ಭೂಗತ ಪಾತಕಿ ದಾವೂದ್ ಇಬ್ರಾಹಿಂನ ನಿಕಟವರ್ತಿ, ಗ್ಯಾಂಗ್ಸ್ಟರ್ ಛೋಟಾ ಶಕೀಲ್, ಮಂಗಳವಾರ ದೆಹಲಿ ಪೊಲೀಸ್ ವಿಶೇಷ ಸೆಲ್ ಮತ್ತು ಉತ್ತರ ಪ್ರದೇಶ ಎಟಿಎಸ್ ಜಂಟಿ ತಂಡದಿಂದ ಬಂಧಿಸಲ್ಪಟ್ಟಿರುವ ಪಾಕಿಸ್ತಾನ ಸಂಘಟಿತ ಭಯೋತ್ಪಾದಕ ಘಟಕಕ್ಕೂ ಡಿ-ಕಂಪನಿಗೆ (D-company) ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಸಿಎನ್ಎನ್-ನ್ಯೂಸ್ 18 (CNN-News18) ರೊಂದಿಗಿನ ವಿಶೇಷ ಸಂಭಾಷಣೆಯಲ್ಲಿ, ಶಕೀಲ್ ಅವರು ಪೊಲೀಸರ ಎಲ್ಲಾ ಆರೋಪಗಳನ್ನು "ತಪ್ಪು ಮತ್ತು ಆಧಾರರಹಿತ" ಎಂದು ಕರೆದಿದ್ದಾರೆ.
ದೆಹಲಿ ಪೋಲಿಸ್ ಸ್ಪೆಷಲ್ ಸೆಲ್ (Delhi Police Special Cell), ಉತ್ತರ ಪ್ರದೇಶ ಎಟಿಎಸ್ ಜೊತೆಗೆ ಪಾಕಿಸ್ತಾನ ಸಂಘಟಿತ ಭಯೋತ್ಪಾದಕ ಘಟಕವನ್ನು ಭೇದಿಸಿದೆ ಮತ್ತು ಆರು ಜನರನ್ನು ಬಂಧಿಸಿದೆ, ಅದರಲ್ಲಿ ಇಬ್ಬರು ಪಾಕಿಸ್ತಾನದಲ್ಲಿ ತರಬೇತಿ ಪಡೆದವರಾಗಿದ್ದಾರೆ.
ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಬಂಧಿತ ತಂಡದ ಭಾಗವಾಗಿದ್ದಾನೆ ಮತ್ತು ಅವರಲ್ಲಿ ಇಬ್ಬರು ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದಾರೆ ಎಂಬ ಪೊಲೀಸರ ಹೇಳಿಕೆಯ ಬಗ್ಗೆ ಕೇಳಿದಾಗ, ಶಕೀಲ್, "ಮೊದಲನೆಯದಾಗಿ, ಇದು ಸಂಪೂರ್ಣವಾಗಿ ತಪ್ಪು. ನಮಗೂ ಇದಕ್ಕೂ ಸಂಬಂಧವಿಲ್ಲ. ಏಜೆನ್ಸಿಗಳು ಸರಿಯಾಗಿ ತನಿಖೆ ನಡೆಸಿ ಇದರ ಹಿಂದಿರುವ ನೈಜ ವ್ಯಕ್ತಿಗಳನ್ನು ಪತ್ತೆ ಮಾಡಬೇಕು. ಪ್ರತಿ ಬಾರಿ ನೀವು ಯಾರನ್ನಾದರೂ ಬಂಧಿಸಿ ನಮ್ಮನ್ನು ಪ್ರಶ್ನಿಸುತ್ತೀರಿ. ನೀವು (ಏಜೆನ್ಸಿಗಳು) ಮೊದಲು ಸರಿಯಾಗಿ ತನಿಖೆ ಮಾಡಬೇಕು. ಡಿ ಕಂಪನಿ ಒಳಗೊಂಡಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತಳ್ಳಿ ಹಾಕಿದ್ದಾರೆ.
ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್ಐ) ಯಿಂದ ಡಿ-ಕಂಪನಿಯು ಒತ್ತಡಕ್ಕೊಳಗಾಗುತ್ತಿದೆ ಎಂಬ
intel inputs ಆಧಾರದ ಊಹಾಪೋಹದ ಪ್ರಶ್ನೆಗೆ ಉತ್ತರಿಸಿದ ಅವರು, "ಇದು ತಪ್ಪು. ನಾವು ಮೌನವಾಗಿ ಕುಳಿತಿದ್ದೇವೆ. ನಮ್ಮ ಮನೆಯಲ್ಲಿ ನಾವಿದ್ದೇವೆ. ನಿಮಗೆ ಏನು ಬೇಕು? ನಾವು ಏನನ್ನಾದರೂ ಮಾಡಬೇಕೆಂದು ನೀವು ಬಯಸುತ್ತಾ ಇದ್ದೀರಾ? ನೀವು ಏನನ್ನಾದರೂ ಮಾಡಲು ನಮ್ಮನ್ನು ಒತ್ತಾಯಿಸುವಂತೆ ಕಾಣುತ್ತಿದೆ. ನಿಮ್ಮ ಏಜೆನ್ಸಿ ದುರ್ಬಲವಾಗಿದೆ. ಭಾರತದ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿಲ್ಲ. ನಿಮ್ಮ ಏಜೆನ್ಸಿಗಳು ಏನನ್ನೂ ಸರಿಯಾಗಿ ಸಾಕ್ಷ್ಯ ಪಡೆಯದೇ ಇದ್ದಾಗ, ನೀವು ಎಲ್ಲವನ್ನೂ ನಮ್ಮ ಮೇಲೆ ಹಾಕುತ್ತೀರಿ. " ಎಂದು ವ್ಯಂಗ್ಯವಾಡಿದ್ದಾರೆ.
1992 ರ ಬಾಂಬ್ ಸ್ಫೋಟದ (1992 Bombay blasts) ರೀತಿಯಲ್ಲೇ ದಾಳಿ ಮಾಡಲು ಯೋಜಿಸಲಾಗಿದೆ ಮತ್ತು ಮುಂಬೈನಲ್ಲಿ ನೀವು ಎಲ್ಲವನ್ನೂ ಯೋಜಿಸಿದ್ದೀರಿ ಎಂದು ಹೇಳಲಾಗಿದೆ ಎಂದು ಕೇಳಿದಾಗ, "ನಿಮ್ಮ ಏಜೆನ್ಸಿಗಳಿಗೆ ಇದನ್ನು ಕೇಳಿ, ಅವರಿಗೆ ಯಾವುದೇ ಕೆಲಸವಿಲ್ಲದಿದ್ದಾಗ ಇಂತಹ ಕಥೆ ತಯಾರಿಸುತ್ತಾರೆ. . ನಿಮ್ಮ ಏಜೆನ್ಸಿಗಳು, ಇಲಾಖೆಗಳು, ಪೊಲೀಸರು ವಿಫಲರಾಗಿದ್ದಾರೆ. "
ದಾವೂದ್ ಇಬ್ರಾಹಿಂ ಸಹೋದರನಾಗಿರುವ ಛೋಟಾ ಶಕೀಲ್ ಮತ್ತು ಅನೀಸ್ ಇಬ್ರಾಹಿಂ ಅವರನ್ನು ಐಎಸ್ಐ "ಭಾರತದಲ್ಲಿ ಏನಾದರೂ ಮಾಡಿ" ಎಂದು ಒತ್ತಡ ಹೇರಲಾಗುತ್ತಿದೆ ಎನ್ನುವುದು ಸಂಪೂರ್ಣ ಭ್ರಮೆ. ಅನೀಸ್ ಇಬ್ರಾಹಿಂ ಭಾರತದ ಯುವಕರನ್ನು ಮಾಡ್ಯೂಲ್ಗೆ ನೇಮಕಾತಿ ಮಾಡಲು ಪ್ರಾರಂಭಿಸಿದರು ಎಂದು ಉನ್ನತ ಇಂಟೆಲ್ ಮೂಲಗಳು ಸಿಎನ್ಎನ್-ನ್ಯೂಸ್ 18 ಗೆ ತಿಳಿಸಿವೆ. ಡಿ-ಕಂಪನಿ, ತನ್ನ ಖ್ಯಾತಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ಅನೀಸ್ ಇಬ್ರಾಹಿಂ ಅವರನ್ನು ಮಾಡ್ಯೂಲ್ಗೆ ಸದಸ್ಯರನ್ನು ನೇಮಿಸಿಕೊಳ್ಳಲು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
26/11 ಮುಂಬೈ ದಾಳಿಯಂತಹ ಭಯೋತ್ಪಾದನೆಯನ್ನು ಸೃಷ್ಟಿಸುವ ಆಲೋಚನೆ ಇದಾಗಿದೆ ಎಂದು ಮೂಲಗಳು ತಿಳಿಸಿವೆ, ಇದು ಅತ್ಯಂತ ರಹಸ್ಯ ಕಾರ್ಯಾಚರಣೆಯಾಗಿದೆ ಎಂದು ಪೊಲೀಸರು ಹೇಳಿದ್ದರು.
ಪತ್ರಿಕಾಗೋಷ್ಠಿಯಲ್ಲಿ, ದೆಹಲಿ ಪೋಲಿಸ್ ಸ್ಪೆಷಲ್ ಸೆಲ್ ಹೀಗೆ ತಿಲಿಸಿದ್ದು, ಅನೀಸ್ ಬಂಧಿತ ತಂಡದ ಭಾಗವಾಗಿದ್ದರು ಮತ್ತು ಹವಾಲಾ ಜಾಲದ ಮೂಲಕ ಹಣವನ್ನುಪಡೆಯುತ್ತಿದ್ದರು ಎಂದು ಹೇಳಿದ್ದಾರೆ.
ಬಂಧಿತರನ್ನು ಮಹಾರಾಷ್ಟ್ರದ ಜಾನ್ ಮೊಹಮ್ಮದ್ ಶೇಖ್ (47), ದೆಹಲಿಯ ಒಸಾಮಾ (22), ಉತ್ತರ ಪ್ರದೇಶದ ರಾಯ್ ಬರೇಲಿಯ ಮೂಲ್ಚಂದ್ (47), ಅಲಹಾಬಾದ್ನ ಜೀಶನ್ ಕಮಾರ್ (28), ಬೆಹರೈಚ್ನ ಮೊಹಮದ್ ಅಬು ಬಕರ್ (23) ಮತ್ತು ಲಕ್ನೋದ ಮೊಹ್ಮದ್ ಅಮೀರ್ ಜಾವೇದ್ (31) ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶ, ಮಹಾರಾಷ್ಟ್ರ, ದೆಹಲಿ ಮತ್ತು ರಾಜಸ್ಥಾನದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದಾಗ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರು ಮುಂಬರುವ ಹಬ್ಬದ ಸೀಸನ್ಗೆ ಮುಂಚಿತವಾಗಿ ನಗರಗಳ ಕುರಿತು ನಕ್ಷೆ ತಯಾರಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ: Dawood Ibrahim: ಭಾರತದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ದಾವುದ್ ಮೇಲೆ ಒತ್ತಡ ಹಾಕುತ್ತಿರುವ ಪಾಕ್
ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸ್ಫೋಟಕಗಳು ಮತ್ತು ಪಿಸ್ತೂಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ