ಧಾರ್ಮಿಕ ಗುರುವಾದ ಭೂಗತ ಪಾತಕಿ ಚೋಟಾ ಶಕೀಲ್​ ಮಗ

news18
Updated:August 26, 2018, 4:33 PM IST
ಧಾರ್ಮಿಕ ಗುರುವಾದ ಭೂಗತ ಪಾತಕಿ ಚೋಟಾ ಶಕೀಲ್​ ಮಗ
news18
Updated: August 26, 2018, 4:33 PM IST
ನ್ಯೂಸ್​ 18 ಕನ್ನಡ

ಮುಂಬೈ (ಆ.26): ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಮಗ ಕಸ್ಕರ್​ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದಾನೆಂಬ ಸುದ್ದಿ ಅಚ್ಚರಿ ಮೂಡಿಸಿದ ಬೆನ್ನಲೆ ಈಗ ದಾವೂದ್​ ಸಹಚರ ಚೋಟಾ ಶಕೀಲ್​ ಅವರ ಒಬ್ಬನೇ ಮಗ ಕೂಡ ಧಾರ್ಮಿಕ ಹಾದಿಯನ್ನು ಹಿಡಿದಿದ್ದಾನೆ ಎಂಬ ಸುದ್ದಿ ಬಲ್ಲ ಮೂಲಗಳಿಂದ ಬಂದಿದೆ,

ಚೋಟಾ ಶಕೀಲ್​ ನ 18 ವರ್ಷದ ಮಗ ಮುಬಾಶಿರ್​ ಶೇಖ್ ಹಫಿಸ್​ ಇ ಕುರಾನ್​ (ಕುರಾನ್​ ಕಂಠಪಾಠಮಾಡುವ ಧಾರ್ಮಿಕ ಮುಖಂಡರು) ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ​ ಡಾನ್​ಗಳ ಮಕ್ಕಳು ಈ ರೀತಿ ಧಾರ್ಮಿಕ ಹಾದಿಹಿಡಿಯುವುದು ಮುಂಬಯಿನ ಅಂಡರ್​ವರ್ಲ್ಡ್ನಲ್ಲಿ ನಿರಾಶೆವನ್ನು ಮೂಡಿಸಿದೆ.

ಮುಬಾಶಿರ್​ ಕರಾಚಿಯಲ್ಲಿ ತಮ್ಮ ನೆರೆಹೊರೆಯವರಿಗೆ ಕುರಾನ್​ ಧಾರ್ಮಿಕ ಪ್ರವಚನ ನೀಡುತ್ತ  ಚೋಟಾ ಶಕೀಲ್​ ತಂದೆ ಬಾಬುಮಿಯಾ ಶಕೀಲ್​ ಅಹಮ್ದ್​ ಶೇಖ್​ ಜೊತೆ ಕಾಲ ಕಳೆಯುತ್ತಿದ್ದಾರೆ.

ಒಂದು ಕಾಲದಲ್ಲಿ ಟ್ರಾವೆಲ್​ ಏಜೆನ್ಸಿ ನಡೆಸುತ್ತಿದ್ದ ಚೋಟಾ ಶಕೀಲ ಅದರಿಂದ ಹೊರ ಬಂದ ಮೇಲೆ ದಾವೂದ್​ ಪರಿಚಯ ಮಾಡಿಕೊಂಡ. ದಾವೂದ್​ ವಿಶ್ವಾಸ ಗಳಿಸಿದ ಬಳಿಕ ಆತನ ಡಿ ಕಂಪನಿಯಲ್ಲಿ ಶಕೀಲನಿಗೆ ನಿಧಾನವಾಗಿ ಕೆಲವೊಂದು ಜವಬ್ದಾರಿಯನ್ನು ಹೊರಿಸಲು ಶುರುಮಾಡಿದ.

ಛೋಟಾ ಶಕೀಲನನ್ನು ಮುಂಬೈ ಪೊಲೀಸರು  1988ರ ರಾಷ್ಟ್ರೀಯ ರಕ್ಷಣಾ ಕಾಯ್ದೆ ಅಡಿಯಲ್ಲಿ ಬಂಧಿಸಿದರು. ನಾಲ್ಕು ತಿಂಗಳ ಸೆರೆವಾಸದ ಬಳಿಕ ಜಾಮೀನಿನ ಮೇಲೆ ಹೊರ ಬಂದ ಬಳಿಕ ದುಬೈನಲ್ಲಿನ ಡಾನ್​ ಗುಂಪು ಸೇರಲು ದೇಶ ತೊರೆದ.

ಬಳಿಕ 1993ರ ಮುಂಬೈ ಸ್ಪೋಟದ ಬಳಿಕ ಚೋಟಾ ಶಕೀಲ್​ ದುಬೈನಿಂದ ಪಾಕಿಸ್ತಾನಕ್ಕೆ ವಾಸ್ತವ್ಯ ಬದಲಾಯಿಸಿದ. ಕಳೆದ ವರ್ಷ ಚೋಟಾ ಶಕೀಲ್​ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂಬಗಾಳಿ ಸುದ್ದಿ ಕೂಡ ಹಬ್ಬಿತ್ತು.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...