Mercedes-Benz: ಸೈರಸ್ ಮಿಸ್ತ್ರಿ ಕಾರು ಅಪಘಾತ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆ!

ಸೈರಸ್ ಮಿಸ್ತ್ರಿಯವರ ಮರ್ಸಿಡಿಸ್ ಕಾರು

ಸೈರಸ್ ಮಿಸ್ತ್ರಿಯವರ ಮರ್ಸಿಡಿಸ್ ಕಾರು

ಸೈರಸ್ ಮಿಸ್ತ್ರಿ ಅವರ ಮರ್ಸಿಡಿಸ್-ಬೆಂಜ್ GLC SUV ಅಪಘಾತಕ್ಕೀಡಾದ ಸ್ಥಳಕ್ಕೆ ಮರ್ಸಿಡಿಸ್ ಬೆಂಜ್ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಗೆ ಆಗಮಿಸಿದ ತಂಡವು ವಾಹನವನ್ನು ಕೂಲಂಕಷವಾಗಿ ಪರಿಶೀಲಿಸಿತು. ಇಬ್ಬರು ವಿಧಿವಿಜ್ಞಾನ ತಜ್ಞರು ಕೂಡ ಸ್ಥಳಕ್ಕೆ ಆಗಮಿಸಿ ವಾಹನ ಮತ್ತು ಪ್ರದೇಶವನ್ನು ಪರಿಶೀಲಿಸಿದ್ದಾರೆ. 

ಮುಂದೆ ಓದಿ ...
  • Share this:

ಟಾಟಾ ಮೋರ್ಟರ್ಸ್‌ನ ಮಾಜಿ ಅಧ್ಯಕ್ಷರಾದ ಸೈರಸ್ ಮಿಸ್ತ್ರಿ (Cyrus Mistry) ಅವರ ಮರ್ಸಿಡಿಸ್-ಬೆಂಜ್ GLC SUV ಅಪಘಾತಕ್ಕೀಡಾದ ಸ್ಥಳಕ್ಕೆ ಮರ್ಸಿಡಿಸ್ ಬೆಂಜ್ (Mercedes Benz) ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ (Palghar) ಜಿಲ್ಲೆಗೆ ಆಗಮಿಸಿದ ತಂಡವು ವಾಹನವನ್ನು (Vehicle) ಕೂಲಂಕಷವಾಗಿ ಪರಿಶೀಲಿಸಿತು. ಇಬ್ಬರು ವಿಧಿವಿಜ್ಞಾನ ತಜ್ಞರು ಕೂಡ ಸ್ಥಳಕ್ಕೆ ಆಗಮಿಸಿ ವಾಹನ ಮತ್ತು ಪ್ರದೇಶವನ್ನು ಪರಿಶೀಲಿಸಿದರು. ಅಪಘಾತದ ಸಮಯದಲ್ಲಿ ನಿಖರವಾಗಿ ಏನಾಯಿತು ಎಂಬುದರ ಕುರಿತು ಜರ್ಮನಿಯ ಐಷಾರಾಮಿ ಕಾರು (German luxury car) ತಯಾರಕ ತನ್ನ ತನಿಖೆಯನ್ನು ಪ್ರಾರಂಭಿಸಿದೆ. 


ಅಧಿಕೃತ ಹೇಳಿಕೆ ನೀಡಿದ ಮರ್ಸಿಡಿಸ್
ಸಂಸ್ಥೆಯು ವಾಹನದಿಂದ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಅಂತೆಯೇ ಜರ್ಮನಿಯಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಡೇಟಾ ವಿಶ್ಲೇಷಣೆಗಳನ್ನು ನಡೆಸುತ್ತಾರೆ. ಇನ್ನು ತನಿಖೆಗೆ ಪೊಲೀಸರು ಹಾಗೂ ಇತರ ತನಿಖಾ ಸಂಸ್ಥೆಗಳೊಂದಿಗೆ ಕೈ ಜೋಡಿಸುವುದಾಗಿ ಸಂಸ್ಥೆ ಉಲ್ಲೇಖಿಸಿದೆ.


ಹೇಳಿಕೆಯಲ್ಲಿ ಮರ್ಸಿಡಿಸ್ ಏನು ಹೇಳಿದೆ?
ಗ್ರಾಹಕರ ಖಾಸಗಿತನವನ್ನು ಗೌರವಿಸುವ ಜವಬ್ದಾರಿಯುತ ಬ್ರ್ಯಾಂಡ್ ಎಂದೆನಿಸಿರುವ ಮರ್ಸಿಡಿಸ್, ಸಾಧ್ಯವಿರುವಷ್ಟು ತನಿಖಾಧಿಕಾರಿಗಳೊಂದಿಗೆ ಸಹಕರಿಸುತ್ತಿದೆ ಅಂತೆಯೇ ಅಗತ್ಯ ಸ್ಪಷ್ಟೀಕರಣಗಳನ್ನು ನೀಡಲು ಸಂಸ್ಥೆ ಬಾಧ್ಯಸ್ಥನಾಗಿದೆ. ದುರದೃಷ್ಟಕರ ರಸ್ತೆ ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ಪಾಂಡೋಲೆ ಅವರ ಅಕಾಲಿಕ ನಿಧನದಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಅನಾಹಿತಾ ಪಾಂಡೋಲೆ ಹಾಗೂ ಡೇರಿಯಸ್ ಪಾಂಡೋಲೆ ಚೇತರಿಸಿಕೊಳ್ಳುತ್ತಿದ್ದಾರೆ ಅವರು ಶೀಘ್ರ ಗುಣಮುಖರಾಗಲಿ ಎಂದು ತಿಳಿಸಿದೆ.


ಜರ್ಮನಿಗೆ ಮಾಹಿತಿ ಕಳುಹಿಸಲಾಗಿದೆ
ಡೇಟಾ ಚಿಪ್ ಅನ್ನು ಮರುಪಡೆಯಲಾಗಿದ್ದು ಅಪಘಾತದ ನಿಜವಾದ ಕಾರಣವನ್ನು ತಿಳಿಯಲು ಮಾಹಿತಿಯನ್ನು ವಿಶ್ಲೇಷಿಸಲಾಗುತ್ತದೆ. ಮರ್ಸಿಡಿಸ್ ಸಂಸ್ಥೆಯು ಕಾರಿನ ಟಯರ್ ಒತ್ತಡ, ಬ್ರೇಕ್ ದ್ರವದ ಮಟ್ಟ, ವೇಗ, ಸ್ಟೀರಿಂಗ್ ವೀಲ್‌ನ ಸ್ಥಾನ, ಸೀಟ್‌ಬೆಲ್ಟ್‌ಗಳ ಸ್ಥಿತಿ, ಏರ್‌ಬ್ಯಾಗ್ ನಿಯೋಜನೆ ಹಾಗೂ ಕಾರಿಗೆ ಸವಾಲೊಡ್ಡಿದ್ದ ಇತರ ಅಸಮಪರ್ಕ ಕಾರ್ಯಗಳನ್ನು ಪರಿಶೀಲಿಸುತ್ತಿದೆ.


ಇದನ್ನೂ ಓದಿ: Seat Belt: ಕಾರು ಪ್ರಯಾಣಿಕರೇ ಎಚ್ಚೆತ್ತುಕೊಳ್ಳಿ! ಸೈರಸ್ ಮಿಸ್ತ್ರಿ ಸಾವಿಗೆ ಸೀಟ್ ಬೆಲ್ಟ್ ಕಾರಣ


ಮಿಸ್ತ್ರಿ ಹಾಗೂ ಸ್ನೇಹಿತ ಜಹಾಂಗೀರ್ ಸೀಟ್ ಬೆಲ್ಟ್ ಧರಿಸಿರಲಿಲ್ಲ
ಮಿಸ್ತ್ರಿ ಮತ್ತು ಅವರ ಸ್ನೇಹಿತ ಜಹಾಂಗೀರ್ ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಜಿಎಲ್‌ಸಿಯಲ್ಲಿ ಒಟ್ಟು 7 ಏರ್‌ಬ್ಯಾಗ್‌ಗಳಿವೆ. ಘಟನೆಯ ಸಂದರ್ಭದಲ್ಲಿ ಕೇವಲ ಮೂರು ಏರ್‌ಬ್ಯಾಗ್‌ಗಳನ್ನು ಮಾತ್ರ ನಿಯೋಜಿಸಲಾಗಿದ್ದು, ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಸೂಚಿಸಲಾಗಿದೆ.


ಸೈರಸ್ ಮಿಸ್ತ್ರಿ ಮತ್ತು ಅವರ ಮೂವರು ಸ್ನೇಹಿತರು ಗುಜರಾತ್‌ನ ಉದ್ವಾಡದಲ್ಲಿರುವ ಇರಾನ್‌ ಶಾ ಅಗ್ನಿಶಾಮಕ ದೇವಾಲಯದಿಂದ ಹಿಂತಿರುಗುತ್ತಿದ್ದರು. ದೇವಾಲಯದ ಭೇಟಿಯ ನಂತರ ಮೂವರೂ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಟಾಟಾ ಮೋಟಾರ್ಸ್‌ನ ಮಾಜಿ ಅಧ್ಯಕ್ಷರಾಗಿರುವ ಸೈರಸ್ ಮಿಸ್ತ್ರಿ, ಕೆಪಿಎಂಜಿಯ ಗ್ಲೋಬಲ್ ಸ್ಟ್ರಾಟಜಿ ಗ್ರೂಪ್‌ನ ಮಾಜಿ ನಿರ್ದೇಶಕ ಜಹಾಂಗೀರ್ ಪಾಂಡೋಲ್, ಟಾಟಾ ಗ್ಲೋಬಲ್ ಬೆವರೇಜಸ್‌ನ ಮಾಜಿ ಸ್ವತಂತ್ರ ನಿರ್ದೇಶಕ ಅನಾಹಿತಾ ಮತ್ತು ಜೆಎಂ ಫೈನಾನ್ಶಿಯಲ್‌ನ ಖಾಸಗಿ ಷೇರುಗಳ ವ್ಯವಸ್ಥಾಪಕ ನಿರ್ದೇಶಕ ಡೇರಿಯಸ್ ಅವರೊಂದಿಗೆ ಪ್ರಯಾಣಿಸುತ್ತಿದ್ದರು.


ಮುಂಭಾಗದಲ್ಲಿ ಕುಳಿತಿದ್ದ ಇಬ್ಬರು ಸೀಟ್ ಬೆಲ್ಟ್ ಧರಿಸಿದ್ದರಿಂದ ಅಪಘಾತದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಸಮಯದಲ್ಲಿ ಅನಾಹಿತಾ ಕಾರು ಚಲಾಯಿಸುತ್ತಿದ್ದರು. ಸೂರ್ಯ ನದಿಯ ಹಳೆಯ ಸೇತುವೆಯ ಮೇಲೆ ಕಾರು ನಿಯಂತ್ರಣ ತಪ್ಪಿತು. ಚರೋಟಿ ಟೋಲ್ ನಂತರ ಕಾರು 9 ನಿಮಿಷಗಳಲ್ಲಿ 20 ಕಿ.ಮೀ ದೂರ ಕ್ರಮಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ತಪ್ಪಾದ ಭಾಗದಿಂದ ಮತ್ತೊಂದು ವಾಹನವನ್ನು ಹಿಂದಿಕ್ಕಲು ಯತ್ನಿಸುತ್ತಿತ್ತು.


ಮರ್ಸಿಡಿಸ್-ಬೆಂಜ್ GLC ವಿಶೇಷತೆಗಳೇನು?
ಮರ್ಸಿಡಿಸ್-ಬೆಂಜ್ GLC ಯುರೋಪಿಯನ್ NCAP (ಯುರೋಪಿಯನ್ ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ) ನಿಂದ ಐದು ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದ್ದು, ಜಾಗತಿಕ NCAP ಗೆ ಹೋಲಿಸಿದರೆ ಹೆಚ್ಚು ಕಟ್ಟುನಿಟ್ಟಾದ ಮಾನದಂಡಗಳನ್ನು ಹೊಂದಿದೆ. ಮಿಸ್ತ್ರಿ ಪ್ರಯಾಣಿಸುತ್ತಿದ್ದ GLCಯು ಏಳು ಏರ್‌ಬ್ಯಾಗ್‌ಗಳು, ಕ್ರಾಸ್‌ಒವರ್ ಅಸಿಸ್ಟ್ ಮತ್ತು ಮರ್ಸಿಡಿಸ್ ಪ್ರಿ-ಸೇಫ್ ಆಕ್ಯುಪೆಂಟ್ ಪ್ರೊಟೆಕ್ಶನ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.


ಇದನ್ನೂ ಓದಿ:  Dr Anahita Pandole: ಸೈರಸ್ ಮಿಸ್ತ್ರಿ ಕಾರು ಚಲಾಯಿಸುತ್ತಿದ್ದ ಡಾ.ಅನಾಹಿತಾ ಪಂಡೋಲೆ ಯಾರು?


ಕಾರಿನಲ್ಲಿರುವ ಪ್ರಯಾಣಿಕರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರಿ-ಸೇಫ್ ಕಾರ್ಯನಿರ್ವಹಿಸುತ್ತದೆ. ಇದು ರಸ್ತೆಗಳಲ್ಲಿರುವ ಇತರ ಕಾರು ಹಾಗೂ ವಸ್ತುಗಳನ್ನು ಪತ್ತೆಹಚ್ಚುತ್ತದೆ ಹಾಗೂ ಸ್ವಯಂಚಾಲಿತ ತುರ್ತು ಬ್ರೇಕ್‌ಗಳನ್ನು ಅನ್ವಯಿಸುತ್ತದೆ.

top videos
    First published: