋವಾದ ದಿನಗೂಲಿ ಕಾರ್ಮಿಕರೊಬ್ಬರು (Daily wage Worker) ಯಾರ ಬೆಂಬಲವೂ ಇಲ್ಲದೇ ರೋಬೋ (Robot) ನಿರ್ಮಿಸಿ ಆಹಾರ ನೀಡುತ್ತಿದ್ದಾರೆ. ಯಾವುದೇ ತಾಂತ್ರಿಕ ಜ್ಞಾನವಿಲ್ಲದೆಯೂ ರೋಬೋ ತಯಾರಿಸಿ ಭಾರೀ ಸಾಧನೆ ಮಾಡಿದ್ದಾರೆ. ತಾವೇ ತಯಾರಿಸಿ ರೋಬೋಗೆ 'ಮಾ ರೋಬೋಟ್' (Maa Robot) ಎಂದು ಶೀರ್ಷಿಕೆ ನೀಡಿದ್ದಾರೆ. ದಕ್ಷಿಣ ಗೋವಾದ ಪೊಂಡಾ ತಾಲೂಕಿನ ಬೇಥೋರಾ ಗ್ರಾಮದ ನಿವಾಸಿಯಾದ 40ರ ಹರೆಯದ ಕದಂ ಅವರೇ ರೋಬೋ ನಿರ್ಮಿಸಿದ ವ್ಯಕ್ತಿ. ಗೋವಾ ಸ್ಟೇಟ್ ಇನ್ನೋವೇಶನ್ ಕೌನ್ಸಿಲ್ ಬಿಪಿನ್ ಕದಂ ಅವರ ಆವಿಷ್ಕಾರವನ್ನು ಶ್ಲಾಘಿಸಿದೆ.  ದಿನಗೂಲಿ ಕೆಲಸ ಮಾಡುತ್ತಾ ಕೂಲಿ ಕೆಲಸ ಮಾಡುತ್ತಿರುವ ಅವರ 14 ವರ್ಷದ ವಿಶೇಷಚೇತನ ಮಗಳಿಗೆ ಊಟ ಉಣಿಸಲು ಎಂದು ಈ ರೋಬೋ ತಯಾರಿಸಿದ್ದಾರೆ.


ಕದಂ ಅವರ ಪತ್ನಿ ಎರಡು ವರ್ಷಗಳಿಂದ ಹಾಸಿಗೆ ಮೇಲೇ ಇರಬೇಕಾದ ಅನಾರೋಗ್ಯದ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ಕದಂ ಅವರ ವಿಶೇಷಚೇತನ ಮಗಳಿಗೆ ಊಟ ಮಾಡಿಸಲು ಸಾಧ್ಯವಿರಲಿಲ್ಲ. ಕದಂ ಅವರೂ ಪ್ರತಿದಿನ 12 ಗಂಟೆ ಕರ್ತವ್ಯ ನಿರ್ವಹಿಸಬೇಕಾದ ಕೆಲಸದಲ್ಲಿದ್ದಾರೆ. ಹೀಗಾಗಿ ಮಗಳಿಗೆ ಊರ ಬಡಿಸು ರೋಬೋ ತಯಾರಿಸಿದ್ದಾಗಿ ಕದಂ ಅವರು ತಿಳಿಸಿದ್ದಾರೆ.


ಹಾಸಿಗೆ ಹಿಡಿದ ಹೆಂಡತಿ, ಮಗಳಿಗೆ ಊಟ ಮಾಡಿಸುವವರಿಲ್ಲ
ಎರಡು ವರ್ಷಗಳ ಹಿಂದೆ ನನ್ನ ಹೆಂಡತಿ ಹಾಸಿಗೆ ಹಿಡಿದಿದ್ದಳು. ನಮ್ಮ ಮಗಳಿಗೆ ಊಟ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಬೇಸರಗೊಂಡು ಅಳುತ್ತಿದ್ದಳು. ನಮ್ಮ ಮಗಳಿಗೆ ಆಹಾರ ಕೊಡಲು ನಾನು ಕೆಲಸದಿಂದ ಬರಬೇಕಾಯಿತು ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: Mann Ki Baat: ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಮೋದಿ ಮಾತು, ಬೆಂಗಳೂರು ಮೂಲದ ಸಂಸ್ಥೆ ಕಾರ್ಯಕ್ಕೆ ಶ್ಲಾಘನೆ


ಯಾರ ಮೇಲೂ ಅವಲಂಬಿತರಾಗದೆ ತಮ್ಮ ಮಗಳಿಗೆ ಸಮಯಕ್ಕೆ ಸರಿಯಾಗಿ ಊಟ ಸಿಗುವಂತೆ ಏನಾದರೂ ಮಾಡಬೇಕು ಎಂದು ಕದಂ ಅವರ ಪತ್ನಿ ಒತ್ತಾಯಿಸಿದ್ದರು. ಹೀಗಾಗಿ ರೋಬೋ ತಯಾರಿಸಿದ್ದಾಗಿ ಅವರು ತಿಳಿಸಿದ್ದಾರೆ.


ಆನ್​ಲೈನ್ ನೋಡಿ ಕಲಿತರು!
ಇಂತಹ ರೋಬೋಟ್ ಎಲ್ಲಿಯೂ ಲಭ್ಯವಿಲ್ಲ. ಹಾಗಾಗಿ ನಾನೇ ಅದನ್ನು ವಿನ್ಯಾಸಗೊಳಿಸಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ. ಕದಂ ಅವರು ಆನ್‌ಲೈನ್‌ನಲ್ಲಿ ಸಾಫ್ಟ್‌ವೇರ್‌ನ ಮೂಲಭೂತ ವಿಷಯಗಳ ಬಗ್ಗೆ ಮಾಹಿತಿಯನ್ನು ಹುಡುಕಿ ತಿಳಿದುಕೊಂಡು ರೋಬೋವನ್ನು ತಯಾರಿಸಿದ್ದಾರೆ.


ಕದಂ ಅವರಿಗೆ ಆರ್ಥಿಕ ಸಹಾಯದ ಭರವಸೆ
ರೋಬೋವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮತ್ತು ಅದರ ವಾಣಿಜ್ಯ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು ಕದಂ ಅವರಿಗೆ ಆರ್ಥಿಕ ಸಹಾಯವನ್ನು ನೀಡುವುದಾಗಿ ಗೋವಾ ಸ್ಟೇಟ್ ಇನ್ನೋವೇಶನ್ ಕೌನ್ಸಿಲ್ ತಿಳಿಸಿದೆ.


ಇದನ್ನೂ ಓದಿ: Marriages: ಅಬ್ಬಬ್ಬಾ! ಈತನ ಹೆಂಡ್ತೀರ ಸಂಖ್ಯೆಯೇ 53! ಈ ಸಾಹಸದ ಹಿಂದಿದೆ ವಿಚಿತ್ರ ಕಾರಣ


ಭೂತಾನ್​ ಪ್ರವಾಸಕ್ಕೆ ಇದು ಸುಸಮಯ; ಶುಲ್ಕ ಬರೀ ₹ 1200 ಮಾತ್ರ!ಕೊರೊನಾ ಸಮಯದಲ್ಲಿ ಎಲ್ಲಾ ರಾಷ್ಟ್ರಗಳು ತಮ್ಮ ತಮ್ಮ ಗಡಿಯಲ್ಲಿ ನಿರ್ಬಂಧ ಹೇರಿದ್ದವು. ಇದೀಗ, ಕೊರೊನಾ ಸಾಂಕ್ರಾಮಿಕದ ತೀವ್ರತೆ ತಗ್ಗಿದೆ. ಹೀಗಾಗಿ, ಬಹುತೇಕ ದೇಶಗಳು ತಮ್ಮ ಗಡಿಯನ್ನು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಮುಕ್ತಗೊಳಿಸಿದೆ. ಅದೇ ಸಾಲಿಗೆ ಈಗ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಭೂತಾನ್ (Bhutan)‌ ಕೂಡ ಸೇರಿದೆ. ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ಈಗ ಭಾರತ ಭೂತಾನ್ ಗಡಿ ತೆರೆದುಕೊಳ್ಳುತ್ತಿದೆ. ಅಸ್ಸಾಂ ಗಡಿಯಲ್ಲಿರುವ (Assam Border) ಸಮ್ದ್ರೂಪ್ ಜೊಂಗ್‌ಖಾರ್ ಮತ್ತು ಗೆಲೆಫುನಲ್ಲಿನ ಭಾರತ-ಭೂತಾನ್ ಗಡಿ (India-Bhutan Border) ಗೇಟ್‌ಗಳು ಪ್ರವಾಸಿಗರಿಗೆ ತೆರೆದುಕೊಂಡಿದೆ. ಇಲ್ಲಿದೆ ಈ ಕುರಿತ ಎಲ್ಲ ವಿವರ.


2 ವರ್ಷಗಳ ನಂತರ ಭೂತಾನ್ ಪುನಾರಂಭ
ಕೊರೋನಾ, ಲಾಕ್‌ ಡೌನ್‌ ಅಂತಾ ಬರೋಬ್ಬರಿ 2 ವರ್ಷಗಳ ನಂತರ ಭೂತಾನ್ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿದೆ. ಪ್ರವಾಸೋದ್ಯಮ, ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸುಸ್ಥಿರ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಪ್ರವಾಸಿಗರಿಗೆ ಹೊಸ ಶುಲ್ಕವನ್ನು ಸಹ ವಿಧಿಸಲಾಗುತ್ತಿದೆ. ಭೂತಾನದ ದೇಶದ ಈ ಕ್ರಮ ಸಹಜವಾಗಿ ಪ್ರವಾಸಿಗರಿಗೆ ದುಬಾರಿ ಕೂಡ ಆಗಿದೆ.

Published by:ಗುರುಗಣೇಶ ಡಬ್ಗುಳಿ
First published: