ದೆಹಲಿ(ಜೂ.10): ಜನವರಿಯಲ್ಲಿ ಕೊರೋನಾ (Covid-19) ಮೂರನೇ ಅಲೆಯಿಂದ ಭಾರತದ ಕೋವಿಡ್ -19 ಸೋಂಕುಗಳ ತೀವ್ರ ಏರಿಕೆ (Spike) ಕಂಡಿತ್ತು. ಇದೀಗ ದೈನಂದಿನ ಪ್ರಕರಣಗಳು (Daily Case) ಕಳೆದ 99 ದಿನಗಳಲ್ಲಿ ಇದೇ ಮೊದಲ ಬಾರಿಗೆ 7,000 ಕ್ಕೆ ತಲುಪಿದೆ. 7 ದಿನಗಳ ಸರಾಸರಿಯು 10 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಡಬಲ್ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಭಾರತದಲ್ಲಿ ಬುಧವಾರ 7,230 ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರ (Maharashtra) ಮತ್ತು ಕೇರಳದಲ್ಲಿ ಸುಮಾರು 70% ನಷ್ಟು ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ (Delhi) ಗುರುವಾರ 622 ಪ್ರಕರಣಗಳು ದಾಖಲಾಗಿವೆ. ಮೇ 14 ರಿಂದ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಕೊರೋನಾ ಮತ್ತೊಂದು ಅಲೆಯ ಸೂಚನೆಯನ್ನು ಕೊಟ್ಟಿದೆ. ಹೀಗಿದ್ದರೂ ಅದೃಷ್ಟವಶಾತ್ ಕೊರೋನಾ ಸಾವಿನ ಪ್ರಕರಣ ಕಮ್ಮಿ ಇದೆ.
ದೈನಂದಿನ ಕೊರೋನಾ ಟೆಸ್ಟ್ ಪಾಸಿಟಿವ್ ರೇಟ್ (TPR) - ಒಟ್ಟು ಪರೀಕ್ಷೆಗಳಲ್ಲಿ ಪಾಸಿಟಿವ್ ಮಾದರಿಗಳ ಶೇಕಡಾವಾರು - ಬುಧವಾರ 2.3% ಕ್ಕೆ ಏರಿದೆ. ಇದು ಈ ವರ್ಷದ ಫೆಬ್ರವರಿ 15 ರಿಂದ ಕಂಡು ಬಂದ ಅತ್ಯಧಿಕ ಏರಿಕೆ.
ಸಾವಿನ ಸಂಖ್ಯೆ ಕಡಿಮೆಯಾಗುತ್ತಿರುವುದೇ ಸಮಾಧಾನಕರ
ಆದರೂ ಸಾವಿನ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಭಾನುವಾರಕ್ಕೆ ಭಾರತದಲ್ಲಿ 24 ಹೊಸ ಕೊರೋನಾ ಸಾವುಗಳು ದಾಖಲಾಗಿವೆ. ಈ ವಾರ ಇಲ್ಲಿಯವರೆಗೆ 11 ಅನ್ನು ಕೊರೋನಾ ಸಾವು ವರದಿಯಾಗಿದೆ. ಅದರಲ್ಲಿ ಆರು ಗುರುವಾರ ವರದಿಯಾಗಿದೆ. ಆದರೆ ಇದರಲ್ಲಿ ಹಲವು ರಾಜ್ಯಗಳು ದಿನದ ಡೇಟಾವನ್ನು ಇನ್ನೂ ಪೋಸ್ಟ್ ಮಾಡಬೇಕಾಗಿದೆಯಷ್ಟೆ.
ಇದನ್ನೂ ಓದಿ: COVID-19 India: ದೇಶದಲ್ಲಿ ಏಕಾಏಕಿ ಕೊರೊನಾ ಸ್ಫೋಟ, ಒಂದೇ ದಿನ ಶೇ.40ರಷ್ಟು ಹೆಚ್ಚು ಪಾಸಿಟಿವ್ ಕೇಸ್
ಗುರುವಾರದ ಪ್ರಕರಣಗಳ ಸಂಖ್ಯೆ 7,500 ದಾಟುವ ಸಾಧ್ಯತೆಯೊಂದಿಗೆ, ಏಳು ದಿನಗಳ ದೈನಂದಿನ ಪ್ರಕರಣಗಳ ಸರಾಸರಿ 5,000 (5,200 ಕ್ಕೆ) ದಾಟಿದೆ. ಇದು ಒಂಬತ್ತು ದಿನಗಳ ಹಿಂದೆ ಮೇ 31 ರಂದು 2,663 ರಿಂದ ಡಬಲ್ ಆಗಿದೆ.
ಮಹಾರಾಷ್ಟ್ರವು ಗುರುವಾರ 2,813 ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಇದು ಈ ವರ್ಷದ ಫೆಬ್ರವರಿ 15 ರಿಂದ ಅತಿ ಹೆಚ್ಚು ಕೇಸ್ ದಾಖಲೆ. ಮುಂಬೈ ಮಾತ್ರ 1,702 ಪ್ರಕರಣಗಳನ್ನು ಹೊಂದಿದೆ.
ದಕ್ಷಿಣ ಭಾರತದಲ್ಲಿ ಬಹುತೇಕ ಎಲ್ಲ ಕಡೆ ಕೊರೋನಾ ಏರಿಕೆ
ಕೇರಳದ ಸಂಖ್ಯೆಗಳು ಒಂದು ದಿನ ತಡವಾಗಿ ಬರುತ್ತವೆ. ರಾಜ್ಯದಲ್ಲಿ ಬುಧವಾರ 2,271 ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಮತ್ತು ಯುಟಿಗಳಾದ್ಯಂತ ಪ್ರಕರಣಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಗುರುವಾರ 471 ಹೊಸ ಪ್ರಕರಣಗಳು, ತಮಿಳುನಾಡು 185 ಮತ್ತು ತೆಲಂಗಾಣ 122 ಪ್ರಕರಣಗಳು ದಾಖಲಾಗಿವೆ.
ಏಪ್ರಿಲ್ ಅಂತ್ಯ ಮತ್ತು ಮೇ ಆರಂಭದಲ್ಲಿ ಉಲ್ಬಣಗೊಂಡ ನಂತರ ಪ್ರಕರಣಗಳು ಕಡಿಮೆಯಾಗುತ್ತಿದ್ದ ದೆಹಲಿ, ಮತ್ತೆ ಏರಿಕೆಯನ್ನು ವರದಿ ಮಾಡಲು ಪ್ರಾರಂಭಿಸಿದೆ. ಗುರುವಾರ ರಾಜಧಾನಿಯಲ್ಲಿ 622 ಪ್ರಕರಣಗಳು ದಾಖಲಾಗಿವೆ. ಇದು ಮೇ 14 ರಿಂದ ಅದರ ಅತ್ಯಧಿಕ ವನ್ ಡೇ ಕೇಸ್. ನೆರೆಯ ಹರಿಯಾಣದಲ್ಲಿ ಸ್ಪೈಕ್‌ನ ಲಕ್ಷಣಗಳು ಕಂಡುಬಂದಿವೆ. ಅಲ್ಲಿ ದೈನಂದಿನ ಪ್ರಕರಣಗಳು ಗುರುವಾರ 27 ದಿನಗಳ ಗರಿಷ್ಠ 348 ಪ್ರಕರಣಗಳನ್ನು ಮುಟ್ಟಿವೆ. ಯುಪಿ 157 ಪ್ರಕರಣಗಳನ್ನು ವರದಿ ಮಾಡಿದೆ.
ಇದನ್ನೂ ಓದಿ: Delhi Parents: ಹೋಂವರ್ಕ್ ಮಾಡದ್ದಕ್ಕೆ 5 ವರ್ಷದ ಮಗುವನ್ನು ಬಿಸಿಲಲ್ಲಿ ಮಲಗಿಸಿದ ಪೋಷಕರು!
ಗುಜರಾತ್ (ಗುರುವಾರ 117 ಪ್ರಕರಣಗಳು), ಬಂಗಾಳ (95), ಗೋವಾ (67), ರಾಜಸ್ಥಾನ (71, 2 ಸಾವು), ಚಂಡೀಗಢ (25), ಉತ್ತರಾಖಂಡ (32) ಮತ್ತು ಹಿಮಾಚಲ ಪ್ರದೇಶದಲ್ಲಿ (33) ಸೋಂಕುಗಳು ಹೆಚ್ಚುತ್ತಿವೆ.
ರಾಜ್ಯದಲ್ಲಿಯೂ ಕೊರೋನಾ ಏರಿಕೆ:
ಬೆಂಗಳೂರಿನಲ್ಲಿ ಗುರುವಾರ 458 ಹೊಸ ಕೊರೋನಾ ಕೇಸ್ ಪತ್ತೆಯಾಗಿದೆ. ಹಿಂದಿನ ದಿನಕ್ಕಿಂತ ಸುಮಾರು 100 ಪ್ರಕರಣಗಳು ಹೆಚ್ಚಿಗೆ ಪತ್ತೆಯಾಗಿರುವುದು ಉದ್ಯಾನ ನಗರಿಯಲ್ಲಿ ಮತ್ತೆ ವೈರಸ್ ಭೀತಿಯನ್ನು ಹೆಚ್ಚಿಸಿದೆ. ಬಿಬಿಎಂಪಿ ಡಾಟಾ ಪ್ರಕಾರ ಕೊರೋನಾ ರಿಕವರಿ ಸಂಖ್ಯೆ 208 ಆಗಿದ್ದರೆ ಕೊರೋನಾ ಸಾವಿನ ಸಂಖ್ಯೆ ಶೂನ್ಯದಲ್ಲಿದೆ. ಬಿಬಿಎಂಪಿ ಕೂಡಾ ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ