Tata Group - ಟಾಟಾಗೆ ನಾವು ವಿದಾಯ ಹೇಳುವ ಸಮಯ ಬಂದಿದೆ: ಮಿಸ್ತ್ರಿ ಕುಟುಂಬ

ಸಾಲದ ಹೊರೆ ತಗ್ಗಿಸಲು ಟಾಟಾ ಸನ್ಸ್ ಕಂಪನಿಯ ತನ್ನ ಷೇರುಗಳನ್ನ ಅಡಮಾನ ಇಟ್ಟು ಹಣ ಪಡೆಯಲು ಸೈರಸ್ ಮಿಸ್ತ್ರಿ ಅವರ ಪ್ರಯತ್ನವನ್ನು ಟಾಟಾ ಕುಟುಂಬ ವಿಫಲಗೊಳಿಸಿದೆ. ಇದು ಮಿಸ್ತ್ರಿ-ಟಾಟಾ ಬೇರ್ಪಡಲು ಕಾರಣ ಎನ್ನಲಾಗಿದೆ.

ಶಾಪೂರ್​ಜಿ ಪಲ್ಲೋನ್​ಜಿ ಗ್ರೂಪ್

ಶಾಪೂರ್​ಜಿ ಪಲ್ಲೋನ್​ಜಿ ಗ್ರೂಪ್

  • News18
  • Last Updated :
  • Share this:
    ನವದೆಹಲಿ(ಸೆ. 23): ಟಾಟಾ ಮತ್ತು ಮಿಸ್ತ್ರಿ ಕುಟುಂಬಗಳ ನಡುವಿನ ಏಳು ದಶಕಗಳ ಸ್ನೇಹ ಮತ್ತು ವ್ಯಾವಹಾರಿಕ ಸಂಬಂಧದ ಕೊಂಡಿ ಕಳಚಿಬೀಳುತ್ತಿದೆ. ಟಾಟಾ ಗ್ರೂಪ್ ಮತ್ತು ಶಾಪೂರ್​ಜಿ ಪಲ್ಲೋನ್​ಜಿ ಪರಸ್ಪರ ದೂರವಾಗುತ್ತಿವೆ. ಟಾಟಾ ಸನ್ಸ್ ಕಂಪನಿಯಲ್ಲಿ ಶೇ. 18.5 ಪಾಲನ್ನು ಹೊಂದಿರುವ ಶಾಪೂರ್​ಜಿ ಪಲ್ಲೋನ್​ಜಿ ಗ್ರೂಪ್ ಇದೀಗ ಟಾಟಾ ಜೊತೆಗಿನ ವ್ಯವಹಾರವನ್ನು ನಿಲ್ಲಿಸಲು ನಿರ್ಧರಿಸಿದೆ. ನಾವು ಪ್ರತ್ಯೇಕವಾಗುವುದು ಎಲ್ಲರಿಗೂ ಒಳ್ಳೆಯದು ಎಂದು ಈ ಸಂಸ್ಥೆ ಹೇಳಿಕೊಂಡಿದೆ. “ಎಸ್​ಪಿ ಮತ್ತು ಟಾಟಾ ನಡುವಿನ ಸಂಬಂಧ 70 ವರ್ಷಗಳಷ್ಟು ಹಳೆಯದಾಗಿದೆ. ಪರಿಸ್ಪರ ನಂಬಿಕೆ, ವಿಶ್ವಾಸ, ಸ್ನೇಹದ ಮೇಲೆ ಈ ಸಂಬಂಧ ನಿಂತಿತ್ತು. ಇವತ್ತು ಎರಡೂ ಸಂಸ್ಥೆಗಳು ಬೇರೆಯಾಗುವುದು ಎಲ್ಲರಿಗೂ ಒಳ್ಳೆಯದು ಎಂದು ಮಿಸ್ತ್ರಿ ಕುಟುಂಬ ಭಾರವಾದ ಹೃದಯದಿಂದ ಹೇಳುತ್ತಿದೆ” ಎಂದು ಶಾಪೂರ್​ಜಿ ಪಲ್ಲೋನ್​ಜಿ ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ. ಮಿಸ್ತ್ರಿ ಕುಟುಂಬದ ಒಡೆತನದಲ್ಲಿ ಎಸ್​ಪಿ ಗ್ರೂಪ್ ಇದೆ.

    ಯಾಕೆ ಈ ಬಿರುಕು?: ಟಾಟಾ ಸಂಸ್ಥೆಯಲ್ಲಿ ಟಾಟಾ ಕುಟುಂಬದವರು ಬಿಟ್ಟರೆ ಅತಿ ಹೆಚ್ಚು ಪಾಲು ಹೊಂದಿರುವುದು ಸೈರಸ್ ಮಿಸ್ತ್ರಿ ಒಡೆತನದ ಎಸ್​ಪಿ ಗ್ರೂಪ್. ಇದೀಗ ಎಸ್​ಪಿ ಗ್ರೂಪ್ ಸಾಲದ ಸಂಕಷ್ಟದಲ್ಲಿದೆ. ಟಾಟಾ ಸನ್ಸ್​ನಲ್ಲಿರುವ ತನ್ನ ಪಾಲಿನ ಷೇರನ್ನು ಅಡಮಾನವಾಗಿಟ್ಟುಕೊಂಡು ಹಣ ಹೊಂದಿಸಲು ಎಸ್​ಪಿ ಗ್ರೂಪ್ ಪ್ರಯತ್ನಿಸಿತು. ಆದರೆ, ಇದಕ್ಕೆ ಟಾಟಾ ಕಂಪನಿ ಒಪ್ಪಲಿಲ್ಲ. ಈ ಪ್ರಕರಣ ಸುಪ್ರೀಂ ಕೋರ್ಟ್​ನಲ್ಲಿದೆ. ಎಸ್​ಪಿ ಗ್ರೂಪ್​ಗೆ ಹಣ ಬೇಕಾದರೆ ತನ್ನ ಕಂಪನಿಯಲ್ಲಿರುವ ಅದರ ಪಾಲಿನ ಷೇರುಗಳನ್ನ ಖರೀದಿಸಿ ಹಣ ನೀಡುತ್ತೇವೆ. ಆದರೆ, ನಮ್ಮ ಷೇರುಗಳನ್ನ ಅಡಮಾನ ಇಡಲು ಒಪ್ಪುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಟಾಟಾ ಸಂಸ್ಥೆ ತಿಳಿಸಿತು. ಅಕ್ಟೋಬರ್ 28ರಂದು ಕೋರ್ಟ್​​ನಲ್ಲಿ ಮುಂದಿನ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ಯಥಾಸ್ಥಿತಿ ಪಾಲನೆ ಮಾಡುವಂತೆ ಮಿಸ್ತ್ರಿ ಕುಟುಂಬಕ್ಕೆ ಕೋರ್ಟ್ ಸೂಚಿಸಿದೆ. ಈ ತೀರ್ಪು ಬಂದ ಕೆಲ ಹೊತ್ತಲ್ಲೇ ಎಸ್​ಪಿ ಗ್ರೂಪ್ ಟಾಟಾ ಸಂಸ್ಥೆಗೆ ವಿದಾಯ ಹೇಳುವ ನಿರ್ಧಾರ ಪ್ರಕಟಿಸಿದೆ.

    ಇದನ್ನೂ ಓದಿ: ಲಡಾಖ್​ನ ಗಡಿಭಾಗಕ್ಕೆ ಮತ್ತಷ್ಟು ಸೈನಿಕರ ನಿಯೋಜನೆ ಮಾಡದಿರಲು ಭಾರತ-ಚೀನಾ ಸೇನೆ ನಿರ್ಧಾರ

    ಸೈರಸ್ ಮಿಸ್ತ್ರಿ ಅವರು 2012ರಲ್ಲಿ ಟಾಟಾ ಸನ್ಸ್ ಕಂಪನಿಯ ಛೇರ್ಮನ್ ಆಗಿ ಆಯ್ಕೆಯಾದರು. 2016ರಲ್ಲಿ ಟಾಟಾ ಸನ್ಸ್ ನಿರ್ದೇಶಕರ ಮಂಡಳಿಯು ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿತು. ಅವರ ಆಡಳಿತದ ಅವಧಿಯಲ್ಲಿ ಪರಸ್ಪರ ನಂಬಿಕೆ ಮತ್ತು ವಿಶ್ವಾಸಗಳ ಸಂಬಂಧ ಹಳಸಿತೆನ್ನಲಾಗಿದೆ. ತಮ್ಮ ಗಮನಕ್ಕೆ ತಾರದೆ ಕೆಲವೊಂದು ಪ್ರಮುಖ ವ್ಯಾವಹಾರಿಕ ನಿರ್ಧಾರಗಳನ್ನ ಮಿಸ್ತ್ರಿ ಕೈಗೊಂಡಿದ್ದರೆನ್ನಲಾಗಿದೆ. ಹಾಗೆಯೇ, ಟಾಟಾ ಗ್ರೂಪ್​ನ ಎಲ್ಲಾ ಕಂಪನಿಗಳನ್ನ ತನ್ನದೇ ಹಿಡಿತದಲ್ಲಿ ಇಟ್ಟುಕೊಳ್ಳಲು ಮಿಸ್ತ್ರಿ ಪ್ರಯತ್ನಿಸಿದ್ದರು. ಇದೂ ಕೂಡ ಟಾಟಾ ಕುಟುಂಬಕ್ಕೆ ಇರಿಸುಮುರಿಸು ತಂದಿದೆ. ಹೀಗಾಗಿ, ಅವರನ್ನ ಛೇರ್ಮನ್ ಸ್ಥಾನದಿಂದ ಕೆಳಗಿಳಿಸಲಾಯಿತು ಎಂಬ ಮಾತಿದೆ.

    ಇದನ್ನೂ ಓದಿ: Reliance Retail - KKR Deal: ರಿಲಯನ್ಸ್ ರೀಟೇಲ್ ಮೇಲೆ 5,550 ಕೋಟಿ ರೂ. ಹೂಡಿಕೆ ಮಾಡಲು ಮುಂದಾದ ಕೆಕೆಆರ್
    Published by:Vijayasarthy SN
    First published: