ಕೇಂದ್ರ ಸರ್ಕಾರಿ ನೌಕರರಿಗೆ Ugadi ಕೊಡುಗೆ; ಶೇ. 3 ರಷ್ಟು DA ಹೆಚ್ಚಳ; ವೇತನದಲ್ಲಿ ಎಷ್ಟು ಆಗಲಿದೆ ಏರಿಕೆ

ನಂತರ ತುಟ್ಟಿಭತ್ಯೆ ಮೂಲ ವೇತನದ ಶೇ.34ಕ್ಕೆ ಏರಲಿದೆ. ಇದರ ಲಾಭವನ್ನು 50 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಪಡೆಯಲಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ನವದೆಹಲಿ (ಮಾ. 30): ಕೇಂದ್ರ ಸರ್ಕಾರಿ ನೌಕರರಿಗೆ ಯುಗಾದಿ ಹಬ್ಬದ (Ugadi Festival) ಮುನ್ನ ಕೇಂದ್ರ ವಿಶೇಷ ಉಡುಗೊರೆ ನೀಡಿದೆ. ಏರುತ್ತಿರುವ ಇಂಧನ ಮತ್ತು ತೈಲ ಬೆಲೆ, ಹಣದುಬ್ಬರದ ನಡುವೆಯೇ ತುಟ್ಟಿ ಭತ್ಯೆ ಹೆಚ್ಚಳ ಮಾಡಲು ಸಜ್ಜಾಗಿದೆ. ಮೋದಿ ಸಂಪುಟವು (Modi Cabinet) ಇಂದು ನಡೆಯಲಿರುವ ಸಭೆಯಲ್ಲಿ ಇಂದು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (Dearness allowance) ಹೆಚ್ಚಳ ಘೋಷಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

  ಶೇ. 3 ರಷ್ಟು ಹೆಚ್ಚಳ
  ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಡಿಎ ಪರಿಷ್ಕರಣೆಯು ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡಿತ್ತು. ಜುಲೈ, 2021 ರಲ್ಲಿ, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಕೇಂದ್ರವು ದೀರ್ಘ ಕಾಲದ  ನಂತರ ಶೇಕಡಾ 17 ರಿಂದ ಶೇಕಡಾ 28 ಕ್ಕೆ ಏರಿಸಿತು. ಮತ್ತೆ ಅಕ್ಟೋಬರ್, 2021 ರಲ್ಲಿ, ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆಯಲ್ಲಿ ಶೇಕಡಾ 3 ರಷ್ಟು ಏರಿಕೆ ಕಂಡಿದ್ದಾರೆ. ಇತ್ತೀಚಿನ ಏರಿಕೆಯೊಂದಿಗೆ, ಜುಲೈ 2021 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಏರಿತು. ಅದೇ ರೀತಿ, ಇದೀಘ ಕೇಂದ್ರ ಸರ್ಕಾರದ ಪಿಂಚಣಿದಾರರ ಡಿಯರ್ನೆಸ್ ರಿಲೀಫ್ ಅನ್ನು ಪ್ರತಿಶತ 31ಕ್ಕೆ ಏರಿಸಿದೆ.

  50 ಲಕ್ಷ ಹೆಚ್ಚು ನೌಕರರು ಪಡೆಯಲಿದ್ದಾರೆ ಲಾಭ
  ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್‌ನಲ್ಲಿ ಮತ್ತೆ ಶೇಕಡಾ 3 ರಷ್ಟು ಹೆಚ್ಚಳವನ್ನು ಘೋಷಿಸಲಿದೆ. ನಂತರ ತುಟ್ಟಿಭತ್ಯೆ ಮೂಲ ವೇತನದ ಶೇ.34ಕ್ಕೆ ಏರಲಿದೆ. ಇದರ ಲಾಭವನ್ನು 50 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಪಡೆಯಲಿದ್ದಾರೆ.

  ಡಿಎ ಲೆಕ್ಕಾಚಾರ ಹೇಗೆ?
  7 ನೇ ವೇತನ ಆಯೋಗದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ 18,000 ರೂ ಇದ್ದರೆ, ಕೇಂದ್ರ ಸರ್ಕಾರಿ ನೌಕರರು 3060 ರೂ.ಗಳ ಡಿಎ ಅನ್ನು 2021 ರ ಜೂನ್ ವರೆಗೆ 17 ಶೇಕಡಾ ದರದಲ್ಲಿ ಪಡೆಯುತ್ತಾರೆ. ಜುಲೈ 2021 ರಿಂದ, ಕೇಂದ್ರ ಸರ್ಕಾರಿ ನೌಕರರು ಶೇ 28ರಷ್ಟು ಡಿಎ ಪ್ರಕಾರ ಪ್ರತಿ ತಿಂಗಳು 5040 ರೂ. ಇದರರ್ಥ ನೌಕರರ ಮಾಸಿಕ ವೇತನದಲ್ಲಿ ರೂ 1980 ಹೆಚ್ಚಳ ಪಡೆಯಲಿದ್ದಾರೆ. ಇದೇ ಲೆಕ್ಕಚಾರದ ಅನ್ವಯ, ಪಿಂಚಣಿದಾರರ ಪಿಂಚಣಿಯನ್ನು ಸಹ ನಿರ್ಧರಿಸಲಾಗುವುದು.

  ಇದನ್ನು ಓದಿ: ಕಾಶ್ಮೀರಿ ಪಂಡಿತರ ಕುರಿತು Kejriwal​​​ ಹೇಳಿಕೆ; ತೇಜಸ್ವಿ ಸೂರ್ಯ ನೇತೃತ್ವದಲ್ಲಿ Delhi CM ಮನೆ ಮುಂದೆ BJP ಪ್ರತಿಭಟನೆ

  ವರ್ಷದಲ್ಲಿ ಎರಡು ಬಾರಿ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಸರ್ಕಾರ ಹೆಚ್ಚಿಸುತ್ತದೆ. ಜನವರಿ ಮತ್ತು ಜುಲೈನಲ್ಲಿ ಈ ತುಟ್ಟಿ ಭತ್ಯೆ ಏರಿಕೆ ಕಾಣುತ್ತದೆ. ಕೇಂದ್ರ ಸರ್ಕಾರಿ ನೌಕರರ ವೇತನವು ಹೆಚ್ಚಾಗಲಿದೆ ಎಂದು ತಿಳಿಸಿದೆ.

  ಏನಿದು ಡಿಎ

  ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ಸರಿದೂಗಿಸುವ ಸಲುವಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪಾವತಿಸುವ ಮೊತ್ತವೇ ತುಟ್ಟಿ ಭತ್ಯೆ (ಡಿಎ). ಸ್ಥಳಕ್ಕೆ ಅನುಗುಣವಾಗಿ ಹಣದುಬ್ಬರವು ಬದಲಾಗುತ್ತಿರುತ್ತದೆ. ಆದ್ದರಿಂದ, ವರ್ಷದ ಆ ಸಮಯದಲ್ಲಿ ನೌಕರನ ಸ್ಥಳ ಮತ್ತು ಹಣದುಬ್ಬರ ದರವನ್ನು ಆಧರಿಸಿತುಟ್ಟಿ ಭತ್ಯೆಯನ್ನು ಲೆಕ್ಕಹಾಕಲಾಗುತ್ತದೆ.

  ಇದನ್ನು ಓದಿ: ಮಂಗಳೂರು ವಿವಿಯಲ್ಲಿ ಲಾಠಿ ಚಾರ್ಜ್; ಹಿಂದೂ ಧರ್ಮದ ಬಗ್ಗೆ ಮಾತನಾಡುವುದು ಕೋಮು ಪ್ರಚೋದನೆಯಾ: Kalladka Prabhakar Bhat

  1996 ರ ಹಣಕಾಸು ವರ್ಷದಲ್ಲಿ ಬೆಲೆ ಏರಿಕೆ ಅಥವಾ ಹಣದುಬ್ಬರವನ್ನು ಸರಿದೂಗಿಸುವ ಸಲುವಾಗಿ ತುಟ್ಟಿ ಭತ್ಯೆಯನ್ನು ಸೇರಿಸಲಾಯಿತು. ಇದನ್ನು ಪ್ರತಿವರ್ಷ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈನಲ್ಲಿ  ಪರಿಷ್ಕರಿಸಲಾಗುತ್ತದೆ.

  ಭತ್ಯೆಯನ್ನು ಮೂಲ ವೇತನದೊಂದಿಗೆ ಸೇರಿಸಿರುವ ಕಾರಣ, ಡಿಎ ಹೆಚ್ಚಳವು ಮಾಸಿಕ ಭವಿಷ್ಯ ನಿಧಿ (ಪಿಎಫ್) ಮತ್ತು ಕೇಂದ್ರ ಸರ್ಕಾರಿ ನೌಕರರ ಗ್ರ್ಯಾಚುಟಿ ಮೊತ್ತದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನೌಕರರು ಮತ್ತು ಪಿಂಚಣಿದಾರರಿಗೆ ಪಿಎಫ್, ಪ್ರಯಾಣ ಭತ್ಯೆ ಮತ್ತು ಗ್ರ್ಯಾಚುಟಿ ಹೆಚ್ಚಾಗುತ್ತದೆ.
  Published by:Seema R
  First published: