ಮನೆಯಲ್ಲಿ (Home) ಪ್ರಾಣಿಗಳನ್ನು (Animal) ಸಾಕಿಕೊಳ್ಳುವುದು ಮನಸ್ಸಿಗೆ ಎಷ್ಟು ಮುದವನ್ನು ನೀಡುತ್ತದೆಯೋ, ಅಷ್ಟೇ ಅದಕ್ಕೆ ನಾವು ಸಮಯವನ್ನು ಸಹ ಕೊಡಬೇಕಾಗುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಸಾಕುಪ್ರಾಣಿಗಳನ್ನು (Pets) ನೋಡಿಕೊಳ್ಳುವುದು ಅಷ್ಟೊಂದು ಸುಲಭದ ಕೆಲಸವಲ್ಲ ನೋಡಿ, ಅವುಗಳಿಗೆ ಪ್ರತಿದಿನ ಸ್ನಾನ ಮಾಡಿಸಬೇಕು, ಅವುಗಳ ಮೈ ಮೇಲಿನ ಕೂದಲನ್ನು ಸ್ವಚ್ಛಗೊಳಿಸಬೇಕು, ಅವುಗಳಿಗೆ ಆಹಾರ ನೀಡಬೇಕು ಮತ್ತು ಅವುಗಳಿಗೆ ಏನಾದರೂ ಅನಾರೋಗ್ಯ (Illness) ಕಾಣಿಸಿದರೆ ವೈದ್ಯರ ಬಳಿ ಕರೆದುಕೊಂಡು ಹೋಗಿ ಸೂಕ್ತವಾದ ಚಿಕಿತ್ಸೆಯನ್ನು ಕೊಡಿಸಬೇಕು. ಈ ಜವಾಬ್ದಾರಿಗಳನ್ನು (Responsibility) ಸಮರ್ಥವಾಗಿ ನಿಭಾಯಿಸಬಲ್ಲೆ ಅಂತ ಹೇಳೋರು ಮಾತ್ರ ಸಾಕುಪ್ರಾಣಿಗಳನ್ನು ತುಂಬಾನೇ ಚೆನ್ನಾಗಿ ಆರೈಕೆ ಮಾಡಲು ಸಾಧ್ಯ ಅಂತ ಹೇಳಬಹುದು.
ಮನೆಯಲ್ಲಿ ನಾವು ಈ ಪ್ರಾಣಿಗಳನ್ನು ಸಾಕಿಕೊಂಡರೆ, ಅವುಗಳನ್ನು ಆರೋಗ್ಯಕರವಾಗಿ ಮತ್ತು ಸಂತೋಷಕರವಾಗಿ ನೋಡಿಕೊಳ್ಳುವುದು ತುಂಬಾನೇ ಅತ್ಯಗತ್ಯವಾಗುತ್ತದೆ.
ಇಂದೋರ್ ನ ದಂಪತಿಗಳು ಶುರು ಮಾಡಿದ್ದಾರಂತೆ ಡಾಗಿ ಡಾಬಾ
ಇದರ ಬಗ್ಗೆ ಈಗೇಕೆ ಮಾತು ಅಂತೀರಾ? ಇಂದೋರ್ ನಲ್ಲಿ ನಾಯಿಗಳಿಗೆ ಮಾತ್ರ ಅಂತ ಒಂದು 'ಡಾಬಾ' ವನ್ನು ಶುರು ಮಾಡಿದ್ದಾರೆ ದಂಪತಿಗಳು.
ಅದರ ಹೆಸರು 'ದಿ ಡಾಗ್ಗಿ ಧಾಬಾ' ಅಂತ ಹೇಳಲಾಗುತ್ತಿದೆ. ಈ ವಿಶಿಷ್ಟ ರೆಸ್ಟೋರೆಂಟ್ ಅನ್ನು ವಿಶೇಷವಾಗಿ ನಾಯಿಗಳಿಗಾಗಿ ಅಥವಾ ತಮ್ಮ ನಾಯಿಗಳ ಆರೈಕೆಗೆ ಪ್ರಾಧಾನ್ಯತೆ ನೀಡುವ ಮಾಲಿಕರನ್ನು ಸಮಾನವಾಗಿ ಆಕರ್ಷಿಸಲು ಶುರು ಮಾಡಲಾಗಿದೆ.
ಈ ಅಸಾಮಾನ್ಯ ರೆಸ್ಟೋರೆಂಟ್ ಅನ್ನು ನಾಯಿ ಪ್ರೇಮಿ ಬಲರಾಜ್ ಝಾಲಾ ಮತ್ತು ಅವರ ಪತ್ನಿ ಶುರು ಮಾಡಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ಈ ಡಾಬಾ ನಾಯಿಗಳಿಗೆ ಆಹಾರ, ವಾಸ್ತವ್ಯ ಹೂಡಲು ಸ್ಥಳಾವಕಾಶ ಮತ್ತು ಹುಟ್ಟುಹಬ್ಬದ ಆಚರಣೆಯ ಆಯ್ಕೆಗಳನ್ನು ನೀಡುತ್ತದೆ ಅಂತೆ. ಇಷ್ಟೇ ಅಲ್ಲದೆ ನಿಮ್ಮ ಶ್ವಾನಗಳಿಗೆ ಈ ಧಾಬಾದಿಂದ ಆಹಾರವನ್ನು ಪಾರ್ಸೆಲ್ ಮೂಲಕವೂ ತರಿಸಬಹುದಾಗಿದೆ.
ಈ ವಿಶಿಷ್ಟವಾದ ಡಾಬಾ ಶುರು ಮಾಡಿದ್ದು ಹೇಗೆ ಅಂತೀರಾ?
ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಲಾಕ್ಡೌನ್ ಹೇರಿದ್ದಂತಹ ಸಮಯದಲ್ಲಿ ನಾಯಿಗಳು ಸಹ ಆಹಾರವನ್ನು ಹುಡುಕಲು ತುಂಬಾನೇ ಹೆಣಗಾಡುತ್ತಿದ್ದವು.
ಇದನ್ನು ಅರಿತುಕೊಂಡು ಝಾಲಾ ಅವರು ಈ ಧಾಬಾವನ್ನು ತೆರೆಯುವ ಆಲೋಚಿಸಿದರಂತೆ. ಝಾಲಾ ಅವರು ಆ ಸಮಯದಲ್ಲಿ ಮನೆಗೆ ರಾತ್ರಿ ಹಿಂದಿರುಗುವಾಗ ರಸ್ತೆಯ ಮಧ್ಯದಲ್ಲಿ ನೋಡಿದ ನಾಯಿಗಳಿಗೆ ತಮ್ಮ ಕೈಲಾದಷ್ಟು ಆಹಾರವನ್ನು ನೀಡುತ್ತಿದ್ದರು.
"ನಾನು ಮೊದಲಿನಿಂದಲೂ ನಾಯಿ ಪ್ರೇಮಿ. ನಾನು 2019 ರವರೆಗೆ ಒಂದು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದೆ, ಅಲ್ಲಿಂದ ರಾತ್ರಿ ಮನೆಗೆ ಹಿಂದಿರುಗುವಾಗ ನಾಯಿಗಳಿಗೆ ಆಹಾರವನ್ನು ತೆಗೆದುಕೊಂಡು ಬರುತ್ತಿದ್ದೆ.
ಆಗ ನನಗೆ ನಾಯಿಗಳಿಗಾಗಿ ಧಾಬಾ ತೆರೆಯುವ ಆಲೋಚನೆ ಬಂತು ಮತ್ತು ನಾನು ನನ್ನ ಹೆಂಡತಿಯೊಂದಿಗೆ ಸೇರಿಕೊಂಡು 2020 ರಲ್ಲಿ ಈ ಧಾಬಾವನ್ನು ತೆರೆದೆವು" ಎಂದು ಅವರು ಹೇಳಿದರು.
ಇದನ್ನೂ ಓದಿ:Dog Food: ನಿಮ್ಮ ನಾಯಿಗೆ ಆಹಾರ ಖರೀದಿ ಮಾಡುವಾಗ ಈ ವಿಚಾರ ನೆನಪಿರಲಿ
ನಿಮ್ಮ ಸಾಕುನಾಯಿಗಳಿಗೆ ಏನೆಲ್ಲಾ ಸಿಗುತ್ತೆ ಈ ಡಾಬಾದಲ್ಲಿ ನೋಡಿ..
ಇಲ್ಲಿ ಮೂಲ ಊಟದಿಂದ ಹಿಡಿದು ಸಸ್ಯಾಹಾರಿ ಮತ್ತು ಮಾಂಸಹಾರಿ ಆಹಾರಗಳವರೆಗೆ, ಧಾಬಾ ದಿನಕ್ಕೆ 7 ರಿಂದ 500 ರೂಪಾಯಿವರೆಗಿನ ಬೆಲೆಗಳೊಂದಿಗೆ ನಾಯಿ ಆಹಾರದ ಶ್ರೇಣಿಯನ್ನು ನೀಡುತ್ತದೆ.
ಅಷ್ಟೇ ಅಲ್ಲ, ಡಾಗಿ ಡಾಬಾ ನಾಯಿಗಳ ಹುಟ್ಟುಹಬ್ಬಕ್ಕಾಗಿ ಕಸ್ಟಮೈಸ್ ಮಾಡಿದ ಕೇಕ್ ಗಳನ್ನು ಸಹ ತಯಾರಿಸುತ್ತದೆ, ಇದು ಅವರ ವಿಶೇಷ ದಿನವನ್ನು ವಿಶೇಷ ಶೈಲಿಯಲ್ಲಿ ಆಚರಿಸಲು ಅನುವು ಮಾಡಿಕೊಡುತ್ತದೆ.
"ನನ್ನ ವ್ಯವಹಾರವು ಆನ್ಲೈನ್ ನಲ್ಲಿಯೂ ಕಾರ್ಯನಿರ್ವಹಿಸುತ್ತದೆ. ನಾಯಿ ಆಹಾರ ವಿತರಣಾ ಹುಡುಗರನ್ನು ಸಹ ಇರಿಸಲಾಗಿದೆ, ಅವರು ಎರಡೂ ಬಾರಿ ಆಹಾರವನ್ನು ಪೂರೈಸುತ್ತಾರೆ" ಎಂದು ಝಾಲಾ ಹೇಳಿದರು.
ಧಾಬಾವು ನಾಯಿಗಳಿಗೆ ಬೋರ್ಡಿಂಗ್ ಸೇವೆಗಳನ್ನು ಸಹ ನೀಡುತ್ತದೆ, ಒಟ್ಟಿನಲ್ಲಿ ಇದು ಸಾಕು ನಾಯಿಯ ಅಗತ್ಯಗಳಿಗಾಗಿ ಒನ್-ಸ್ಟಾಪ್ ಅಂಗಡಿ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ